Sprinkler set-ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಎಲ್ಲ ರೈತರಿಗೂ ಅವಕಾಶ!

April 4, 2025 | Siddesh
Sprinkler set-ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಎಲ್ಲ ರೈತರಿಗೂ ಅವಕಾಶ!
Share Now:

ರೈತರಿಗೆ ಬೇಸಿಗೆ ಸೇರಿದಂತೆ ಇನ್ನಿತರೆ ಹಂಗಾಮಿನಲ್ಲಿ ಕಡಿಮೆ ನೀರನ್ನು ಬಳಕೆ ಮಾಡಿಕೊಂಡು ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯನ್ನು ತುಂತುರು ಮತ್ತು ಹನಿ ನೀರಾವರಿ ಘಟಕವನ್ನು(Sprinkler Set Subsidy) ಸಹಾಯಧನದಲ್ಲಿ ನೀಡಲಾಗುತ್ತಿದ್ದು ಈ ಯೋಜನೆಯ ಮಾರ್ಗಸೂಚಿಯನ್ನು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸಡಿಲಿಕೆಯನ್ನು ಮಾಡಲಾಗಿದೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ಲೇಖನದಲ್ಲಿ ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ಸ್ಪಿಂಕ್ಲರ್ ಸೆಟ್ ಪಡೆಯಲು(Sprinkler Set Subsidy Scheme) ಪ್ರಸ್ತುತ ಮಾರ್ಗಸೂಚಿಯಲ್ಲಿ ಯಾವೆಲ್ಲ ಸಡಿಲಿಕೆಯನ್ನು ಮಾಡಲಾಗಿದೆ? ಮತ್ತು ಸಹಾಯಧನದಲ್ಲಿ ಸ್ಪಿಂಕ್ಲರ್ ಸೆಟ್ ಅನ್ನು ಪಡೆಯಲು ರೈತರು ಅನುಸರಿಸಬೇಕಾದ ಕ್ರಮಗಳು ಯಾವುವು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Home Subsidy Scheme- ಸರ್ಕಾರದಿಂದ ಸರ್ವರಿಗೂ ಸೂರು ಯೋಜನೆಯಡಿ 42,435 ಮನೆ ಹಂಚಿಕೆ!

ರಾಜ್ಯ ಸರ್ಕಾರದಡಿ ಬರುವ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ(Karnataka Agriculture Deparment) ರೈತರಿಗೆ ಸಹಾಯಧನದಲ್ಲಿ ತುಂತುರು ಮತ್ತು ಹನಿ ನೀರಾವರಿ ಘಟಕಗಳನ್ನು ಪ್ರತಿ ವರ್ಷ ಅರ್ಹ ರೈತರಿಂದ ಅರ್ಜಿಯನ್ನು ಸ್ವೀಕರಿಸಿ ವಿತರಣೆ ಮಾಡಲಾಗುತ್ತದೆ ಪ್ರಸ್ತುತ ಜಾರಿಯಲ್ಲಿರುವ ನಿಯಮಗಳಲ್ಲಿ ಒಂದಿಷ್ಟು ಸಡಿಲಿಕೆಗಳನ್ನು ಮಾಡಲಾಗಿದೆ ಎಂದು ಕೃಷಿ ಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ.

Sprinkler set Subsidy Application-7 ವರ್ಷದ ನಂತರವು ಎಲ್ಲ ವರ್ಗದ ರೈತರಿಗೆ ಅದೇ ಜಮೀನಿನ ಮೇಲೆ ಸ್ಪಿಂಕ್ಲರ್ ಸೆಟ್ ಪಡೆಯಲು ಅವಕಾಶ:

ಈ ಹಿಂದೆ ಒಮ್ಮೆ ರೈತರು ತಮ್ಮ ಜಮೀನಿನ(ಪಹಣಿ/RTC) ದಾಖಲೆಗಳನ್ನು ಸಲ್ಲಿಸಿ ಒಂದು ಜಮೀನಿನ ಮೇಲೆ ಒಂದು ಬಾರಿಗೆ ಮಾತ್ರ ಸ್ಪಿಂಕ್ಲರ್ ಸೆಟ್ ಗೆ ಸಬ್ಸಿಡಿಯನ್ನು ಪಡೆಯಲು ಅವಕಾಶ ನೀಡಲಾಗಿತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರಿಗೆ ಮಾತ್ರ ಈ ನಿಯಮ ಜಾರಿಯಲ್ಲಿ ಇರಲಿಲ್ಲ ಅದರೆ ಈ ನಿಯಮಕ್ಕೆ ತಿದ್ದುಪಡಿಯನ್ನು ತರಲಾಗಿದ್ದು,

ಇನ್ನು ಮುಂದೆ ಎಲ್ಲ ವರ್ಗದ ರೈತರು ಸಹ 7 ವರ್ಷದ ಬಳಿಕೆ ಈ ಹಿಂದೆ ನೀಡಿದ ಜಮೀನಿನ ಪಹಣಿ/RTC ಅನ್ನು ಸಲ್ಲಿಸಿ ಮತ್ತೊಮ್ಮೆ ಸ್ಪಿಂಕ್ಲರ್ ಸೆಟ್/ತುಂತುರು/ಹನಿ ನೀರಾವರಿ ಘಟಕವನ್ನು ಪಡೆಯಲು ಅವಕಾಶ ನೀಡಿ ಮಾರ್ಗಸೂಚಿಯಲ್ಲಿ ಸಡಿಲಿಕೆಯನ್ನು ಮಾಡಲಾಗಿದೆ ಎಂದು ಕೃಷಿ ಸಚಿವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Amazon Today Best deals- Purchase Now

ಇದನ್ನೂ ಓದಿ: Nrega Yojana-2025: ನರೇಗಾ ಕೂಲಿ ಕಾರ್ಮಿಕರಿಗೆ ಬಂಪರ್ ಸಿಹಿ ಸುದ್ದಿ! ಕೂಲಿ ದರ ಹೆಚ್ಚಳ!

Sprinkler set Subsidy Amount Details-ಘಟಕವಾರು ಸಬ್ಸಿಡಿ ವಿವರ ಹೀಗಿದೆ:

A) ಒಂದು ಎಕರೆಗೆ:

ಗಾತ್ರ- 63 MM ಪೈಪ್
ಒಟ್ಟು ಘಟಕ ವೆಚ್ಚ- ₹14,386/-
ರೈತರ ವಂತಿಕೆ- ₹2,496/-
ಸಹಾಯಧನ ಮೊತ್ತ- ₹11,890/-

B) ಒಂದು ಹೆಕ್ಟೇರ್ ಅಂದರೆ 2.5 ಎಕರೆಗೆ:

ಗಾತ್ರ- 63 MM ಪೈಪ್
ಒಟ್ಟು ಘಟಕ ವೆಚ್ಚ- ₹23,568/-
ರೈತರ ವಂತಿಕೆ- ₹4,139/-
ಸಹಾಯಧನ ಮೊತ್ತ- ₹19,429/-

ಇದನ್ನೂ ಓದಿ: Borewell Subsidy-ಸರ್ಕಾರದಿಂದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲು 4,923 ಕೊಳವೆ ಬಾವಿ ಕೊರೆಸಲು ಅನುಮತಿ!

C) ಎರಡು ಹೆಕ್ಟೇರ್ ಅಂದರೆ 5 ಎಕರೆಗೆ:

ಗಾತ್ರ- 63 MM ಪೈಪ್
ಒಟ್ಟು ಘಟಕ ವೆಚ್ಚ- ₹38,822/-
ರೈತರ ವಂತಿಕೆ- ₹5,772/-
ಸಹಾಯಧನ ಮೊತ್ತ- ₹28,050/-

D) ಒಂದು ಹೆಕ್ಟೇರ್ ಅಂದರೆ 2.5 ಎಕರೆಗೆ:

ಗಾತ್ರ- 75 MM ಪೈಪ್
ಒಟ್ಟು ಘಟಕ ವೆಚ್ಚ- ₹26,442/-
ರೈತರ ವಂತಿಕೆ- ₹4,667/-
ಸಹಾಯಧನ ಮೊತ್ತ- ₹21,775/-

ಇದನ್ನೂ ಓದಿ: RTE Application-ಮಕ್ಕಳನ್ನು RTE ಸೀಟ್ ನಲ್ಲಿ ಶಾಲೆಯನ್ನು ದಾಖಲಿಸಲು ಅರ್ಜಿ ಸಲ್ಲಿಸಲು ಅವಕಾಶ!

