PDO job Application: PDO ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್ ಬಿಡುಗಡೆ!

ಕರ್ನಾಟಕ ಲೋಕಸೇವಾ ಆಯೋಗವು (KPSC), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಯಲ್ಲಿ ಖಾಲಿ ಇರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಪ್ರಕಟಿಸಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಇಂದಿನಿಂದ ಆರಂಭವಾಗಲಿದೆ. 

PDO job Application: PDO ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್ ಬಿಡುಗಡೆ!
PDO job Application-2024

ಕರ್ನಾಟಕ ಲೋಕಸೇವಾ ಆಯೋಗವು (KPSC), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಯಲ್ಲಿ ಖಾಲಿ ಇರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಪ್ರಕಟಿಸಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಇಂದಿನಿಂದ ಆರಂಭವಾಗಲಿದೆ. 

ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಕಟಿಸಲಾಗಿರುವ ಅಧಿಸೂಚನೆಯ ಪ್ರಕಾರ ಅರ್ಹತೆ, ವಯೋಮಿತಿ ಮಾನದಂಡ ಹಾಗೂ ಇತರೆ ಎಲ್ಲಾ ಅರ್ಹತೆಗಳ ವಿವರವನ್ನು ಇಲ್ಲಿ ವಿವರಿಸಲಾಗಿದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಕೊನೆಯವರೆಗೂ ಓದಿ. 

ಇದನ್ನೂ ಓದಿ: Rain forecast- ಇಲ್ಲಿದೆ ರಾಜ್ಯದ ಮಳೆ ಮುನ್ಸೂಚನೆ ಸಮಗ್ರ ಮಾಹಿತಿ!

PDO Recruitment 2024 Details - ನೇಮಕಾತಿ ವಿವರ:

ನೇಮಕಾತಿ ಇಲಾಖೆ - ಕರ್ನಾಟಕ ಲೋಕಸೇವಾ ಆಯೋಗ
ಒಟ್ಟು ಹುದ್ದೆಗಳು - 247
ಅರ್ಜಿ ಸಲ್ಲಿಸುವ ಪ್ರಕ್ರಿಯೆ - ಆನ್ಲೈನ್ ಮೂಲಕ 

Education Qualification- ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆಗಳು: 

ನೇಮಕಾತಿ ಅಧಿಸೂಚನೆಯ ಪ್ರಕಾರ ಪಿಡಿಒ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಮುಗಿಸಿರಬೇಕು.

ಇದನ್ನೂ ಓದಿ: Co-operative Bank Recruitment-2024: ಸಹಕಾರಿ ಬ್ಯಾಂಕ್ ನಲ್ಲಿ ಉದ್ಯೋಗವಕಾಶ! 19 ಏಪ್ರಿಲ್ 2024 ಅರ್ಜಿ ಸಲ್ಲಿಸಲು ಕೊನೆಯ ದಿನ!

Monthly salary- ಮಾಸಿಕ ವೇತನ ಶ್ರೇಣಿ:  ₹37,900/- ರಿಂದ ₹70,850/- ರವರೆಗೆ 

ಅರ್ಜಿ ಸಲ್ಲಿಸಲು ಆರಂಭ ಹಾಗೂ ಕೊನೆಯ ದಿನಾಂಕ: 

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ, ಅಂದರೆ 15 ಏಪ್ರಿಲ್ 2024 ರಿಂದ ಆರಂಭವಾಗಲಿದೆ ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಮೇ 2024. 

Age limit- ವಯೋಮಿತಿ ಅರ್ಹತೆ: 

PDO Recruitment 2024 ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ ಹೊರಡಿಸಿದ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ ವಯಮಿತಿಯು 
 ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ - 35 ವರ್ಷ 
2ಎ, 2ಬಿ, 3ಎ, 3ಬಿ ವರ್ಗದವರಿಗೆ - 38 ವರ್ಷ 
ಪ್ರವರ್ಗ 1, SC ಹಾಗೂ ST ವರ್ಗದವರಿಗೆ - 40 ವರ್ಷ

ಇದನ್ನೂ ಓದಿ: Railway SI & Constable Recruitment: 4500+ SI ಹಾಗೂ ಕಾನ್ ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ! 

Application Fee- ಅರ್ಜಿ ಸಲ್ಲಿಸಲು ನಿಗದಿಸಿರುವ ಅರ್ಜಿ ಶುಲ್ಕ: 

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ - 600/-
2ಎ, 2ಬಿ, 3ಎ, 3ಬಿ ವರ್ಗದವರಿಗೆ - 300/-
ಮಾಜಿ ಸೈನಿಕ ಅಭ್ಯರ್ಥಿಗಳಿಗೆ - 50/-
ಪ್ರವರ್ಗ 1, SC, ST ಹಾಗೂ ಅಂಗವಿಕಲ ವರ್ಗದವರಿಗೆ - ಅರ್ಜಿ ಶುಲ್ಕವಿಲ್ಲ 

PDO Recruitment 2024 Apply Online- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ವಿಧಾನ : 
 
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು KPSC ಅಧಿಕೃತ ವೆಬ್ಸೈಟ್ ಮುಕಾಂತರ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸಲು ಮೊದಲು KPSC ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ New Registration ಮೇಲೆ ಕ್ಲಿಕ್ ಮಾಡಿ ನೋಂದಾಯಿಸಿಕೊಳ್ಳಬೇಕು. ಒಂದು ವೇಳೆ ನೀವು ಈಗಾಗಲೇ ನೊಂದಾಯಿಸಿದ್ದರೆ ನೇರವಾಗಿ ಲಾಗಿನ್ ಆಗುವುದರ ಮುಖಾಂತರ ಅರ್ಜಿ ಸಲ್ಲಿಸಬಹುದು. ನೋಂದಣಿ (Registration) ಆದ ನಂತರ ನಿಮ್ಮ ನೋಂದಾಯಿತ ನಂಬರ್ ಗೆ ಬರುವ User Id ಹಾಗೂ Password ಉಪಯೋಗಿಸಿಕೊಂಡು ಅರ್ಜಿ ಸಲ್ಲಿಸಿ. 

ಅರ್ಜಿ ಸಲ್ಲಿಕೆಗೆ ಉಪಯೋಗವಾಗುವ ಲಿಂಕ್ ಗಳು:

ಅಧಿಕೃತ ವೆಬ್ಸೈಟ್ ಲಿಂಕ್ - Click here

ಅರ್ಜಿ ಸಲ್ಲಿಕೆ ಲಿಂಕ್ : Apply Now

Notification (NHK) - Download Now

Notification (HK) - Download Now