Scholarship Application-ಪದವಿಪೂರ್ವ ತರಗತಿ ವಿದ್ಯಾರ್ಥಿಗಳಿಗೆ ₹60,000 ವಿದ್ಯಾರ್ಥಿ ವೇತನ ಪಡೆಯಲು ಇಲ್ಲಿದೆ ಅವಕಾಶ!

April 24, 2026 | Siddesh
Scholarship Application-ಪದವಿಪೂರ್ವ ತರಗತಿ ವಿದ್ಯಾರ್ಥಿಗಳಿಗೆ ₹60,000 ವಿದ್ಯಾರ್ಥಿ ವೇತನ ಪಡೆಯಲು ಇಲ್ಲಿದೆ ಅವಕಾಶ!
Share Now:

2025-26 ನೇ ಸಾಲಿನ ವಿವೋ ಕನ್ಯಾ ಗ್ಯಾನ್ ವಿದ್ಯಾರ್ಥಿ ವೇತನ(Scholarship Application) ಕಾರ್ಯಕ್ರಮದ ವತಿಯಿಂದ ಪದವಿಪೂರ್ವ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೂರು ವರ್ಷಗಳವರೆಗೆ ₹60,000 ವಿದ್ಯಾರ್ಥಿ ವೇತನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಯುವತಿಯರಿಗೆ(Scholarship Scheme) ಅವರ ಮುಂದಿನ ಶಿಕ್ಷಣವನ್ನು ಮುಂದುವರಿಸಿ ವೃತ್ತಿ ಜೀವನವನ್ನು ಮುಂದುವರಿಸಲು ಆರ್ಥಿಕ ನೆರವನ್ನು ನೀಡಲು ಮೊದಲ ಹಾಗೂ ಎರಡನೇ ವರ್ಷದ ಪದವಿ ಪೂರ್ವ ಕೋಶಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದ ಅಡಿಯಲ್ಲಿ ಅವಕಾಶವಿರುತ್ತದೆ.

ಇದನ್ನೂ ಓದಿ: Bannerghatta Trip-ಕೆ.ಎಸ್.ಟಿ.ಡಿ.ಸಿ ಯಿಂದ ಬನ್ನೇರುಘಟ್ಟ ಪ್ರವಾಸಕ್ಕೆ ವಿಶೇಷ ಪ್ಯಾಕೇಜ್ ಬಿಡುಗಡೆ!

ವಿದ್ಯಾರ್ಥಿ ವೇತನವನ್ನು ಪಡೆಯಲು ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಯಾವುದು ಅಗತ್ಯ ದಾಖಲಾತಿಗಳ ಹಾವು ಆನ್ಲೈನ್ ಮೂಲಕ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಇನ್ನಿತರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Scholarship Last Date-ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 31 ಮಾರ್ಚ್ 2026

Documents For Scholarship Application-ಅರ್ಜಿ ಸಲ್ಲಿಸಲು ದಾಖಲಾತಿ ಗಳಾವುವು?

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರವೇಶ ಪತ್ರ ಹಿಂದಿನ ತರಗತಿ ಅಂಕಪಟ್ಟಿ
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಪುಸ್ತಕ
  • ಮೊಬೈಲ್ ನಂಬರ್

ಇದನ್ನೂ ಓದಿ: Free Poulty Farming Training-ಉಚಿತ ಕೋಳಿ ಮತ್ತು ಜೇನು ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ!

Scholarship Amount-ಈ ಕಾರ್ಯಕ್ರಮದ ಅಡಿಯಲ್ಲಿ ಎಷ್ಟು ವಿದ್ಯಾರ್ಥಿ ವೇತನವನ್ನು ಪಡೆಯಬಹುದು?

ವಿವೊ ಕನ್ಯಾ ಗ್ಯಾನ್ ವಿದ್ಯಾರ್ಥಿ ವೇತನದ ಅಡಿಯಲ್ಲಿ ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಮೂರು ವರ್ಷದವರೆಗೆ ವರ್ಷಕ್ಕೆ ₹60,000 ವಿದ್ಯಾರ್ಥಿವೇತನವನ್ನು ಪಡೆಯಲು ಅವಕಾಶವಿರುತ್ತದೆ.

Scholarship Eligibility-ವಿದ್ಯಾರ್ಥಿ ವೇತನ ಪಡೆಯಲು ಯಾರೆಲ್ಲ ಅರ್ಹರಿರುತ್ತಾರೆ?

ವಿದ್ಯಾರ್ಥಿಯು ಭಾರತದ ಕಾಯಂ ನಿವಾಸಿ ಆಗಿರಬೇಕು.
B.Tech / BE, B.Sc, BCA, MBBS ಪದವಿಯಲ್ಲಿ ಮೊದಲ ಅಥವಾ ಎರಡನೇ ವರ್ಷಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ಮಿತಿಯು 5 ಲಕ್ಷದ ಒಳಗಿರಬೇಕು.
ವಿದ್ಯಾರ್ಥಿಯು 10ನೇ ತರಗತಿ ಹಾಗೂ 12ನೇ ತರಗತಿಯಲ್ಲಿ ಕನಿಷ್ಠ 70% ಅಂಕಗಳನ್ನು ಪಡೆದಿರಬೇಕು.
ಬಡ್ಡಿ4ಸ್ಟಡಿ ಅಥವಾ ವಿವೋ ಇಂಡಿಯಾ ಉದ್ಯೋಗಿಗಳ ಮಕ್ಕಳು ಅನರ್ಹರು.

ಇದನ್ನೂ ಓದಿ: AO and AAO Recruitment-ಕೃಷಿ ಇಲಾಖೆಯಲ್ಲಿ ಬೃಹತ್ ನೇಮಕಾತಿ: 600ಕ್ಕೂ ಹೆಚ್ಚು ಹುದ್ದೆಗಳಿಗೆ ಕೆಇಎಯಿಂದ ಅರ್ಜಿ ಆಹ್ವಾನ!

Scholarship Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ?

ವಿವೋ ಕನ್ಯ ಗ್ಯಾನ್ ವಿದ್ಯಾರ್ಥಿ ವೇತನದ ಅಡಿಯಲ್ಲಿ ವಿದ್ಯಾರ್ಥಿ ವೇತನವನ್ನು ಪಡೆಯಲು ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

Step-1: ಅರ್ಹ ಅರ್ಜಿದಾರರು ಮೊದಲ ಹಂತದಲ್ಲಿ ಈ Scholarship Online Application ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

Scholarship Online Application

Step-2: ಇದಾದ ಬಳಿಕ ಈ ಪೇಜ್ ನಲ್ಲಿರುವ “Apply Now” ಬಟನ್ ಮೇಲೆ ಕ್ಲಿಕ್ ಮಾಡಿ. “Create an Account” ಬಟನ್ ಮೇಲೆ ಪ್ರೆಸ್ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ ಹೊಸ ಖಾತೆಯನ್ನು ರಚನೆ ಮಾಡಿಕೊಳ್ಳಿ.

Step-3: ಬಳಿಕ “Login” ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗಬೇಕು. ಲಾಗಿನ್ ಆದ ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.

Step-4: ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ, ಬೇಕಾದ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಯಲ್ಲಿ “Submit” ಬಟನ್ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: