Bhu Odetana Yojana-ಭೂ ಒಡೆತನ ಯೋಜನೆಯಡಿ ಜಮೀನು ಖರೀದಿಗೆ ಶೇ 50% ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ!

August 12, 2025 | Siddesh
Bhu Odetana Yojana-ಭೂ ಒಡೆತನ ಯೋಜನೆಯಡಿ ಜಮೀನು ಖರೀದಿಗೆ ಶೇ 50% ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ!
Share Now:

ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ಸಮಾಜ ಕಲ್ಯಾಣ ಇಲಾಖೆಯಿಂದ ವಿವಿಧ ನಿಗಮಗಳ ಮೂಲಕ ಭೂ ಒಡೆತನ ಯೋಜನೆಯಡಿ(Bhu Odetana Yojana) ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಜಮೀನು ಖರೀದಿಗೆ ಶೇ 50% ಸಹಾಯಧನವನ್ನು ಒದಗಿಸಲು ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಹಲವು ಜನರಿಗೆ ತಮ್ಮದೇ ಆದ ಒಂದಿಷ್ಟು ಕೃಷಿ ಜಮೀನಿನಲ್ಲಿ ಕೃಷಿ/ತೋಟಗಾರಿಕೆ ಬೆಳೆಗಳನ್ನು ಬೆಳೆಯ ಗುರಿಯನ್ನು ಹೊಂದಿರುತ್ತಾರೆ ಇಂತಹ ಕೃಷಿ ಕಾರ್ಮಿಕರಿಗೆ ಜಮೀನನ್ನು ಖರೀದಿ(Bhu Odetana Yojana Application)ಮಾಡಲು ಸಮಾಜ ಕಲ್ಯಾಣ ಇಲಾಖೆಯ ಭೂ ಒಡೆತನ ಯೋಜನೆಯಡಿ ಸಹಾಯಧನವನ್ನು ಒದಗಿಸಲು ಪ್ರಸ್ತುತ ಅರ್ಜಿಯನ್ನು ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಇದನ್ನೂ ಓದಿ: SIM Card Status-ನಿಮ್ಮ ಹೆಸರಿನ ಮೇಲೆ ಎಷ್ಟು ಸಿಮ್ ತೆಗೆದುಕೊಳ್ಳಲಾಗಿದೆ? ಈಗಲೇ ಚೆಕ್ ಮಾಡಿ!

ಇಂದಿನ ಲೇಖನದಲ್ಲಿ ಭೂ ಒಡೆತನ ಯೋಜನೆ(Bhu Odetana Scheme) ಎಂದರೇನು? ಈ ಯೋಜನೆಯ ಮೂಲಕ ಎಷ್ಟು ಸಬ್ಸಿಡಿ ಪಡೆಯಬಹುದು?ಅರ್ಜಿ ಸಲ್ಲಿಸಲು ಇಲಾಖೆಯಿಂದ ಯಾವೆಲ್ಲ ಮಾನದಂಡಗಳನ್ನು ನಿಗದಿಪಡಿಸಲಾಗಿದೆ? ಈ ಕುರಿತು ಸಂಪೂರ್ಣ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

What Is Bhu Odetana Scheme-ಏನಿದು ಭೂ ಒಡೆತನ ಯೋಜನೆ?

ಭೂ -ಒಡೆತನ ಯೋಜನೆಯಡಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಕ್ಕೆ ಸೇರದ ಭೂ ಮಾಲೀಕರಿಂದ ಜಮೀನನ್ನು ಖರೀದಿಸಿ, ಪರಿಶಿಷ್ಟ ಜಾತಿಯ ಸಮುದಾಯದ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ 27 ಜಿಲ್ಲೆಗಳಿಗೆ ಒಟ್ಟು ಘಟಕ ವೆಚ್ಚ ರೂ 20.00 ಲಕ್ಷ ಮತ್ತು 4 ಜಿಲ್ಲೆಗಳಿಗೆ (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ರಾಮನಗರ) ರೂ 25.00 ಲಕ್ಷಗಳಿಗೆ ಶೇ 50% ಸಹಾಯಧನ ಮತ್ತು ಸಾಲ ಶೇ 50% ವನ್ನು ಒದಗಿಸುವ ಯೋಜನೆ ಇದಾಗಿದೆ.

ಖುಷ್ಕಿ/ತರಿ/ಬಾಗಾಯ್ತು ಜಮೀನನ್ನು ಫಲಾನುಭವಿಯು ವಾಸಿಸುತ್ತಿರುವ ಸ್ಥಳದಿಂದ ಗರಿಷ್ಠ 10 ಕಿ. ಮೀ. ವ್ಯಾಪ್ತಿಯೊಳಗೆ ಖರೀದಿಸಿ, ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಒದಗಿಸುವ ಉದ್ದೇಶವನ್ನು ಈ ಯೋಜನೆಯಡಿ ನಿಗಮಗಳು ಹಾಕಿಕೊಂಡಿದ್ದು ಮತ್ತು ಫಲಾನುಭವಿಗಳು ಸಾಲದ ಮೊತ್ತವನ್ನು 10 ವಾರ್ಷಿಕ ಸಮ ಕಂತುಗಳಲ್ಲಿ ವಾರ್ಷಿಕ ಶೇ 6 ರ ಬಡ್ಡಿ ದರದಲ್ಲಿ ನಿಗಮಕ್ಕೆ ಮರುಪಾವತಿ ಮಾಡ ಬೇಕಾಗಿರುತ್ತದೆ.

ಇದನ್ನೂ ಓದಿ: Kuri Sakanike Subsidy-ಕುರಿ ಸಾಕಾಣಿಕೆಗೆ ₹50,000 ಸಬ್ಸಿಡಿ ಪಡೆಯಲು ನಿಗಮಗಳಿಂದ ಅರ್ಜಿ ಆಹ್ವಾನ!

Bhu Odetana Yojana Subsidy-ಎಷ್ಟು ಸಬ್ಸಿಡಿ ನೀಡಲಾಗುತ್ತದೆ?

ಭೂ ಒಡೆತನ ಯೋಜನೆಯಡಿ ಅರ್ಜಿ ಸಲ್ಲಿಸಿ ಆಯ್ಕೆಯಾಗುವ ಫಲಾನುಭವಿಗಳಿಗೆ ಒಟ್ಟು ಘಟಕ ವೆಚ್ಚಕ್ಕೆ ಶೇ 50% ಸಹಾಯಧನವನ್ನು ನೀಡಲಾಗುತ್ತದೆ ಅಂದರೆ ರೂ ₹25.00 ಲಕ್ಷಕ್ಕೆ ₹12.5 ಲಕ್ಷ ಸಬ್ಸಿಡಿ ನೀಡಲಾಗುತ್ತದೆ ಬಾಕಿ ಉಳಿದ ಶೇ 50% ಅಂದರೆ ₹12.5 ಲಕ್ಷವನ್ನು ಬ್ಯಾಂಕ್ ಮೂಲಕ ಸಾಲದ ರೂಪದಲ್ಲಿ ಶೇ 4 ರ ಬಡ್ದಿದರದಲ್ಲಿ ಸಾಲವನ್ನು ಒದಗಿಸಲಾಗುತ್ತದೆ.

Bhu Odetana Yojane Eligibility-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಭೂ ಒಡೆತನ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು ಎನ್ನುವ ಮಾಹಿತಿ ಈ ಕೆಳಗಿನಂತಿವೆ:

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಈ ಹಿಂದಿನ ವರ್ಷಗಳಲ್ಲಿ ಕುಟುಂಬದ ಸದಸ್ಯರು ಈ ಯೋಜನೆಯಡಿ ಸೌಲಭ್ಯವನ್ನು ಪಡೆದಿರಬಾರದು.
  • ಭೂಒಡೆತನ ಯೋಜನೆಯಡಿ ಸೌಲಭ್ಯ ಪಡೆಯಲು ಫಲಾಪೇಕ್ಷಿಯು ಭೂರಹಿತ ಮಹಿಳಾ ಕೃಷಿ ಕಾರ್ಮಿಕರಾಗಿರಬೇಕು.
  • ಅರ್ಜಿದಾರರು ಪರಿಶಿಷ್ಟ ಜಾತಿಯ ಸಂಬಂಧಿತ ಜಾತಿಗಳಿಗೆ ಸೇರಿದವರಾಗಿರಬೇಕು.
  • ಅರ್ಜಿದಾರರು ಭೂ ರಹಿತ ಕೃಷಿ ಕಾರ್ಮಿಕ ಕುಟುಂಬದವರಾಗಿರಬೇಕು.
  • ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿದಲ್ಲಿ ಕಡ್ಡಾಯವಾಗಿ ಸ್ವಯಂ ಘೋಷಣೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
  • ಅರ್ಜಿದಾರರು/ ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ನೌಕರಿಯಲ್ಲಿರಬಾರದು.
  • ಜಮೀನು ಮಾರಾಟ ಮಾಡುವ ಭೂಮಾಲೀಕರು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರಬಾರದು.
  • ಖರೀದಿಸುವ ಜಮೀನು ಫಲಾನುಭವಿಯು ವಾಸಿಸುತ್ತಿರುವ ಸ್ಥಳದಿಂದ ಗರಿಷ್ಠ 10 ಕಿ. ಮೀ. ವ್ಯಾಪ್ತಿಯೊಳಗೆ ಇರಬೇಕು.

Last Date For Bhu Odetana Yojana-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಸೆಪ್ಟೆಂಬರ್ 2025

ಇದನ್ನೂ ಓದಿ: Grama One-ಗ್ರಾಮ ಒನ್ ಕೇಂದ್ರವನ್ನು ಆರಂಭಿಸಲು ಅರ್ಜಿ ಆಹ್ವಾನ!

Bhu Odetana Yojana

ಇದನ್ನೂ ಓದಿ: Ganga Kalyana-2025: ಗಂಗಾ ಕಲ್ಯಾಣ ಸೇರಿದಂತೆ ವಿವಿಧ ಯೋಜನೆಯಡಿ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

Required Documents For Application-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ಅರ್ಹ ಅರ್ಜಿದಾರರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅಗತ್ಯವಾಗಿ ಒದಗಿಸಬೇಕಾದ ದಾಖಲೆಗಳ ವಿವರ ಈ ಕೆಳಗಿನಂತಿದೆ.

  • ಅರ್ಜಿದಾರರ ಆಧಾರ್‌ ಕಾರ್ಡ್‌ ಪ್ರತಿ.
  • ಅರ್ಜಿದಾರರ ಜಾತಿ ಮತ್ತು ಆದಾಯ ಪ್ರಮಾಣಪತ್ರ.
  • ಭೂ ರಹಿತ ಕೃಷಿ ಕಾರ್ಮಿಕರ ಪತ್ರ (ತಹಶೀಲ್ದಾರರಿಂದ)
  • ಕುಟುಂಬದ ರೇಷನ್ ಕಾರ್ಡ್/ಪಡಿತರ ಚೀಟಿ.
  • ಭೂ ಮಾಲೀಕರ ಭೂ ಮಾರಾಟ ಮಾಡಲು ಮುಚ್ಚಳಿಕೆ ಪತ್ರ (ಛಾಪಾ ಕಾಗದದಲ್ಲಿ ನೋಟರಿ ಮಾಡಿಸಿ ಸಲ್ಲಿಸತಕ್ಕದ್ದು.)
  • ಭೂ ಮಾಲೀಕರ ವಂಶಾವಳಿ (ಗ್ರಾಮ ಲೆಕ್ಕಾಧಿಕಾರಿಗಳಿಂದ ದೃಢೀಕರಿಸಿಕೊಂಡು ಸಲ್ಲಿಸತಕ್ಕದ್ದು.)
  • ಭೂ ಮಾಲೀಕ ಕುಟುಂಬ ಸದಸ್ಯರ ನಿರಾಕ್ಷೇಪಣಾ ಕಾಗದದಲ್ಲಿ ಪತ್ರ ವಂಶಾವಳಿಯಲ್ಲಿರುವ ಸದಸ್ಯರು ನೋಟರಿ ಮಾಡಿಸಿ ಸಲ್ಲಿಸಬೇಕು.

ಇದನ್ನೂ ಓದಿ: Students Scholarship-1 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

  • ಭೂ ಮಾಲೀಕರಿಂದ ಇತ್ತೀಚಿನ ಪಹಣಿ/ಊತಾರ್/RTC ಪತ್ರಿ.
  • ಹಕ್ಕು ಬದಲಾವಣೆ ಪ್ರತಿ. (ಮ್ಯೂಟೇಷನ್ ಪ್ರತಿ).
  • ಭೂ ಮಾಲೀಕರಿಂದ ಕಳೆದ 13 ವರ್ಷಗಳ ಇ.ಸಿ. (ಋಣಭಾರ ರಾಹಿತ್ಯ ಪ್ರಮಾಣ ಪತ್ರ).
  • ಅರ್ಜಿದಾರರ ಪೋಟೋ.
  • ಬ್ಯಾಂಕ್ ಪಾಸ್ ಬುಕ್ ಪ್ರತಿ.

How To Apply-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

Step-1: ಈ ವೆಬ್ಸೈಟ್ ಲಿಂಕ್ "Bhu Odetana Yojana Online Application" ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: PM Surya Ghar Yojana-ನಿಮ್ಮ ಮನೆಗೆ ಉಚಿತ ವಿದ್ಯುತ್ ಬೇಕಾದರೆ ಈ ಕೂಡಲೇ ಅರ್ಜಿ ಸಲ್ಲಿಸಿ!

Step-2: ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿದ ಬಳಿಕ ಈ ಪೇಜ್ ನಲ್ಲಿ ಕೆಳಗೆ ಕಾಣುವ "ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಬೇಕು.

Step-3: ಈ ಪುಟದಲ್ಲಿ ಮೊಬೈಲ್ ನಂಬರ್ ಮತ್ತು OTP ಅನ್ನು ನಮೂದಿಸಿ ಕ್ಯಾಪ್ಚ್ ಕೋಡ್ ಹಾಕಿ "Submit" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅರ್ಜಿ ಭರ್ತಿ ಮಾಡಲು ಲಾಗಿನ್ ಅಗಬೇಕು.

Step-4: ಲಾಗಿನ್ ಅದ ಬಳಿಕ ಅಧಿಕೃತ ಅರ್ಜಿ ನಮೂನೆ ಒಪನ್ ಅಗುತ್ತದೆ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರವನ್ನು ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Helpline Number-ಸಹಾಯವಾಣಿ- 9482300400
Scheme Official Website-ಭೂ ಒಡೆತನ ಯೋಜನೆಯ ಕುರಿತು ಇನ್ನು ಅಧಿಕ ಮಾಹಿತಿಯನ್ನು ಪಡೆಯಲು ವೆಬ್ಸೈಟ್ ಲಿಂಕ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: