Bele vime details- ನಿಮಗೆ 2017 ರಿಂದ 2024 ರವರೆಗೆ ಬೆಳೆ ವಿಮೆ ಪರಿಹಾರ ಎಷ್ಟು ಬಿಡುಗಡೆಯಾಗಿದೆ ಎಂದು ತಿಳಿಯುವುದು ಹೇಗೆ?

January 14, 2024 | Siddesh

ರೈತರು ಹಿಂದಿನ ವರ್ಷಗಳ ಬೆಳೆ ವಿಮೆ ಅರ್ಜಿ ಅಂದರೆ 2017 ರಿಂದ 2024 ರವರೆಗೆ ಬೆಳೆ ವಿಮೆ ಪರಿಹಾರ(Last year crop insurance status) ಎಷ್ಟು ಬಿಡುಗಡೆಯಾಗಿದೆ ಮತ್ತು ಅರ್ಜಿ ಸ್ಥಿತಿ ವಿವರದ ಮಾಹಿತಿಯನ್ನು ತಿಳಿಯುವುದು ಹೇಗೆ ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ. 

ರೈತರ ಬೆಳೆ ನಷ್ಟವಾದ ಸಮಯದಲ್ಲಿ ಅರ್ಥಿಕವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಹಾಗೂ ಖಾಸಗಿ ವಿಮಾ ಕಂಪನಿಗಳ ಸಹಯೋಗದಲ್ಲಿ ರೈತರು ತಮ್ಮ ಬೆಳೆಗಳಿಗೆ ವಿಮಾ ಸೌಲಭ್ಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಫಸಲ್ ಭಿಮಾ ಬೆಳೆ ವಿಮಾ(Bele vime) ಯೋಜನೆಯು ಪ್ರಸ್ತುತ ಜಾರಿಯಲ್ಲಿದ್ದು ಈ ಲೇಖನದಲ್ಲಿ ವಿವರಿಸಿರುವ ವಿಧಾನವನ್ನು ಅನುಸರಿಸಿ ರೈತರು 2017 ರಿಂದ 2024 ರವರೆಗೆ ನೀವು ಸಲ್ಲಿಸಿರುವ ಬೆಳೆ ವಿಮೆ ಅರ್ಜಿಯ ಪರಿಹಾರದ ವಿವರ ಮತ್ತು ಅರ್ಜಿ ಸ್ಥಿತಿ ವಿವರದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಇದನ್ನೂ ಓದಿ: Bele vime-2024: ಆಧಾರ್ ನಂಬರ್ ಹಾಕಿ ಬೆಳೆ ವಿಮೆ ಅರ್ಜಿ ಚೆಕ್ ಮಾಡಲು ಲಿಂಕ್ ಬಿಡುಗಡೆ!

Last year crop insurance status- ನಿಮಗೆ 2017 ರಿಂದ 2024 ರವರೆಗೆ ಬೆಳೆ ವಿಮೆ ಪರಿಹಾರ ಎಷ್ಟು ಬಿಡುಗಡೆಯಾಗಿದೆ ಎಂದು ತಿಳಿಯುವುದು ಹೇಗೆ?

ಬೆಳೆ ವಿಮೆ ಯೋಜನೆಯ ಅಧಿಕೃತ ಸಂರಕ್ಷಣೆ ವೆಬ್ಸೈಟ್ ಅನ್ನು ಭೇಟಿ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಬೆಳೆ ವಿಮೆ ಅರ್ಜಿ ವಿವರ ಮತ್ತು ಬೆಳೆ ವಿಮೆ ಪರಿಹಾರದ ಹಣ ಜಮಾ ವಿವರವನ್ನು ನಿಮ್ಮ ಮೊಬೈಲ್ ನಲ್ಲೇ ಪಡೆದುಕೊಳ್ಳಬಹುದು.

Step-1: ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶಿಸಬೇಕು. ಬಳಿಕ ಇಲ್ಲಿ ವರ್ಷದ ಆಯ್ಕೆ ಕಾಲಂನ ಮೇಲೆ ಕ್ಲಿಕ್ ಮಾಡಿದಾಗ "2016-17 ರಿಂದ 2023-24" ರ ವರೆಗೆ ಎಲ್ಲಾ ವರ್ಷಗಳ ಆಯ್ಕೆ ವಿವರ ತೋರಿಸುತ್ತದೆ. ನಿಮಗೆ ಯಾವ ವರ್ಷದ ಬೆಳೆ ವಿಮೆ ಅರ್ಜಿ ಸ್ಥಿತಿ ಚೆಕ್ ಮಾಡಬೇಕೆಂದು ಅಂದುಕೊಂಡಿದಿರೋ ಆ ವರ್ಷವನ್ನು ಆಯ್ಕೆ ಮಾಡಿಕೊಂಡು ನಂತರ "ಋತು ಆಯ್ಕೆ" ಯಲ್ಲಿ ಮುಂಗಾರು/Kharif,ಹಿಂಗಾರು/rabi,ಬೇಸಿಗೆ/summer ಆಯ್ಕೆ ಮಾಡಿ "ಮುಂದೆ/Go" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: How to link rtc to aadhar- ಮೊಬೈಲ್ ನಲ್ಲೇ ಪಹಣಿಗೆ ಆಧಾರ್ ಕಾರ್ಡ ಜೋಡಣೆ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ!

Step-2: ನಂತರ ಈ ಪುಟದ ಕೆಳಗೆ ತೋರಿಸುವ "Farmers" ಕಾಲಂ ನಲ್ಲಿ  "Check Status" ಎನ್ನುವ ಆಯ್ಕೆಯ ಮೇಲೆ  ಕ್ಲಿಕ್ ಮಾಡಬೇಕು ಬಳಿಕ "check status by type" ಆಯ್ಕೆಯಲ್ಲಿ "Aadhar number" ಅನ್ನು ಆಯ್ಕೆ ಮಾಡಿಕೊಂಡು ಕೆಳಗಡೆ ಕಾಲಂ ನಲ್ಲಿ ಅರ್ಜಿದಾರರ ರೈತರ ಆಧಾರ್ ಕಾರ್ಡ ನಂಬರ್ ಅನ್ನು(Aadhar card no) ಮತ್ತು ಕ್ಯಾಪ್ಚ್ ಕೋಡ್(Captcha code) ಅನ್ನು ನಮೂದಿಸಿ ಪಕ್ಕದಲ್ಲಿ ಕಾಣುವ "Search" ಬಟನ್ ಮೇಲೆ ಕ್ಲಿಕ್ ಮಾಡಬೇಕು.
 
ಆ ವರ್ಷ ನಿವೇನಾದರು ಬೆಳೆ ವಿಮೆ ಕಟ್ಟಿದರೆ "Search" ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಕೆಳಗಡೆ ಆ ವರ್ಷದ ಬೆಳೆ ವಿಮೆ ಅರ್ಜಿ ಸಂಖ್ಯೆ ಇತ್ಯಾದಿ ವಿವರ ತೋರಿಸುತ್ತದೆ ಒಂದೊಮ್ಮೆ ಅರ್ಜಿ ಸಲ್ಲಿಸಿದೇ ಇದ್ದಲ್ಲಿ "No data found" ಎಂದು ಸೂಚನೆ ತೋರಿಸುತ್ತದೆ.

ಇದನ್ನೂ ಓದಿ: RTC adhar link status- ನಿಮ್ಮ ಜಮೀನಿನ ಪಹಣಿಗೆ ಆಧಾರ್ ಜೋಡಣೆ ಅಗಿದಿಯಾ? ಎಂದು ಚೆಕ್ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ.

Step-3: "Search" ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಕೆಳಗಡೆ ಆ ವರ್ಷದ ಬೆಳೆ ವಿಮೆ ಅರ್ಜಿ ಸಂಖ್ಯೆ ಇತ್ಯಾದಿ ವಿವರ ತೋರಿಸಿದ ನಂತರ ಈ ಪೇಜ್ ನ ಕೊನೆಯಲ್ಲಿ ಕಾಣುವ Select ಬಟನ್ ಮೇಲೆ ಕ್ಲಿಕ್ ಮಾಡಿದರೆ "UTR details" ಕಾಲಂ ನಲ್ಲಿ ನಿಮಗೆ ಆ ವರ್ಷ ಬೆಳೆ ವಿಮೆ ಹಣ ಜಮಾ ಅಗಿದ್ದರೆ UTR ನಂಬರ್ ಮತ್ತು ಎಷ್ಟು ಹಣ ಜಮಾ ಅಗಿದಿದೆ? ಯಾವ ಬ್ಯಾಂಕ್ ಖಾತೆಗೆ ಹಣ ಜಮಾ ಅಗಿದೆ? ಜಮಾ ದಿನಾಂಕದ ವಿವರ ತೋರಿಸುತ್ತದೆ.

ಗಮನಿಸಿ: ಒಂದು ವೇಳೆ ಹಣ ಜಮಾ ಅಗದಿದ್ದರೆ "UTR details" ಕಾಲಂ ಕೆಳಗೆ ಯಾವುದೇ ವಿವರ ತೋರಿಸುವುದಿಲ್ಲ.

Bele vime website link- ಬೆಳೆ ವಿಮೆ ಯೋಜನೆಯ ಅಧಿಕೃತ ವೆಬ್ಸೈಟ್: Click here
ಬೆಳೆ ವಿಮೆ ಕುರಿತು ಉಪಯುಕ್ತ ಮಾಹಿತಿಯ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ: Read Now

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: