- Advertisment -
HomeGovt SchemesFree AI Training-ವಿದ್ಯಾರ್ಥಿಗಳಿಗೆ ₹15,000/- ರೂ ವಿದ್ಯಾರ್ಥಿವೇತನ ಸಹಿತ ಎಐ ಕುರಿತು ತರಬೇತಿಗೆ ಅರ್ಜಿ ಆಹ್ವಾನ!

Free AI Training-ವಿದ್ಯಾರ್ಥಿಗಳಿಗೆ ₹15,000/- ರೂ ವಿದ್ಯಾರ್ಥಿವೇತನ ಸಹಿತ ಎಐ ಕುರಿತು ತರಬೇತಿಗೆ ಅರ್ಜಿ ಆಹ್ವಾನ!

ಇಂಜಿನಿಯರಿಂಗ್ ಪದವೀಧರರಿಗೆ ಸಮಾಜ ಕಲ್ಯಾಣ ಇಲಾಖೆ ಇಲಾಖೆಯಿಂದ Artificial Intelligence (AI) ಮತ್ತು Machine Learning (ML) ಸೇರಿದಂತೆ ವೃತ್ತಿಪರ ತರಬೇತಿಯನ್ನು ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ 2024-25ನೇ ಸಾಲಿನ ಆಯವ್ಯಯ ಭಾಷಣ (ಕಂಡಿಕೆ-174) ಪ್ರಕಾರ, ಇಂಜಿನಿಯರಿಂಗ್ ಪದವೀಧರರಿಗೆ Artificial Intelligence (AI) ಮತ್ತು Machine Learning (ML) ಸೇರಿದಂತೆ ವೃತ್ತಿಪರ ತರಬೇತಿ ಕೋರ್ಸುಗಳನ್ನು ಒದಗಿಸಲು ಮಹತ್ವದ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಡಿಯಲ್ಲಿ, ಭಾರತೀಯ ವಿಜ್ಞಾನ ಸಂಸ್ಥೆ (IISc), ಭಾರತೀಯ ತಾಂತ್ರಿಕ ಸಂಸ್ಥೆ (IIT) ಮತ್ತು ರಾಷ್ಟ್ರೀಯ ತಾಂತ್ರಿಕ ಸಂಸ್ಥೆ (NIT)ಗಳ ಮೂಲಕ ಗರಿಷ್ಠ ಎರಡು ವಾರಗಳ ಅವಧಿಯ ಶಿಷ್ಯವೇತನ ಸಹಿತ ತರಬೇತಿ ನೀಡಲಾಗುತ್ತದೆ.

ಇದನ್ನೂ ಓದಿ: Khatha Details-ಆಸ್ತಿಗಳಿಗೆ ಎ-ಖಾತಾ ಮತ್ತು ಬಿ-ಖಾತಾ ಎಂದರೇನು? ಇದರ ವ್ಯತ್ಯಾಸಗಳೇನು? ಇಲ್ಲಿದೆ ಸಂಪೂರ್ಣ ವಿವರ!

ತರಬೇತಿಯಲ್ಲಿ(Engineering Student Training) ಭಾಗವಹಿಸಲು ವಿದ್ಯಾರ್ಥಿಗಳು ಅನುಸರಿಸಬೇಕಾದ ಕ್ರಮಗಳು ಯಾವುವು? ತರಬೇತಿಯನ್ನು ಪಡೆಯಲು ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದ್ದು ತಪ್ಪದೇ ಈ ಮಾಹಿತಿಯನ್ನು ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

AI & MI Training deatils-ತರಬೇತಿಯ ವಿವರ ಹೀಗಿದೆ:

✔ ಈ ಯೋಜನೆಯಡಿ ಪರಿಶಿಷ್ಟ ವರ್ಗದ 200 ಇಂಜಿನಿಯರಿಂಗ್ ಪದವೀಧರರಿಗೆ ಅನುಕೂಲ ದೊರೆಯಲಿದೆ.
✔ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 15,000/- ಶಿಷ್ಯವೇತನ ನೀಡಲಾಗುವುದು.
✔ ಅರ್ಜಿ ಸಲ್ಲಿಸಲು ಕನಿಷ್ಠ ಶೈಕ್ಷಣಿಕ ಅರ್ಹತೆ: B.E./B.Tech ಪದವಿ.
✔ ಕನಿಷ್ಠ 55% ಅಂಕಗಳಿಸಿರಬೇಕು.
✔ ಕೋರ್ಸ್ ಅವಧಿ: ಗರಿಷ್ಠ 2 ವಾರಗಳು.

ಇದನ್ನೂ ಓದಿ: Military College-ಆರ್ಮಿ ಕಾಲೇಜಿನಲ್ಲಿ ಶಿಕ್ಷಣ ಪಡೆಯಲು ಇಲ್ಲಿದೆ ಉತ್ತಮ ಅವಕಾಶ!

ai training

How To Apply-ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ತಮ್ಮ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Last Date For Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಲು 11 ಏಪ್ರಿಲ್ 2025 ಕೊನೆಯ ದಿನಾಂಕವಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಗಳಿಗಾಗಿ ನಿಮ್ಮ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ.

ಇದನ್ನೂ ಓದಿ: Land Documents-ಕಂದಾಯ ಇಲಾಖೆಯಿಂದ ಅಕ್ರಮ-ಸಕ್ರಮ ಜಮೀನುಗಳಿಗೆ ಪಹಣಿ!

Documents-ಅರ್ಜಿ ಸಲ್ಲಿಸಲು ದಾಖಲಾತಿಗಳು:

ಅರ್ಜಿದಾರರ ಆಧಾರ್ ಕಾರ್ಡ ಪ್ರತಿ/Aadhar card.
ಜಾತಿ ಮತ್ತು ಆದಾಯ ಪ್ರಮಾಣ ಪತ್ರ/Caste Certificate.
ಪೋಟೋ/Photo.
ಅಭ್ಯರ್ಥಿಯ ಅಂಕಪಟ್ಟಿ/Marks Card.
ಬ್ಯಾಂಕ್ ಪಾಸ್ ಬುಕ್/Bank Pass Book

ಇದನ್ನೂ ಓದಿ: Togari Kharidi-ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡುವವರಿಗೆ ಸಿಹಿ ಸುದ್ದಿ!

AI & MI Training Benefits-ತರಬೇತಿಯಲ್ಲಿ ಭಾಗವಹಿಸುವುದರಿಂದ ಆಗುವ ಪ್ರಯೋಜನಗಳು:

ಈ ತರಬೇತಿ ಕಾರ್ಯಕ್ರಮದಿಂದ ಇಂಜಿನಿಯರಿಂಗ್ ಪದವೀಧರರು cutting-edge ತಂತ್ರಜ್ಞಾನಗಳಾದ AI ಮತ್ತು ML ಕ್ಷೇತ್ರದಲ್ಲಿ ಕೌಶಲ್ಯವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಕ ತರಬೇತಿ ಪಡೆಯುವ ಅವಕಾಶದಿಂದ ವಿದ್ಯಾರ್ಥಿಗಳು ಉದ್ಯೋಗ ಅವಕಾಶಗಳನ್ನು ಹೆಚ್ಚಿಸಿಕೊಳ್ಳಬಹುದು.

ಇದನ್ನೂ ಓದಿ: Nandini Milk Price-ಹಾಲಿನ ದರ ₹4 ರೂ ಹೆಚ್ಚಳ ಮಾಡಿದ ಸರ್ಕಾರ!

AI & MI Training Information-ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಬದಲಾವಣೆ:

ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿರುವ ಆನೇಕಲ್ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ (ಗ್ರೇಡ್-1) ಅವರು, “ಈ ತರಬೇತಿ ಕೋರ್ಸ್‍ಗಳು ಯುವ ಇಂಜಿನಿಯರ್ ಗಳಿಗೆ ತಾಂತ್ರಿಕ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಲು ತಾಂತ್ರಿಕ ನೆರವು ನೀಡಲು ಸಹಾಯ ಮಾಡುತ್ತದೆ.

AI ಮತ್ತು ML ಕ್ಷೇತ್ರಗಳು ಇಂದು ಉದ್ಯೋಗ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯನ್ನು ಇದ್ದು, ಇದರಿಂದಾಗಿ ಈ ತರಬೇತಿಯನ್ನು ಪಡೆಯುವ ವಿದ್ಯಾರ್ಥಿಗಳ ವೃತ್ತಿ ಜೀವನದಲ್ಲಿ ಮಹತ್ವದ ಪರಿಣಾಮಕಾರಿ ಬದಲಾವಣೆ ತರುವ ಸಹಕಾರಿಯಾಗಿದೆ” ಎಂದು ತಿಳಿಸಿದ್ದಾರೆ, ಆಸಕ್ತ ಅಭ್ಯರ್ಥಿಗಳು ಈ ತರಬೇತಿಯಲ್ಲಿ ಭಾಗವಹಿಸಿ ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ.

- Advertisment -
LATEST ARTICLES

Related Articles

- Advertisment -

Most Popular

- Advertisment -