Bele Vime Status-ರೈತರ ಖಾತೆಗೆ ಬೆಳೆ ವಿಮೆ ಪರಿಹಾರ!ಮೊಬೈಲ್ ನಲ್ಲೇ ಹಣ ಜಮಾ ವಿವರ ತಿಳಿಯಿರಿ!

February 6, 2026 | Siddesh
Bele Vime Status-ರೈತರ ಖಾತೆಗೆ ಬೆಳೆ ವಿಮೆ ಪರಿಹಾರ!ಮೊಬೈಲ್ ನಲ್ಲೇ ಹಣ ಜಮಾ ವಿವರ ತಿಳಿಯಿರಿ!
Share Now:

ಪ್ರಧಾನ ಮಂತ್ರಿ ಫಸಲ್ ಭೀಮಾ ಬೆಳೆ ವಿಮೆ ಯೋಜನೆಯಡಿ ರಾಜ್ಯದ ಹಲವು ಜಿಲ್ಲೆಯ ರೈತರ ಖಾತೆಗೆ ಈ ಬಾರಿಯ ಮುಂಗಾರು ಹಂಗಾಮಿನ ಮತ್ತು ಕಳೆದ 2024 ವರ್ಷದ ಬೆಳೆ ವಿಮೆ ಪರಿಹಾರದ(Crop Insurance) ಹಣವು ಜಮಾ ಅಗುತ್ತಿದ್ದು ರೈತರು ತಮ್ಮ ಮೊಬೈಲ್ ಮೂಲಕ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಬೆಳೆ ವಿಮೆ ಪರಿಹಾರದ ಹಣ ಜಮಾ ವಿವರವನ್ನು ಹೇಗೆ ಚೆಕ್ ಮಾಡುವುದು ಎನ್ನುವ ಮಾಹಿತಿ ಸೇರಿದಂತೆ ಇನ್ನಿತರೆ ಅಗತ್ಯ ವಿವರವನ್ನು ಈ ಅಂಕಣದಲ್ಲಿ ಪ್ರಕಟಿಸಲಾಗಿದೆ.

ನಮ್ಮ ದೇಶದ ಬೆನ್ನೆಲುಬಾದ ರೈತರಿಗೆ ಹವಾಮಾನ ವೈಪರೀತ್ಯ ಅಥವಾ ನೈಸರ್ಗಿಕ ವಿಕೋಪಗಳಿಂದ ಬೆಳೆ ಹಾನಿಯಾದಾಗ(Crop Insurance Scheme) ಕೃಷಿಕರಿಗೆ ಆರ್ಥಿಕವಾಗಿ ನೆರವನ್ನು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರಕಾರದ ಹಾಗೂ ಖಾಸಗಿ ಕಂಪನಿಗಳ ಸಹಯೋಗದಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅನ್ನು ಅನುಷ್ಥಾನ ಮಾಡಲಾಗುತ್ತಿದ್ದು ಈ ಯೋಜನೆಯ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Free Notebook Scheme-1 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ: ಪೋಷಕರ ಜೇಬಿಗೆ ಇನ್ನು ಹೊರೆಯಿಲ್ಲ!

ಸದ್ಯ ಕರ್ನಾಟಕದಲ್ಲಿ 2024-25 ಮತ್ತು 2025-26ನೇ ಸಾಲಿನ ಬೆಳೆ ವಿಮೆ(Bele Vime) ಪರಿಹಾರದ ವಿತರಣೆ ಪ್ರಕ್ರಿಯೆ ಚುರುಕುಗೊಂಡಿದ್ದು, ಅನೇಕ ಜಿಲ್ಲೆಗಳ ಅರ್ಹ ರೈತರ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತಿದೆ. ಈ ಕುರಿತು ರೈತರು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು ಇಲ್ಲಿವೆ, ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆಯಡಿ ಪರಿಹಾರವನ್ನು ಹೇಗೆ ನಿಗದಿ ಮಾಡಲಾಗುತ್ತದೆ? ಪ್ರಸ್ತುತ ಕರ್ನಾಟಕದಲ್ಲಿ ಯಾವೆಲ್ಲ ಜಿಲ್ಲೆಯಲ್ಲಿ ಬೆಳೆ ವಿಮೆ ಜಮಾ ಮಾಡಲಾಗಿದೆ? ಬೆಳೆ ವಿಮೆ ಪರಿಹಾರದ ಹಣ ಜಮಾ ವಿವರವನ್ನು ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡುವುದು? ಬೆಳೆ ವಿಮೆ ಪರಿಹಾರವನ್ನು ಪಡೆಯಲು ರೈತರು ಅನುಸರಿಸಬೇಕಾದ ಕ್ರಮಗಳು ಯಾವುವು? ಎನ್ನವ ವಿವರ ಈ ಕೆಳಗೆ ತಿಳಿಸಲಾಗಿದೆ.

How To Fix Crop Insurance Amount-ಬೆಳೆ ವಿಮೆ ಪರಿಹಾರವನ್ನು ಹೇಗೆ ನಿಗದಿ ಮಾಡಲಾಗುತ್ತದೆ?

ಬೆಳೆ ವಿಮೆಯ ಪರಿಹಾರವನ್ನು ಕೇವಲ ವೈಯಕ್ತಿಕ ನಷ್ಟದ ಆಧಾರದ ಮೇಲೆ ನೀಡಲಾಗುವುದಿಲ್ಲ. ಇದಕ್ಕಾಗಿ ಸರ್ಕಾರವು 'ವಲಯ ಆಧಾರಿತ ವಿಧಾನ' (Area Approach) ಅನುಸರಿಸುತ್ತದೆ:

ಒಂದು ನಿರ್ದಿಷ್ಟ ಗ್ರಾಮ ಅಥವಾ ಹೋಬಳಿಯ ಸರಾಸರಿ ಇಳುವರಿಯನ್ನು ಹಿಂದಿನ 7 ವರ್ಷಗಳ ಇಳುವರಿಯೊಂದಿಗೆ ಹೋಲಿಸಲಾಗುತ್ತದೆ. ಪ್ರಸ್ತುತ ಸಾಲಿನಲ್ಲಿ ಬೆಳೆ ಇಳುವರಿ ಕಡಿಮೆ ಬಂದರೆ ಅದನ್ನು 'ಬೆಳೆ ಹಾನಿ' ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Free Driving Training-ನಿರುದ್ಯೋಗಿ ಯುವಕರಿಗೆ ಸುವರ್ಣಾವಕಾಶ: ಕೆಎಸ್‌ಆರ್‌ಟಿಸಿಯಿಂದ ಉಚಿತ ಭಾರೀ ವಾಹನ ಚಾಲನಾ ತರಬೇತಿ ಮತ್ತು ಪರವಾನಗಿ!

ಆಲಿಕಲ್ಲು ಮಳೆ, ಭೂಕುಸಿತ ಅಥವಾ ಅಕಾಲಿಕ ಮಳೆಯಿಂದ ಹೊಲದಲ್ಲಿ ಬೆಳೆ ಹಾನಿಯಾದರೆ ಅದನ್ನು ವೈಯಕ್ತಿಕವಾಗಿ ಸಮೀಕ್ಷೆ ನಡೆಸಿ ಪರಿಹಾರ ನೀಡಲಾಗುತ್ತದೆ.

ಬೆಳೆ ಕಟಾವು ಮಾಡಿದ 14 ದಿನಗಳ ಒಳಗಾಗಿ ಹೊಲದಲ್ಲಿ ಮಳೆಯಿಂದ ಹಾನಿಯಾದರೂ ಪರಿಹಾರ ದೊರೆಯುತ್ತದೆ.

Bele Vime Parihara-ಪ್ರಸ್ತುತ ಯಾವೆಲ್ಲ ಜಿಲ್ಲೆಗಳಲ್ಲಿ ಹಣ ಜಮೆಯಾಗಿದೆ?

ಕರ್ನಾಟಕದಲ್ಲಿ ಸದ್ಯ ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಹಾರದ ಹಣ ಬಿಡುಗಡೆಯಾಗಿದೆ. ಪ್ರಮುಖವಾಗಿ ಈ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಬೀದರ್, ರಾಯಚೂರು, ದಾವಣಗೆರೆ ಮತ್ತು ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ಪರಿಹಾರದ ಹಣ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ: SBI Women Loan-ಮಹಿಳೆಯರ ಸ್ವಂತ ಉದ್ಯಮಕ್ಕೆ"ಸ್ತ್ರೀ ಶಕ್ತಿ ಪ್ಯಾಕೇಜ್"! ಇಲ್ಲಿದೆ ಸಂಪೂರ್ಣ ಮಾಹಿತಿ!

Bele Vime Status Check-ಮೊಬೈಲ್‌ನಲ್ಲಿ ಹಣ ಜಮಾ ವಿವರ ಚೆಕ್ ಮಾಡುವುದು ಹೇಗೆ?

ಬೆಳೆ ವಿಮೆಯನ್ನು ಮಾಡಿಸಿರುವ ರೈತರು ತಮ್ಮ ಬೆಳೆ ವಿಮೆ ಅರ್ಜಿ ಸ್ಥಿತಿಯನ್ನು ಮತ್ತು ಬೆಳೆ ವಿಮೆ ಪರಿಹಾರದ ಹಣ ಜಮಾ ವಿವರವನ್ನು ತಿಳಿಯಲು ಸರಕಾರಿ ಕಚೇರಿ ಮತ್ತು ಬ್ಯಾಂಕ್‌ ಶಾಖೆಯನ್ನು ಅಲೆಯುವ ಅವಶ್ಯಕತೆಯಿಲ್ಲದೆ, ರಾಜ್ಯ ಸರಕಾರದ ಅಧಿಕೃತ www.samrakshane.karnataka.gov.in ವೆಬ್ಸೈಟ್ ಅನ್ನು ಪ್ರವೇಶ ಮಾಡಿ ತಮ್ಮ ಮೊಬೈಲ್‌ನಲ್ಲೇ ಈ ಕೆಳಗಿನ ಹಂತಗಳನ್ನು ಅನುಸರಿಸಿ ಸ್ಟೇಟಸ್ ತಿಳಿಯಬಹುದು:

Step-1: ಕೃಷಿಕರು ಮೊದಲಿಗೆ ಈ Crop Insurance Status Check ಲಿಂಕ್ ಮೇಲೆ ಕ್ಲಿಕ್ ಮಾಡಿ ಕರ್ನಾಟಕ ಸರ್ಕಾರದ ಅಧಿಕೃತ Samrakshane Portal ಗೆ ಭೇಟಿ ನೀಡಿ.

ಇದನ್ನೂ ಓದಿ: SSP Scholarship-ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ ಅರ್ಜಿ ಸಲ್ಲಿಸುವ ಗಡುವು ವಿಸ್ತರಣೆ!

Bele Vime Status

Step-2: ಈ ಪುಟದಲ್ಲಿ ವರ್ಷವನ್ನು (ಉದಾಹರಣೆಗೆ 2025-26 ಅಥವಾ 2024-25 ) ಮತ್ತು ಹಂಗಾಮನ್ನು (ಮುಂಗಾರು/Kharif) ಆಯ್ಕೆ ಮಾಡಿ 'Go' ಮೇಲೆ ಕ್ಲಿಕ್ ಮಾಡಿ.

Step-3: ಮುಂದಿನ ಪುಟದಲ್ಲಿ ಕೆಳಗಿನ ವಿಭಾಗದಲ್ಲಿ ಕಾಣಿಸುವ 'Farmer' ಕಾಲಂನಲ್ಲಿರುವ 'Check Status' ಆಯ್ಕೆಯನ್ನು ಒತ್ತಿರಿ.

Step-4: ಇಲ್ಲಿ ನಿಮ್ಮ/ಅರ್ಜಿದಾರರ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆ ಅಥವಾ ಅರ್ಜಿ ಸಂಖ್ಯೆಯನ್ನು (Proposal ID) ನಮೂದಿಸಿ ಪಕ್ಕದಲ್ಲಿರುವ ಕ್ಯಾಪ್ಚ್ ಕೋಡ್ ಅನ್ನು ಹಾಕಿ 'Search' ಬಟನ್ ಮೇಲೆ ಕ್ಲಿಕ್ ಮಾಡಿ.

Step-5: ನಂತರ ಈ ಪೇಜ್ ನಲ್ಲಿ ನಿಮ್ಮ ವಿಮಾ ಅರ್ಜಿ ಅಂಗೀಕಾರವಾಗಿದೆಯೇ? ಅಗಿದ್ದರೆ "ವಿಮಾ ಕಂಪನಿಯಿಂದ ಅರ್ಜಿ ಸ್ವೀಕೃತಿಯಾಗಿದೆ/Application Acknowledge by Insurance Co." ಎಂದು ತೋರಿಸುತ್ತದೆ. ಈ ಆಯ್ಕೆಯ ಮುಂದೆ ಕಾಣಿಸುವ "Select" ಬಟನ್ ಮೇಲೆ ಕ್ಲಿಕ್ ಮಾಡಿದರೆ UTR Details ಕೆಳಗೆ ವಿಮೆ ಪರಿಹಾರ ಜಮಾ ಅಗಿರುವ ಮೊತ್ತ ಮತ್ತು ಜಮಾ ದಿನಾಂಕದ ವಿವರ ತೋರಿಸುತ್ತದೆ ಒಂದೊಮ್ಮೆ ಹಣ ಸಂದಾಯವಾಗಿಲ್ಲದಿದ್ದರೆ ಯಾವುದೇ ಮಾಹಿತಿ ಇಲ್ಲಿ ತೋರಿಸುವುದಿಲ್ಲ.

ಗಮನಿಸಿ: ಬೆಳೆ ವಿಮೆ ಪ್ರಿಮಿಯಂ ಅನ್ನು ಪಾವತಿ ಮಾಡುವಾಗ ನೀಡಿರುವ ಮೊಬೈಲ್ ನಂಬರ್ ಅನ್ನು ನಮೂದಿಸಿದರೆ ಮಾತ್ರ ಬೆಳೆ ವಿಮೆ ಅರ್ಜಿ ವಿವರ ತೆರೆದುಕೊಳ್ಳುತ್ತದೆ ಇಲ್ಲವಾದ್ದಲ್ಲಿ ನಿಮ್ಮ ಬೆಳೆ ವಿಮೆ ಅರ್ಜಿಯ ಸಂಖ್ಯೆಯನ್ನು ನಮೂದಿಸಿ ಅರ್ಜಿ ಸ್ಥಿತಿ ಚೆಕ್ ಮಾಡಬೇಕು.

ಇದನ್ನೂ ಓದಿ: Labour Pension Scheme-ಲೇಬರ್ ಕಾರ್ಡದಾರರಿಗೆ ತಿಂಗಳಿಗೆ ₹3,000 ಪಿಂಚಣಿ ಹಣ! ಪಡೆಯುವುದು ಹೇಗೆ!

Important Steps To Follow In Crop Insurance-ವಿಮೆ ಪಡೆಯಲು ರೈತರು ತಪ್ಪದೇ ಅನುಸರಿಸಬೇಕಾದ ಕ್ರಮಗಳು:

ಬೆಳೆ ವಿಮೆ ಯೋಜನೆಯ ಲಾಭ ಪಡೆಯಲು ರೈತರು ಈ ಕೆಲವು ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದ್ದು ಬೆಳೆ ವಿಮೆ ಪರಿಹಾರವನ್ನು ಪಡೆಯಲು ಈ ನಿಯಮಗಳನ್ನು ತಪ್ಪದೇ ಅನುಸರಿಸಿ:

ವಿಮೆ ನೋಂದಣಿ: ಬಿತ್ತನೆ ಮಾಡಿದ ತಕ್ಷಣ ನಿಗದಿತ ಕೊನೆಯ ದಿನಾಂಕದೊಳಗೆ ಗ್ರಾಮ ಒನ್ ಕೇಂದ್ರಗಳ ಮೂಲಕ ಪ್ರೀಮಿಯಂ ಪಾವತಿಸಿ ವಿಮೆ ಮಾಡಿಸಬೇಕು.

ಸರಿಯಾದ ದಾಖಲೆ: ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಮತ್ತು ಪಹಣಿ (RTC) ವಿವರಗಳು ಸರಿಯಾಗಿರಬೇಕು. ಮುಖ್ಯವಾಗಿ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ (NPCI Mapping) ಆಗಿರಬೇಕು.

ಹಾನಿ ವರದಿ (Intimation): ಬೆಳೆ ಹಾನಿಯಾದ 72 ಗಂಟೆಗಳ ಒಳಗಾಗಿ ವಿಮಾ ಕಂಪನಿ ಅಥವಾ ಕೃಷಿ ಇಲಾಖೆಯ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು.

ಬೆಳೆ ಸಮೀಕ್ಷೆ: ಪ್ರತಿಯೊಬ್ಬ ರೈತರು ತಮ್ಮ ಜಮೀನಿನ ಬೆಳೆ ವಿವರವನ್ನು 'ಬೆಳೆ ಸಮೀಕ್ಷೆ ಆಪ್' ಮೂಲಕ ನೋಂದಾಯಿಸಿರಬೇಕು. ಇದು ವಿಮೆ ಮಂಜೂರಾಗಲು ಅತ್ಯಂತ ಮುಖ್ಯ.

ಪ್ರಧಾನ ಮಂತ್ರಿ ಫಸಲ್ ಬೀಮಾ ಬೆಳೆ ವಿಮೆ ಯೋಜನೆಯು ಸಂಕಷ್ಟದಲ್ಲಿರುವ ರೈತರಿಗೆ ಭರವಸೆಯ ಬೆಳಕಾಗ ಬೇಕಿದೆ. ಬೆಳೆ ವಿಮಾ ಕಂಪನಿಗಳು ರೈತರಿಂದ ಪ್ರಿಮಿಯಂ ಅನ್ನು ಪಾವತಿ ಮಾಡಿಸಿಕೊಳ್ಳುವಾಗ ಇರುವ ಉತ್ಸಹ ಸರಿಯಾದ ಸಮಯಕ್ಕೆ ರೈತರಿಗೆ ಬೆಳೆ ವಿಮೆ ಪಾವತಿಸಿದರೆ ಈ ಯೋಜನೆಯು ಇನ್ನು ದೊಡ್ಡ ಮಟ್ಟದಲ್ಲಿ ಪ್ರಯೋಜನಕಾರಿಯಾಗಲಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: