Bhagyalaxmi Bond-ಭಾಗ್ಯಲಕ್ಷ್ಮಿ ಬಾಂಡ್ 18 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ ₹1 ಲಕ್ಷ ಹಣ ಜಮಾ! ಯಾರಿಗೆಲ್ಲ ಸಿಗಲಿದೆ ಈ ಸೌಲಭ್ಯ?

March 6, 2025 | Siddesh
Bhagyalaxmi Bond-ಭಾಗ್ಯಲಕ್ಷ್ಮಿ ಬಾಂಡ್ 18 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ ₹1 ಲಕ್ಷ ಹಣ ಜಮಾ! ಯಾರಿಗೆಲ್ಲ ಸಿಗಲಿದೆ ಈ ಸೌಲಭ್ಯ?
Share Now:

2006-07 ನೇ ಸಾಲಿನಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಡಿ(Bhagyalaxmi Scheme) ಪ್ರಯೋಜನವನ್ನು ಪಡೆಯಲು ಬಾಂಡ್ ಅನ್ನು ಖರೀದಿ ಮಾಡಿದ ಅರ್ಹ ಫಲಾನುಭವಿ ಹೆಣ್ಣು ಮಕ್ಕಳಿಗೆ ತಮ್ಮ ಮೆಚ್ಯುರಿಟಿ ಹಣವನ್ನು ನೇರ ನಗದು ವರ್ಗಾವಣೆ(investment plans) ಮೂಲಕ ಜಮಾ ಮಾಡುವ ಕಾರ್ಯವನ್ನು ಈಗಾಗಲೇ ರಾಜ್ಯ ಸರಕಾರದಿಂದ ಆರಂಭಿಸಲಾಗಿದೆ.

ಭಾಗ್ಯಲಕ್ಷ್ಮಿ ಯೋಜನೆಯಡಿ(Bhagyalaxmi Yojane)ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಸಂಗ್ರಹಣೆ ಮಾಡಿ ಈ ಯೋಜನೆಯ ಅನುಷ್ಥಾನವನ್ನು ಸಮಪರ್ಕವಾಗಿ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ವಹಿಸಲಾಗಿತ್ತು ಈ ನಿಟ್ಟಿನಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ಅನ್ನು ಮಾಡಿಸಿದ ಹೆಣ್ಣು ಮಕ್ಕಳ ಖಾತೆಗೆ ಇಲಾಖೆಯಿಂದ ನೇರ ನಗದು ವರ್ಗಾವಣೆ ಮೂಲಕ ₹1 ಮೆಚ್ಯುರಿಟಿ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂದು ಇಲಾಖೆಯ ಜಂಟಿ ನಿರ್ದೇಶಕರು ಮಾಹಿತಿ ತಿಳಿಸಿದ್ದಾರೆ.

ಭಾಗ್ಯಲಕ್ಷ್ಮಿ ಯೋಜನೆಯಡಿ ಬಾಂಡ್ ಪಡೆದಿರುವ ಯಾವೆಲ್ಲ ವರ್ಷದ(education savings plan)ಫಲಾನುಭವಿಗಳಿಗೆ ಹಣವನ್ನು ಜಮಾ ಮಾಡಲಾಗಿದೆ? ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯ ನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರದಿಂದ ರೂಪಿಸಿರುವ ಮಾರ್ಗಸೂಚಿಗಳಾವುವು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Property Registration-ಆಸ್ತಿ ನೋಂದಣಿ ನಿಯಮದಲ್ಲಿ ಮಹತ್ವದ ಬದಲಾವಣೆ!

Bhagyalakshmi bond Amount-2.3 ಲಕ್ಷ ಫಲಾನುಭವಿಗಳಿಗೆ ₹1 ರೂ ಲಕ್ಷ ಹಣ:

