Aadhaar Update-ಮಕ್ಕಳ ಆಧಾರ್ ಕಾರ್ಡಗೆ ಬಯೋ ಮೆಟ್ರಿಕ್ ನವೀಕರಣ! ತಪ್ಪದೇ ಈ ಮಾಹಿತಿ ತಿಳಿಯಿರಿ!

December 29, 2025 | Siddesh
Aadhaar Update-ಮಕ್ಕಳ ಆಧಾರ್ ಕಾರ್ಡಗೆ ಬಯೋ ಮೆಟ್ರಿಕ್ ನವೀಕರಣ! ತಪ್ಪದೇ ಈ ಮಾಹಿತಿ ತಿಳಿಯಿರಿ!
Share Now:

ಆಧಾರ್ ಕಾರ್ಡ ದಾಖಲೆಯಲ್ಲಿ ಮಕ್ಕಳಿಗೆ 5 ವರ್ಷ ಮತ್ತು 15 ವರ್ಷ ತುಂಬಿದ ಬಳಿಕ ಕಡ್ಡಾಯವಾಗಿ ಬಯೋ ಮೆಟ್ರಿಕ್ ನವೀಕರಣವನ್ನು ಮಾಡುವುದನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ಕಡ್ಡಾಯಗೊಳಿಸಲಾಗಿದ್ದು ಇದರ ಕುರಿತು ಇಂದಿನ ಅಂಕಣದಲ್ಲಿ ಪ್ರಮುಖ ಮಾಹಿತಿಯನ್ನು ಪ್ರಕಟಿಸಲಾಗಿದೆ.

ನಮ್ಮ ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಯ ಪ್ರಯೋಜನವನ್ನು ಪಡೆಯಲು ಮತ್ತು ಅತೀ ಮುಖ್ಯವಾಗಿ ಹೊಂದಿರಬೇಕಾದ ದಾಖಲೆಯಲ್ಲಿ ಅಧಾರ್ ಕಾರ್ಡ ಒಂದು ಪ್ರಮುಕ ದಾಖಲೆಯಾಗಿದ್ದು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ಆಧಾರ್ ಕಾರ್ಡ ವಿತರಣೆಯನ್ನು ಮಾಡಲಾಗುತ್ತದೆ ಪ್ರಸ್ತುತ ಮಕ್ಕಳ ಆಧಾರ್ ಕಾರ್ಡ ನವೀಕರಣದ ಕುರಿತು ಪ್ರಮುಖ ಪ್ರಕಟಣೆಯನ್ನು ಹೊರಡಿಸಲಾಗಿದೆ.

ಇದನ್ನೂ ಓದಿ: Free Mushroom Training-ಉಚಿತ ಅಣಬೆ ಕೃಷಿ ತರಬೇತಿಗೆ ಅರ್ಜಿ ಆಹ್ವಾನ!

ಮಕ್ಕಳ ಆಧಾರ್ ಕಾರ್ಡನಲ್ಲಿ ಬಯೋ ಮೆಟ್ರಿಕ್ ನವೀಕರಣವನ್ನು ಮಾಡಿಸುವುದು ಹೇಗೆ? ಇದಕ್ಕಾಗಿ ಅನುಸರಿಸಬೇಕಾದ ಕ್ರಮಗಳು ಯಾವುವು? ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರದ ವಿಳಾಸವನ್ನು ಮೊಬೈಲ್ ನಲ್ಲಿ ತಿಳಿಯುವ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

Aadhar Update-2025: ಮಕ್ಕಳ ಆಧಾರ್ ಕಾರ್ಡಗೆ ಬಯೋ ಮೆಟ್ರಿಕ್ ನವೀಕರಣ ಕಡ್ಡಾಯ:

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಧಿಕೃತ ಮಾರ್ಗಸೂಚಿಯ ಪ್ರಕಾರ ಮಕ್ಕಳಿಗೆ 5 ವರ್ಷ ತುಂಬಿದ ಬಳಿಕ ಮೊದಲನೇ ಬಾರಿ ಕೈ ಬೆರಳಚ್ಚು ಅನುಮೋದನೆ ಅಪ್ಡೇಟ್ ಮಾಡಿಸಬೇಕು ಇನ್ನು 15 ವರ್ಷ ತುಂಬಿದ ಬಳಿಕ ಎರಡನೇ ಬಾರಿ ಕೈ ಬೆರಳಚ್ಚು ಅನುಮೋದನೆಯನ್ನು ನವೀಕರಣ ಮಾಡಿದರೆ ಮಾತ್ರ ಆಧಾರ್ ಕಾರ್ಡ್ ಬಳಕೆ ಮಾಡಲು ಸಾಧ್ಯವಾಗುತ್ತದೆ ಈ ಕ್ರಮವನ್ನು ಅನುಸರಿಸುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: Land Conversion-ಕೃಷಿ ಭೂಮಿ ಪರಿವರ್ತನೆ ಇನ್ನು ತುಂಬಾ ಸರಳ! ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ!

Aadhaar update

How To Apply For Aadhaar Biometric Update-ಎಲ್ಲಿ ಮಾಡಿಸಬೇಕು?

ಮಕ್ಕಳ ಆಧಾರ್ ಕಾರ್ಡಗೆ ಬಯೋ ಮೆಟ್ರಿಕ್ ಅಪ್ಡೇಟ್ ಅನ್ನು ಮಾಡಿಸಲು ಪೋಷಕರು ನಿಮ್ಮ ಮಕ್ಕಳನ್ನು ಕರೆದುಕೊಂಡು ಹತ್ತಿರದ ಆಧಾರ್ ಸೇವಾ ಕೇಂದ್ರ ಅಥವಾ ಹೋಬಳಿ ಮಟ್ಟದ ನಾಡಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಆಧಾರ್ ಬಯೋ ಮೆಟ್ರಿಕ್ ಮತ್ತು ಫೇಸ್ Authentication, ಅನ್ನು ಅಪ್ಡೇಟ್ ಮಾಡಿಸಬೇಕು.

Aadhar Center Address-ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರದ ವಿಳಾಸವನ್ನು ತಿಳಿಯುವುದು ಹೇಗೆ?

ಆಧಾರ್ ಕಾರ್ಡ ವಿವರವನ್ನು ಅಪ್ಡೇಟ್ ಮಾಡಿಸಲು ನಿಮ್ಮ ಹತ್ತಿರದಲ್ಲಿ ಆಧಾರ್ ಕಾರ್ಡ ಸೇವಾ ಕೇಂದ್ರವು ಎಲ್ಲಿ ಇದೆ ಎನ್ನುವ ವಿಳಾಸದ ಮಾಹಿತಿಯನ್ನು ನಾಗರಿಕರು ಈ ಕೆಳಗಿನ ವಿಧಾನವನ್ನು ಅನುಸರಿಸಿ ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಅಧಿಕೃತ ಸರಕಾರಿ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ತಿಳಿದುಕೊಳ್ಳಬವುದು.

Step-1: ಮೊದಲಿಗೆ ಈ Click Here ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ bhuvanapp ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Sewing Machine Training-ಮಹಿಳೆಯರಿಗೆ ಗುಡ್ ನ್ಯೂಸ್! 31 ದಿನಗಳ ಉಚಿತ ಹೊಲಿಗೆ ಯಂತ್ರ ತರಬೇತಿ

Aadhar Biometric Update

Step-2: ತದನಂತರ ಈ ಪೇಜ್ ನಲ್ಲಿ ಬಲ ಬದಿಯಲ್ಲಿ ಮೇಲೆ ಕಾಣಿಸುವ "Menu" ಬಟನ್ ಮೇಲೆ ಕ್ಲಿಕ್ ಮಾಡಿ State Wise Aadhaar Centers ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ಬಳಿಕ ಆಯ್ಕೆ ವಿಭಾಗದಲ್ಲಿ ರಾಜ್ಯ, ಜಿಲ್ಲೆ, ನಿಮ್ಮ ತಾಲ್ಲೂಕು ಹೆಸರನ್ನು ಸೆಲೆಕ್ಟ್ ಮಾಡಿಕೊಂಡು ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಆಧಾರ್ ಕಾರ್ಡ ಸೇವಾ ಕೇಂದ್ರದ ವಿಳಾಸದ ವಿವರ ತೋರಿಸುತ್ತದೆ.

ಇದನ್ನೂ ಓದಿ: Postal Life Insurance-ಪೋಸ್ಟ್ ಆಫೀಸ್ ಲೈಫ್ ಇನ್ಶೂರೆನ್ಸ್ ಕಡಿಮೆ ಕಂತು ಪಾವತಿಸಿ ಹೆಚ್ಚಿನ ಲಾಭ ಪಡೆಯಿರಿ

Required Documents-ನವೀಕರಣಕ್ಕೆ ಅವಶ್ಯವಿರುವ ದಾಖಲೆಗಳು:

ಆಧಾರ್ ಕಾರ್ಡ ನವೀಕರಣಕ್ಕಾಗಿ ಅವಶ್ಯವಿರುವ ದಾಖಲೆಗಳ ಪಟ್ಟಿ ಹೀಗಿದೆ:

ಮಕ್ಕಳ ಆಧಾರ್ ಕಾರ್ಡ ಪ್ರತಿ.
ಖುದ್ದು ಆಧಾರ್ ಸೇವಾ ಕೇಂದ್ರಕ್ಕೆ ಮಗುವು ಹಾಜರಾಗಬೇಕು.
ಮೊಬೈಲ್ ನಂಬರ್.

Aadhar Helpline-ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ-1947

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: