ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆಯ ವೈಫಲ್ಯದಿಂದಾಗಿ ಸರಿಸುಮಾರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬೆಳೆ ಹಾನಿ ಉಂಟಾಗಿರುತ್ತದೆ.
ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಎಲ್ಲಾ ಬಗ್ಗೆಯ ಬರ ಅಧ್ಯಯನ ಸಮೀಕ್ಷೆಗಳು ಪೂರ್ಣಗೊಂಡಿದ್ದು ಇನ್ನು ಹಾನಿಯಾ ಪ್ರಮಾಣವನ್ನು ಲೆಕ್ಕ ಹಾಕಿ ರೈತರಿಗೆ ಬರ ಪರಿಹಾರದ ಹಣವನ್ನು ಜಮಾ ಮಾಡುವುದು ಬಾಕಿ ಇರುತ್ತದೆ.
ಈಗಾಗಲೇ ಕೃಷಿ,ಕಂದಾಯ ಮತ್ತು ಪಂಚಾಯತ್ ರಾಜ್ ಇಲಾಖೆ ಸಿಬ್ಬಂದಿಗಳಿಂದ ರಾಜ್ಯಾಧ್ಯಂತ ರೈತರ FID ನಂಬರ್ ಸರಿಪಡಿಸುವ ಮತ್ತು ರಚನೆ ಮಾಡುವ ಕಾರ್ಯ ನೆಡೆಯುತ್ತಿದ್ದು ಮುಂದಿನ ವಾರದಿಂದ ಎಲ್ಲಾ ರೈತರಿಗೆ ಮೊದಲ ಕಂತಿನ ರೂ 2,000 ಬರ ಪರಿಹಾರದ ಹಣ ಪಾವತಿ ಆರಂಭಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೆೇಗೌಡ ರವರು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಕುರಿತು ರಾಜ್ಯ ಸರಕಾರದ ಸಾರ್ವಜನಿಕ ಪ್ರಕಟಣೆ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: Interim Crop Insurance- ಈ ಜಿಲ್ಲೆಗಳಲ್ಲಿ 50.298 ಕೋಟಿ ಮಧ್ಯಂತರ ಬೆಳೆ ವಿಮೆ ಬಿಡುಗಡೆ!
ಶೇ 33ಕ್ಕಿಂತ ಹೆಚ್ಚು ಹಾನಿಯಾದ ವಿಸ್ತೀರ್ಣಕ್ಕೆ ಪ್ರತಿ ಹೆಕ್ಟೇರ್‌ಗೆ ಪರಿಹಾರ ನಿಗದಿ:
(1) 8,500 – ಮಳೆಯಾಶ್ರಿತ ಬೆಳೆಗಳಿಗೆ
(2) 17,000 – ನೀರಾವರಿ ಬೆಳೆಗಳಿಗೆ
(3) 22,500 – ಬಹುವಾರ್ಷಿಕ ಬೆಳೆಗಳಿಗೆ
ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ಅನುದಾನ ನಿರೀಕ್ಷಿಸಿ ಬೆಳೆ ಹಾನಿ ಪರಿಹಾರದ ಮೊದಲ ಕಂತಾಗಿ ಅರ್ಹ ರೈತರಿಗೆ ತಲಾ ₹ 2 ಸಾವಿರ ಪಾವತಿಸಲು ತೀರ್ಮಾನಿಸಲಾಗಿದೆ ಉಳಿಕೆ ಪರಿಹಾರದ ಹಣವನ್ನು ಕೇಂದ್ರದಿಂದ ಅನುದಾನ ಬಂದ ಕೂಡಲೇ ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪರಿಹಾರ ನೀಡಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾಹಿತಿ ತಿಳಿಸಿದ್ದಾರೆ.
ಮೊದಲ ಕಂತಿನ ಪರಿಹಾರ ರೈತರಿಗೆ ಯಾವಾಗ ಸಿಗಲಿದೆ?
ಬರ ಪರಿಸ್ಥಿತಿಯಿಂದ ರಾಜ್ಯದ ರೈತರಿಗೆ ರೂ. 35,162 ಕೋಟಿ ನಷ್ಟ ಉಂಟಾಗಿದೆ. ಬರದ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್ ಅಡಿಯಲ್ಲಿ ರೂ. 18,171.44 ಕೋಟಿ ಆರ್ಥಿಕ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದು ಮೊದಲ ಕಂತಿನ ಪರಿಹಾರದ ಹಣವನ್ನು ಮುಂದಿನ ವಾರದಿಂದ ರೈತರಿಗೆ ವರ್ಗಾಹಿಸಲಾಗುವುದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Crop information- ಈ ತಂತ್ರಾಶದಲ್ಲಿ ತಾವು ಬೆಳೆದ ಬೆಳೆ ವಿವರ ಇದ್ದಲ್ಲಿ ಮಾತ್ರ ಬೆಳೆ ವಿಮೆ ಪರಿಹಾರ!
ಬರ ಪರಿಸ್ಥಿತಿ ನಿರ್ವಹಣೆಗೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳು:
• 20 ಲಕ್ಷ ರೈತರು ಬೆಳೆ ವಿಮೆ ಪಡೆದಿದ್ದು, ಸಿಗಲಿರುವ ಪರಿಹಾರ 2,500 ಕೋಟಿ
• ಮೊದಲ ಕಂತಾಗಿ ರೈತರಿಗೆ ತಲಾ ₹ 2,000 ಮುಂದಿನ ವಾರದಿಂದ ಪಾವತಿ.
• ₹ 20 ಕೋಟಿ ವೆಚ್ಚದಲ್ಲಿ ಈಗಾಗಲೇ 7 ಲಕ್ಷ ಮೇವಿನ ಬಿತ್ತನೆ ಬೀಜದ ಕಿಟ್‌ಗಳ ಖರೀದಿ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಬರ ಪರಿಹಾರದ ಮೊದಲ ಕಂತಿನ ಹಣ ಪಡೆಯಲು ಅರ್ಹ ಫಲಾನುಭವಿಗಳ ಪಟ್ಟಿ ತಿಳಿಯುವ ವಿಧಾನ:
ರಾಜ್ಯ ಸರಕಾರದಿಂದ ಮೊದಲ ಕಂತಿನ ಬರ ಪರಿಹಾರದ ಹಣವನ್ನು ಪಡೆಯಲು ಅರ್ಹ ಫಲಾನುಭವಿಗಳ ಪಟ್ಟಿಯನ್ನು ರೈತರು ನೋಡಲು ಈ https://krushikamitra.com/parihara-list-368 ಲಿಂಕ್ ಮೇಲೆ ಕ್ಲಿಕ್ ಮಾಡಿ ನಮ್ಮ ಪುಟದ ಅಂಕಣವನ್ನು ಭೇಟಿ ಮಾಡಿ ಆ ಅಂಕಣದಲ್ಲಿ ವಿವರಿಸುವ ವಿಧಾನವನ್ನು ಅನುಸರಿಸಿ ಅರ್ಹ ರೈತರ ಲಿಸ್ಟ್ ಅನ್ನು ನೋಡಬವುದಾಗಿದೆ.