IBPS RRB Recruitment-2024: ಗ್ರಾಮೀಣ ಬ್ಯಾಂಕ್ ಗಳಲ್ಲಿ 9900 ಕ್ಕಿಂತ ಅಧಿಕ ಹುದ್ದೆಗಳ ಬೃಹತ್ ನೇಮಕಾತಿಗೆ ಅಧಿಸೂಚನೆ ಬಿಡುಗಡೆ!

ಭಾರತ ದೇಶಾದ್ಯಂತ ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ ವಿವಿಧ 9900ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ(IBPS RRB Recruitment 2024) ಮಾಡಿಕೊಳ್ಳಲು ಇದೀಗ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು ಅಧಿಸೂಚನೆಯನ್ನು ಹೊರಡಿಸಿ ಆನ್ಲೈನ್ ಮುಖಾಂತರ ಅರ್ಜಿ ಅಹ್ವಾನಿಸಲಾಗಿದೆ. 

IBPS RRB Recruitment-2024: ಗ್ರಾಮೀಣ ಬ್ಯಾಂಕ್ ಗಳಲ್ಲಿ 9900 ಕ್ಕಿಂತ ಅಧಿಕ ಹುದ್ದೆಗಳ ಬೃಹತ್ ನೇಮಕಾತಿಗೆ ಅಧಿಸೂಚನೆ ಬಿಡುಗಡೆ!
IBPS RRB Recruitment-2024

ಭಾರತ ದೇಶಾದ್ಯಂತ ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ ವಿವಿಧ 9900ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ(IBPS RRB Recruitment 2024) ಮಾಡಿಕೊಳ್ಳಲು ಇದೀಗ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು ಅಧಿಸೂಚನೆಯನ್ನು ಹೊರಡಿಸಿ ಆನ್ಲೈನ್ ಮುಖಾಂತರ ಅರ್ಜಿ ಅಹ್ವಾನಿಸಲಾಗಿದೆ. 

ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು ಅರ್ಜಿ ಸಲ್ಲಿಸಲು ಜೂನ್ 27 ರವರೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ನೇಮಕಾತಿ ಅರ್ಜಿ ಸಲ್ಲಿಸಲು ಯಾವೆಲ್ಲಾ ಅಭ್ಯರ್ಥಿಗಳು ಅರ್ಹರಿದ್ದಾರೆ? ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಶುಲ್ಕದ ಮಾಹಿತಿ ಏನು ಎಂಬ ಮಾಹಿತಿ ಸೇರಿದಂತೆ ಇತರೆ ಸಂಪೂರ್ಣ ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಓದಿ: adhar update-2024: ಇನ್ನು ಮುಂದೆ ಗೃಹಲಕ್ಷ್ಮಿ, ಅನ್ನಭಾಗ್ಯ ಸೇರಿದಂತೆ ಎಲ್ಲಾ ಹಣ ಪಡೆಯಲು ಈ ಕೆಲಸ ತಪ್ಪದೇ ಮಾಡಿ!

IBPS RRB Recruitment 2024 - ನೇಮಕಾತಿಯ ಸಂಕ್ಷಿಪ್ತ ಮಾಹಿತಿ 

• ನೇಮಕಾತಿ ಸಂಸ್ಥೆ : Institute of Banking Personnel Selection
• ಒಟ್ಟು ಹುದ್ದೆಗಳು : 9995 ಹುದ್ದೆಗಳು 
• ಕರ್ತವ್ಯ ಸ್ಥಳ : All India

ನೇಮಕಾತಿ ಹುದ್ದೆಗಳ ವಿವರ - vacancy details

 ಭಾರತ ದೇಶಾದ್ಯಂತ ಇರುವ ವಿವಿಧ ವಲಯ ಮಟ್ಟದ ಗ್ರಾಮೀಣ ಬ್ಯಾಂಕುಗಳಲ್ಲಿ (Regional Rural Banks - RRB) ಖಾಲಿ ಇರುವಂತಹ ವಿವಿಧ ಹುದ್ದೆಗಳ ನೇಮಕಾತಿಗೆ ರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳಿಗೆ ವಿವರವು ಈ ಕೆಳಗಿನಂತಿರುತ್ತದೆ.
• Office Assistant 
• Officer Scale 1
• Officer Scale 2 - General Banking Officer 
• Officer Scale 2 - Specialist Officer 
• Chartered Accountant
• Law Officer 
• Treasury Officer
• Marketing Officer
• Agriculture Officer 
• Officer Scale 3 - Senior Manager

ಇದನ್ನೂ ಓದಿ: Copra msp price-ಬೆಂಬಲ ಬೆಲೆಯಲ್ಲಿ ಉಂಡೆ ಕೊಬ್ಬರಿ ಮಾರಾಟದ ಕುರಿತು ರೈತರಿಗೆ ತುರ್ತು ಪ್ರಕಟಣೆ!

ಶೈಕ್ಷಣಿಕ ಅರ್ಹತೆಗಳು: 

ಈ ನೇಮಕಾತಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧ ಪಟ್ಟ  ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ ಪದವಿ ಮುಗಿಸಿರಬೇಕು.

ವಯೋಮಿತಿ: 

ಅಧಿಸೂಚನೆಯಲ್ಲಿ ತಿಳಿಸಿರುವಂತೆ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಠ 40 ವರ್ಷದ ಒಳಗಿರಬೇಕು. ಮೀಸಲಾತಿ ಬಯಸುವ ಅಭ್ಯರ್ಥಿಗಳಿಗೆ ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.

ಇದನ್ನೂ ಓದಿ: Yashaswini Yojana-2024: ಯಶಸ್ವಿನಿ ಯೋಜನೆ ಕಾರ್ಡದಾರರಿಗೆ ಭರ್ಜರಿ ಸಿಹಿ ಸುದ್ದಿ! 

ಆಯ್ಕೆ ಪ್ರಕ್ರಿಯೆ - Selection Procedure 

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ ಪೂರ್ವಭಾವಿ ಲಿಖಿತ ಪರೀಕ್ಷೆಯನ್ನು ನಡೆಸಿ ಉತ್ತಮ ಅಂಕ ಗಳಿಸಿದ ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆಯನ್ನು ನಡೆಸಿ ನಂತರದ ಹಂತದಲ್ಲಿ ಸಂದರ್ಶನದ ಮುಖಾಂತರ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುವುದು.

1. Preliminary Exam
2. Mains exam 
3. Interview

ಅರ್ಜಿ ಶುಲ್ಕದ ವಿವರ: 

• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಅಭ್ಯರ್ಥಿಗಳು ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹175/-
• ಉಳಿದ ಎಲ್ಲಾ ವರ್ಗದ ಅಡಿಯಲ್ಲಿ ಬರುವ ಅಭ್ಯರ್ಥಿಗಳಿಗೆ ₹850/-

ಇದನ್ನೂ ಓದಿ: Bele vime amount- 2ನೇ ಹಂತದಲ್ಲಿ ಎಕರೆಗೆ 18,000 ರೂ ಬೆಳೆ ವಿಮೆ ರೈತರ ಖಾತೆಗೆ ಬಿಡುಗಡೆ!

ನೇಮಕಾತಿಗೆ ಸಂಬಂಧಿಸಿದಂತಹ ಪ್ರಮುಖ ಲಿಂಕುಗಳು:

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ : Click here
• ನೇಮಕಾತಿ ಅಧಿಕೃತ ಅಧಿಸೂಚನೆ : ಡೌನ್ಲೋಡ್