Breaking News:
Gruhalakshmi 15th Installment- ಗೃಹಲಕ್ಷ್ಮಿ ಯೋಜನೆಯಡಿ ಈ ಜಿಲ್ಲೆಯ ಮಹಿಳೆಯರಿಗೆ 15ನೇ ಕಂತಿನ ಹಣ ಬಿಡುಗಡೆ! Akrama sakrama-ಅಕ್ರಮ-ಸಕ್ರಮ ನಮೂನೆ 57 ತಿರಸ್ಕೃತಗೊಂಡ ಅರ್ಜಿ ಪುನರ್ ಪರಿಶೀಲನೆಗೆ ಅವಕಾಶ! LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
HomeNew postsBeautician training-ಉಚಿತ ಫಿಟ್ನೆಸ್ ಕೋಚ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ!

Beautician training-ಉಚಿತ ಫಿಟ್ನೆಸ್ ಕೋಚ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ!

ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಆಸಕ್ತಿಯಿರುವ ಅರ್ಹ ಅಭ್ಯರ್ಥಿಗಳು ಉಚಿತ ತರಬೇತಿಯನ್ನು(best business ideas) ಪಡೆಯಲು ಯುವ ಸಬಲೀಕರಣಮತ್ತು ಕ್ರೀಡಾ ಇಲಾಖೆ ವತಿಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಯುವ ಸಬಲೀಕರಣಮತ್ತು ಕ್ರೀಡಾ ಇಲಾಖೆ ವತಿಯಿಂದ ಗ್ರಾಮೀಣ ಮತ್ತು ನಗರ ಪ್ರದೇಶದ ಯುವಕ / ಯುವತಿಯರಿಗೆ ಸ್ವ-ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಜಿಮ್/ಫಿಟ್ನೆಸ್(fitness trainer), ಬ್ಯೂಟೀಷಿಯನ್(Beautician course), ಚಾಟ್ಸ್(chaat shop) ತಯಾರಿಕೆ ಉಚಿತ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಅರ್ಹ ಅಭ್ಯರ್ಥಿಗಳು ಈ ಲೇಖನದಲ್ಲಿ ವಿವರಿಸಿರುವ ಮಾಹಿತಿಯನ್ನು ಪಡೆದುಕೊಂಡು ಈ ತರಬೇತಿಯ ಪ್ರಯೋಜನ ಪಡೆದುಕೊಳ್ಳಬಹುದು.

ಇದನ್ನೂ ಓದಿ: Crop loan farmer list-ಬೆಳೆ ಸಾಲ ಮನ್ನಾ ಅಗಿರುವ ಪಟ್ಟಿಯನ್ನು ನೋಡಲು ವೆಬ್ಸೈಟ್ ಲಿಂಕ್ ಬಿಡುಗಡೆ!

free Beautician course-ಯಾವೆಲ್ಲ ತರಬೇತಿ ಲಭ್ಯ:

1) ಜಿಮ್/ ಫಿಟ್ನೆಸ್ ಕೋಚ್- 15 ದಿನಗಳು
2) ಬ್ಯೂಟಿಷಿಯನ್- 13 ದಿನಗಳು
3) ಚಾಟ್ಸ್ ತಯಾರಿಕೆ- 06 ದಿನಗಳು

ಆಸಕ್ತಿ ಅನುಗುಣವಾಗಿ ಈ ಮೇಲೆ ತಿಳಿಸಿದ ಒಟ್ಟು 3 ತರಬೇತಿಗಳಿಗೆ ಒಂದರಲ್ಲಿ ಅರ್ಹ ಅಭ್ಯರ್ಥಿಗಳು ಭಾಗವಹಿಸಬಹುದು.

Beautician, gym coach training-ತರಬೇತಿ ನಡೆಯುವ ದಿನಾಂಕ ಮತ್ತು ಸ್ಥಳ:

1) ಜಿಮ್/ ಫಿಟ್ನೆಸ್ ಕೋಚ್- 15 ದಿನಗಳು: ಈ ತರಬೇತಿಯು ಸೆಪ್ಟೆಂಬರ್ 19 ರಿಂದ ಅಕ್ಟೋಬರ್  3 ರವರೆಗೆ ನಡೆಯುತ್ತದೆ. ಸ್ಥಳ: ಬೆಂಗಳೂರಿನ   ಶ್ರೀ ಕಂಠೀರವ ಕ್ರೀಡಾಂಗಣ.
2) ಬ್ಯೂಟಿಷಿಯನ್- 13 ದಿನಗಳು: ಸೆಪ್ಟೆಂಬರ್ 21 ರಿಂದ ಅಕ್ಟೋಬರ್  3 ರವರೆಗೆ ಆಯೋಜನೆ ಮಾಡಲಾಗಿದೆ. ಸ್ಥಳ: ಕೋರಮಂಗಲದ ಒಳಾಂಗಣ ಕ್ರೀಡಾಂಗಣ.
3) ಚಾಟ್ಸ್ ತಯಾರಿಕೆ- 06 ದಿನಗಳು: ಅಕ್ಟೋಬರ್ 4 ರಿಂದ 9 ರವರೆಗೆ  ಹಮ್ಮಿಕೊಳ್ಳಲಾಗಿದೆ. ಸ್ಥಳ: ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ 

ತರಬೇತಿ ಸಮಯ: ಮೂರು ತರಬೇತಿಗಳು ಬೆಳಿಗ್ಗೆ 10-00 ರಿಂದ ಪ್ರಾರಂಭವಾಗಿ ಸಂಜೆ 5.30 ಗಂಟೆಯವರೆಗೆ ನಡೆಯುತ್ತವೆ.

ಇದನ್ನೂ ಓದಿ: Ganesh chaturthi 2024: ನಿಮ್ಮ ಊರಿನಲ್ಲಿ ಗಣೇಶನನ್ನು ಕೂರಿಸುತ್ತಿದಿರೇ? ಆಗಿದ್ದರೆ ತಪ್ಪದೆ ಈ ಮಾಹಿತಿ ತಿಳಿಯಿರಿ!

How can apply-ತರಬೇತಿಯಲ್ಲಿ ಯಾರೆಲ್ಲ ಭಾಗವಹಿಸಬಹುದು?

ಜಿಮ್/ ಫಿಟ್ನೆಸ್ ತರಬೇತಿ ಪಡೆಯಲು ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ಕನಿಷ್ಠ ವಯೋಮಿತಿ 18 ವರ್ಷ, ಗರಿಷ್ಠ 40 ವರ್ಷದೊಳಗಿರಬೇಕು.

ಬ್ಯೂಟಿಷಿಯನ್/ ಚಾಟ್ಸ್ ತಯಾರಿಕೆ ತರಬೇತಿಯಲ್ಲಿ ಭಾಗವಹಿಸಲು ಎಸ್‍ಎಸ್‍ಎಲ್‍ಸಿ ಉತ್ತೀರ್ಣ ಅಥವಾ ಅನುತ್ತೀರ್ಣವಾಗಿರುವವರು ಕನಿಷ್ಠ ವಯೋಮಿತಿ 18 ವರ್ಷ, ಗರಿಷ್ಟ 40  ವರ್ಷದೊಳಗಿರಬೇಕು.

ಇದನ್ನೂ ಓದಿ: Mini tractor subsidy- ಸಬ್ಸಿಡಿಯಲ್ಲಿ ಮಿನಿ ಟ್ರಾಕ್ಟರ್, ಪವರ್ ಟಿಲ್ಲರ್, ಪವರ್ ವೀಡರ್ ಇತರೆ ಯಂತ್ರಗಳನ್ನು ಪಡೆಯಲು ಅರ್ಜಿ ಆಹ್ವಾನ!

ಉಚಿತ ಉಪಹಾರ ಮತ್ತು ವಸತಿ ವ್ಯವಸ್ಥೆ:

ತರಬೇತಿಯಲ್ಲಿ ಭಾಗವಹಿಸಲು ಬರುವ ಹೊರ ಜಿಲ್ಲೆಯ ಅಭ್ಯರ್ಥಿಗಳಿಗೆ ಉಚಿತ ಲಘು ಉಪಹಾರ ಮತ್ತು ಪ್ರಯಾಣ ಭತ್ಯೆ, ಸಾಮಾನ್ಯ ವಸತಿ ವ್ಯವಸ್ಥೆಯನ್ನು ಯುವ ಸಬಲೀಕರಣಮತ್ತು ಕ್ರೀಡಾ ಇಲಾಖೆ ವತಿಯಿಂದ ಏರ್ಪಡಿಸಲಾಗುತ್ತದೆ.

Documents- ಅಗತ್ಯ ದಾಖಲಾತಿಗಳು:

1) ಅಭ್ಯರ್ಥಿಯ ಆಧಾರ್ ಕಾರ್ಡ ಪ್ರತಿ.
2) ಜನ್ಮ ದಿನಾಂಕ ಪ್ರಮಾಣ ಪತ್ರ.
3) ಜಾತಿ ಪ್ರಮಾಣ ಪತ್ರ.
4) ಪೋಟೋ.
5) ವಿದ್ಯಾರ್ಹತೆ ಅಂಕಪಟ್ಟಿ.

ಇದನ್ನೂ ಓದಿ: Property tax-2024: ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಪಾವತಿ ಈಗ ಭಾರೀ ಸುಲಭ!

ಆಸಕ್ತ ಯುವಕ / ಯುವತಿಯರು ತಮ್ಮ ಜನ್ಮ ದಿನಾಂಕದ ದಾಖಲೆಯೊಂದಿಗೆ ಸಹಾಯವಾಣಿ ಸಂಖ್ಯೆ 155265 ಹಾಗೂ ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಜ್ಯ ಯುವ ಕೇಂದ್ರ ನೃಪತುಂಗ ರಸ್ತೆ ಬೆಂಗಳೂರು -560001 ಗೆ  ಅಥವಾ ಮೊಬೈಲ್ ದೂರವಾಣಿ ಸಂಖ್ಯೆ 9731251411 ಇಲ್ಲಿ ನೋಂದಾಯಿಸಿಕೊಳ್ಳಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Most Popular

Latest Articles

- Advertisment -

Related Articles