HomeGovt SchemesBest insurance plan-2024: ಪೋಟೊಗ್ರಾಫರ್, ಬೀದಿಬದಿ ವ್ಯಾಪಾರಿ,ಹಮಾಲರು ಸೇರಿದಂತೆ 20 ವರ್ಗದ ಅಸಂಘಟಿತ ಕಾರ್ಮಿಕರಿಗೆ 1.00...

Best insurance plan-2024: ಪೋಟೊಗ್ರಾಫರ್, ಬೀದಿಬದಿ ವ್ಯಾಪಾರಿ,ಹಮಾಲರು ಸೇರಿದಂತೆ 20 ವರ್ಗದ ಅಸಂಘಟಿತ ಕಾರ್ಮಿಕರಿಗೆ 1.00 ಲಕ್ಷ ಅಪಘಾತ ವಿಮೆ ಪರಿಹಾರಕ್ಕೆ ಅರ್ಜಿ!

ಪೋಟೊಗ್ರಾಫರ್, ಬೀದಿಬದಿ ವ್ಯಾಪಾರಿ,ಹಮಾಲರು ಸೇರಿದಂತೆ 20 ವರ್ಗದ ಅಸಂಘಟಿತ ಕಾರ್ಮಿಕರಿಗೆ 1.00 ಲಕ್ಷದವರೆಗೆ ಅಪಘಾತ ವಿಮೆ(Accidental insurance) ಪ್ರಯೋಜನ ಪಡೆಯಲು ನೂತನ ಯೋಜನೆಯನ್ನು ರಾಜ್ಯ ಸರಕಾರದಿಂದ ಜಾರಿಗೆ(insurance plan) ತರಲಾಗಿದ್ದು, ಈ ಯೋಜನೆಯ ಕುರಿತು ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ‘ಅಂಬೇಡ್ಕರ್ ಕಾರ್ಮಿಕರ ಸಹಾಯ ಹಸ್ತ ಯೋಜನೆ”(best health insurance) ಯಲ್ಲಿ ನೋಂದಾಯಿತರಾದ 20 ವರ್ಗಗಳ ಅಸಂಘಟಿತ ಕಾರ್ಮಿಕರಾದ ‘ಹಮಾಲರು, ಚಿಂದಿ ಆಯುವವರು. ಮನೆಗೆಲಸದವರು. ಟೈಲರ್, ಅಗಸರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಭಟ್ಟಿ ಕಾರ್ಮಿಕರು, ಸಿನಿ ಕಾರ್ಮಿಕರು, ನೇಕಾರರು,

ಬೀದಿಬದಿ ವ್ಯಾಪಾರಿಗಳು, ಹೋಟೆಲ್ ಕಾರ್ಮಿಕರು, ಫೋಟೋಗ್ರಾಫರ್‌ಗಳು, ಸ್ವತಂತ್ರ ಲೇಖನ ಬರಹಗಾರರು, ಕಲ್ಯಾಣ ಮಂಟಪ/ಸಭಾ ಭವನ/ ಟೆಂಟ್/ ಪೆಂಡಾಲ್‌ಗಳ ಕೆಲಸ ನಿರ್ವಹಿಸುವ ಎಲ್ಲಾ ಕಾರ್ಮಿಕರು, ಬೀಡಿ ಕಾರ್ಮಿಕರು, ಅಸಂಘಟಿತ ವಿಕಲಚೇತನ ಕಾರ್ಮಿಕರು ಹಾಗೂ ಅಲೆಮಾರಿ ಪಂಗಡದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯವನ್ನು ಒದಗಿಸಲು ನೂತನ ಯೋಜನೆ ಜಾರಿಗೆ ತರಲಾಗಿದೆ.

ಇದನ್ನೂ ಓದಿ: Parihara farmer list-2024: ಹಳ್ಳಿವಾರು ಬೆಳೆ ಪರಿಹಾರ ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆ!

Karmika sahaya asta yojane-ಅಂಬೇಡ್ಕರ್ ಕಾರ್ಮಿಕರ ಸಹಾಯ ಹಸ್ತ ಯೋಜನೆ ಉದ್ದೇಶ:

ಅಸಂಘಟಿತ ವಲಯದ ಕಾರ್ಮಿಕರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ದುರ್ಬಲರಾಗಿದ್ದು, ಸಂಘಟಿತ ಕಾರ್ಮಿಕರಿಗೆ ದೊರಕುವ ಕಾನೂನಾತ್ಮಕ ಸೌಲಭ್ಯಗಳಿಂದ ವಂಚಿತರಾಗಿರುತ್ತಾರೆ. ಇಂತಹ ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 2008ರಲ್ಲಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆಯನ್ನು ರೂಪಿಸಿದ್ದು, ಈ ಕಾಯ್ದೆಗೆ 2009ರಲ್ಲಿ ಕರ್ನಾಟಕ ನಿಯಮಗಳು ರೂಪಿತವಾಗಿದ್ದು, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಕಾರ್ಯರೂಪಗೊಂಡಿರುತ್ತದೆ.

20 ವರ್ಗಗಳ ಅಸಂಘಟಿತ ಕಾರ್ಮಿಕರಾದ “ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಟೈಲ‌ರ್ಗಗಳು, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಭಟ್ಟಿ ಕಾರ್ಮಿಕರು, ಸಿನಿ ಕಾರ್ಮಿಕರು, ನೇಕಾರರು, ಬೀದಿಬದಿ ವ್ಯಾಪಾರಿಗಳು, ಹೋಟೆಲ್ ಕಾರ್ಮಿಕರು, ಫೊಟೋಗ್ರಾಫರ್‌ಗಳು, ಸ್ವತಂತ್ರ ಲೇಖನ ಬರಹಗಾರರು, ಕಲ್ಯಾಣ ಮಂಟಪ/ಸಭಾ ಭವನ/ ಟೆಂಟ್/ ಪೆಂಡಾಲ್‌ಗಳ

ಕೆಲಸ ನಿರ್ವಹಿಸುವ ಎಲ್ಲಾ ಕಾರ್ಮಿಕರು, ಬೀಡಿ ಕಾರ್ಮಿಕರು, ಅಸಂಘಟಿತ ವಿಕಲಚೇತನ ಕಾರ್ಮಿಕರು ಮತ್ತು ಅಲೆಮಾರಿ ಪಂಗಡದ ಕಾರ್ಮಿಕರುಗಳು ಅಪಘಾತದಿಂದ ಮರಣ/ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ್ದಲ್ಲಿ ಅವರು ಹಾಗೂ ಅವರ ಅವಲಂಬಿತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಅಂತಹ ಸಂದರ್ಭದಲ್ಲಿ ಕಾರ್ಮಿಕರ/ಅವರ ಅವಲಂಬಿತರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಸರ್ಕಾರದ ಹೊಣೆಗಾರಿಕೆಯಾಗಿದ್ದು, ಸೂಕ್ತ ಪರಿಹಾರ ಸೌಲಭ್ಯ ಒದಗಿಸುವ ಮೂಲಕ ಸಂಕಷ್ಟದಿಂದ ಮುಕ್ತಗೊಳಿಸಲು ಉದ್ದೇಶಿಸಲಾಗಿದೆ.

ಆದ್ದರಿಂದ, ಮೇಲ್ಕಂಡ 20 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಅಪಘಾತ ಪರಿಹಾರ ಸೌಲಭ್ಯ ಹಾಗೂ ಸಹಜ ಮರಣ/ಅಂತ್ಯಕ್ರಿಯೆ ಧನ ಸಹಾಯ ಒದಗಿಸಲು ಈ ಕೆಳಕಂಡಂತೆ ಯೋಜನೆಯನ್ನು ರೂಪಿಸಲಾಗಿದೆ.

ಇದನ್ನೂ ಓದಿ: Anganawadi job notification-2024: ಅಂಗನವಾಡಿ ಕೇಂದ್ರಗಳಲ್ಲಿ 552 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ನೇಮಕಾತಿ!

Karmika elake-ಈ ಯೋಜನೆಯ ಪ್ರಯೋಜನ ಪಡೆಯಲು ಇರಬೇಕಾದ ಅರ್ಹತೆಗಳು:-

1) ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
2) ಅರ್ಜಿದಾರರು 18 ರಿಂದ 60 ವರ್ಷದವರಾಗಿರಬೇಕು.
3) ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಡಿ ನೋಂದಾಯಿತರಾಗಿ ಸಂಬಂಧಿಸಿದ ವೃತ್ತಿಯಲ್ಲಿ ಸಕ್ರಿಯನಾಗಿರಬೇಕು.
4) ಆದಾಯ ತೆರಿಗೆ ಪಾವತಿದಾರರಾಗಿರಬಾರದು.
5) ಇ.ಎಸ್.ಐ ಮತ್ತು ಇ.ಪಿ.ಎಫ್ ಸೌಲಭ್ಯ ಹೊಂದಿರಬಾರದು

Insurance yojana benefits-ಯೋಜನೆಯ ಸೌಲಭ್ಯಗಳು:

ಈ ಯೋಜನೆಯಡಿ ನೋಂದಾಯಿತ ಕಾರ್ಮಿಕನು ಈ ಕೆಳಕಂಡ ಸೌಲಭ್ಯಗಳಿಗೆ ಅರ್ಹನಾಗುತ್ತಾನೆ.

i) ಅಪಘಾತ ಪರಿಹಾರ ಸೌಲಭ್ಯ.
1) ಮರಣ ಪ್ರಕರಣ – ರೂ. 1.00 ಲಕ್ಷಗಳ ಅಪಘಾತ ಪರಿಹಾರ
2) ಅಪಘಾತದಿಂದುಟಾಗುವ ಸಂಪೂರ್ಣ ಶಾಶ್ವತ/ಭಾಗಶಃ ದುರ್ಬಲತೆ ಪರಿಹಾರ (ಶೇಕಡವಾರು ದುರ್ಬಲತೆ ಆಧಾರದ ಮೇಲೆ) – ರೂ.1.00 ಲಕ್ಷಗಳವರೆಗೆ ಪರಿಹಾರ.
3) ಆಸ್ಪತ್ರೆ ವೆಚ್ಚ ಮರುಪಾವತಿ – ರೂ.50,000/-ದವರೆಗೆ.

ವಿಶೇಷ ಸೂಚನೆ: ಮೇಲ್ಕಂಡ ಎಲ್ಲಾ ಸೌಲಭ್ಯಗಳು “ಕರ್ತವ್ಯದಲ್ಲಿರುವಾಗ ಮತ್ತು ಕರ್ತವ್ಯದಲ್ಲಿ ಇರದೇ ಇದ್ದಾಗಲೂ ಸಂಭವಿಸುವ ಅಪಘಾತ” ಪ್ರಕರಣಗಳಿಗೆ ಅನ್ವಯಿಸುತ್ತವೆ.

ಇದನ್ನೂ ಓದಿ: GKVK krishi mela-2024: ಬೆಂಗಳೂರು ಕೃಷಿ ಮೇಳಕ್ಕೆ ದಿನಾಂಕ ನಿಗದಿ! ಇಲ್ಲಿದೆ ಮೇಳದ ವಿಶೇಷತೆಗಳ ವಿವರ!

ii) ಸಹಜ ಮರಣ ಪರಿಹಾರ (ಅಂತ್ಯಕ್ರಿಯೆ ಧನಸಹಾಯ):

ನೋಂದಾಯಿತ ಫಲಾನುಭವಿಯು ವಯೋಸಹಜ/ ಖಾಯಿಲೆ/ ಅಕಾಲಿಕ ಅಥವಾ ಇನ್ನಿತರೆ ಕಾರಣಗಳಿಂದ ಮರಣ ಹೊಂದಿದಲ್ಲಿ ಫಲಾನುಭವಿಯ ಕುಟುಂಬದವರಿಗೆ
ಅಂತ್ಯಕ್ರಿಯೆ ವೆಚ್ಚಕ್ಕಾಗಿ ರೂ.10,000/-ಗಳ ಧನ ಸಹಾಯ ಸೌಲಭ್ಯ.

ವಿಶೇಷ ಸೂಚನೆ: ಮೇಲಿನ 2 ಸೌಲಭ್ಯಗಳನ್ನು ಕ್ಷೇಮ್ ಮಾಡುವ ಸಂದರ್ಭದಲ್ಲಿ ಕಾರ್ಮಿಕನು ನೋಂದಾಯಿತ ವೃತ್ತಿಯಲ್ಲಿ ಸಕ್ರಿಯನಾಗಿರಬೇಕು.

Insurance claim method- ಕ್ಷೇಮ್ ವಿಧಾನ:

ಅರ್ಜಿದಾರ/ ಫಲಾನುಭವಿಯು ಅಪಘಾತ ಪರಿಹಾರಕ್ಕಾಗಿ ಅಪಘಾತ ಸಂಭವಿಸಿದ 1 ವರ್ಷದೊಳಗೆ ಹಾಗೂ ಸಹಜ ಮರಣ ಪ್ರಕರಣಗಳಲ್ಲಿ ಮರಣ ದಿನಾಂಕದಿಂದ 6 ತಿಂಗಳ ಅವಧಿಯೊಳಗೆ ನಿಗದಿತ ನಮೂನೆಯಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.

ಅಪಘಾತ ಪ್ರಕರಣಗಳಲ್ಲಿ ಈ ಕೆಳಕಂಡ ದಾಖಲೆಗಳನ್ನು ಸಲ್ಲಿಸುವುದು:

1)ನೋಂದಾಯಿತ ಗುರುತಿನ ಚೀಟಿ.
2) ನಿಗದಿತ ನಮೂನೆಯಲ್ಲಿ ಉದ್ಯೋಗ ಪ್ರಮಾಣ ಪತ್ರ (ಮಾಲೀಕರಲ್ಲಿ ಕೆಲಸ ನಿರ್ವಹಿಸುತ್ತಿದ್ದಲ್ಲಿ)
3) ಪ್ರಥಮ ವರ್ತಮಾನ ವರದಿ ಪ್ರತಿ,
4) ಮರಣ ಪ್ರಮಾಣ ಪತ್ರ, (ಮರಣ ಪ್ರಕರಣಗಳಲ್ಲಿ)
5) ಮರಣೋತ್ತರ ಪರೀಕ್ಷಾ ವರದಿ,
6) ಆಸ್ಪತ್ರೆಯ ಮೂಲ ಬಿಲ್‌ಗಳು, ಆಸ್ಪತ್ರೆ ವೆಚ್ಚ ಮರುಪಾವತಿ ಪ್ರಕರಣಗಳಲ್ಲಿ
7) ಮೂಲ ಡಿಸ್ಮಾರ್ಜ್ ಸಾರಾಂಶ,
8) ಸರ್ಕಾರಿ ವೈದ್ಯಕೀಯ ದುರ್ಬಲತೆ ಪ್ರಮಾಣ ಪತ್ರ (ದುರ್ಬಲತೆ ಪ್ರಕರಣಗಳಲ್ಲಿ).
9) ಕಂದಾಯ ಇಲಾಖೆಯ ವಂಶ ವೃಕ್ಷ ಪ್ರಮಾಣ ಪತ್ರ, (ಮರಣ ಪ್ರಕರಣಗಳಲ್ಲಿ ಮಾತ್ರ)
10) ಪಡಿತರ ಚೀಟಿ (ಲಭ್ಯವಿದ್ದಲ್ಲಿ),
11) ಫಲಾನುಭವಿಯ ಆಧಾರ್ ಕಾರ್ಡ್ ನ ಪ್ರತಿ,
12) ನಾಮನಿರ್ದೇಶಿತರ/ ಫಲಾನುಭವಿಯ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ,

ಈ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಉಪಯುಕ್ತ ಕೊಂಡಿಗಳು:

Guideline-ಯೋಜನೆಯ ಅಧಿಕೃತ ಮಾರ್ಗಸೂಚಿ: Download Now
Website link-ವೆಬ್ಸೈಟ್ ಲಿಂಕ್: Click here
Helpline-ಸಹಾಯವಾಣಿ: 155214 (24×7 ಸೇವೆ)
Whatsapp-ವಾಟ್ಸಾಪ್ / ಟೆಲಿಗ್ರಾಮ್ : +91 9333333684

Most Popular

Latest Articles

Related Articles