HomeNew postsCrop loan farmer list-ಬೆಳೆ ಸಾಲ ಮನ್ನಾ ಅಗಿರುವ ಪಟ್ಟಿಯನ್ನು ನೋಡಲು ವೆಬ್ಸೈಟ್ ಲಿಂಕ್ ಬಿಡುಗಡೆ!

Crop loan farmer list-ಬೆಳೆ ಸಾಲ ಮನ್ನಾ ಅಗಿರುವ ಪಟ್ಟಿಯನ್ನು ನೋಡಲು ವೆಬ್ಸೈಟ್ ಲಿಂಕ್ ಬಿಡುಗಡೆ!

ರೈತರು ತಮ್ಮ ಬೆಳೆ ಸಾಲ ಮನ್ನಾ ಅಗಿರುವ ವಿವರವನ್ನು ಅಥವಾ ತಮ್ಮ ಹಳ್ಳಿಯ ರೈತರ ಪಟ್ಟಿಯನ್ನು(Crop loan farmer list) ನೋಡಲು ವೆಬ್ಸೈಟ್ ಲಿಂಕ್ ಬಿಡುಗಡೆ ಮಾಡಲಾಗಿದ್ದು, ಈ ಅಂಕಣದಲ್ಲಿ ವಿವರಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಈ ಪಟ್ಟಿಯನ್ನು ನೋಡಬಹುದು.

2017 ಮತ್ತು 2018 ರಲ್ಲಿ ರೈತರ ಬೆಳೆ ಸಾಲ ಮನ್ನಾ ವನ್ನು ರಾಜ್ಯ ಸರಕಾರದಿಂದ ಮಾಡಲಾಗಿತ್ತು ಕ್ರಮವಾಗಿ 50 ಸಾವಿರ ಒಮ್ಮೆ ಮತ್ತೊಮ್ಮೆ 1 ಲಕ್ಷದ ವರೆಗೆ ಬ್ಯಾಂಕ್ ಸಾಲವನ್ನು ಮನ್ನಾ(loan Loan waiver list) ಮಾಡಲಾಗಿದ್ದು, ಇದಕ್ಕೆ ಒಟ್ಟು 7,662 ಕೋಟಿ ಹಣವನ್ನು ವೆಚ್ಚ ಮಾಡಲಾಗಿದೆ.

ರೈತರು ಈ ಸಾಲ ಮನ್ನಾದ ಪ್ರಯೋಜನ ಪಡೆದಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಲು ಸಾಲ ಮನ್ನಾ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಚೆಕ್ ಮಾಡಲು ಮತ್ತು ಎಷ್ಟು ಮೊತ್ತದ ಸಾಲ ಮನ್ನಾವಾಗಿದೆ? ಯಾವೆಲ್ಲ ಬ್ಯಾಂಕ್ ನ ಸಾಲ ಮನ್ನಾ ಅಗಿದೆ? ಪ್ರಾಥಮಿಕ ಕೃಷಿ ಸಹಕಾರ ಸಂಘದ ಸಾಲ ಮನ್ನಾ ವರದಿಯನ್ನು ಸಹ ನೋಡಬಹುದು.

ಇದನ್ನೂ ಓದಿ: Ganesh chaturthi 2024: ನಿಮ್ಮ ಊರಿನಲ್ಲಿ ಗಣೇಶನನ್ನು ಕೂರಿಸುತ್ತಿದಿರೇ? ಆಗಿದ್ದರೆ ತಪ್ಪದೆ ಈ ಮಾಹಿತಿ ತಿಳಿಯಿರಿ!

National bank crop loan-ರೈತವಾರು ವಾಣಿಜ್ಯ ಬ್ಯಾಂಕ್ ನ ಸಾಲ ಮನ್ನಾ ವರದಿಯನ್ನು ನೋಡುವ ವಿಧಾನ:

ಸರಕಾರದ ಇ-ಆಡಳಿತ ವಿಭಾಗದಿಂದ ಅಭಿವೃದ್ದಿಪಡಿಸಿರುವ ಮಾಹಿತಿ ಕಣಜ ಜಾಲತಾಣವನ್ನು ಪ್ರವೇಶ ಮಾಡಿ ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ರೈತವಾರು ವಾಣಿಜ್ಯ ಬ್ಯಾಂಕ್ ನ ಸಾಲ ಮನ್ನಾದ(“(Loan Waiver Report for Commercial Bank) ಅಧಿಕೃತ  ವರದಿಯನ್ನು ನಿಮ್ಮ ಮೊಬೈಲ್ ನಲ್ಲಿ ನೋಡಬಹುದು.

Step-1: ಮೊದಲಿಗೆ ಈ Loan Waiver Report  ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: Mini tractor subsidy- ಸಬ್ಸಿಡಿಯಲ್ಲಿ ಮಿನಿ ಟ್ರಾಕ್ಟರ್, ಪವರ್ ಟಿಲ್ಲರ್, ಪವರ್ ವೀಡರ್ ಇತರೆ ಯಂತ್ರಗಳನ್ನು ಪಡೆಯಲು ಅರ್ಜಿ ಆಹ್ವಾನ!

Step-2: ಮಾಹಿತಿ ಕಣಜ ವೆಬ್ಸೈಟ್ ಅನ್ನು ಪ್ರವೇಶ ಮಾಡಿದ ಬಳಿಕ ಇಲ್ಲಿ “ಕಂದಾಯ ಇಲಾಖೆ/Revenue Department” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ತದನಂತರ “ಕಂದಾಯ ಇಲಾಖೆ ಸೇವೆಗಳು” ಆಯ್ಕೆಯ ಮೇಲೆ ಕ್ಲಿಕ್ ಮಾಡಿದ “ವಾಣಿಜ್ಯ ಬ್ಯಾಂಕ್ ಗಾಗಿ ಸಾಲ ಮನ್ನಾ ವರದಿ” ಎನ್ನುವ ಆಯ್ಕೆ ತೋರಿಸುತ್ತದೆ ಇದರ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Property tax-2024: ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಪಾವತಿ ಈಗ ಭಾರೀ ಸುಲಭ!

Step-4: ಈ ಪೇಜ್ ನಲ್ಲಿ ಮಾದರಿ/Type ಆಯ್ಕೆ ಕಾಲಂ ನಲ್ಲಿ “ರೈತ” ಎಂದು ಆಯ್ಕೆ ಮಾಡಿಕೊಂಡು “ಸಲ್ಲಿಸಿ” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ,ತಾಲೂಕು,ಹೋಬಳಿ,ಗ್ರಾಮ ಆಯ್ಕೆಯನ್ನು ಮಾಡಿಕೊಂಡು “ಸಲ್ಲಿಸಿ” ಬಟನ್ ಮೇಲೆ ಕ್ಲಿಕ್ ಮಾಡಿದರೆ ರೈತವಾರು “ವಾಣಿಜ್ಯ ಬ್ಯಾಂಕ್ ನ ಸಾಲ ಮನ್ನಾ ವರದಿ”ತೋರಿಸುತ್ತದೆ.

ಈ ಪಟ್ಟಿಯಲ್ಲಿ ನಿಮ್ಮ ಹಳ್ಳಿಯ ರೈತವಾರು  ಬೆಳೆ ಸಾಲ ಮನ್ನಾ ವರದಯ ಬ್ಯಾಂಕ್ ಹೆಸರು, ಸಾಲದ ಖಾತೆಯ ಕೊನೆಯ ನಾಲ್ಕು ಸಂಖ್ಯೆ, ಸಾಲದ ಪ್ರಕಾರ, ಹಸಿರು ಪಟ್ಟಿ ವಿವರ, ಸಾಲ ಮನ್ನಾ ವಿತರಣೆ ವಿವರ ತೋರಿಸುತ್ತದೆ.

ಇದನ್ನೂ ಓದಿ: Property tax-2024: ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಪಾವತಿ ಈಗ ಭಾರೀ ಸುಲಭ!

DCC bank crop Loan waiver farmer list- ರೈತವಾರು ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಸಾಲ ಮನ್ನಾ ವರದಿಯನ್ನು ನೋಡುವ ವಿಧಾನ:

ಮೇಲೆ ವಿವರಿಸಿರುವ ವಿಧಾನವನ್ನು ಅನುಸರಿಸಿ ವಾಣಿಜ್ಯ ಬ್ಯಾಂಕ್ ನ ಸಾಲ ಮನ್ನಾ ವರದಿಯನ್ನು ನೋಡಿದ ರೀತಿಯಲ್ಲೇ ಈ ಕೆಳಗಿನ ವಿಧಾನವನ್ನು ಅನುಸರಿಸಿ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಸಾಲ ಮನ್ನಾ ವರದಿಯನ್ನು(Loan Waiver Report for Primary Agricultural Cooperative Societies) ನೋಡಬಹುದು.

Step-1: ಪ್ರಥಮದಲ್ಲಿ ಈ crop Loan list ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ಪೇಜ್ ನಲ್ಲಿ ಕಾಣುವ “ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿಗೆ ಸಾಲ ಮನ್ನಾ ವರದಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-2: ಇದಾದ ಬಳಿಕ ಮಾದರಿ/Type ಆಯ್ಕೆಯಲ್ಲಿ “ರೈತ/Farmer” ಎಂದು ಆಯ್ಕೆ ಮಾಡಿಕೊಂಡು ನಿಮ್ಮ ಜಿಲ್ಲೆ,ತಾಲೂಕು,ಹೋಬಳಿ,ಗ್ರಾಮವನ್ನು ಆಯ್ಕೆ ಮಾಡಿಕೊಂಡು “ಸಲ್ಲಿಸಿ” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: “ಸಲ್ಲಿಸಿ” ಬಟನ್ ಮೇಲೆ ಕ್ಲಿಕ್ ಮಾಡಿದರೆ ರೈತವಾರು ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಸಾಲ ಮನ್ನಾ ವರದಿಯನ್ನು ನೋಡಬಹುದು. 

ಇದನ್ನೂ ಓದಿ: BPL card suspension- ಈ ನಿಯಮ ಮೀರಿದರೆ ನಿಮ್ಮ ಬಿಪಿಎಲ್ ಕಾರ್ಡ್ ಅಮಾನತು ಆಗುತ್ತದೆ!

Most Popular

Latest Articles

Related Articles