2006-07 ನೇ ಸಾಲಿನಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ಮಾಡಿಸಿದ ಒಟ್ಟು 2.3 ಲಕ್ಷ ಹೆಣ್ಣು ಮಕ್ಕಳಿಗೆ 18 ವರ್ಷ ತುಂಬಿದ್ದು ಇಂತಹ ಫಲಾನುಭವಿಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಭಾಗ್ಯಲಕ್ಷ್ಮಿ ಬಾಂಡ್ ನ(savings plan)invest ₹1 ರೂ ಮೆಚ್ಯುರಿಟಿ ಹಣವನ್ನು ಜಮಾ ಮಾಡುವ ಕಾರ್ಯಕ್ಕೆ ಚಾಲನೆಯನ್ನು ನೀಡಲಾಗಿದ್ದು ಇದುವರೆಗೆ ಶೇ 10% ಹೆಣ್ಣು ಮಕ್ಕಳ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗಿದ್ದು ಬಾಕಿ ಉಳಿದವರಿಗೆ ಹಂತ ಹಂತವಾಗಿ ಮೆಚ್ಯುರಿಟಿ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಇಲಾಖೆಯ ಜಂಟಿ ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದಾರೆ.

Bhagyalakshmi bond-ಹೆಣ್ಣು ಮಗುವಿಗೆ ಪ್ರೋತ್ಸಾಹ ನೀಡಲು ಈ ಯೋಜನೆ ಜಾರಿ:

ಸಮಾಜದಲ್ಲಿ ಹೆಣ್ಣು ಮಗುವಿಗೆ ಉತೇಜನವನ್ನು ನೀಡಲು ಕರ್ನಾಟಕ ಸರಕಾರದಿಂದ 2006 ರಲ್ಲಿ ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದಾಗ ಈ ಯೋಜನೆಯನ್ನು ಮೊಟ್ಟ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ಜಾರಿಗೆ ತರಲಾಗಿದೆ.

ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ವಾಸಿಸುವ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಅರ್ಹ ಕುಟುಂಬದ ಹೆಣ್ಣು ಮಗುವಿಗೆ 18 ವರ್ಷ ತುಂಬಿದ ಸಮಯದಲ್ಲಿ ಆರ್ಥಿಕವಾಗಿ ನೆರವನ್ನು ಒದಗಿಸಲು ಭಾಗ್ಯಲಕ್ಷ್ಮಿ ಯೋಜನೆಯಡಿ ಭಾಗ್ಯಲಕ್ಷ್ಮಿ ಬಾಂಡ್ ಅನ್ನು 2006 ರಲ್ಲಿ ಮಾಡಿಸಲು ಅವಕಾಶ ನೀಡಲಾಗಿತ್ತು ಈ ನಿಟ್ಟಿನಲ್ಲಿ ಆ ಸಮಯದಲ್ಲಿ ಬಾಂಡ್ ಮಾಡಿಸಿದ ಸಾರ್ವಜನಿಕರು ಈ ವರ್ಷ ಅಂದರೆ 2025 ರಲ್ಲಿ ₹1 ಲಕ್ಷ ಮೆಚ್ಯುರಿಟಿ ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ: LPG Cylinder Price-ಈ ತಿಂಗಳಿನಿಂದ ಎಲ್ ಪಿ ಜಿ ಸಿಲಿಂಡರ್ ದರದಲ್ಲಿ ಏರಿಕೆ!

Bhagyalaxmi yojane

ಭಾಗ್ಯಲಕ್ಷ್ಮಿ ಬಾಂಡ್ 18 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ ₹1 ಲಕ್ಷ ಹಣ ಜಮಾ! ಯಾರಿಗೆಲ್ಲ ಸಿಗಲಿದೆ ಈ ಸೌಲಭ್ಯ?

2006 ರಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಡಿ ನಿಗದಿತ ಶುಲ್ಕವನ್ನು ಪಾವತಿ ಮಾಡಿ ಹೆಣ್ಣು ಮಗುವಿನ ಹೆಸರಿಗೆ ಭಾಗ್ಯಲಕ್ಷ್ಮಿ ಬಾಂಡ್ ಅನ್ನು ಮಾಡಿಸಿದ ಎಲ್ಲಾ ಫಲಾನುಭವಿಗಳು ಪ್ರಸ್ತುತ 18 ವರ್ಷ ತುಂಬಿದ ಹೆಣ್ಣು ಮಕ್ಕಳು ರೂ ₹1 ಲಕ್ಷ ಮೆಚ್ಯುರಿಟಿ ಹಣವನ್ನು ಪಡೆಯಬಹುದು.

Sukanya samriddhi yojana-ಭಾಗ್ಯಲಕ್ಷ್ಮಿ ಯೋಜನೆಯನ್ನು ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ವಿಲೀನ ಮಾಡಲಾಗಿದೆ:

2006 ರಲ್ಲಿ LIC ಯ ಸಹಯೋಗದಲ್ಲಿ ಸರಕಾರವು ಜಾರಿಗೆ ತಂದ ಭಾಗ್ಯಲಕ್ಷ್ಮಿ ಯೋಜನೆಯನ್ನು 2020-21 ನೇ ಸಾಲಿನಲ್ಲಿ ಅಂಚೆ ಇಲಾಖೆಯ ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ವಿಲೀನವನ್ನು ಮಾಡಲು ಅಧಿಕೃತವಾಗಿ ನಿರ್ಧಾರವನ್ನು ಕೈಗೊಳ್ಳಲಾಗಿದ್ದು ಪ್ರಸ್ತುತ ಭಾಗ್ಯಲಕ್ಷ್ಮಿ ಯೋಜನೆ ಸ್ಥಗಿತವಾಗಿ ಸುಕನ್ಯಾ ಸಮೃದ್ದಿ ಯೋಜನೆ ಹೆಸರಿನಲ್ಲಿ ಅನುಷ್ಥಾನವಾಗುತ್ತಿದೆ.

ಇದನ್ನೂ ಓದಿ: Property Documents-ಜಿಲ್ಲಾವಾರು ಅಧಿಕೃತ ಮತ್ತು ಅನಧಿಕೃತ ಆಸ್ತಿಗಳ ವಿವರ ಬಿಡುಗಡೆ!

Bhagyalakshmi Bond Status-ಭಾಗ್ಯಲಕ್ಷ್ಮಿ ಯೋಜನೆಯ ಅರ್ಹ ಫಲಾನುಭವಿ ವಿವರ ಚೆಕ್ ಮಾಡುವ ವಿಧಾನ:

ಸಾರ್ವಜನಿಕರು ಭಾಗ್ಯಲಕ್ಷ್ಮಿ ಯೋಜನೆಯ ಅರ್ಹ ಫಲಾನುಭವಿ ಪಟ್ಟಿಯನ್ನು ಪಡೆಯಲು ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಬೇಕು.

Step-1: ಮೊದಲಿಗೆ ಈ Bhagyalakshmi Bond Status Check ಲಿಂಕ್ ಮೇಲೆ ಕ್ಲಿಕ್ ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇಲಾಕೆಯ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ.

ಇದನ್ನೂ ಓದಿ: E-Swathu Download-ಉಚಿತವಾಗಿ ನಿಮ್ಮ ಆಸ್ತಿಯ ಇ-ಸ್ವತ್ತಿನ ವಿವರ ಪಡೆಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

Step-2: ಜಾಲತಾಣವನ್ನು ಪ್ರವೇಶ ಮಾಡಿದ ನಂತರ ಇಲ್ಲಿ ಆನ್ಲೈನ್ ಸೇವೆಗಳು ವಿಭಾಗದಲ್ಲಿ ಕಾಣಿಸುವ "ಭಾಗ್ಯಲಕ್ಷ್ಮಿ ಯೋಜನೆ" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ತದನಂತರ ಈ ಪೇಜ್ ನಲ್ಲಿ" Quick Search" ಬಟನ್ ಮೇಲೆ ಕ್ಲಿಕ್ ಮಾಡಿ "Multi Search" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Bhagyalaxmi scheme

Step-3: ಬಳಿಕ ಈ ಪುಟದಲ್ಲಿ ನಿಮ್ಮ ಜಿಲ್ಲೆ, Project- ಭಾಗ್ಯಲಕ್ಷ್ಮಿ, Circle, Name, ಹುಟ್ಟಿದ ದಿನಾಂಕ(DOB), ಇನ್ನಿತರ ವಿವರವನ್ನು ಭರ್ತಿ ಮಾಡಿ "Submit" ಬಟನ್ ಮೇಲೆ ಕ್ಲಿಕ್ ಮಾಡಿದರೆ ಅರ್ಹ ಫಲಾನುಭವಿ ವಿವರವನ್ನು ಚೆಕ್ ಮಾಡಿಕೊಳ್ಳಬಹುದು.

Bhagyalaxmi Bond scheme

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: