BSF ನಿಂದ ಗ್ರೂಪ್ ಸಿ ಮತ್ತು ಬಿ ಹುದ್ದೆಗಳಾದ ಕಾನ್ಸ್ಟೇಬಲ್ ಮತ್ತು ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ!

ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿರುವ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನ ವಾಟರ್ ವಿಂಗ್ ನಲ್ಲಿ BSF Water Wing ಖಾಲಿ ಇರುವಂತಹ ಗ್ರೂಪ್ ಬಿ ಹಾಗೂ ಸಿ ವೃಂದದ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯ ಸಂಪೂರ್ಣ ವಿವರಣೆ ಇಲ್ಲಿದೆ.

BSF ನಿಂದ ಗ್ರೂಪ್ ಸಿ ಮತ್ತು ಬಿ ಹುದ್ದೆಗಳಾದ ಕಾನ್ಸ್ಟೇಬಲ್ ಮತ್ತು ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ!
BSF Job-2024

ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿರುವ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನ ವಾಟರ್ ವಿಂಗ್ ನಲ್ಲಿ BSF Water Wing ಖಾಲಿ ಇರುವಂತಹ ಗ್ರೂಪ್ ಬಿ ಹಾಗೂ ಸಿ ವೃಂದದ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯ ಸಂಪೂರ್ಣ ವಿವರಣೆ ಇಲ್ಲಿದೆ.

ಸಬ್ ಇನ್ಸ್ಪೆಕ್ಟರ್ , ಹೆಡ್ ಕಾನ್ಸ್ಟೇಬಲ್ ಹಾಗೂ ಕಾನ್ಸ್ಟೇಬಲ್ ಹುದ್ದೆಗಳು ಸೇರಿದಂತೆ ಒಟ್ಟು 150ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು ಮತ್ತು ನೇಮಕಾತಿಯ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: HSRP Number plate-ನಿಮ್ಮ ವಾಹನಕ್ಕೆ ಎಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಹಾಕಿಸಲು ಇದು ಕೊನೆಯ ಅವಕಾಶ!

ನೇಮಕಾತಿ ವಿವರ : BSF Water Wing Recruitment 2024 

• ನೇಮಕಾತಿ ಇಲಾಖೆ : Directorate General of Border Security Forces 
• ನೇಮಕಾತಿ ಹುದ್ದೆಗಳ ಸಂಖ್ಯೆ : 162 ಹುದ್ದೆಗಳು 
• ಅರ್ಜಿ ಸಲ್ಲಿಕೆ : ಆನ್ಲೈನ್ ಮೂಲಕ 

ಹುದ್ದೆಗಳ ವಿವರ  : 

• ಎಸ್‌ಐ (ಮಾಸ್ಟರ್) - 7 ಹುದ್ದೆಗಳು 
• ಎಸ್‌ಐ ( ಚಾಲಕ) - 4 ಹುದ್ದೆಗಳು
• ಹೆಡ್ ಕಾನ್‌ಸ್ಟೆಬಲ್ (ಮಾಸ್ಟರ್) - 35 ಹುದ್ದೆಗಳು
• ಹೆಡ್‌ ಕಾನ್‌ಸ್ಟೆಬಲ್‌ (ಎಂಜಿನ್ ಡ್ರೈವರ್) - 57 ಹುದ್ದೆಗಳು
• ಹೆಡ್‌ ಕಾನ್‌ಸ್ಟೆಬಲ್‌ (ಕಾರ್ಯಾಗಾರ) - 13 ಹುದ್ದೆಗಳು
• ಕಾನ್‌ಸ್ಟೆಬಲ್‌ - 46 ಹುದ್ದೆಗಳು

ಇದನ್ನೂ ಓದಿ: Parihara amount-2024: ಒಂದು ಕಂತು ಬರ ಪರಿಹಾರ ಪಡೆಯದಿದ್ದರೆ ಈ ಕ್ರಮ ಅನುಸರಿಸಿ ಹಣ ಪಡೆಯಿರಿ!

ಅರ್ಹತೆಗಳು - ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ವಾಟರ್ ವಿನ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ  ದ್ವಿತೀಯ ಪಿಯುಸಿ, ಐಟಿಐ, ಡಿಪ್ಲೋಮಾ ಹಾಗೂ ಸಂಬಂಧಪಟ್ಟ ಕೋರ್ಸ್ ಮುಗಿಸಿದವರು ಅರ್ಜಿ ಸಲ್ಲಿಸಲು ಅರ್ಹರು.

Age limit : ನೇಮಕಾತಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ 20ರಿಂದ 28ವರ್ಷದ ಒಳಗಿರಬೇಕು.

ವೇತನ: ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಅಂತಿಮವಾಗಿ ಆಯ್ಕೆಯಾಗುವಂತಹ ಅಭ್ಯರ್ಥಿಗಳಿಗೆ ಮಾಸಿಕ ವೇತನ ಶ್ರೇಣಿಯು 21,700ರೂ. ನಿಂದ 1,12,400ರೂ. ವರೆಗೆ ಇರಲಿದೆ.

ಇದನ್ನೂ ಓದಿ: How to link pan card aadhar card: ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡದವರಿಗೆ ಶಾಕಿಂಗ್ ನ್ಯೂಸ್!

ಅರ್ಜಿ ಶುಲ್ಕ - 

• SC/ ST/ ESM ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ 
 ಉಳಿದ ವರ್ಗದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ಅರ್ಜಿ ಶುಲ್ಕವಿದೆ 
• Group B ಹುದ್ದೆಗಳಿಗೆ - ₹200/-
• Group C ಹುದ್ದೆಗಳಿಗೆ - ₹100/-

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಈ ನೇಮಕಾತಿಗೆ  ಅರ್ಜಿ ಸಲ್ಲಿಸಲು 30ನೇ ಜೂನ್ 2024 ಕೊನೆಯ ದಿನಾಂಕವಾಗಿರುತ್ತದೆ.

ಅರ್ಜಿ ಸಲ್ಲಿಸಲು ಪ್ರಮುಖ ಲಿಂಕುಗಳು : 

• ಅರ್ಜಿ ಸಲ್ಲಿಕೆ ಲಿಂಕ್ : Apply Now
• ಪ್ರಕಟಣೆ : Download