E) ಎರಡು ಹೆಕ್ಟೇರ್ ಅಂದರೆ 5 ಎಕರೆಗೆ:

ಗಾತ್ರ- 75 MM ಪೈಪ್
ಒಟ್ಟು ಘಟಕ ವೆಚ್ಚ- ₹37,732/-
ರೈತರ ವಂತಿಕೆ- ₹6,541/-
ಸಹಾಯಧನ ಮೊತ್ತ- ₹31,191/-

How To Apply For Sprinkler Set Subsidy Yojana-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ರೈತರು ಈ ಕೆಳಗೆ ತಿಳಿಸಿರುವ ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹೋಬಳಿಯಲ್ಲಿರುವ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Gruhalakshmi Status-ಗೃಹಲಕ್ಷ್ಮಿ ಯೋಜನೆಯ 2 ತಿಂಗಳ ಹಣ ಬಿಡುಗಡೆ!

Documents For Sprinkler Set Subsidy-ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲಾತಿಗಳೇನು?

1) ರೈತರ ಆಧಾರ್ ಕಾರ್ಡ ಪ್ರತಿ
2) ಪೋಟೋ
3) ಬ್ಯಾಂಕ್ ಪಾಸ್ ಬುಕ್ ಪ್ರತಿ
4) ಜಮೀನಿನ ಪಹಣಿ/ಊತಾರ್/RTC
5) ಪಹಣಿಯಲ್ಲಿ ಜಂಟಿ ಮಾಲೀಕರಿದ್ದಲ್ಲಿ ಒಪ್ಪಿಗೆ ಪ್ರಮಾಣ ಪತ್ರ
6) ರೇಶನ್ ಕಾರ್ಡ ಪ್ರತಿ
7) 20 ರೂ ಬಾಂಡ್ ಪೇಪರ್

Sprinkler Set Application Process-ಅರ್ಜಿ ವಿಲೇವಾರಿ ಪ್ರಕ್ರಿಯೆ:

ಒಮ್ಮೆ ರೈತರು ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಿದ ಬಳಿಕ ಕೃಷಿ ಇಲಾಖೆ ಅಧಿಕಾರಿಗಳು ದಾಖಲಾತಿ ಪರಿಶೀಲನೆಯನ್ನು ಕೈಗೊಂಡು ನಿಮ್ಮ ಅರ್ಜಿಯನ್ನು ಕೆ-ಕಿಸಾನ್ ತಂತ್ರಾಂಶದಲ್ಲಿ ಅಪ್ಲೋಡ್ ಮಾಡುತ್ತಾರೆ ನಂತರ ರೈತರ ಅರ್ಜಿ ಸಲ್ಲಿಕೆಯ ಜೇಷ್ಟತೆ ಆಧಾರದ ಮೇಲೆ ಅರ್ಹ ರೈತರಿಗೆ ರೈತರ ವಂತಿಕೆಯ ಹಣವನ್ನು ಪೈಪ್ ಸರಬರಾಜು ಕಂಪನಿಗೆ ವರ್ಗಾವಣೆ ಮಾಡಲು ತಿಳಿಸಿಲಾಗುತ್ತದೆ ಹಣ ವರ್ಗಾವಣೆ ಅದ ಬಳಿಕ ರೈತರಿಗೆ ಸ್ಪಿಂಕ್ಲರ್ ಸೆಟ್ ಮತ್ತು ಪೈಪ್ ಅನ್ನು ವಿತರಣೆ ಮಾಡಲಾಗುತ್ತದೆ.

Karnataka Agriculture Department Official Website-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಕೃಷಿ ಇಲಾಖೆಯ ಅಧಿಕೃತ ಜಾಲತಾಣ- Click here

Share Now: