ಬೆಳೆ ವಿಮೆ ಪರಿಹಾರವನ್ನು ಹೇಗೆ ಪಡೆಯುವುದು? ಬೆಳೆ ವಿಮೆ ಅರ್ಜಿ ಸ್ಥಿತಿ ತಿಳಿಯುವ ವಿಧಾನ.

June 27, 2023 | Siddesh

ನಮ್ಮ ರಾಜ್ಯದಲ್ಲಿ ಕೃಷಿ ಬೆಳೆಗಳಿಗೆ ವಿಮೆ ಸೌಲಭ್ಯವನ್ನು ಒದಗಿಸಲು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, 2023-24 ರ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ವಿಮೆ ಒದಗಿಸಲಾಗುತ್ತಿದೆ. 

ರೈತರು  ಯಾವೆಲ್ಲ ಸಮಯದಲ್ಲಿ ಈ ಯೋಜನೆಯಡಿ ಬೆಳೆ ವಿಮೆ ಪರಿಹಾರವನ್ನು ಪಡೆಯಬವುದು ಮತ್ತು ಅನುಸರಿಸಬೇಕಾದ ಕ್ರಮಗಳೇನು ಇತ್ಯಾದಿ ಪ್ರಮುಖ ಮಾಃಇತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಅನುಷ್ಟಾನಗೊಳಿಸಲು ರಾಜ್ಯದ ಪ್ರತಿ ಜಿಲ್ಲೆಗೂ ವಿಮಾ ಸಂಸ್ಥೆ ನಿಗದಿಪಡಿಸಲಾಗಿರುತ್ತದೆ. ಸರಕಾರಿ ಮತು ಖಾಸಗಿ ವಿಮಾ ಕಂಪನಿಗಳ ಸಹಯೋಗದಲ್ಲಿ ರೈತರ ಬೆಳೆಗೆ ವಿಮೆ ಒದಗಿಸಲಾಗುತ್ತದೆ.

ಬೆಳೆ ವಿಮೆ ಕುರಿತು ಸರಕಾರ ಹೊರಡಿಸಿರುವ ಪ್ರಕಟಣೆ ಪ್ರಮುಖ ಅಂಶಗಳು:

1. ಸ್ಥಳ, ನಿರ್ಧಿಷ್ಟ, ಪ್ರಕೃತಿ ವಿಕೋಪಗಳಾದ (Localized calamity), ಆಲಿಕಲ್ಲು ಮಳೆ (Hailstorm), ಭೂ ಕುಸಿತ (Land slide), ಬೆಳೆ ಮುಳುಗಡೆ (Inundation), ಮೇಘ ಸ್ಫೋಟ (Cloud Burst), ಮತ್ತು ಗುಡುಗು ಮಿಂಚುಗಳಿಂದಾಗಿ ಉಂಟಾಗುವ ಬೆಂಕಿ ಅವಗಡ (Natural fire due to lightning) ಸಂದರ್ಭದಲ್ಲಿ ಬೆಳೆ ನಷ್ಟವುಂಟಾದರೆ ವೈಯಕ್ತಿಕ ನಷ್ಟದ ನಿರ್ಧರಣೆಯನ್ನು ವೈಯುಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ಈ ಯೋಜನೆಯಡಿ ಅವಕಾಶ ನೀಡಲಾಗಿದೆ.

2. ಒಂದು ವೇಳೆ ಒಂದು ಅಧಿಸೂಚಿತ ಘಟಕದಲ್ಲಿ ಶೇಕಡಾ 25 ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ ಆ ಅಧಿಸೂಚಿತ ಘಟಕದಲ್ಲಿ ಬೆಳೆ ವಿಮೆಗೆ ಒಳಪಟ್ಟ ರೈತರಲ್ಲಿ ಬೆಳೆ ನಷ್ಟವಾದ ರೈತರಿಗೆ ಮಾತ್ರ ಮಾದರಿ ಸಮೀಕ್ಷೆಗನುಣವಾಗಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುತ್ತದೆ.

3. ಸ್ಥಳೀಯ ಗಂಡಾಂತರ ಕಾರಣಗಳಿಂದ ಬೆಳೆ ನಷ್ಟ ಸಂಭವಿಸಿದರೆ ಬೆಳೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂದಪಟ್ಟ ಹಣಕಾಸು ಸಂಸ್ಥೆ ಅಥವಾ ಅನುಷ್ಟಾನಗೊಳಿಸಿರುವ ವಿಮಾ ಸಂಸ್ಥೆಗಳ ಕಚೇರಿಗಳಿಗೆ ಅಥವಾ ಕೃಷಿ ಇಲಾಖೆ ಮೂಲಕ ತಕ್ಷಣ ಸೂಚನೆ ನೀಡಬೇಕು ಮತ್ತು ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಯೊಳಗೆ ತಿಳಿಸಬೇಕು.

4. 2023-24 ಮುಂಗಾರು ಹಂಗಾಮಿನಲ್ಲಿ ಮಳೆ ಅಭಾವ ಅಥವಾ ಇತರ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಧಿಸೂಚಿತ ಘಟಕದಲ್ಲಿ ಶೇಕಡಾ 75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ (Prevented sowing / Planting Risk)ವಿಮಾ ಮೊತ್ತದ ಗರಿಷ್ಟ 25 ರಷ್ಟು ಪರಿಹಾರವನ್ನು ವಿಮಾ ಸಂಸ್ಥೆಯು ವಿಮೆ ಮಾಡಿಸಿದ ರೈತರಿಗೆ ಇತ್ಯರ್ಥಪಡಿಸಿ ಮುಂದಿನ ಅವಧಿಗೆ ವಿಮೆಯನ್ನು ರದ್ದುಪಡಿಸಬಹುದಾಗಿದೆ.

5. 2023-24 ರ ಮುಂಗಾರು ಹಂಗಾಮಿನಲ್ಲಿ ಇಂಡೆನ್ಸಿಟಿ ಮೊತ್ತವನ್ನು ನೀರಾವರಿ ಬೆಳೆಗಳಿಗೆ ಶೇ. 90 ಹಾಗೂ ಮಳೆಆಶ್ರಿತ ಬೆಳೆಗಳಿಗೆ ಶೇ. 80 ಎಂದು ನಿಗಧಿಪಡಿಸಲಾಗಿದೆ. ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಬೆಳೆವಾರು ಹಣಕಾಸು ಪ್ರಮಾಣದ (Scale of Finance) ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಇದನ್ನೂ ಓದಿ: ಮೊಬೈಲ್ ನಲ್ಲಿ ನಿಮ್ಮ ಗ್ರಾಮದ ಸರ್ವೆ ನಂಬರ್ ಸಹಿತ ನಕ್ಷೆ ಡೌನ್ಲೋಡ್ ಮಾಡುವುದು ಹೇಗೆ?

6. ತಾಲೂಕುವಾರು ಮುಖ್ಯ ಬೆಳೆಗಳ ಹಾಗೂ ಇತರೆ ಬೆಳೆಗಳ ಪಟ್ಟಿಯನ್ನು ಅನುಭಂದ-1 ರಲ್ಲಿ ನೀಡಲಾಗಿದೆ. ಪ್ರಸ್ತುತ ಸಾಲು ಹಾಗೂ ಹಂಗಾಮಿನ ಬೆಳೆಗಳಿಗೆ ನಿಗದಿ ಪಡಿಸಲಾಗಿರುವ ಇಂಡೆನ್ಸಿಟಿ ಮಟ್ಟ, ವಿಮಾ ಮೊತ್ತ ಮತ್ತು ಶೇಕಡಾವಾರು ಗರಿಷ್ಠ ರೈತರ ಪಾಲಿನ ವಿವರಗಳನ್ನು ಬೆಳೆವಾರು ನಿಗದಿಪಡಿಸಿರುವ ನೊಂದಣಿಗೆ ಕೊನೆಯ ದಿನಾಂಕ ಅನುಭಂದ-2 ರಲ್ಲಿ ನೀಡಲಾಗಿದೆ.

7. ಅಧಿಸೂಚಿತ ಘಟಕದಲ್ಲಿ ಸಂಭವಿಸುವ ಹವಾಮಾನ ವೈಪರಿತ್ಯಗಳಾದ ಹೆಚ್ಚಿನ ಮಳೆ/ನೆರೆ /ಪ್ರವಾಹಗಳಿಂದ ಬೆಳೆ ಮುಳುಗಡೆ, ದೀರ್ಘಕಾಲದ ತೇವಾಂಶ ಕೊರತೆ (Prolonged Dry Spell) ತೀವ್ರ ಬರಗಾಲ ಮುಂತಾದವುಗಳಿಂದ ಯಾವುದೇ ಅಧಿಸೂಚಿತ ಘಟಕದಲ್ಲಿ ಬಿತ್ತನೆಯಾದ ನಂತರ ಕಟಾವಿಗೆ ಮೊದಲು (On Account Payment due to mid season Adversity), ನಿರೀಕ್ಷಿತ ಇಳುವರಿಯು ಪ್ರಾರಂಬಿಕ ಇಳುವರಿಯ ಶೇಕಡಾ 50 ಕ್ಕಿಂತ ಕಡಿಮೆ ಇದ್ದರೆ ವಿಮೆ ಮಾಡಿಸಿದ ರೈತರಿಗೆ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇಕಡಾ 25 ರಷ್ಟು ಹಣವನ್ನು ಮುಂಚಿತವಾಗಿ ವಿಮೆ ಸಂಸ್ಥೆಗಳು ನೀಡುವದು, ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಇಳುವರಿ ಮಾಹಿತಿ ಬಂದ ನಂತರ ಅಂತಿಮ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಈ ಹಣವನ್ನು ಹೊಂದಾಣಿಕೆ ಮಾಡಬಹುದಾಗಿದೆ.

8. Revamped PMFBY ಮಾರ್ಗಸೂಚಿಯನ್ವಯ ಬ್ಯಾಂಕಿನಲ್ಲಿ ಬೆಳೆ ಸಾಲ ಮಂಜೂರದ ಎಲ್ಲಾ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿ ಒಳಪಡಿಸಲಾಗುವುದು, ತದನಂತರ ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಚಿ ಪಡದೇ ಇದ್ದಲ್ಲಿ . ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದ್ದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡುವುದು,

9. ಪ್ರಸ್ತುತ ಸಾಲಿನಲ್ಲಿ ಹಾಗೂ ಹಂಗಾಮಿನಲ್ಲಿ ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಿದ ಬೆಳೆಗಳಿಗೆ ಇಚ್ಚೆಯುಳ್ಳ ಬೆಳೆ ಸಾಲ ಪಡೆಯದ ರೈತರು ಯೋಜನೆಯಡಿ ಭಾಗವಹಿಸಬಹುದು. ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ/ ಕಂದಾಯ ರಶೀದಿ/ ಖಾತೆ ಪುಸ್ತಕ / ಬ್ಯಾಂಕ ಪಾಸ್‌ ಪುಸ್ತಕ ಮತ್ತು ಆಧಾರ ಕಾರ್ಡ ನೀಡತಕ್ಕದ್ದು.

10. ಈ ಯೋಜನೆಯಡಿಯಲ್ಲಿ ಬೆಳೆ ಸಾಲ ಪಡೆಯದ ರೈತರು ಅಂದಾಜು / ಉಪೇಕ್ಷಿತ ಬೆಳೆ ಬಿತ್ತನೆ ಆಧಾರದ ಮೇಲೆ ಬಿತ್ತನೆ ಪೂರ್ವದಲ್ಲಿ ಪಾಲ್ಗೊಳ್ಳಬಹುದು. ಬೆಳೆ ವಿಮೆಗೆ ನೊಂದಾಯಿಸಿದ ನಂತರ ಬೇರೆ ಬೆಳೆ ಬಿತ್ತನೆ ಮಾಡಿದಲ್ಲಿ ಯೋಜನೆಯಲ್ಲಿ ಭಾಗವಹಿಸಲು ಮಾರ್ಗಸೂಚಿಯಲ್ಲಿ ನಿಗದಿಪಡಿಸಿದ ಅವಧಿಯೊಳಗೆ (ಅಂದರೆ.ಜಿಲ್ಲಾವಾರು ಬೆಳೆಯವಾರು ನೋಂದಣಿ ಕೊನೆಯ ದಿನಾಂಕಕ್ಕೆ 2 ದಿನಗಳ ಮುಂಚಿತವಾಗಿ) ನೋಂದಾಯಿಸಿದ ಆರ್ಥಿಕ ಸಂಸ್ಥೆಗಳಲ್ಲಿ ಬಿತ್ತನೆ ದೃಡೀಕರಣ ಪತ್ರ ನೀಡಿ ವಿಮೆ ಮಾಡಿಸಿದ ಬೆಳೆಯನ್ನು ಬದಲಾಯಿಸತಕ್ಕದ್ದು, ಅಂತಹ ಸಂದರ್ಭದಲ್ಲಿ ಹೆಚ್ಚುವರಿ ವಿಮಾ ಕಂತಿನ ವ್ಯತ್ಯಾಸದ ಮೊತ್ತವನ್ನು ರೈತರು ಭರಿಸತಕ್ಕದ್ದು ಅಥವಾ ಅಥವಾ ಹೆಚ್ಚುವರಿ ವಿಮಾ ಕಂತನ್ನು ರೈತರಿಗೆ ಮರು ಪಾವತಿಸುವುದು.

ಇದನ್ನೂ ಓದಿ: 2023-24 ನೇ ಸಾಲಿನ ಮುಂಗಾರು ಬೆಳೆ ವಿಮೆ ಅರ್ಜಿ ಸಲ್ಲಿಕೆ ಪ್ರಾರಂಭ! ಯಾವ ಬೆಳೆಗೆ ಎಷ್ಟು ಮೊತ್ತ ಪಾವತಿಸಬೇಕು?

11. ಈ ಯೋಜನೆಯಡಿ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ (Post Harvest Losses) ಕಟಾವು ಮಾಡಿದ ಎರಡು ವಾರಗಳೊಳಗೆ (ಹದಿನಾಲ್ಕು ದಿನಗಳು) ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಒಳಪಡಿಸಲಾಗಿದೆ. ಇಂತಹ ಸ್ಥಳೀಯ ಗಂಡಾಂತರ ಕಾರಣಗಳಿಂದ ಬೆಳೆ ನಷ್ಟ ಸಂಭವಿಸಿದರೆ ಬೆಳೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂದಪಟ್ಟ ಹಣಕಾಸು ಸಂಸ್ಥೆ ಅಥವಾ ಅನುಷ್ಠಾನಗೊಳಿಸಿರುವ ವಿಮಾ ಸಂಸ್ಥೆಗಳ ಕಚೇರಿಗಳಿಗೆ ತಕ್ಷಣ ಸೂಚನೆ ನೀಡಬೇಕು ಮತ್ತು ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಯೊಳಗೆ ತಿಳಿಸಬೇಕು.

12. ಸಾಮಾನ್ಯ ಬೆಳೆ ಅಂದಾಜು ಸಮೀಕ್ಷೆಯಡಿ ರಾಜ್ಯ ಸರ್ಕಾರವು ನಡೆಸುವ ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಕಂಡುಹಿಡಿಯಲಾದ ಇಳುವರಿ ಮಾಹಿತಿಯನ್ನು ಮಾತ್ರ ಪರಿಗಣಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಲೆಕ್ಕಹಾಕಿ ಇತ್ಯರ್ಥಪಡಿಸಕತಕ್ಕದ್ದು, ಇತರೆ ಇಳುವರಿ ಅಂದಾಜು ಮಾಡುವಂತಹ ವಿಧಾನಗಳಾದ ಆಣೆವಾರಿ ಅಥವಾ ರಾಜ್ಯ ಸರ್ಕಾರವು ಅಥವಾ ಯಾವುದೇ ಇಲಾಖೆ ಅಥವಾ ಸಂಸ್ಥೆ, ಕ್ಷಾಮ, ಬರ, ಪ್ರವಾಹ ಎಂದು ಘೋಷಿಸಿ ಇಳುವರಿ ನಷ್ಟವನ್ನು ಅಂದಾಜು ಮಾಡುವ ಮಾಹಿತಿಯನ್ನು ಈ ಯೋಜನೆಯಡಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಲೆಕ್ಕಹಾಕಲು ಪರಿಗಣಿಸುವದಿಲ್ಲ. Revamped PMFBY ಮಾರ್ಗಸೂಚಿಯಲ್ಲಿ ತಿಳಿಸಿದಂತೆ ಎರಡು ಹಂತದ ಇಳುವರಿ ಅಂದಾಜು ಮಾಡುವ ವಿಧಾನವನ್ನು ಕೇಂದ್ರ ಸರ್ಕಾರವು ನೀಡಿದಲ್ಲಿ ಅಂದರೆ ಕ್ರಮಕೈಗೊಳ್ಳಲಾಗುವುದು.

ಪ್ರಮುಖ ಸೂಚನೆ:

ರೈತರು ತಾವು ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದ ನಂತರ ತಪ್ಪದೇ ಸ್ವೀಕೃತಿ/ಹಣ ಪಾವತಿ ರಶೀದಿಯನ್ನು ಪಡೆದು ಬೆಳೆ ಕಟಾವು ಮುಗಿಯುವವರೆಗೂ ಅದನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು ಏಕೆಂದರೆ ವೈಯಕ್ತಿಕವಾಗಿ ಬೆಳೆ ಹಾನಿಯಾದಾಗ ವಿಮಾ ಸಂಸ್ಥೆಯವರಿಗೆ 72 ಗಂಟೆಯ ಒಳಗೆ ತಿಳಿಸಿ ಸ್ಥಳ ಪರೀಶಿಲನೆ ಮಾಡಿಸಿ ನಂತರ ಬೆಳೆ ವಿಮೆ ಪಡೆಯಲು ಅರ್ಜಿ ಸಲ್ಲಿಸಲು ಈ ರಶೀದಿ/ಸ್ವೀಕೃತಿ ಅತ್ಯಗತ್ಯವಾಗಿ ಸಲ್ಲಿಸಬೇಕಾಗುತ್ತದೆ ಆದ ಕಾರಣ.

ಬೆಳೆ ವಿಮೆ ಅರ್ಜಿ ಸ್ಥಿತಿ ತಿಳಿಯುವ ವಿಧಾನ:

ರೈತರು ತಮ್ಮ ಬೆಳೆಗೆ ವಿಮೆ ಮಾಡಿಸಿದ ನಂತರ ತಮ್ಮ ಅರ್ಜಿ ಸ್ಥಿತಿಯನ್ನು ತಿಳಿಯಲು ಈ https://www.samrakshane.karnataka.gov.in/ ಲಿಂಕ್ ಮೇಲೆ ಒತ್ತಿ ರಾಜ್ಯ ಸರಕಾರ ಸಂರಕ್ಷಣೆ ಜಾಲಾತಾಣಕ್ಕೆ ಭೇಟಿ ಮಾಡಿ ನಂತರ ಅರ್ಜಿದಾರರ ಅರ್ಜಿ ಸಂಖ್ಯೆ/ಮೊಬೈಲ್ ಸಂಖ್ಯೆ/ಆಧಾರ್ ಸಂಖ್ಯೆಯನ್ನು ನಮೂದಿಸಿಲ್ಲಿ ಕಾಣುವ ಕ್ಯಾಪ್ಚರ್ ಹಾಕಿ "Search" ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬೆಳೆ ವಿಮೆ ಅರ್ಜಿ ಯಾವ ಹಂತದಲ್ಲಿ ಇದೆ ಎಂದು ಗೋಚರಿಸುತ್ತದೆ.

2023-24 ನೇ ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ವಿಮಾ ಮೊತ್ತದ ವಿವರ:

Tags:
WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: