- Advertisment -
HomeGovt SchemesBescom Helpline-ವಿದ್ಯುತ್‌ ಪೂರೈಕೆಯಲ್ಲಿನ ಸಮಸ್ಯೆಗೆ ಜಿಲ್ಲಾವಾರು ಸಹಾಯವಾಣಿ ಬಿಡುಗಡೆ!

Bescom Helpline-ವಿದ್ಯುತ್‌ ಪೂರೈಕೆಯಲ್ಲಿನ ಸಮಸ್ಯೆಗೆ ಜಿಲ್ಲಾವಾರು ಸಹಾಯವಾಣಿ ಬಿಡುಗಡೆ!

ಬೆಂಗಳೂರು: ವಿದ್ಯುತ್‌ ಪೂರೈಕೆಯ ವ್ಯತ್ಯಯ ಮತ್ತು ಸಂಬಂಧಿತ ಸಮಸ್ಯೆಗಳಿಗೆ ಶೀಘ್ರ ಪರಿಹಾರ(BESCOM helpline number) ಮತ್ತು ವಿಲೇವಾರಿ ಒದಗಿಸಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ತನ್ನ ವ್ಯಾಪ್ತಿಯ 8 ಜಿಲ್ಲೆಗಳಿಗೆ ವಾಟ್ಸಾಪ್‌ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.

ಈ ಹೊಸ ಸೇವೆಯು ಗ್ರಾಹಕರಿಗೆ ತಮ್ಮ ಸಮಸ್ಯೆಗಳನ್ನು ಸುಲಭವಾಗಿ ದಾಖಲಿಸಿ, ತ್ವರಿತವಾಗಿ ಪರಿಹಾರ ಪಡೆಯಲು(BESCOM complaint number) ಅವಕಾಶ ಒದಗಿಸುತ್ತದೆ. ಈ ಕ್ರಮವು ವಿದ್ಯುತ್ ಸೇವೆಗಳಲ್ಲಿ ಎದುರಾಗುವ ಯಾವುದೇ ಅಡಚಣೆಗಳನ್ನು ಕಡಿಮೆಗೊಳಿಸಿ, ಗ್ರಾಹಕರಿಗೆ ಉತ್ತಮ ಅನುಭವ ಒದಗಿಸುವ ಉದ್ದೇಶವನ್ನು ಹೊಂದಿದೆ.

ಇದನ್ನೂ ಓದಿ: School Holidays-ಶಿಕ್ಷಣ ಇಲಾಖೆಯಿಂದ ಅಧಿಕೃತ ಬೇಸಿಗೆ ರಜೆ ಅವಧಿ ಮತ್ತು ಶಾಲೆ ಪ್ರಾರಂಭ ದಿನಾಂಕ ಪ್ರಕಟ!

ಈ ಅಂಕಣದಲ್ಲಿ ಜಿಲ್ಲಾವಾರು ಪ್ರಸ್ತುತ ಬಿಡುಗಡೆ ಮಾಡಿರುವ ಅಥವಾ ನಿಗದಿಪಡಿಸಿರುವ ಸಹಾಯವಾಣಿ(BESCOM WhatsApp number) ಸಂಖ್ಯೆಗಳ ಮಾಹಿತಿಯನ್ನು ಮತ್ತು ಗ್ರಾಹಕರು ಈ ಸಹಾಯವಾಣಿಯ ಪ್ರಯೋಜನವನ್ನು ಪಡೆದುಕೊಳ್ಳುವುದು ಹೇಗೆ ಹಾಗೂ ಇನ್ನಿತರೆ ಉಪಯುಕ್ತ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

BESCOM electricity issue complaint-8 ಜಿಲ್ಲೆಗಳಿಗೆ 11 ವಾಟ್ಸಾಪ್‌ ಸಹಾಯವಾಣಿ ಸಂಖ್ಯೆಗಳು:

ಬೆಸ್ಕಾಂನ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ವಿದ್ಯುತ್ ಸಂಬಂಧಿತ ದೂರುಗಳಿಗೆ ಪರಿಹಾರ ಒದಗಿಸಲು ಜಿಲ್ಲಾವಾರು ವಾಟ್ಸಾಪ್‌ ಸಂಖ್ಯೆಗಳನ್ನು ಕಾರ್ಯನಿರ್ವಹಣೆಗೆ ತರಲಾಗಿದೆ. ಈ ಸಂಖ್ಯೆಗಳಿಗೆ ಗ್ರಾಹಕರು ತಮ್ಮ ಸಮಸ್ಯೆಗಳ ಕುರಿತು ಟೆಕ್ಸ್ಟ್ ಸಂದೇಶ, ಫೋಟೋಗಳು ಮತ್ತು ವಿಡಿಯೋಗಳನ್ನು ಕಳುಹಿಸಬಹುದು.

ಇದರಿಂದಾಗಿ ವಿದ್ಯುತ್‌ ಪೂರೈಕೆಯ ವ್ಯತ್ಯಯ, ಬಿಲ್ಲಿಂಗ್ ಸಮಸ್ಯೆಗಳು, ಟ್ರಾನ್ಸ್‌ಫಾರ್ಮರ್‌ ತೊಂದರೆಗಳು ಅಥವಾ ಇತರ ತಾಂತ್ರಿಕ ಸಮಸ್ಯೆಗಳನ್ನು ತ್ವರಿತವಾಗಿ ಅಧಿಕಾರಿಗಳ ಗಮನಕ್ಕೆ ತರುವುದು ಸಾಧ್ಯವಾಗುತ್ತದೆ. ಗ್ರಾಹಕರು ಈ ಸೇವೆಯನ್ನು ಸದುಪಯೋಗಪಡಿಸಿಕೊಂಡು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಬೆಸ್ಕಾಂ ಕಚೇರಿಯ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Sprinkler set-ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಎಲ್ಲ ರೈತರಿಗೂ ಅವಕಾಶ!

BESCOM helpline

BESCOM 24/7 Whatsapp helpline-ಸಹಾಯವಾಣಿ ಸಂಖ್ಯೆಗಳ ವಿವರ ಈ ಕೆಳಗಿನಂತಿವೆ:

ಬೆಂಗಳೂರು ನಗರ ಜಿಲ್ಲೆ:
ದಕ್ಷಿಣ ವೃತ್ತ- 82778 84011
ಪಶ್ಚಿಮ ವೃತ್ತ- 82778 84012
ಪೂರ್ವ ವೃತ್ತ- 82778 84013
ಉತ್ತರ ವೃತ್ತ- 82778 84014
ಕೋಲಾರ ಜಿಲ್ಲೆ-82778 84015
ಚಿಕ್ಕಬಳ್ಳಾಪುರ ಜಿಲ್ಲೆ- 82778 84016
ಬೆಂಗಳೂರು ಗ್ರಾಮಾಂತರ- 82778 84017
ರಾಮನಗರ- 82778 84018
ತುಮಕೂರು- 82778 84019
ದಾವಣಗೆರೆ- 82778 84021
ಚಿತ್ರದುರ್ಗ- 82778 84020

ಈ ಸಹಾಯವಾಣಿ ಸಂಖ್ಯೆಗಳು 24/7 ಕಾರ್ಯನಿರ್ವಹಿಸುತ್ತವೆ ಮತ್ತು ಗ್ರಾಹಕರಿಗೆ ತ್ವರಿತವಾಗಿ ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಒದಗಿಸಲು ಕೆಲಸ ನಿರ್ವಹಿಸುತ್ತವೆ.

ಇದನ್ನೂ ಓದಿ: Home Subsidy Scheme- ಸರ್ಕಾರದಿಂದ ಸರ್ವರಿಗೂ ಸೂರು ಯೋಜನೆಯಡಿ 42,435 ಮನೆ ಹಂಚಿಕೆ!

BESCOM Helpline Benefis-ಗ್ರಾಹಕರಿಗೆ ಇವೆ ಹಲವು ಪ್ರಯೋಜನಗಳು:

ಈ ವಾಟ್ಸಾಪ್‌ ಸಹಾಯವಾಣಿ ಸೇವೆಯು ಗ್ರಾಹಕರಿಗೆ ಹಲವು ಲಾಭಗಳನ್ನು ಒದಗಿಸುತ್ತದೆ. ಮೊದಲನೆಯದಾಗಿ, ಟೋಲ್‌-ಫ್ರೀ ಹೆಲ್ಪ್‌ಲೈನ್‌ ಸಂಖ್ಯೆ 1912ಗೆ ಕರೆ ಮಾಡುವ ಸಮಸ್ಯೆಯನ್ನು ಈ ಸೇವೆ ತಗ್ಗಿಸುತ್ತದೆ. ಎರಡನೆಯದಾಗಿ, ಫೋಟೋ ಮತ್ತು ವಿಡಿಯೋಗಳ ಮೂಲಕ ಸಮಸ್ಯೆಯನ್ನು ಸ್ಪಷ್ಟವಾಗಿ ತೋರಿಸುವುದರಿಂದ ಅಧಿಕಾರಿಗಳು ತ್ವರಿತವಾಗಿ ಕ್ರಿಯಾಶೀಲರಾಗಲು ಸಹಾಯ ಮಾಡುತ್ತದೆ. ಮೂರನೆಯದಾಗಿ, ಈ ಡಿಜಿಟಲ್‌ ಪ್ಲಾಟ್‌ಫಾರ್ಮ್‌ ಗ್ರಾಮೀಣ ಮತ್ತು ನಗರ ಪ್ರದೇಶಗಳ ಗ್ರಾಹಕರಿಗೆ ಸಮಾನ ರೀತಿಯಲ್ಲಿ ಲಭ್ಯವಿದ್ದು, ಸೇವೆಯ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ.

ಇದನ್ನೂ ಓದಿ: Borewell Subsidy-ಸರ್ಕಾರದಿಂದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲು 4,923 ಕೊಳವೆ ಬಾವಿ ಕೊರೆಸಲು ಅನುಮತಿ!

BESCOM-ಬೆಸ್ಕಾಂನ ಉದ್ದೇಶ:

ಬೆಸ್ಕಾಂನ ಈ ಪ್ರಯತ್ನವು ಗ್ರಾಹಕ ಸೇವೆಯನ್ನು ಡಿಜಿಟಲ್‌ಗೊಳಿಸಿ, ಸುಲಭ ಮತ್ತು ತ್ವರಿತ ಪರಿಹಾರ ಒದಗಿಸುವ ಉದ್ದೇಶವನ್ನು ಹೊಂದಿದೆ. ಕಳೆದ ಕೆಲವು ದಿನಗಳಿಂದ 1912 ಹೆಲ್ಪ್‌ಲೈನ್‌ ಸಂಖ್ಯೆಗೆ ಬಂದ ಕರೆಗಳ ಒತ್ತಡವನ್ನು ಕಡಿಮೆಗೊಳಿಸಲು ಮತ್ತು ಗ್ರಾಹಕರ ಸಮಸ್ಯೆಗಳಿಗೆ ಶೀಘ್ರ ಉತ್ತರ ನೀಡಲು ಈ ವಾಟ್ಸಾಪ್‌ ಸಹಾಯವಾಣಿ ಸೇವೆ ಒಂದು ಮಹತ್ವಪೂರ್ಣ ಹೆಜ್ಜೆಯಾಗಿದೆ.

ಬೆಸ್ಕಾಂ ಅಧಿಕಾರಿಗಳು ಗ್ರಾಹಕರನ್ನು ಈ ಸೇವೆಯನ್ನು ಸಕ್ರಿಯವಾಗಿ ಬಳಸಿ, ತಮ್ಮ ಸಮಸ್ಯೆಗಳನ್ನು ದಾಖಲಿಸಿ ಪರಿಹಾರ ಪಡೆಯಲು ಆಹ್ವಾನಿಸಿದ್ದಾರೆ.

ಇದನ್ನೂ ಓದಿ: Nrega Yojana-2025: ನರೇಗಾ ಕೂಲಿ ಕಾರ್ಮಿಕರಿಗೆ ಬಂಪರ್ ಸಿಹಿ ಸುದ್ದಿ! ಕೂಲಿ ದರ ಹೆಚ್ಚಳ!

How To Use BESCOM Helpline-ವಾಟ್ಸಾಪ್ ಸಹಾಯವಾಣಿಯನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು?

ಸಾರ್ವಜನಿಕರು ನಿಮ್ಮ ಜಿಲ್ಲೆಯ ವಾಟ್ಸಾಪ್‌ ಸಹಾಯವಾಣಿ ಸಂಖ್ಯೆಯನ್ನು ತಿಳಿದುಕೊಂಡು, ತಮ್ಮ ವಿದ್ಯುತ್‌ ಸಂಬಂಧಿತ ಸಮಸ್ಯೆಗಳನ್ನು ಫೋಟೋ, ವಿಡಿಯೋ ಅಥವಾ ಮೇಸೆಜ್ ರೂಪದಲ್ಲಿ ಕಳುಹಿಸಿ, ತ್ವರಿತ ಪರಿಹಾರ ಪಡೆದುಕೊಳ್ಳಬಹುದಾಗಿದೆ, ಈ ಸೇವೆಯು ಗ್ರಾಹಕ ಮೆಚ್ಚುಗೆಗೆ ಪಾತ್ರವಾಗುತ್ತಿದ್ದು, ಬೆಸ್ಕಾಂನ ಡಿಜಿಟಲ್‌ ಸೇವೆಗಳಲ್ಲಿ ಒಂದು ಉತ್ತಮ ಸೇವೆ ಇದಾಗಿದೆ.

- Advertisment -
LATEST ARTICLES

Related Articles

- Advertisment -

Most Popular

- Advertisment -