Nrega Yojana-2025: ನರೇಗಾ ಕೂಲಿ ಕಾರ್ಮಿಕರಿಗೆ ಬಂಪರ್ ಸಿಹಿ ಸುದ್ದಿ! ಕೂಲಿ ದರ ಹೆಚ್ಚಳ!

April 3, 2025 | Siddesh
Nrega Yojana-2025: ನರೇಗಾ ಕೂಲಿ ಕಾರ್ಮಿಕರಿಗೆ ಬಂಪರ್ ಸಿಹಿ ಸುದ್ದಿ! ಕೂಲಿ ದರ ಹೆಚ್ಚಳ!
Share Now:

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಬರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ(Nrega Scheme Update) ಕಾರ್ಮಿಕರಿಗೆ ನೀಡುವ ದಿನಗೂಲಿ ಮೊತ್ತವನ್ನು ಸರ್ಕಾರದಿಂದ ಹೆಚ್ಚಳ ಮಾಡಿ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಈ ಯೋಜನೆಯನ್ನು(MGNREGA Scheme) ಅನುಷ್ಥಾನ ಮಾಡಲಾಗುತ್ತಿದ್ದು ಈ ಹಿಂದೆ ಪ್ರತಿ ನಿತ್ಯ ಈ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರಿಗೆ ನೀಡುತ್ತಿದ್ದು ಪ್ರತಿ ದಿನದ ಕೂಲಿ ದರವನ್ನು ಪರಿಷ್ಕರಣೆ ಮಾಡಲಾಗಿದ್ದು ಈ ಕುರಿತು ಸಂಬಂಧಪಟ್ಟ ಇಲಾಖೆಯಿಂದ ಹೊರಡಿಸಿರುವ ಅಧಿಕೃತ ಪ್ರಕಟಣೆ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Borewell Subsidy-ಸರ್ಕಾರದಿಂದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲು 4,923 ಕೊಳವೆ ಬಾವಿ ಕೊರೆಸಲು ಅನುಮತಿ!

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(NREGA Scheme) ಅಥವಾ ನರೇಗಾ ಯೋಜನೆ ಈ ಯೋಜನೆಯಡಿ ಕೂಲಿ ದರವನ್ನು ಎಷ್ಟು ಹೆಚ್ಚಳ ಮಾಡಲಾಗಿದೆ? ಈ ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ಯಾವೆಲ್ಲ ಕಾಮಗಾರಿಗಳನ್ನು ಮಾಡಿಕೊಳ್ಳಬಹುದು? ಇದಕ್ಕಾಗಿ ನಿಗದಿಪಡಿಸಿದ ಸಹಾಯಧನ ಎಷ್ಟು? ಪರಿಷ್ಕೃತ ಕೂಲಿ ದರ ಯಾವ ದಿನದಿಂದ ಜಾರಿಗೆ ಬರಲಿದೆ? ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಪ್ರಕಟಿಸಲಾಗಿದೆ.

NREGA latest update 2025: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ:

ಕೇಂದ್ರ ಸರ್ಕಾರದಿಂದ ಈ ಯೋಜನೆಯನ್ನು ದೇಶಾದ್ಯಂತ 2005 ರಿಂದ ಜಾರಿಗೆ ತರಲಾಗಿದ್ದು ಈ ಯೋಜನೆಯ ಮೂಲಕ ಗ್ರಾಮೀನ ಭಾಗದ ಜನರಿಗೆ ಆ ಪ್ರದೇಶದಲ್ಲೇ ಒಂದು ವರ್ಷಕ್ಕೆ 100 ದಿನಗಳವರೆಗೆ ಉದ್ಯೋಗವನ್ನು ನೀಡಿ ನಗರ ಪ್ರದೇಶಕ್ಕೆ ವಲಸೆ ಹೋಗುವುದನ್ನು ತಪ್ಪಿಸುವುದು ಮತ್ತು ಆರ್ಥಿಕವಾಗಿ ನೆರವು ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: RTE Application-ಮಕ್ಕಳನ್ನು RTE ಸೀಟ್ ನಲ್ಲಿ ಶಾಲೆಯನ್ನು ದಾಖಲಿಸಲು ಅರ್ಜಿ ಸಲ್ಲಿಸಲು ಅವಕಾಶ!

MGNREGA Wage Increase-ನರೇಗಾ ಕೂಲಿ ದರ ಹೆಚ್ಚಳ:

ನರೇಗಾ ಯೋಜನೆಯಡಿ ಪ್ರಸ್ತುತ ಪ್ರತಿ ದಿನಕ್ಕೆ ₹349/- ರೂ ದಿನಕೂಲಿಯನ್ನು ನೀಡಲಾಗುತ್ತಿದ್ದು, ಈ ದರವನ್ನು ₹370/- ರೂ ಕ್ಕೆ ಏರಿಕೆ ಮಾಡಿ ಸರ್ಕಾರದಿಂದ ಅಧಿಕೃತವಾಗಿ ಆದೇಶವನ್ನು ಹೊರಡಿಸಲಾಗಿದೆ.

Rural Workers Wage Hike-ಪರಿಷ್ಕೃತ ದರ ಯಾವಾಗ ಜಾರಿಗೆ ಬರಲಿದೆ:

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಕಟಣೆಯಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಪರಿಷ್ಕೃತ ದಿನ ಕೂಲಿ ದರ 01 ಏಪ್ರಿಲ್ 2025 ರಿಂದ ಜಾರಿಗೆ ಬರಲಿದೆ.

ಈ ಯೋಜನೆಯಡಿ 100 ದಿನದ ವರೆಗೆ ಕೆಲಸ ಪಡೆಯಬಹುದು:

ಗ್ರಾಮೀಣ ಭಾಗದಲ್ಲಿ ನೆಲೆಸಿರುವ ಹಿಂದುಳಿದ ವರ್ಗಕ್ಕೆ ಸೇರಿದ ನಾಗರಿಕರು ಈ ಯೋಜನೆಯ ಮೂಲಕ ಜಾಬ್ ಕಾರ್ಡ್ ಅನ್ನು ಪಡೆದು ಒಂದು ವರ್ಷದಲ್ಲಿ 100 ದಿನದ ವರೆಗೆ ದಿನಗಳ ವರೆಗೆ ನಿಮ್ಮ ಹಳ್ಳಿಯಲ್ಲೇ ಕೆಲಸವನ್ನು ಪಡೆಯಬಹುದು.

ಇದನ್ನೂ ಓದಿ: Gruhalakshmi Status-ಗೃಹಲಕ್ಷ್ಮಿ ಯೋಜನೆಯ 2 ತಿಂಗಳ ಹಣ ಬಿಡುಗಡೆ!

NREGA latest update

NREGA wage hike-2025: ನರೇಗಾ ಯೋಜನೆಯ ಪ್ರಮುಖ ನಿರ್ಣಯಗಳು:

ಎಪ್ರಿಲ್ 01 ರಿಂದ ನರೇಗಾ ಕಾರ್ಮಿಕರ ದಿನದ ಕೂಲಿ ಮೊತ್ತ ಹೆಚ್ಚಳ ಕ್ರಮವು ಜಾರಿಗೆ ಬರಲಿದೆ.

ನರೇಗಾ ಯೋಜನೆಯಡಿ ಕೂಲಿ ಹಣವನ್ನು ನೇರವಾಗಿ ಕೂಲಿಕಾರರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ(DBT)ಮೂಲಕ ಜಮಾ ಮಾಡಲಾಗುತ್ತದೆ.

ಪ್ರಸ್ತುತ ಇರುವ ₹349/- ರೂ ಕೂಲಿ ದರವನ್ನು ₹370/- ರೂ ಕ್ಕೆ ಏರಿಕೆ ಮಾಡಲಾಗಿದೆ.

MGNREGA Scheme Details-ನರೇಗಾ ಯೋಜನೆಯಡಿ ರೈತರು 5 ಲಕ್ಷದ ವರೆಗೆ ವೈಯಕ್ತಿಕ ಕಾಮಗಾರಿಯನ್ನು ಮಾಡಿಸಬಹುದು:

ನರೇಗಾ ಯೋಜನೆಯಡಿ ನೊಂದಾಯಿತವಾದ ಒಂದು ಅರ್ಹ ಕುಟುಂಬವು ತನ್ನ ಜೀವಿತಾವಧಿಯಲ್ಲಿ ಗರಿಷ್ಟ 5.00 ಲಕ್ಷಗಳವರೆಗೆ ವೈಯಕ್ತಿಕ ಕಾಮಗಾರಿಗಳನ್ನು ಹಳ್ಳಿ ಮಟ್ಟದಲ್ಲಿ ಕೈಗೊಳ್ಳಲು ಅವಕಾಶವಿದ್ದು ಇದರ ವಿವರ ಈ ಕೆಳಗಿನಂತಿದೆ.

  • ದನದ ಕೊಟ್ಟಿಗೆ- 57,000/-
  • ಕುರಿ/ಮೇಕೆ ಶೆಡ್- 70,000/-
  • ಬಚ್ಚಲು ಗುಂಡಿ- 11,000/-
  • ಕೋಳಿ ಶೆಡ್- 60,000/-
  • ಕೊಳವೆ ಬಾವಿ ಮರುಪೂರಕ ಘಟಕ- 45,000/-
  • ಎರೆಹುಳು ತೊಟ್ಟಿ- 20,000/-
  • ತೆರೆದ ಬಾವಿ- 1,50,000/-
  • ಅಜೋಲಾ ಘಟಕ- 16,000/-
  • ಕೃಷಿ ಹೊಂಡ-1,49,000/-
  • ಕಂದಕ ಬದು ನಿರ್ಮಾಣ-84,000/-
  • ಹಂದಿ ಸಾಕಾಣಿಕೆ ಕೊಟ್ಟಿಗೆ-87,000/-
  • ದೀನಬಂಧು ಜೈವಿಕ ಅನಿಲ ಘಟಕ-40,000/-
  • ಇಂಗು ಗುಂಡಿ ನಿರ್ಮಾಣ-4,000/-

ಇದನ್ನೂ ಓದಿ: Sheep Farming-ಉಚಿತ ಕುರಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ! ಯಾವೆಲ್ಲ ಯೋಜನೆಯಡಿ ಸಬ್ಸಿಡಿ ಪಡೆಯಬಹುದು?

Narege Horticulture Crop Subsidy Details-ತೋಟಗಾರಿಕೆ ಬೆಳೆಗಳಿಗೆ ಸಬ್ಸಿಡಿ ವಿವರ( 2.5 ಎಕರೆಗೆ):

  • ಅಡಿಕೆ- 1,68,000/-
  • ತೆಂಗು- 66,000/-
  • ಗೇರು- 63,000/-
  • ಮಾವು/ಸಪೋಟ- 56,000/-
  • ದಾಳಿಂಬೆ- 69,000/-
  • ಸೀಬೆ- 1,31,000/-
  • ತಾಳೆ- 34,000/-
  • ಚಕ್ಕೆ ದಾಲ್ಚಿನ್ನಿ- 1,74,000/-
  • ಲವಂಗ- 50,000/-
  • ಕಾಳುಮೆಣಸು- 1,09,000/-
  • ನಿಂಬೆ/ಮೋಸಂಬಿ/ಕಿತ್ತಳೆ- 49,000/-

ಇದನ್ನೂ ಓದಿ: Free AI Training-ವಿದ್ಯಾರ್ಥಿಗಳಿಗೆ ₹15,000/- ರೂ ವಿದ್ಯಾರ್ಥಿವೇತನ ಸಹಿತ ಎಐ ಕುರಿತು ತರಬೇತಿಗೆ ಅರ್ಜಿ ಆಹ್ವಾನ!

  • ಹುಣಸೆ- 1,18,000/-
  • ನೇರಳೆ- 54,000/-
  • ಸೀತಾಫಲ- 58,000/-
  • ಬಾರೆ- 48,000/-
  • ನುಗ್ಗೆ- 70,000/-
  • ನೆಲ್ಲಿ- 1,69,000/-
  • ಅಂಜೂರ- 88,000/-
  • ಹಲಸು- 54,000/-
  • ದ್ರಾಕ್ಷಿ- 4,72,000/-
  • ವೀಳೆದೆಲೆ(ಅರ್ಧ ಎಕರೆಗೆ)- 28,000/-
  • ಕರೀಬೇವು(ಅರ್ಧ ಎಕರೆಗೆ)- 60,000/-
  • ಕಾಫಿ- 1,68,000/-
  • ಬೆಣ್ಣೆ ಹಣ್ಣು- 51,000/-
  • ರಾಮ್ಬೂತಾನ್- 52,000/-
  • ಅಪ್ಪೇಮಿಡಿ ಮಾವು- 94,000/-
  • ಜಾಯಿಕಾಯಿ-25,000/-
  • ಹಿಪ್ಪು ನೇರಳೆ ನರ್ಸರಿ ಅಭಿವೃದ್ದಿ-1,28,000/-
  • ಡ್ರಾಗನ್ ಪ್ರೋಟ್ಸ್-1,54,000/-
  • ಗುಲಾಬಿ ಕೃಷಿ

ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಗ್ರಾಮ ಪಂಚಾಯತಿಯನ್ನು ನೇರವಾಗಿ ಭೇಟಿ ಮಾಡಿ.

WhatsApp Group Join Now
Telegram Group Join Now
Share Now: