Bele Parihara List-ಬೆಳೆ ಹಾನಿ ಪರಿಹಾರ ಪಡೆದ ಅರ್ಹ ರೈತರ ಪಟ್ಟಿ ಬಿಡುಗಡೆ!

February 8, 2026 | Siddesh
Bele Parihara List-ಬೆಳೆ ಹಾನಿ ಪರಿಹಾರ ಪಡೆದ ಅರ್ಹ ರೈತರ ಪಟ್ಟಿ ಬಿಡುಗಡೆ!
Share Now:

2025-26ನೇ ಸಾಲಿನ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಅತೀಯಾದ ಮಳೆಯಿಂದಾಗಿ ಬೆಳೆ ಹಾನಿಯಾಗಿ ಅರ್ಜಿ ಸಲ್ಲಿಸಿ ಬಹುತೇಕ ಶೇ 80% ರೈತರಿಗೆ ಬೆಳೆ ಹಾನಿ ಪರಿಹಾರದ ಹಣವು ವರ್ಗಾವಣೆಯಾಗಿದ್ದು ಕಂದಾಯ ಇಲಾಖೆಯ ಅಧಿಕೃತ ಪರಿಹಾರ ತಂತ್ರಾಂಶದಲ್ಲಿ ರೈತರ ಪಟ್ಟಿಯನ್ನು(Bele Parihara Farmers List) ಬಿಡುಗಡೆ ಮಾಡಲಾಗಿದ್ದು ಈ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಪ್ರಕಟಿಸಲಾಗಿದೆ.

ಇಂದಿನ ಈ ಅಂಕಣದಲ್ಲಿ 2025-26ನೇ ಮುಂಗಾರು ಹಂಗಾಮಿನಲ್ಲಿ ಬೆಳೆ ಪರಿಹಾರ(Bele Parihara)ಪಡೆದ ರೈತರ ಅಂಕಿ-ಅಂಶ ವಿವರ, ರೈತರು ತಮ್ಮ ಮೊಬೈಲ್ ನಲ್ಲೇ ಬೆಳೆ ಪರಿಹಾರ ಪಡೆದ ಅರ್ಹ ರೈತರ ವಿವರವನ್ನು ಪಡೆಯುವುದು ಹೇಗೆ? ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಜಮಾ ಅಗದಿರಲು ಪ್ರಮುಖ ಕಾರಣಗಳು ಯಾವುವು? ಎನ್ನುವ ಮಾಹಿತಿ ಸೇರಿದಂತೆ ಇನ್ನಿತರೆ ಅಗತ್ಯ ವಿವರವನು ಇಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: Birth And Death Certificate-ಜನನ-ಮರಣ ಪ್ರಮಾಣಪತ್ರಕ್ಕಾಗಿ ಅಲೆದಾಟಕ್ಕೆ ಬಿತ್ತು ಬ್ರೇಕ್: ಈಗ ಎಲ್ಲವೂ ನಿಮ್ಮ ಬೆರಳ ತುದಿಯಲ್ಲಿ!

Bele Parihara Amount-2025-26ನೇ ಮುಂಗಾರು ಹಂಗಾಮಿನಲ್ಲಿ ಬೆಳೆ ಪರಿಹಾರ ಪಡೆದ ರೈತರ ಅಂಕಿ-ಅಂಶ:

ರಾಜ್ಯ ಸರಕಾರದಿಂದ ಇಲ್ಲಿಯವರೆಗೆ ಒಟ್ಟು ಎಷ್ಟು ರೈತರಿಗೆ ಬೆಳೆ ಪರಿಹಾರದ ಹಣ ಜಮಾ ಮಾಡಲಾಗಿದೆ ಮತ್ತು ಇನ್ನು ಎಷ್ಟು ರೈತರಿಗೆ ಪರಿಹಾರ ಪಾವತಿ ಬಾಕಿ ಇರುತ್ತದೆ ಎನ್ನುವ ಅಂಕ-ಅಂಶದ ಮಾಹಿತಿ ಹೀಗಿದೆ:

ಇಲ್ಲಿಯವರೆಗೆ ಬೆಳೆ ಪರಿಹಾರ ಪಾವತಿಯಾದ ಒಟ್ಟು ರೈತರ ಸಂಖ್ಯೆ- 13,77,236
ಪರಿಹಾರ ಪಡೆಯಲು ಅರ್ಹರಿರುವ ಬಾಕಿ ರೈತರ ಸಂಖ್ಯೆ- 1,42,161
ತಾಂತ್ರಿಕ ಸಮಸ್ಯೆಯಿಂದ ಬೆಳೆ ಪರಿಹಾರ ಪಾವತಿ ಅಗಿಲ್ಲದೇ ಇರುವ ರೈತರ ಸಂಖ್ಯೆ- 45,219

Bele Parihara Status-ರೈತರು ತಮ್ಮ ಮೊಬೈಲ್ ನಲ್ಲೇ ಬೆಳೆ ಪರಿಹಾರ ಪಡೆದ ಅರ್ಹ ರೈತರ ವಿವರವನ್ನು ಪಡೆಯಬಹುದು:

ಕಂದಾಯ ಇಲಾಕೆಯ ಅಧಿಕೃತ ಪರಿಹಾರ ತಂತ್ರಾಂಶವನ್ನು ಭೇಟಿ ಮಾಡಿ ಈ ಕೆಳಗೆ ತಿಳಿಸಿರುವ ಎರಡು ವಿಧಾನವನ್ನು ಅನುಸರಿಸಿ ರೈತರು ಮನೆಯಲ್ಲೇ ಕುಳಿತು ಯಾವುದೇ ಸರಕಾರಿ ಕಚೇರಿಯನ್ನು ಅಲೆದಾಡದೇ ಕೇವಲ ಒಂದೆರಡು ಕ್ಲಿಕ್ ನಲ್ಲಿ ಬೆಳೆ ಪರಿಹಾರ ಹಣದ ಜಮಾ ವಿವರವನ್ನು ಪತ್ತೆ ಮಾಡಬಹುದಾಗಿದೆ.

ಇದನ್ನೂ ಓದಿ: Diploma Scholarship-ಡಿಪ್ಲೊಮಾ ವಿದ್ಯಾರ್ಥಿನಿಯರಿಗೆ 10,000 ವಿದ್ಯಾರ್ಥಿವೇತನ! ಇನ್ನು 4 ದಿನ ಬಾಕಿ!

ವಿಧಾನ-1: ನಿಮ್ಮ ಹಳ್ಳಿಯ ರೈತರ ಪಟ್ಟಿಯನ್ನು ಪಡೆದು ಚೆಕ್ ಮಾಡಬಹುದು:

ಕೃಷಿಕರು ತಮ್ಮ ಮೊಬೈಲ್ ನಲ್ಲಿ ಪರಿಹಾರ ತಂತ್ರಾಂಶವನ್ನು ಭೇಟಿ ಮಾಡಿ ತಮ್ಮ ಹಳ್ಳಿಯಲ್ಲಿ ಯಾರಿಗೆಲ್ಲ ಬೆಳೆ ಪರಿಹಾರದ ಹಣ ಜಮಾ ಅಗಿದೆ ಎನ್ನುವ ರೈತರ ಪಟ್ಟಿಯನ್ನು ಈ ಕೆಳಗೆ ವಿವರಿಸಿರುವ ಹಂತವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲಿ ಪಡೆದುಕೊಂಡು ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಚೆಕ್ ಮಾಡಿಕೊಳ್ಳಬಹುದು.

Step-1: ರೈತರು ಮೊದಲಿಗೆ Bele Parihara Status Check ಇಲ್ಲಿ ಕ್ಲಿಕ್ ಮಾಡಿ ಅಧಿಕೃತ Parihara ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: SBI Women Loan-ಮಹಿಳೆಯರ ಸ್ವಂತ ಉದ್ಯಮಕ್ಕೆ"ಸ್ತ್ರೀ ಶಕ್ತಿ ಪ್ಯಾಕೇಜ್"! ಇಲ್ಲಿದೆ ಸಂಪೂರ್ಣ ಮಾಹಿತಿ!

Bele Parihara

Step-2: ಇದಾದ ಬಳಿಕ ಈ ಪೇಜ್ ನಲ್ಲಿ "ಗ್ರಾಮ ಹಂತದ ಪಾವತಿ" ಬಟನ್ ಮೇಲೆ ಕ್ಲಿಕ್ ಮಾಡಿ ಮುಂದಿನ ಪೇಜ್ ಭೇಟಿ ಮಾಡಬೇಕು.

Step-3: ನಂತರ ಈ ಪುಟದಲ್ಲಿ ನೀವು "Select year/ವರ್ಷ ಆಯ್ಕೆಮಾಡಿ- 2025-26" ಎಂದು ಆಯ್ಕೆ ಮಾದಿ ಋತು- ಮುಂಗಾರು, ವಿಪತ್ತಿನ ವಿಧ- ಪ್ರವಾಹ, ಹಾಗೂ ನಿಮ್ಮ ಜಿಲ್ಲೆ/ತಾಲ್ಲೂಕು/ಹೋಬಳಿ/ಗ್ರಾಮ ಆಯ್ಕೆಯನ್ನು ಮಾಡಿ ಬಳಿಕ "Get Report/ವರದಿ ಪಡೆಯಿರಿ" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ಯಾರಿಗೆಲ್ಲ ಬೆಳೆ ಪರಿಹಾರದ ಹಣ ಜಮಾ ಅಗಿದೆ ಎನ್ನುವ ವಿವರವನ್ನು ಇಲ್ಲಿ ನೀವು ನೋಡಬಹುದು ಒಮ್ಮೆ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ ಎಂದು ಚೆಕ್ ಮಾಡಿಕೊಳ್ಳಿ.

ಇದನ್ನೂ ಓದಿ: Bele Vime Status-ರೈತರ ಖಾತೆಗೆ ಬೆಳೆ ವಿಮೆ ಪರಿಹಾರ!ಮೊಬೈಲ್ ನಲ್ಲೇ ಹಣ ಜಮಾ ವಿವರ ತಿಳಿಯಿರಿ!

Bele Parihara Details-ಪಟ್ಟಿಯಲ್ಲಿ ಹಲವು ಮಾಹಿತಿ ಲಭ್ಯ:

ಮೇಲಿನ ಹಂತವನ್ನು ಅನುಸರಿಸಿ ಬೆಳೆ ಪರಿಹಾರ ಪಡೆದ ಹಳ್ಳಿವಾರು ರೈತರ ಪಟ್ಟಿಯನ್ನು ಪಡೆದಾಗ ಈ ಪಟ್ಟಿಯಲ್ಲಿ ರೈತರ ಹೆಸರು, ಜಮೀನಿನ ಸರ್ವೆ ನಂಬರ್, ಬೆಳೆ ಹೆಸರು, ಒಟ್ಟು ವಿಸ್ತೀರ್ಣ, ಬೆಳೆ ಪರಿಹಾರದ ಹಣ ಜಮಾ ದಿನಾಂಕ ಮತ್ತು ಒಟ್ಟು ಮೊತ್ತದ ಮಾಹಿತಿಯನ್ನು ಈ ಪಟ್ಟಿಯಲ್ಲಿ ನೀವು ನೋಡಬಹುದು.

ವಿಧಾನ-2: ನಿಮ್ಮ ಆಧಾರ್/ಮೊಬೈಲ್ ನಂಬರ್ ಹಾಕಿ ಪರಿಹಾರ ಜಮಾ ವಿವರ ತಿಳಿಯಬಹುದು:

Step-1: ಮೊದಲಿಗೆ ಈ Bele Hani Parihara Status ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಕಂದಾಯ ಇಲಾಖೆಯ ಪರಿಹಾರ ತಂತ್ರಾಂಶವನ್ನು ಭೇಟಿ ಮಾಡಿ.

Step-2: ಇದಾದ ಬಳಿಕ ಈ ಪುಟದಲ್ಲಿ ಒಟ್ಟು ಮೂರು ಆಯ್ಕೆಗಳನ್ನು ಬಳಕೆ ಮಾಡಿಕೊಂಡು ನಿಮಗೆ ಕಳೆದ 3 ವರ್ಷದಲ್ಲಿ ಬೆಳೆ ಹಾನಿ ಪರಿಹಾರ ಜಮಾ ಅಗಿರುವುದನ್ನು ತಿಳಿಯಲು ಅವಕಾಶವಿದ್ದು ನಿಮ್ಮ ಆಧಾರ್ ಕಾರ್ಡ ನಂಬರ್/ಮೊಬೈಲ್ ನಂಬರ್ ಅಥವಾ ಜಮೀನಿನ ಸರ್ವೆ ನಂಬರ್ ನಮೂದಿಸಿ ಕೊನೆಯಲ್ಲಿ ಕಾಣುವ "Fetch/ಪಡೆಯಿರಿ" ಬಟನ್ ಮೇಲೆ ಕ್ಲಿಕ್ ಮಾಡಿ ಜಮಾ ವಿವರವನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: Free Notebook Scheme-1 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ: ಪೋಷಕರ ಜೇಬಿಗೆ ಇನ್ನು ಹೊರೆಯಿಲ್ಲ!

Crop Loss Amount Transfer Fail Reason-ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಜಮಾ ಅಗದಿರಲು ಪ್ರಮುಖ ಕಾರಣಗಳು:

ಬೆಳೆ ಹಾನಿ ಪರಿಹಾರದ ಹಣ ರೈತರ ಖಾತೆಗೆ ಜಮಾ ಆಗದೆ ಇರಲು ತಾಂತ್ರಿಕ ಅಥವಾ ದಾಖಲಾತಿಗಳ ಕೊರತೆ ಪ್ರಮುಖ ಕಾರಣವಾಗಿರುತ್ತದೆ. ಸಾಮಾನ್ಯವಾಗಿ ಈ ಕೆಳಗಿನ 5 ಕಾರಣಗಳಿಂದಾಗಿ ಹಣ ತಡೆಹಿಡಿಯಲ್ಪಟ್ಟಿರುತ್ತದೆ:

NPCI Mapping-ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಇಲ್ಲದಿರುವುದು:

ಸರ್ಕಾರವು ಹಣವನ್ನು DBT (ನೇರ ನಗದು ವರ್ಗಾವಣೆ) ಮೂಲಕ ಕಳುಹಿಸುತ್ತದೆ. ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಜೋಡಣೆಯಾಗದಿದ್ದರೆ ಅಥವಾ NPCI (National Payments Corporation of India) ಮ್ಯಾಪಿಂಗ್ ಆಗದಿದ್ದರೆ ಹಣ ಜಮಾ ಆಗುವುದಿಲ್ಲ.

FRUITS ID-ಫ್ರೂಟ್ಸ್ ಐಡಿ ಸಮಸ್ಯೆ:

ನಿಮ್ಮ ಜಮೀನಿನ ಪಹಣಿ (RTC) ಮಾಹಿತಿಯು ಫ್ರೂಟ್ಸ್ ಪೋರ್ಟಲ್‌ನಲ್ಲಿ ಸರಿಯಾಗಿ ಅಪ್‌ಡೇಟ್ ಆಗದಿರುವುದು ಅಂದರೆ ಜಮೀನಿನ ಸರ್ವೆ ನಂಬರ್ ಮತ್ತು ಇನ್ನಿತರೆ ವಿವರ ಆಧಾರ್ ಕಾರ್ಡ ವಿವರಕ್ಕೆ ತಾಳೆ ಅಗದಿದ್ದರೆ ಬೆಳೆ ಹಾನಿ ಪರಿಹಾರ ಪಡೆಯಲು ತೊಡಕು ಉಂಟಾಗುತ್ತದೆ.

ಜಮೀನಿನ ಸರ್ವೆ ನಂಬರ್ ನಲ್ಲಿ ಜಂಟಿ ಖಾತೆದಾರರಿದ್ದಾಗ ಸರಿಯಾದ ಮಾಲೀಕರ ವಿವರ ಫ್ರೂಟ್ಸ್ ಐಡಿ ಯಲ್ಲಿ ದಾಖಲೆ ಇಲ್ಲದಿರುವುದು ಹಾಗೂ ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಐಎಫ್‌ಎಸ್‌ಸಿ (IFSC) ಕೋಡ್ ತಪ್ಪಾಗಿ ನಮೂದಾಗಿರುವುದು.

ಇದನ್ನೂ ಓದಿ: Free Driving Training-ನಿರುದ್ಯೋಗಿ ಯುವಕರಿಗೆ ಸುವರ್ಣಾವಕಾಶ: ಕೆಎಸ್‌ಆರ್‌ಟಿಸಿಯಿಂದ ಉಚಿತ ಭಾರೀ ವಾಹನ ಚಾಲನಾ ತರಬೇತಿ ಮತ್ತು ಪರವಾನಗಿ!

Crop Survey Mismatch-ಬೆಳೆ ಸಮೀಕ್ಷೆಯಲ್ಲಿ ವ್ಯತ್ಯಾಸ:

ಕೃಷಿ ಇಲಾಕೆಯಿಂದ ಪ್ರತಿ ಹಂಗಾಮಿನಲ್ಲಿ ಬೆಳೆ ಸಮೀಕ್ಷೆ ಆಪ್‌ನಲ್ಲಿ ದಾಖಲಾದ ಬೆಳೆಗೂ, ನೀವು ಪರಿಹಾರ ಕೋರಿ ಅರ್ಜಿ ಸಲ್ಲಿಸಿರುವ ಬೆಳೆಗೂ ವ್ಯತ್ಯಾಸವಿದ್ದರೆ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಉದಾಹರಣೆಗೆ, ನೀವು 'ಜೋಳ' ಬೆಳೆದಿದ್ದು, ದಾಖಲೆಯಲ್ಲಿ 'ಬರಡು ಭೂಮಿ' ಎಂದು ನಮೂದಾಗಿದ್ದರೆ ಪರಿಹಾರ ಸಿಗುವುದಿಲ್ಲ.

Name Mismatch- ಅರ್ಜಿದಾರರ ಹೆಸರಿನಲ್ಲಿ ವ್ಯತ್ಯಾಸ:

ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಹೆಸರು, ಬ್ಯಾಂಕ್ ಪಾಸ್‌ಬುಕ್‌ನಲ್ಲಿರುವ ಹೆಸರು ಮತ್ತು ಪಹಣಿಯಲ್ಲಿರುವ ಹೆಸರು ಒಂದಕ್ಕೊಂದು ತಾಳೆಯಾಗದಿದ್ದರೂ ತಾಂತ್ರಿಕ ದೋಷ (Data Mismatch) ಎಂದು ಪರಿಗಣಿಸಿ ಹಣ ವರ್ಗಾವಣೆ ವಿಫಲವಾಗುತ್ತದೆ.

Crop Loss Application-ಬೆಳೆ ಹಾನಿ ಪರಿಹಾರದ ಕುರಿತು ಎಲ್ಲಿ ವಿಚಾರಿಸಬೇಕು?

ಬೆಳೆ ಹಾನಿ ಪರಿಹಾರಕ್ಕಾಗಿ ನೀವು ಅರ್ಜಿ ಸಲ್ಲಿಸಿ ನಿಮಗೆ ಪರಿಹಾರದ ಹಣ ಜಮಾ ಅಗಿರದೇ ಇದ್ದಲ್ಲಿ ನಿಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿ(VA) ಅಥವಾ ನಿಮ್ಮ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿ ಸ್ಥಿತಿ ಕುರಿತು ವಿಚಾರಿಸಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: