ಬ್ಯಾಂಕ್ ಆಫ್ ಬರೋಡ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಿಂದ ಕುರಿ ಸಾಕಾಣಿಕೆಯನ್ನು(Sheep Farming) ಆರಂಭಿಸಲು ಆಸಕ್ತಿಯಿರುವ ಅರ್ಹ ರೈತರಿಗೆ ಉತ್ತಮ ಗುಣಮಟ್ಟದ ತರಬೇತಿಯನ್ನು ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ನೀಡಲು ಅರ್ಜಿಯನ್ನು ಆಹ್ವಾನಿಸಲಗಿದೆ.
ಕುರಿ ಸಾಕಾಣಿಕೆ ತರಬೇತಿಯನ್ನು ಪಡೆಯಲು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳನ್ನು ಅಭ್ಯರ್ಥಿಗಳು ಸಲ್ಲಿಸಬೇಕು? ಮತ್ತು ನಮ್ಮ ರಾಜ್ಯದಲ್ಲಿ ಕುರಿ ಸಾಕಾಣಿಕೆಯನ್ನು(Kuri sakanike tarabeti) ಆರಂಭಿಸಲು ಯಾವೆಲ್ಲ ಯೋಜನೆಯಡಿ ಸಬ್ಸಿಡಿಯನ್ನು ಪಡೆಯಬಹುದು ಎನ್ನುವ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಅಂಕಣದಲ್ಲಿ ಪ್ರಕಟಿಸಲಾಗಿದೆ.
ಇದನ್ನೂ ಓದಿ: Free AI Training-ವಿದ್ಯಾರ್ಥಿಗಳಿಗೆ ₹15,000/- ರೂ ವಿದ್ಯಾರ್ಥಿವೇತನ ಸಹಿತ ಎಐ ಕುರಿತು ತರಬೇತಿಗೆ ಅರ್ಜಿ ಆಹ್ವಾನ!
ಪ್ರಸ್ತುತ ಸ್ಥಿರವಿಲ್ಲದ ಹವಾಮಾನದಲ್ಲಿ ಕೃಷಿ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಉಪಕಸಬುಗಳಲ್ಲಿ(Kuri sakanike subsidy schemes) ತೊಡಗಿಕೊಳ್ಳುವುದು ಸಹ ಅತೀ ಮುಖ್ಯವಾಗಿದೆ ಹೈನುಗಾರಿಕೆ, ಕೋಳಿ-ಕುರಿ ಸಾಕಾಣಿಕೆ, ಚಟುವಟಿಕೆಗಳನ್ನು ಪ್ರಾರಂಭಿಸುವುದರಿಂದ ಆರ್ಥಿಕವಾಗಿ ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕುರಿ ಸಾಕಾಣಿಕೆಯನ್ನು ಕೈಗೊಳ್ಳಲು ಕೆಲವು ಅಗತ್ಯ ಉಪಯುಕ್ತ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.
Sheep Farming Application-ಉಚಿತ ಕುರಿ ಸಾಕಾಣಿಕೆ ತರಬೇತಿಗೆ ಅರ್ಜಿ:
ಬ್ಯಾಂಕ್ ಆಫ್ ಬರೋಡ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಹಾವೇರಿ ಕೇಂದ್ರದಿಂದ 10 ದಿನದ ಉಚಿತ ಕುರಿ ಸಾಕಾಣಿಕೆ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಈ ತರಬೇತಿಯಲ್ಲಿ ಕುರಿ ಸಾಕಾಣಿಕೆಯನ್ನು ಆರಂಭಿಸಲು ಪ್ರಾಥಮಿಕ ಹಂತದಿಂದ ಕೊನೆಯ ಹಂತದವರೆಗೆ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು, ಹಾಗೂ ಕುರಿ ಸಾಕಾಣಿಕೆಯನ್ನು ಆರಂಭಿಸಲು ಸರ್ಕಾರದಿಂದ ಯಾವೆಲ್ಲ ಯೋಜನೆಯಡಿ ಸಬ್ಸಿಡಿಯನ್ನು ಪಡೆಯಬಹುದು? ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಮಾರ್ಗದರ್ಶನವನ್ನು ಸಹ ಈ ತರಬೇತಿಯಲ್ಲಿ ಅಭ್ಯರ್ಥಿಗಳಿಗೆ ತಿಳಿಸಲಾಗುತ್ತದೆ.
ಇದನ್ನೂ ಓದಿ: Khatha Details-ಆಸ್ತಿಗಳಿಗೆ ಎ-ಖಾತಾ ಮತ್ತು ಬಿ-ಖಾತಾ ಎಂದರೇನು? ಇದರ ವ್ಯತ್ಯಾಸಗಳೇನು? ಇಲ್ಲಿದೆ ಸಂಪೂರ್ಣ ವಿವರ!
Who Can Apply For Sheep Farming Training-ತರಬೇತಿಯಲ್ಲಿ ಯಾರೆಲ್ಲ ಭಾಗವಹಿಸಬಹುದು?
- ಅರ್ಜಿದಾರ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಅರ್ಜಿದಾರರ ವಯಸ್ಸು 18 ರಿಂದ 45 ವರ್ಷದ ಒಳಗಿರಬೇಕು.
- ಬಿಪಿಎಲ್ ಕಾರ್ಡ ಅನ್ನು ಹೊಂದಿರುವ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
- ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವವರು ತರಬೇತಿ ಮುಗಿದ ಬಳಿಕ ಕುರಿ ಸಾಕಾಣಿಕೆಯನ್ನು ಆರಂಭಿಸು ಇಚ್ಚೆಯನ್ನು ಹೊಂದಿರಬೇಕು.
Training Date-ತರಬೇತಿ ಪ್ರಾರಂಭ ದಿನಾಂಕ:
ಈ ತರಬೇತಿಯು ದಿನಾಂಕ: 02 ಎಪ್ರಿಲ್ 2025 ರಿಂದ ಪ್ರಾರಂಭವಾಗಿ ದಿನಾಂಕ: 11 ಎಪ್ರಿಲ್ 2025ಕ್ಕೆ ಮುಕ್ತಾಯವಾಗುತ್ತದೆ. ಒಟ್ಟು 10 ದಿನಗಳ ತರಬೇತಿ ಇದಾಗಿರುತ್ತದೆ.
ಇದನ್ನೂ ಓದಿ: Military College-ಆರ್ಮಿ ಕಾಲೇಜಿನಲ್ಲಿ ಶಿಕ್ಷಣ ಪಡೆಯಲು ಇಲ್ಲಿದೆ ಉತ್ತಮ ಅವಕಾಶ!

Apply Method-ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಅಭ್ಯರ್ಥಿಗಳು ತರಬೇತಿಯಲ್ಲಿ ಭಾಗವಹಿಸಲು ಈ “8660219375” ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮುಂಚಿತವಾಗಿ ತಮ್ಮ ಹೆಸರನ್ನು ನೊಂದಣಿ ಮಾಡಿಸಬೇಕು ತರಬೇತಿ ನಡೆಯುವ ದಿನಾಂಕದಂದು ಅಗತ್ಯ ದಾಖಲಾತಿಗಳ ಸಮೇತ ತರಬೇತಿಯಲ್ಲಿ ಭಾಗವಹಿಸಬೇಕು.
Documents-ದಾಖಲೆಗಳು:
1) ಅಭ್ಯರ್ಥಿಯ ಆಧಾರ್ ಕಾರ್ಡ
2) ಬ್ಯಾಂಕ್ ಪಾಸ್ ಬುಕ್
3) ಪೋಟೋ
4) ರೇಶನ್ ಕಾರ್ಡ ಪ್ರತಿ
5) ಮೊಬೈಲ್ ನಂಬರ್
ಇದನ್ನೂ ಓದಿ: Land Documents-ಕಂದಾಯ ಇಲಾಖೆಯಿಂದ ಅಕ್ರಮ-ಸಕ್ರಮ ಜಮೀನುಗಳಿಗೆ ಪಹಣಿ!
Training Center Address-ತರಬೇತಿ ನಡೆಯುವ ಕೇಂದ್ರ ವಿಳಾಸ:
ಬ್ಯಾಂಕ್ ಆಫ್ ಬರೋಡ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ದೇವಗಿರಿ ಹಾವೇರಿ ಕೇಂದ್ರದಲ್ಲಿ ಈ ತರಬೇತಿಯನ್ನು ಆಯೋಜನೆ ಮಾಡಲಾಗಿದೆ.
Kuri Sakanike Subsidy Schemes-ಕುರಿ ಸಾಕಾಣಿಕೆಯನ್ನು ಮಾಡಲು ಯಾವೆಲ್ಲ ಯೋಜನೆಯಡಿ ಸಬ್ಸಿಡಿ ಪಡೆಯಬಹುದು?
1) ರಾಷ್ಟ್ರೀಯ ಜಾನುವಾರು ಮಿಷನ್(NLM):
ರಾಷ್ಟ್ರೀಯ ಜಾನುವಾರು ಮಿಷನ್(NLM) ಯೋಜನೆಯಡಿ ರೂ 25 ಲಕ್ಷದವರೆಗೆ ಶೇ 50% ಸಬ್ಸಿಡಿಯಲ್ಲಿ ಕುರಿ ಸಾಕಾಣಿಕೆಯನ್ನು ಆರಂಭಿಸಲ್ಲು ಅವಕಾಶವಿರುತ್ತದೆ.
ಈ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಲಿಂಕ್- CLICK HERE
ಇದನ್ನೂ ಓದಿ: Togari Kharidi-ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡುವವರಿಗೆ ಸಿಹಿ ಸುದ್ದಿ!
2) ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ:
ವಿವರ: ಈ ಯೋಜನೆಯಡಿ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ (Karnataka Sheep and Wool Development Corporation) ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಸಹಾಯಧನ ಮತ್ತು ಸಾಲ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಯೋಜನೆಯು ವಿಶೇಷವಾಗಿ ಕುರಿ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ ಗುರಿಯಾಗಿದೆ.
ಸಬ್ಸಿಡಿ/ಸಹಾಯಧನ:
ಪ್ರತಿ ಘಟಕಕ್ಕೆ (20 ಕುರಿ + 1 ಮೇಕೆ) ಒಟ್ಟು ₹1.75 ಲಕ್ಷ ವೆಚ್ಚದಲ್ಲಿ, ರಾಜ್ಯ ಸರ್ಕಾರ ₹43,750 ಸಹಾಯಧನ ನೀಡುತ್ತದೆ. ಫಲಾನುಭವಿಗಳು ಇದೇ ಮೊತ್ತವನ್ನು (₹43,750) ವಂತಿಕೆಯಾಗಿ ನೀಡಬೇಕು. ಇದಲ್ಲದೆ, ರಾಜ್ಯ ಹಣಕಾಸು ಸಂಸ್ಥೆಯಿಂದ ₹87,500 ಸಾಲ ಶೇ.9.26 ಬಡ್ಡಿದರದಲ್ಲಿ ಲಭ್ಯವಿದೆ.
ಅರ್ಹತೆ: ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಾಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದವರು ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: Nandini Milk Price-ಹಾಲಿನ ದರ ₹4 ರೂ ಹೆಚ್ಚಳ ಮಾಡಿದ ಸರ್ಕಾರ!
3) ಕುರಿ ಸಾಕಾಣಿಕೆ ಶೆಡ್ ನಿರ್ಮಾಣಕ್ಕೆ ಸಬ್ಸಿಡಿ
ಗ್ರಾಮ ಪಂಚಾಯತಿಯ ಮೂಲಕ ನರೇಗಾ ಯೋಜನೆಯಡಿ ಈ ಯೋಜನೆಯ ಮೂಲಕ ಕುರಿ ಸಾಕಾಣಿಕೆಯನ್ನು ಆರಂಭಿಸಲು ಶೆಡ್ ಅನ್ನು ನಿರ್ಮಾಣ ಮಾಡಿಕೊಳ್ಳಲು ಸಬ್ಸಿಡಿಯನ್ನು ಪಡೆಯಲು ಅವಕಾಶವಿರುತ್ತದೆ.
4) ಸಹಕಾರ ಸಂಘಗಳ ಮೂಲಕ ಸಬ್ಸಿಡಿ:
ವಿವರ: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ಸಹಕಾರ ಸಂಘಗಳ ಮೂಲಕ ಕುರಿ ಖರೀದಿ, ಫೀಡ್, ಮತ್ತು ಇತರ ಮೂಲಭೂತ ಸೌಕರ್ಯಗಳಿಗೆ ಸಬ್ಸಿಡಿ ಒದಗಿಸುತ್ತದೆ.
ಸಬ್ಸಿಡಿ: ಪ್ರತಿ ಯೂನಿಟ್‌ಗೆ (25 ಕುರಿ/ಮೇಕೆ) ಯೋಜನೆ ಮೌಲ್ಯದ 50%ರಷ್ಟು ಸಬ್ಸಿಡಿ, ಗರಿಷ್ಠ ₹1 ಲಕ್ಷ ಮಿತಿಯೊಂದಿಗೆ ಲಭ್ಯ.
ಅರ್ಹತೆ: ಸಹಕಾರ ಸಂಘಗಳ ಸದಸ್ಯರಾಗಿರಬೇಕು.
5) ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಯೋಜನೆಛ
ವಿವರ: ಪರಿಶಿಷ್ಟ ಜಾತಿಯ ರೈತರಿಗೆ ಕುರಿ ಸಾಕಾಣಿಕೆಗೆ ಸಾಲ ಮತ್ತು 50% ಸಹಾಯಧನ ಲಭ್ಯ.
ಸಬ್ಸಿಡಿ: ಘಟಕ ವೆಚ್ಚ ₹50,000ರಲ್ಲಿ 50% (₹25,000) ಸಹಾಯಧನ ಮತ್ತು ₹25,000 ಸಾಲ (4% ಬಡ್ಡಿದರದಲ್ಲಿ) ಲಭ್ಯ.
ಅರ್ಹತೆ: 21-50 ವರ್ಷ ವಯಸ್ಸಿನ ಪರಿಶಿಷ್ಟ ಜಾತಿ ರೈತರು, ಇದುವರೆಗೆ ನಿಗಮದಿಂದ ಸೌಲಭ್ಯ ಪಡೆದಿರದವರು.
6) ಉಚಿತ ಟೆಂಟ್ ಮತ್ತು ಪರಿಕರ ವಿತರಣೆ:
ವಿವರ: ವಲಸೆ ಕುರಿಗಾರರಿಗೆ ಉಚಿತ ಟೆಂಟ್ ಮತ್ತು ಇತರ ಪರಿಕರಗಳನ್ನು ನೀಡುವ ಯೋಜನೆ ಇದೆ, ಇದು ಸಾಕಾಣಿಕೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ.
ಸಬ್ಸಿಡಿ: ಉಚಿತವಾಗಿ ಟೆಂಟ್ ಮತ್ತು ಪರಿಕರಗಳು ಲಭ್ಯ.
ಅರ್ಹತೆ: ನೋಂದಾಯಿತ ಕುರಿ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು.
ಪ್ರಮುಖ ಸಲಹೆಗಳು:
ಕುರಿ ಸಾಕಾಣಿಕೆಯನ್ನು ಆರಂಭಿಸುವ ಮುನ್ನ ಸಂಬಂಧಿತ ತಾಂತ್ರಿಕ ಅಧಿಕಾರಿಗಳಿಂದ (ಪಶುಪಾಲನಾ ಇಲಾಖೆ ಅಥವಾ ನಿಗಮ) ಮತ್ತು ಈಗಾಗಲೇ ಸಾಕಾಣಿಕೆಯನ್ನು ಮಾಡುತ್ತಿರುವ ರೈತರಿಂದ ಸಲಹೆ ಪಡೆದುಕೊಳ್ಳಿ.
ಕರ್ನಾಟಕದ ವಾತಾವರಣಕ್ಕೆ ಯೋಗ್ಯವಾದ ಕುರಿ ತಳಿಗಳನ್ನು (ಉದಾ., ಸ್ಥಳೀಯ ತಳಿಗಳು) ಆಯ್ಕೆ ಮಾಡಿ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವೆಬ್ಸೈಟ್ ಅಥವಾ ಸ್ಥಳೀಯ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ.