- Advertisment -
HomeGovt SchemesKhatha Details-ಆಸ್ತಿಗಳಿಗೆ ಎ-ಖಾತಾ ಮತ್ತು ಬಿ-ಖಾತಾ ಎಂದರೇನು? ಇದರ ವ್ಯತ್ಯಾಸಗಳೇನು? ಇಲ್ಲಿದೆ ಸಂಪೂರ್ಣ ವಿವರ!

Khatha Details-ಆಸ್ತಿಗಳಿಗೆ ಎ-ಖಾತಾ ಮತ್ತು ಬಿ-ಖಾತಾ ಎಂದರೇನು? ಇದರ ವ್ಯತ್ಯಾಸಗಳೇನು? ಇಲ್ಲಿದೆ ಸಂಪೂರ್ಣ ವಿವರ!

ರಾಜ್ಯಾದ್ಯಂತ ಆಸ್ತಿಗಳಿಗೆ ಎ ಖಾತಾ ಮತ್ತು ಬಿ ಖಾತಾ ಅಗತ್ಯ ದಾಖಲಾತಿಗಳನ್ನು(B Khata vs A Khata) ಒದಗಿಸಲಾಗುತ್ತಿದ್ದು, ಈ ಕುರಿತು ಆಸ್ತಿಯ ಮಾಲೀಕರಿಗೆ ಅನೇಕ ಗೊಂದಲಗಳಿದ್ದು ಇದರ ಬಗ್ಗೆ ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.

ಬೆಂಗಳೂರು ನಗರ ಅಂದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಹಾಗೂ ರಾಜ್ಯದ ನಗರ-ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ನಿವೇಶ ಮತ್ತು ಜಾಗಗಳಿಗೆ ಅಧಿಕೃತವಾಗಿ ಸಂಬಂದಪಟ್ಟ(Property Registration) ಇಲಾಖೆಯಿಂದ ಬಿ-ಖಾತಾ ವಿತರಣೆ ಅಭಿಯಾನವನ್ನು ಈಗಾಗಲೇ ಆರಂಭಿಸಲಾಗಿದೆ ಇದರ ಪ್ರಯೋಜನಗಳ ಕುರಿತು ಸಹ ಇಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Military College-ಆರ್ಮಿ ಕಾಲೇಜಿನಲ್ಲಿ ಶಿಕ್ಷಣ ಪಡೆಯಲು ಇಲ್ಲಿದೆ ಉತ್ತಮ ಅವಕಾಶ!

ಈ ಲೇಖನದಲ್ಲಿ ಎ-ಖಾತಾ ಮತ್ತು ಬಿ-ಖಾತಾ ಪ್ರಮಾಣ ಪತ್ರದ ನಡುವಿನ ವ್ಯಾತ್ಯಾಸವೇನು? ಈ ದಾಖಲೆಯನ್ನು ಪಡೆಯುವುದರಿಂದ ಆಸ್ತಿಯ ಮಾಲೀಕರಿಗೆ ಆಗುವ ಪ್ರಯೋಜನಗಳೇನು? ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

Khatha Information-ಖಾತಾ ವಿವರ:

ಕರ್ನಾಟಕದಲ್ಲಿ ಭೂಮಿಯ ಕಾನೂನುಪೂರಿತ ದಾಖಲೆಗಳನ್ನು ನಿಗದಿಪಡಿಸಲು ಬಿಬಿಎಂಪಿ (BBMP), ಗ್ರಾಮ ಪಂಚಾಯತಿ, ನಗರ ಆಡಳಿತ ಮಂಡಳಿ ಮತ್ತು ಇತರೆ ಸಂಬಂಧಿತ ಇಲಾಖೆಗಳಿಂದ ಎ ಖಾತಾ (A Khata) ಮತ್ತು ಬಿ ಖಾತಾ (B Khata) ಎಂಬ ಎರಡು ಪ್ರಕಾರದ ದಾಖಲೆಗಳನ್ನು ವಿತರಣೆ ಮಾಡಲಾಗುತ್ತದೆ. ಈ ದಾಖಲೆಗಳು ಆಸ್ತಿಯ ಮಾಲೀಕರ ವಿವರವನ್ನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಣೆ ಮಾಡಲಾಗಿರುತ್ತದೆ.

ಇದನ್ನೂ ಓದಿ: Land Documents-ಕಂದಾಯ ಇಲಾಖೆಯಿಂದ ಅಕ್ರಮ-ಸಕ್ರಮ ಜಮೀನುಗಳಿಗೆ ಪಹಣಿ!

What Is A-Khata ಎ-ಖಾತಾ ಎಂದರೇನು?

ಎ ಖಾತಾ ಎಂದರೆ ಸಂಪೂರ್ಣವಾಗಿ ಕಾನೂನುಬದ್ಧ, ನಿಯಮಿತವಾಗಿ ನೋಂದಾಯಿತ ಸ್ವತ್ತು ಇದಾಗಿದ್ದು ಒಂದು ಆಸ್ತಿಯ ಅಧಿಕೃತ ಎಲ್ಲಾ ಬಗ್ಗೆಯ ಕಾನೂನುಬದ್ದ ದಾಖಲಾತಿ ಇದಾಗಿರುತ್ತದೆ. ಎ-ಖಾತಾ ಹೊಂದಿರುವ ಆಸ್ತಿಗಳಿಗಿರುವ ಮುಖ್ಯ ಪ್ರಯೋಜನಗಳ ವಿವರ ಈ ಕೆಳಗಿನಂತಿದೆ.

  • ಖಾಸಗಿ ಮತ್ತು ಸರ್ಕಾರಿ ಬ್ಯಾಂಕುಗಳಲ್ಲಿ ಲೋನ್ ಪಡೆಯಲು ಅರ್ಹತೆಯನ್ನು ಹೊಂದಿರುತ್ತವೆ.
  • ಆಸ್ತಿಯ ಮಾರಾಟ, ವರ್ಗಾವಣೆ ಅಥವಾ ಜಮೀನು ಅಭಿವೃದ್ಧಿಗೆ ಅವಕಾಶ ಸಂಪೂರ್ಣ ಅವಕಾಶವನ್ನು ಕಾನೂನು ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ಆಸ್ತಿಯ ಮಾಲೀಕರಿಗೆ ಅವಕಾಶವಿರುತ್ತದೆ.
  • ಕಟ್ಟಡ ಪರವಾನಗಿ, ಜಮೀನು ಪರಿವರ್ತನೆ ಮತ್ತು ಇತರ ಸೌಕರ್ಯಗಳ ಲಾಭ ಪಡೆಯಲು ಸಾಧ್ಯವಿರುತ್ತದೆ.

ಇದನ್ನೂ ಓದಿ: Nandini Milk Price-ಹಾಲಿನ ದರ ₹4 ರೂ ಹೆಚ್ಚಳ ಮಾಡಿದ ಸರ್ಕಾರ!

home documents

What Is B-Khata ಬಿ-ಖಾತಾ ಎಂದರೇನು?

ಬಿ-ಖಾತಾ ಎಂದರೆ ನಿಯಮಾನುಸರಿತವಾಗಿಯೇ ನೋಂದಣಿ ಹೊಂದಿಲ್ಲದ ಅಥವಾ ಜಮೀನು ನಿಯಮಗಳನ್ನು ಉಲ್ಲಂಘಿಸಿದ ಆಸ್ತಿಗಳಿಗೆ ನೀಡುವ ಪ್ರತ್ಯೇಕ ದಾಖಲಾತಿ ಇದಾಗಿರುತ್ತದೆ ಅಂದರೆ ಕೃಷಿ ಜಮೀನಿನಲ್ಲಿ ಅಥವಾ ಅನಧಿಕೃತ ಜಾಗದಲ್ಲಿ ಮನೆಯನ್ನು ನಿರ್ಮಾಣ ಮಾಡಿಕೊಂಡಿರುವ ಜಮೀನಿಗೆ ಸಂಬಂಧಪಟ್ಟ ಇಲಾಖೆಯಿಂದ ಬಿ-ಖಾತಾವನ್ನು ವಿತರಣೆ ಮಾಡಲಾಗುತ್ತದೆ. ಇದು ಅನಧಿಕೃತ ಅಥವಾ ಖಾಸಗಿ ಅಭಿವೃದ್ಧಿಯಡಿ ಬರುವ ಜಾಗಗಳಿಗೆ ನೀಡಲಾಗುವ ದಾಖಲಾತಿ ಇದಾಗಿರುತ್ತದೆ.
ಬ್ಯಾಂಕುಗಳಲ್ಲಿ ಲೋನ್ ಪಡೆಯಲು ಸಾಧ್ಯವಿಲ್ಲ.

ಎ-ಖಾತಾ ಮಾಲೀಕರಿಗೆ ಹೋಲಿಕೆ ಮಾಡಿದರೆ ಬಿ-ಖಾತಾ ಮಾಲೀಕರಿಗೆ ಕಡಿಮೆ ಸೌಲಭ್ಯವನ್ನು ಪಡೆಯಲು ಮಾತ್ರ ಅವಕಾಶವಿರುತ್ತದೆ. ಹೆಚ್ಚುವರಿ ಕಟ್ಟಡ ಕಟ್ಟಿಕೊಳ್ಳಲು ಅನುಮತಿ ಸಿಗುವುದಿಲ್ಲ ಅದಲ್ಲದೇ ಬ್ಯಾಂಕ್ ನಲ್ಲಿ ಈ ಆಸ್ತಿಯ ಮೇಲೆ ಸಾಲವನ್ನು ಪಡೆಯಲು ಸಹ ಅನೇಕ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ ಕೆಲವು ಬ್ಯಾಂಕ್ ನಲ್ಲಿ ಬಿ-ಖಾತಾ ಆಸ್ತಿಗಳಿಗೆ ಸಾಲವನ್ನು ನೀಡುವುದಿಲ್ಲ.

ಇದನ್ನೂ ಓದಿ: Togari Kharidi-ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡುವವರಿಗೆ ಸಿಹಿ ಸುದ್ದಿ!

ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಸಾಧ್ಯವೇ?

ಹೌದು, ಆಸ್ತಿಯ ಮಾಲೀಕರು ಆಸ್ತಿಗೆ ಸಂಬಂಧಪಟ್ಟ ಅಧಿಕೃತ ದಾಖಲಾತಿಗಳು ಸಲ್ಲಿಸಿ ನಿರ್ದಿಷ್ಟ ನಿಯಮಗಳು ಅನುಸರಿಸಿದರೆ ಬಿ-ಖಾತಾ ಹೊಂದಿರುವ ಆಸ್ತಿಯನ್ನು ಎ-ಖಾತಾಗೆ ಪರಿವರ್ತನೆ ಮಾಡಬಹುದಾಗಿದೆ.

ಆಸ್ತಿ ಖರೀದಿ ಮಾಡುವ ತಪ್ಪದೇ ಈ ಮಾಹಿತಿಯನ್ನು ಚೆಕ್ ಮಾಡಿ:

ಆಸ್ತಿ ಖರೀದಿ ಅಥವಾ ಮಾರಾಟ ಮಾಡುವ ಮುನ್ನ ಎ ಮತ್ತು ಬಿ ಖಾತೆಗಳ ನಡುವಿನ ವ್ಯತ್ಯಾಸವನ್ನು ಅರ್ಥೈಸಿಕೊಳ್ಳುವುದು ಅತ್ಯಗತ್ಯ. ಎ-ಖಾತಾ ಹೊಂದಿರುವ ಆಸ್ತಿಗಳು ಬಹುಪಾಲು ಸೌಲಭ್ಯಗಳು ಮತ್ತು ಕಾನೂನು ಮಾನ್ಯತೆ ಹೊಂದಿದ್ದು, ಬಿ-ಖಾತಾದ ಆಸ್ತಿಗಳು ನಿಯಮಿತವಾಗಿ ಹಿಂದುಳಿದಿರುತ್ತವೆ. ಆದ್ದರಿಂದ, ನೀವು ಹೊಸ ಆಸ್ತಿ ಖರೀದಿಸುವಾಗ ಖಾತಾ ಪ್ರಮಾಣಪತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು ಉತ್ತಮ.

ಖಾತಾ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಾರ್ವಜನಿಕರು ನಿಮ್ಮ ಹತ್ತಿರದ ಬಿಬಿಎಂಪಿ/ಗ್ರಾಮ ಪಂಚಾಯತಿ/ನಗರ ಪ್ರದೇಶದಲ್ಲಿರುವವರು ಮಹಾನಗರ ಪಾಲಿಕೆ/ಪಟ್ಟಣ ಪಂಚಾಯತಿ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ವಿವರವನ್ನು ಪಡೆಯಬಹುದು.

- Advertisment -
LATEST ARTICLES

Related Articles

- Advertisment -

Most Popular

- Advertisment -