Dairy Shed Subsidy-ಹೈನುಗಾರಿಕೆ ಶೆಡ್ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ರೂ 57,000/- ಸಹಾಯಧನ!

October 25, 2025 | Siddesh
Dairy Shed Subsidy-ಹೈನುಗಾರಿಕೆ ಶೆಡ್ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ರೂ 57,000/- ಸಹಾಯಧನ!
Share Now:

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ(MGNREG) ಯೋಜನೆ ಅಡಿ ಗ್ರಾಮೀಣ ಭಾಗದ ರೈತಾಪಿ ವರ್ಗಕ್ಕೆ ಹೈನುಗಾರಿಕೆಯನ್ನು ಆರಂಭಿಸಲು ಪ್ರಾರಂಭಿಕ ಹಂತದಲ್ಲಿ ಹಸು/ಎಮ್ಮೆ ಸಾಕಾಣಿಕೆಗೆ ಶೆಡ್ ಅನ್ನು ನಿರ್ಮಾಣ ಮಾಡಿಕೊಳ್ಳಲು 57 ಸಾವಿರ ಸಬ್ಸಿಡಿಯನ್ನು ಪಡೆಯಲು ಅವಕಾಶವಿದ್ದು ಇದರ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ಪ್ರಕಟಿಸಲಾಗಿದೆ.

ಬದಲಾಗುತ್ತಿರುವ ಹವಾಮಾನ ಸನ್ನಿವೇಶದಲ್ಲಿ ರೈತರು ಕೇವಲ ಕೃಷಿ ಬೆಳೆಯ ಆದಾಯವನ್ನು ಒಂದನೇ ನೆಚ್ಚಿಕೊಂಡರೆ ಆರ್ಥಿಕವಾಗಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಿಲ್ಲ ಈ ನಿಟ್ಟಿನಲ್ಲಿ ಕೃಷಿ ಜೊತೆಯಲ್ಲಿ ಹೈನುಗಾರಿಕೆ/ಕುರಿ ಸಾಕಾಣಿಕೆಯಂತಹ(Dairy Farm) ಉಪಕಸುಬನ್ನು ಪ್ರಾರಂಭಿಸುವುದು ಅತೀ ಮುಖ್ಯವಾಗಿದೆ.

ಇದನ್ನೂ ಓದಿ: E-Swathu-ಗ್ರಾಮೀಣ ಜನರಿಗೆ ಭರ್ಜರಿ ಸಿಹಿ ಸುದ್ದಿ: ಇನ್ಮುಂದೆ ಕೇವಲ 15 ದಿನದಲ್ಲಿ ಸಿಗಲಿದೆ ಇ-ಸ್ವತ್ತು!

ಹೈನುಗಾರಿಕೆ/ಕುರಿ ಸಾಕಾಣಿಕೆಗೆ ನರೇಗಾ ಯೋಜನೆಯಡಿ(Narega Yojane Application) ಸಹಾಯಧನದಲ್ಲಿ ಶೆಡ್ ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದ್ದು ಇದಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ? ಸಹಾಯಧನವನ್ನು ಪಡೆಯುವ ಕ್ರಮವೇನು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಎನ್ನುವ ಸಂಪೂರ್ಣ ವಿವರವನ್ನು ಇಂದಿನ ಅಂಕಣದಲ್ಲಿ ತಿಳಿಸಲಾಗಿದೆ.

Narega Dairy Shed Subsidy-ಎಷ್ಟು ಸಬ್ಸಿಡಿ ಪಡೆಯಬಹುದು?

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ(MGNREG) ಯೋಜನೆ ಅಡಿಯಲ್ಲಿ ಹಸು/ಎಮ್ಮೆ ಸಾಕಾಣಿಕೆಯನ್ನು ಮಾಡಲು ಕೂಲಿ ವೆಚ್ಚ ರೂ10,556/- ಮತ್ತು ಸಾಮಾಗ್ರಿ ವೆಚ್ಚ ರೂ 46,644/- ಸೇರಿಸಿ ಒಟ್ಟು ರೂ 57,000/- ಅರ್ಥಿಕ ನೆರವನ್ನು ಈ ಯೋಜನೆಯಡಿ ಪಡೆಯಲು ಅವಕಾಶವಿದೆ.

How To Apply For Dairy Shed Subsidy-ಅರ್ಜಿ ಸಲ್ಲಿಸುವುದು ಹೇಗೆ?

ನರೇಗಾ ಯೋಜನೆ ಅಡಿಯಲ್ಲಿ ಹಸು/ಎಮ್ಮೆ ಸಾಕಾಣಿಕೆಗೆ ಶೆಡ್ ಅನ್ನು ನಿರ್ಮಾಣ ಮಾಡಿಕೊಳ್ಳಲು ಆಸಕ್ತಿಯನ್ನು ಹೊಂದಿರುವವರು ಮೊದಲಿಗೆ ನಿಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯತಿಯನ್ನು ನೇರವಾಗಿ ಅಗತ್ಯ ದಾಖಲಾತಿಗಳ ಸಮೇತ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಿ ಕ್ರಿಯಾಯೋಜನೆಯಲ್ಲಿ ನಿಮ್ಮ ಕಾಮಗಾರಿಯನ್ನು ಸೇರಿಸಿ ಅನುಮೋದನೆಯನ್ನು ಪಡೆದುಕೊಂಡು ಶೆಡ್ ನಿರ್ಮಾಣ ಮಾಡಿ ಹಂತ ಹಂತವಾಗಿ ಸಹಾಯಧನವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: Taxi Subsidy Scheme-ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದಿಂದ ಶೇ 50% ಸಹಾಯಧನದಲ್ಲಿ ಟ್ಯಾಕ್ಸಿ ಖರೀದಿಸಲು ಅರ್ಜಿ ಆಹ್ವಾನ!

Narega hasu sakanike shed

ಇದನ್ನೂ ಓದಿ: B-Khata To A-Khata-ಇನ್ಮುಂದೆ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಪಡೆಯಿರಿ!

Documents For Dairy Shed Subsidy-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

  • ಅರ್ಜಿದಾರ ಕುಟುಂಬದ ಜಾಬ್ ಕಾರ್ಡ ಪ್ರತಿ
  • ಆಧಾರ್ ಕಾರ್ಡ
  • ಜಮೀನಿನ ಪಹಣಿ/ಊತಾರ್/RTC
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಸ್ಥಳೀಯ ಪಶು ವೈದ್ಯಾಧಿಕಾರಿಗಳಿಂದ ಹಸು ಸಾಕಾಣಿಕೆ ಕುರಿತು ದೃಡೀಕರಣ

Sheep Farming Shed-ಕುರಿ ಶೆಡ್ ನಿರ್ಮಾಣಕ್ಕೂ ಇದೆ ಸಹಾಯಧನ:

ಹೈನುಗಾರಿಕೆಯ ಜೊತೆಗೆ ನರೇಗಾ ಯೋಜನೆ ಅಡಿಯಲ್ಲಿ ಕುರಿ/ಮೇಕೆ ಶೇಡ್ ಅನ್ನು ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದ್ದು ರೂ 70,000/- ಸಹಾಯಧನವನ್ನು ಪಡೆದು ಕುರಿ ಶೆಡ್ ಅನ್ನು ನಿರ್ಮಾಣ ಮಾಡಿಕೊಳ್ಳಬಹುದು ಈ ಕುರಿತು ಇನ್ನು ಹೆಚ್ಚಿನ ಅಗತ್ಯ ಮಾಹಿತಿಯನ್ನು ಪಡೆಯಲು ನಿಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯತಿಯನ್ನು ಭೇಟಿ ಮಾಡಿ.

ಇದನ್ನೂ ಓದಿ: Free Photography Training-ಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಗೆ ಅರ್ಜಿ ಆಹ್ವಾನ!

ಒಂದು ಕುಟುಂಬಕ್ಕೆ ಗರಿಷ್ಠ ರೂ 5.0 ಲಕ್ಷ ಕಾಮಗಾರಿಗೆ ಅವಕಾಶ:

ನರೇಗಾ ಯೋಜನೆ ಅಡಿಯಲ್ಲಿ 266 ರೀತಿಯ ವಿವಿಧ ಬಗ್ಗೆಯ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದ್ದು ಒಂದು ಕುಟುಂಬಕ್ಕೆ ವೈಯಕ್ತಿಕ ಕಾಮಗಾರಿ ಅಡಿಯಲ್ಲಿ ರೂ 5.0 ಲಕ್ಷದ ವರೆಗೆ ಕಾಮಗಾರಿಯನ್ನು ಈ ಯೋಜನೆ ಅಡಿಯಲ್ಲಿ ಕೈಗೊಳ್ಳಲು ಅವಕಾಶವಿರುತ್ತದೆ.

Narega Yojane-ನರೇಗಾ ಯೋಜನೆ ಪ್ರಮುಖ ಕಾಮಗಾರಿಗಳ ಪಟ್ಟಿ ಹೀಗಿದೆ:

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ(MGNREG) ಯೋಜನೆಯಡಿ ಹೈನುಗಾರಿಕೆ/ಕುರಿ ಸಾಕಾಣಿಕೆಗೆ ಶೆಡ್ ನಿರ್ಮಾಣದ ಜೊತೆಗೆ ಶಾಲೆ ಕಾಂಪೌಂಡ್, ಆಟದ ಮೈದಾನ, ಶೌಚಾಲಯ, ಅಡುಗೆ ಕೋಣೆ, ಮಳೆ ನೀರು ಕೊಯ್ಲು, ಅರಣ್ಯೀಕರಣ, ಪೌಷ್ಟಿಕ ಕೈತೋಟ, ಕೆರೆ ಅಭಿವೃದ್ಧಿ, ರಾಜಕಾಲುವೆ, ಚರಂಡಿ, ಸಮುದಾಯ ಭವನ, ಗೋದಾಮು, ಸ್ವಚ್ಛ ಸಂಕೀರ್ಣ ಘಟಕ, ಬೂದು ನೀರು ನಿರ್ವಹಣೆ, ಸ್ಮಶಾನ ಅಭಿವೃದ್ಧಿ ಮುಂತಾದವುಗಳು ಸಮುದಾಯ ಆಧಾರಿತ ಕಾಮಗಾರಿಗೂ ಅವಕಾಶವಿದೆ.

ಇದನ್ನೂ ಓದಿ: PF Amount Withdrawal-ಪಿಎಫ್ ನಿಯಮದಲ್ಲಿ ಭಾರೀ ಬದಲಾವಣೆ! ಇನ್ಮುಂದೆ ಶೇ 75% ಹಣ ವಿತ್ ಡ್ರಾ ಮಾಡಬಹುದು!

For More Details-ನರೇಗಾ ಯೋಜನೆಯ ಕುರಿತು ಇನ್ನು ಅಧಿಕ ಮಾಹಿತಿಗಾಗಿ:

Twitter/X account-ಅಧಿಕೃತ ಟ್ವಿಟರ್/ಎಕ್ಸ್ ಖಾತೆ- Follow Now
Website Link-ಅಧಿಕೃತ ಜಾಲತಾಣ- Click Here
Narega Helpline Number-ನರೇಗಾ ಯೋಜನೆ ಸಹಾಯವಾಣಿ-
1800 042 58666

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: