- Advertisment -
HomeGovt SchemesRTE Application-ಮಕ್ಕಳನ್ನು RTE ಸೀಟ್ ನಲ್ಲಿ ಶಾಲೆಯನ್ನು ದಾಖಲಿಸಲು ಅರ್ಜಿ ಸಲ್ಲಿಸಲು ಅವಕಾಶ!

RTE Application-ಮಕ್ಕಳನ್ನು RTE ಸೀಟ್ ನಲ್ಲಿ ಶಾಲೆಯನ್ನು ದಾಖಲಿಸಲು ಅರ್ಜಿ ಸಲ್ಲಿಸಲು ಅವಕಾಶ!

ರಾಜ್ಯದಲ್ಲಿರುವ ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಲಭ್ಯವಿರುವ RTE ಸೀಟುಗಳ(Karnataka RTE Admission-2025) ಪ್ರವೇಶ ಪ್ರಕ್ರಿಯೆಗೆ ಶಾಲಾ ಶಿಕ್ಷಣ ಇಲಾಖೆಯಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕರ್ನಾಟಕದಲ್ಲಿ ರೈಟ್ ಟು ಎಡ್ಯುಕೇಶನ್ (RTE) ಕಾಯ್ದೆ 2009 ರ ಅಡಿಯಲ್ಲಿ, ಆರ್ಥಿಕವಾಗಿ ದುರ್ಬಲ ವರ್ಗ ಮತ್ತು ವಂಚಿತ ಸಮುದಾಯದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು(Karnataka RTE School List) ಒದಗಿಸುವ ಉದ್ದೇಶದಿಂದ ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳಲ್ಲಿ 25% ಸೀಟುಗಳನ್ನು ಮೀಸಲಿಡಲಾಗಿದೆ.

ಇದನ್ನೂ ಓದಿ: Gruhalakshmi Status-ಗೃಹಲಕ್ಷ್ಮಿ ಯೋಜನೆಯ 2 ತಿಂಗಳ ಹಣ ಬಿಡುಗಡೆ!

ಈ ಯೋಜನೆಯಡಿಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಉತ್ತಮ ಶಾಲೆಗಳಲ್ಲಿ(RTE Admission) ದಾಖಲಿಸಿಕೊಳ್ಳಲು ಅವಕಾಶ ಪಡೆಯಬಹುದು, ಮತ್ತು ಈ ಪ್ರಕ್ರಿಯೆಯನ್ನು ಶಾಲಾ ಶಿಕ್ಷಣ ಇಲಾಖೆ ಕಾರ್ಯಕ್ಷಮವಾಗಿ ನಿರ್ವಹಿಸುತ್ತದೆ. 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಈ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಲು ಇಲಾಖೆಯಿಂದ ಸಿದ್ದತೆಯನ್ನು ಮಾಡಿಕೊಳ್ಳಲಾಗಿದ್ದು ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಹೊರಡಿಸಲಾಗಿದ್ದು ಇದರ ವಿವರವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

Important Dates-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ- 05 ಏಪ್ರಿಲ್ 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 12 ಮೇ 2025
  • ಲಾಟರಿ ಮೂಲಕ್ ಸೀಟು ಹಂಚಿಕೆ ದಿನಾಂಕ- 17 ಮೇ 2025
  • ಅರ್ಹ ವಿದ್ಯಾರ್ಥಿಗಳ ಪಟ್ಟಿ ಬಿಡುಗಡೆ ದಿನಾಂಕ- 21 ಮೇ 2025
  • ಶಾಲೆಯನ್ನು ದಾಖಲಿಸಲು ಕೊನೆ ದಿನಾಂಕ- 31 ಮೇ 2025

ಇದನ್ನೂ ಓದಿ: Sheep Farming-ಉಚಿತ ಕುರಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ! ಯಾವೆಲ್ಲ ಯೋಜನೆಯಡಿ ಸಬ್ಸಿಡಿ ಪಡೆಯಬಹುದು?

Online Application Link For RTE Seat-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

Step-1: ಮೊದಲಿಗೆ Apply Now ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

RTE Application

Step-2: ಇಲ್ಲಿ ಮುಖಪುಟದಲ್ಲಿ ಕಾಣುವ ಅರ್ಜಿ ನಮೂನೆಯ ಮೇಲೆ ಕ್ಲಿಕ್ ಮಾಡಿ ವಿದ್ಯಾರ್ಥಿಯ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

Documents For RTE Application- ಅರ್ಜಿ ಸಲ್ಲಿಸಲು ದಾಖಲೆಗಳು:

1) ವಿದ್ಯಾರ್ಥಿಯ ಆಧಾರ್ ಕಾರ್ಡ ಪ್ರತಿ/Aadhar Card
2) ಪೋಟೋ/Photo
3) ಜಾತಿ ಮತ್ತುಆದಾಯ ಪ್ರಮಾಣ ಪತ್ರ/caste and income certificate
4) ಜನನ ಪ್ರಮಾಣ ಪತ್ರ/Birth Certificate
5) ನಿವಾಸ ದೃಢೀಕರಣ/Address Proof
6) ರೇಶನ್ ಕಾರ್ಡ ಪ್ರತಿ/Ration Card

ಇದನ್ನೂ ಓದಿ: Free AI Training-ವಿದ್ಯಾರ್ಥಿಗಳಿಗೆ ₹15,000/- ರೂ ವಿದ್ಯಾರ್ಥಿವೇತನ ಸಹಿತ ಎಐ ಕುರಿತು ತರಬೇತಿಗೆ ಅರ್ಜಿ ಆಹ್ವಾನ!

Karnataka RTE Scheme Eligibility-ಅರ್ಜಿ ಸಲ್ಲಿಸಲು ಇಲಾಖೆಯಿಂದ ನಿಗದಿಪಡಿಸಿರುವ ಷರತ್ತುಗಳು:

RTE ಕೋಟಾದಡಿಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ದಾಖಲಿಸಲು ಈ ಕೆಳಗಿನ ನಿಯಮಗಳನ್ನು ಪಾಲನೆ ಮಾಡುವುದು ಕಡ್ಡಾಯವಾಗಿದೆ.

ಅರ್ಜಿದಾರ ಮಕ್ಕಳು ಮತ್ತು ಪೋಷಕರು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.

ಅರ್ಜಿದಾರರ ಮಕ್ಕಳ ವಯಸ್ಸು LKGಗೆ 3 ರಿಂದ 5 ವರ್ಷ ಮತ್ತು 1ನೇ ತರಗತಿಗೆ 5 ರಿಂದ 7 ವರ್ಷದ ಮಧ್ಯೆ ಇರಬೇಕು.

ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ರೂ 2 ಲಕ್ಷಕ್ಕಿಂತ ಕಡಿಮೆ ಇರಬೇಕು ಮತ್ತು BPL ಕಾರ್ಡ ಹೊಂದಿದವರಾಗಿರಬೇಕು.

ಇದನ್ನೂ ಓದಿ: Khatha Details-ಆಸ್ತಿಗಳಿಗೆ ಎ-ಖಾತಾ ಮತ್ತು ಬಿ-ಖಾತಾ ಎಂದರೇನು? ಇದರ ವ್ಯತ್ಯಾಸಗಳೇನು? ಇಲ್ಲಿದೆ ಸಂಪೂರ್ಣ ವಿವರ!

RTE Application Process -ಆಯ್ಕೆ ವಿಧಾನ:

ಒಮ್ಮೆ ಪೋಷಕರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿದ ಬಳಿಕ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಲ್ಲಿಸಿದ ಅರ್ಜಿಯನ್ನು ಆನ್ಲೈಲ್ ಮೂಲಕ ದಾಖಲಾತಿಗಳ ಪರಿಶೀಲನೆ ಮಾಡಿ ಅರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ ಬಳಿಕ ಕೊನೆಯಲ್ಲಿ ಲಾಟರಿ ವ್ಯವಸ್ಥೆಯ ಮೂಲಕ ವಿದ್ಯಾರ್ಥಿಗಳು ಆಯ್ಕೆ ಮಾಡಲಾಗುತ್ತದೆ.

Karnataka RTE Official Website-ಅರ್ಜಿಯನ್ನು ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್ ಲಿಂಕ್- CLICK HERE

- Advertisment -
LATEST ARTICLES

Related Articles

- Advertisment -

Most Popular

- Advertisment -