Aadhaar Update-ಮಕ್ಕಳ ಆಧಾರ್ ಅಪ್‌ಡೇಟ್ ಕಡ್ಡಾಯ! ಕೂಡಲೇ ಅರ್ಜಿ ಸಲ್ಲಿಸಿ!

July 21, 2025 | Siddesh
Aadhaar Update-ಮಕ್ಕಳ ಆಧಾರ್ ಅಪ್‌ಡೇಟ್ ಕಡ್ಡಾಯ! ಕೂಡಲೇ ಅರ್ಜಿ ಸಲ್ಲಿಸಿ!
Share Now:

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು(UIDIA)ಮಕ್ಕಳಗೆ ಆಧಾರ್ ಕಾರ್ಡ ಪಡೆಯುವುದರ ಕುರಿತು ನೂತನ ಪ್ರಕಟಣೆಯನ್ನು ಹೊರಡಿಸಿದ್ದು ಇದರನ್ವಯ 7 ವರ್ಷ ಮೀರಿದ ಮಕ್ಕಳಿಗೆ ಕಡ್ಡಾಯವಾಗಿ ಬಯೋಮೆಟ್ರಿಕ್ ಅಪ್‌ಡೇಟ್(Aadhaar Biometric Update) ಮಾಡಿಸಲು ಸೂಚನೆಯನ್ನು ನೀಡಲಾಗಿದ್ದು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಪ್ರಕಟಿಸಲಾಗಿದೆ.

ನಮ್ಮ ದೇಶದಲ್ಲಿ ಪ್ರತಿಯೊಬ್ಬ ನಾಗರಿಕರು ಹೊಂದಿರಲೇ ಬೇಕಾದ ದಾಖಲೆಯಲ್ಲಿ ಮೊದಲ ಸ್ಥಾನದಲ್ಲಿ ಆಧಾರ್ ಕಾರ್ಡ ದಾಖಲೆ ಬರುತ್ತದೆ ಈ ನಿಟ್ಟಿನಲ್ಲಿ ಆಧಾರ್ ಕಾರ್ಡನಲ್ಲಿರುವ ವಿವರ ಮತ್ತು ಆಧಾರ್ ಕಾರ್ಡ ದಾಖಲೆಯನ್ನು ಸರಿಯಾಗಿ ಇಟ್ಟುಕೊಳ್ಳುವುದು ಅತೀ ಮುಖ್ಯವಾಗಿದೆ.

ಇದನ್ನೂ ಓದಿ: Free Coaching Center-ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ! ಈಗಲೇ ಅರ್ಜಿ ಸಲ್ಲಿಸಿ!

ಇಂದಿನ ಲೇಖನದಲ್ಲಿ ಮಕ್ಕಳ ಆಧಾರ್ ಅಪ್‌ಡೇಟ್(Aadhaar Update) ಬಗ್ಗೆ ಪೋಷಕರು ಯಾವೆಲ್ಲ ಮಾಹಿತಿಯನ್ನು ತಿಳಿಸಿರಬೇಕು? ಆಧಾರ್ ಅಪ್‌ಡೇಟ್ ಮಾಡಿಕೊಳ್ಳುವುದರಿಂದ ಆಗುವ ಪ್ರಯೋಜನಗಳೇನು?ಆಧಾರ್ ಅಪ್‌ಡೇಟ್ ಗೆ ಎಲ್ಲಿ ಅರ್ಜಿ ಸಲ್ಲಿಸಬೇಕು? ಇನ್ನಿತರೆ ಅವಶ್ಯಕ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

Why is it mandatory to Aadhar Update-ಮಕ್ಕಳ ಆಧಾರ್ ಅಪ್‌ಡೇಟ್ ಕಡ್ಡಾಯ ಏಕೆ?

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI)ದಿಂದ ಅರ್ಜಿಯನ್ನು ಸಲ್ಲಿಸಿ 5 ವರ್ಷ ಭರ್ತಿಯಾಗದ ಮಕ್ಕಳಿಗೆ ಆಧಾರ್ ಕಾರ್ಡ ಅನ್ನು ಪಡೆಯುವ ಸಮಯದಲ್ಲಿ ಬಯೋಮೆಟ್ರಿಕ್ ಮಾಹಿತಿಯನ್ನು ಅಂದರೆ ಮಕ್ಕಳ ಬೆರಳಚ್ಚು, ಕಣ್ಣು ಸ್ಕ್ಯಾನ್ ಫೋಟೋ ಗಳನ್ನು ಆನ್ಲೈನ್ ನಲ್ಲಿ ಅಪ್‌ಡೇಟ್ ಮಾಡಲು ಸಾಧ್ಯವಾಗುವುದಿಲ್ಲ ಏಕೆಂದರೆ ಮಕ್ಕಳು ಈ ಸಮಯದಲ್ಲಿ ಇನ್ನು ಬೆಳೆವಣಿಗೆಯ ಪ್ರಾಥಮಿಕ ಹಂತದಲ್ಲಿರುತ್ತಾರೆ.

ಆದ್ದರಿಂದ ಇದರನ್ವಯ ಆಧಾರ್ ಕಾಯ್ದೆಯ 2016 ರ ಪ್ರಕಾರ ಮಕ್ಕಳಿಗೆ 7 ವರ್ಷ ತುಂಬಿದ ನಂತರ ಬಯೋಮೆಟ್ರಿಕ್ ಮಾಹಿತಿಯನ್ನು ಅಪ್‌ಡೇಟ್ ಮಾಡುವುದನ್ನು ಕಡ್ಡಾಯಗೊಳಿಸಿರುವ ಕಾರಣ ಎಲ್ಲಾ ಪೋಷಕರು ತಪ್ಪದೇ ಈ ಕ್ರಮವನ್ನು ಅನುಸರಿಸಬೇಕು.

ಇದನ್ನೂ ಓದಿ: Education Scholarship-ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಆಹ್ವಾನ!

Aadhaar

Aadhaar Biometric Update For Kids-ಆಧಾರ್ ಅಪ್‌ಡೇಟ್ ಮಾಡಿಕೊಳ್ಳುವುದರಿಂದ ಆಗುವ ಪ್ರಯೋಜನಗಳೇನು?

ಪೋಷಕರು ತಮ್ಮ ಮಕ್ಕಳಿಗೆ ಆಧಾರ್ ನಲ್ಲಿ ಬಯೋಮೆಟ್ರಿಕ್ ಮಾಹಿತಿಯನ್ನು ಅಪ್‌ಡೇಟ್ ಮಾಡಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಲು ಅವಕಾಶವಿದ್ದು ಇವುಗಳ ಪಟ್ಟಿ ಈ ಕೆಳಗಿನಂತಿದೆ:

ಮಕ್ಕಳಿಗೆ ವಿದ್ಯಾಭ್ಯಾಸದ ಸಮಯದಲ್ಲಿ ವಿದ್ಯಾರ್ಥಿವೇತನ ಯೋಜನೆಗಳು ಸೇರಿದಂತೆ ಇತರೆ ಸಹಾಯಧನ ಆಧಾರಿತ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆಯಲು ಆಧಾರ್ ಕಾರ್ಡ ಸಲ್ಲಿಸುವ ಸಮಯದಲ್ಲಿ ತೊಡಕು ಉಂಟಾಗುತ್ತದೆ.

ಆಧಾರ್ ನಲ್ಲಿ ಬಯೋಮೆಟ್ರಿಕ್ ಮಾಹಿತಿಯನ್ನು ಅಪ್‌ಡೇಟ್ ಇದ್ದರೆ ಮಕ್ಕಳು ಆಕಸ್ಮಿಕವಾಗಿ ಕಳೆದು ಹೋದ ಸಮಯದಲ್ಲಿ ಇವರ ಬೆರಳಚ್ಚನ್ನು ಬಳಕೆ ಮಾಡಿಕೊಂಡು ಆಧಾರ್ ನಲ್ಲಿ ಬಯೋಮೆಟ್ರಿಕ್ ಮಾಹಿತಿಯ ಆಧಾರದ ಮೇಲೆ ಪೋಷಕರನ್ನು ಹಾಗೂ ಮನೆ ವಿಳಾಸವನ್ನು ಗುರುತಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Survey Number Check-ನಿಮ್ಮ ಜಮೀನಿನ ಸರ್ವೆ ನಂಬರ್ ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

ಪ್ರಸ್ತುತ ದಿನಗಳಲ್ಲಿ ಯಾವುದೇ ಬಗ್ಗೆಯ ಸರ್ಕಾರಿ ಮತ್ತು ಅರೆ ಸರ್ಕಾರಿ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಲು ಹಾಗೂ ಪಡಿತರ ಚೀಟಿ, ಬ್ಯಾಂಕ್ ಖಾತೆ, ಶಾಲೆಗೆ ದಾಖಲಿಸಲು ಇತರೆ ದಾಖಲೆಗಳನ್ನು ಪಡೆಯಲು ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ ಹೊಂದಿರುವುದ ಅತ್ಯಗತ್ಯವಾಗಿದೆ.

Aadhaar Biometric Update Fee-ಆಧಾರ್ ಅಪ್‌ಡೇಟ್ ಗೆ ಎಷ್ಟು ಶುಲ್ಕವಿದೆ?

5 ರಿಂದ 7 ವರ್ಷದ ಒಳಗಿನ ಮಕ್ಕಳಿಗೆ- ಉಚಿತವಾಗಿದೆ.

7 ವರ್ಷ ಮೀರಿದ ಮಕ್ಕಳಿಗೆ ಬಯೋಮೆಟ್ರಿಕ್ ಅಪ್‌ಡೇಟ್‌ ಗೆ- 100 ರೂ.

Aadhaar Biometric Update

Aadhaar Biometric-ಆಧಾರ್ ಕಾರ್ಡ ಅಪ್‌ಡೇಟ್ ನಲ್ಲಿ ಯಾವೆಲ್ಲ ವಿವರ ದಾಖಲಿಸಲಾಗುತ್ತದೆ?

ಪೋಷಕರು ತಮ್ಮ ಮಕ್ಕಳ ಆಧಾರ್ ಕಾರ್ಡ ಅನ್ನು ಅಪ್‌ಡೇಟ್ ಮಾಡಿಸಲು ಆಧಾರ್ ಸೇವಾ ಕೇಂದ್ರಗಳನ್ನು ಭೇಟಿ ಮಾಡಿದ ಸಮಯದಲ್ಲಿ ಈ ಕೆಳಗಿನ ವಿವರವನ್ನು ಬಯೋಮೆಟ್ರಿಕ್ ಅಪ್‌ಡೇಟ್ ಬಳಕೆ ಮಾಡಿಕೊಳ್ಳಲಾಗುತ್ತದೆ.

  • ಮಕ್ಕಳ ಎರಡು ಕೈನ 10 ಬೆರಳುಗಳ ಬೆರಳಚ್ಚು.
  • ಕಣ್ಣಿನ ಸ್ಕ್ಯಾನ್-ಎರಡೂ ಕಣ್ಣುಗಳ ಐರಿಸ್ ಸ್ಕ್ಯಾನ್
  • ಮಗುವಿನ ಪ್ರಸ್ತುತ ಫೋಟೋ

ಇದನ್ನೂ ಓದಿ: New Ration Card-ಹೊಸ ರೇಷನ್ ಕಾರ್ಡ ಪಡೆಯಲು ಅವಕಾಶ– ತಕ್ಷಣ ಅರ್ಜಿ ಸಲ್ಲಿಸಿ!

How to update Aadhaar Biometric-ಆಧಾರ್ ಅಪ್‌ಡೇಟ್ ಮಾಡುವುದು ಹೇಗೆ?

ಪೋಷಕರು ನಿಮ್ಮ ಮಕ್ಕಳೊಂದಿಗೆ ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಅಗತ್ಯ ದಾಖಲಾತಿಗಳೊಂದಿಗೆ ನೇರವಾಗಿ ಭೇಟಿ ಮಾಡಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆಧಾರ್ ಬಯೋಮೆಟ್ರಿಕ್ ಅಪ್‌ಡೇಟ್ ಅನ್ನು ಮಾಡಿಸಬಹುದು.

Documents For Aadhaar Update-ಅವಶ್ಯಕ ದಾಖಲೆಗಳು:

ಪೋಷಕರು ತಮ್ಮ ಮಕ್ಕಳ ಆಧಾರ್ ಕಾರ್ಡ ಬಯೋಮೆಟ್ರಿಕ್ ಅಪ್‌ಡೇಟ್ ಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳ ವಿವರ ಹೀಗಿದೆ:

  • ಮಕ್ಕಳ ಪ್ರಸ್ತುತ ಆಧಾರ್ ಕಾರ್ಡ.
  • ಮೊಬೈಲ್ ಸಹಿತ ಕೇಂದ್ರವನ್ನು ಭೇಟಿ ಮಾಡಿ.
  • ಮಗುವನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು.

UIDIA Website-ಇದರ ಬಗ್ಗೆ ಇನ್ನು ಅಧಿಕ ಮಾಹಿತಿಯನ್ನು ಪಡೆಯಲು ಆಧಾರ್ ಕಾರ್ಡ ಪ್ರಾಧಿಕಾರದ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಲು ಇಲ್ಲಿ ಕ್ಲಿಕ್ ಮಾಡಿ-Click Here

WhatsApp Group Join Now
Telegram Group Join Now
Share Now: