ರಾಜ್ಯದ ತೊಗರಿ ಬೆಳೆಯುವ ರೈತರಿಗೆ ಕೇಂದ್ರ ಸಿಹಿ ಸುದ್ದಿಯನ್ನು ನೀಡಿದೆ, ರೈತರಿಂದ ಕನಿಷ್ಥ ಬೆಂಬಲ ಬೆಲೆ(Togari Kharidi) ಯೋಜನೆಯಡಿ ತೊಗರಿಯನ್ನು ಖರೀದಿ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರವು ಒಂದು ತಿಂಗಳ ಅವಧಿಯವರೆಗೆ ವಿಸ್ತರಣೆ ಮಾಡಿ ಹೊಸ ಆದೇಶವನ್ನು ಹೊರಡಿಸಲಾಗಿದೆ.
ಈಗಾಗಲೇ ರೈತರಿಂದ ನೇರವಾಗಿ ಬೆಂಬಲ ಬೆಲೆಯಲ್ಲಿ(Togari Msp Price) ತೊಗರಿಯನ್ನು ಖರೀದಿ ಮಾಡಲು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ಅರ್ಹ ರೈತರಿಂದ ನೋಂದಣಿಯನ್ನು ಮಾಡಿಕೊಂಡು ತೊಗರಿಯನ್ನು ಖರೀದಿ ಮಾಡಲಾಗುತ್ತಿದ್ದು ಇದಕ್ಕಾಗಿ ಇದೆ ಮಾರ್ಚ 31 ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿತ್ತು ಪ್ರಸ್ತುತ ಈ ಅವಧಿಯನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: KPSC ಯಿಂದ ವಿವಿಧ ಹುದ್ದೆಗಳ 2ನೇ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟ!
ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ರೈತರು ಅನುಸರಿಸಬೇಕಾದ ಕ್ರಮಗಳು ಯಾವುವು? ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಇನ್ನು ಎಷ್ಟು ದಿನ ಅವಕಾಶ ನೀಡಲಾಗಿದೆ? ಇನ್ನಿತರೆ ಅಗತ್ಯ ವಿವರವಾದ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.
Togari bembala bele-ಒಂದು ತಿಂಗಳವರೆಗೆ ಅವಧಿ ವಿಸ್ತರಣೆ:
ಈ ಹಿಂದೆ ರೈತರಿಂದ ಬೆಂಬಲ ಬೆಲೆಯಲ್ಲಿ ತೊಗರಿಯನ್ನು ಖರೀದಿ ಮಾಡಲು 31 ಮಾರ್ಚ 2025 ಕೊನೆಯ ದಿನಾಂಕ ಎಂದು ಕೇಂದ್ರ ಸರ್ಕಾರದಿಂದ ದಿನಾಂಕವನ್ನು ನಿಗದಿಪಡಿಸಲಾಗಿತ್ತು ಅದರೆ ಪ್ರಸ್ತುತ ಕೇಂದ್ರದಿಂದ ತೊಗರಿಯನ್ನು ಖರೀದಿ ಮಾಡಲು 01 ಮೇ 2025 ರವರೆಗೆ ಅವಕಾಶವನ್ನು ನೀಡಲಾಗಿದೆ.
ಇದನ್ನೂ ಓದಿ: Holige tarabeti- ಟೈಲರಿಂಗ್ ಕಲಿಯಲು ಆಸಕ್ತಿಯಿರುವವರಿಗೆ ಭರ್ಜರಿ ಸಿಹಿ ಸುದ್ದಿ!
Bembala bele-ಇಲ್ಲಿಯವರೆಗೆ ಎಷ್ಟು? ಪ್ರಮಾಣದ ತೊಗರಿ ಖರೀದಿ ಮಾಡಲಾಗಿದೆ?
ಕನಿಷ್ಥ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಇಲ್ಲಿಯವರೆಗೆ 2.46 ಲಕ್ಷ ಟನ್ ತೊಗರಿಯನ್ನು ಖರೀದಿ ಮಾಡಲಾಗಿದ್ದು, ಈ ಕ್ರಮದಿಂದ1.71 ಲಕ್ಷ ರೈತರಿಗೆ ಪ್ರಯೋಜನವಾಗಿ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ.
Togari Bembala Bele Mahiti-ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ರೈತರು ಅನುಸರಿಸಬೇಕಾದ ಕ್ರಮಗಳು:
ತೊಗರಿಯನ್ನು ಬೆಳೆಯುವ ರೈತರು ತಮ್ಮ ಉತ್ಪನ್ನವನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಮೊದಲು ತಮ್ಮ ಹತ್ತಿರದ ತೊಗರಿ ಖರೀದಿ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಒದಗಿಸಿ ನೋಂದಣಿಯನ್ನು ಮಾಡಬೇಕು ಬಳಿಕ ತೊಗರಿ ಖರೀದಿ ಕೇಂದ್ರದಲ್ಲಿ ನಿಗದಿಪಡಿಸಿದ ದಿನಾಂಕದಂದು ತೊಗರಿಯನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಬೇಕು.
ಇದನ್ನೂ ಓದಿ: Anganwadi Recruitment-ಅಂಗನವಾಡಿ ಕೇಂದ್ರದಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ!

Togari Msp Price-ಬೆಂಬಲ ಬೆಲೆ ವಿವರ:
ಕೇಂದ್ರ ಸರ್ಕಾರವು ರೈತರಿಂದ ಬೆಂಬಲ ಬೆಲೆಯಲ್ಲಿ ತೊಗರಿಯನ್ನು ಖರೀದಿ ಮಾಡಲು ₹7,550/- ರೂ ಅನ್ನು ನಿಗದಿ ಮಾಡಿದ್ದು, ಇದಕ್ಕೆ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ನೀಡುವ ₹450/- ರೂ ಸಹಾಯಧನ ಸೇರಿ ಪ್ರತಿ ಕ್ವಿಂಟಾಲ್ ತೊಗರಿಗೆ ₹8,000/- ರೂ ರೈತರಿಗೆ ದೊರೆಯಲಿದೆ.
Togari Kharidi Kendra-ತೊಗರಿ ಖರೀದಿಗೆ ನಿಗದಿಪಡಿಸಿದ ಮಾನದಂಡಗಳು:
ತೊಗರಿ ಬೆಳೆಗಾರರಿಂದ ಪ್ರತಿ ಒಂದು ಎಕರೆಗೆ ಕ್ವಿಂಟಾಲ್ ನಂತೆ ಒಬ್ಬ ರೈತರಿಂದ ಗರಿಷ್ಥ ಕ್ವಿಂಟಾಲ್ ತೊಗರಿಯನ್ನು ಸರ್ಕಾರದಿಂದ ಖರೀದಿ ಮಾಡಲಾಗುತ್ತದೆ.
ಅರ್ಹ ರೈತರು ತಮ್ಮ ಹತ್ತಿರದ PACS/FPO/TAPCMS ಗಳಲ್ಲಿ ಕೃಷಿ ಇಲಾಖೆಯಲ್ಲಿ ನೀಡುವ ಪ್ರೂಟ್ಸ್ ಐ ಡಿ ಸಂಖ್ಯೆ ನೀಡಿ ನೊಂದಣಿ ಮಾಡಿಕೊಂಡು ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಬಹುದಾಗಿದೆ ಎಂದು ಕೃಷಿ ಮಾರಾಟ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಿಂದ ಪ್ರಕಟಣೆ ಹೊರಡಿಸಲಾಗಿದೆ.
ಇದನ್ನೂ ಓದಿ: E-Swathu-ಗ್ರಾಮ ಪಂಚಾಯತಿಯಲ್ಲಿ ಇ-ಸ್ವತ್ತು ವಿತರಣೆಗೆ ಕುರಿತು ನೂತನ ಕ್ರಮ!
Documents-ಒದಗಿಸಬೇಕಾದ ದಾಖಲೆಗಳು:
1) ರೈತರ ಆಧಾರ್ ಕಾರ್ಡ ಪ್ರತಿ
2) ಬ್ಯಾಂಕ್ ಪಾಸ್ ಪುಸ್ತಕ
3) ಜಮೀನಿನ ಪಹಣಿ/ಊತಾರ್/RTC
4) ಮೊಬೈಲ್ ನಂಬರ್
ರೈತರು ಈ ಕುರಿತು ಇನ್ನು ಅಧಿಕವಾದ ಮಾಹಿತಿ ಪಡೆಯಲು ನಿಮ್ಮ ತಾಲ್ಲೂಕಿನ ಕೃಷಿ ಮಾರಾಟ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಕಚೇರಿಯನ್ನು ಭೇಟಿ ಮಾಡಬಹುದು.