District Industries Centre-ಜಿಲ್ಲಾ ಕೈಗಾರಿಕಾ ಕೇಂದ್ರಗಳಿಂದ ಉಚಿತವಾಗಿ ಸಲಕರಣೆ ವಿತರಣೆ!

September 7, 2025 | Siddesh
District Industries Centre-ಜಿಲ್ಲಾ ಕೈಗಾರಿಕಾ ಕೇಂದ್ರಗಳಿಂದ ಉಚಿತವಾಗಿ ಸಲಕರಣೆ ವಿತರಣೆ!
Share Now:

ಗ್ರಾಮೀಣ ಕೈಗಾರಿಕೆಗಳಿಗೆ ಉತೇಜನ ನೀಡಲು 2025-26ನೇ ಸಾಲಿನಲ್ಲಿ ಗ್ರಾಮೀಣ ಕುಶಲಕರ್ಮಿಗಳಿಗೆ ವಿವಿಧ ಸೌಲಭ್ಯ ಪಡೆಯಲು(District Industries Centre Subsidy Schemes) ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಇದರ ವಿವರವನ್ನು ಇಂದಿನ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಈ ಯೋಜನೆಯಡಿ ಎಲೆಕ್ಟ್ರಿಷಿಯನ್,ಬಟ್ಟಿಹೆಣೆಯುವುದು,ಮರಗೆಲಸ,ಗಾರೆಕೆಲಸ ಹಾಗೂ ಜನರಲ್ ಇಂಜಿನಿಯರಿಂಗ್ ಕಸುಬಿನ ಉಪಕರಣಗಳನ್ನು ಮತ್ತು ಕುಂಬಾರಿಕೆ ಹಾಗೂ ಹೊಲಿಗೆ ಯಂತ್ರ ವೃತ್ತಿಯಲ್ಲಿ ತೊಡಗಿಕೊಂಡವರು ಇದರ ಪ್ರಯೋಜನವನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Swachh Bharat Mission-ಶೌಚಾಲಯ ನಿರ್ಮಾಣಕ್ಕೆ ₹12,000/- ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ!

District Industries Centre-ಯಾವೆಲ್ಲ ಜಿಲ್ಲೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ?

ಗ್ರಾಮೀಣ ಕೈಗಾರಿಕೆಗಳಿಗೆ ಉತೇಜನ ನೀಡಲು ಬೀದರ್, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು,ಚಿತ್ರದುರ್ಗ,ದಾವಣಗೆರೆ,ಹಾಸನ,ಮೈಸೂರು,ಉಡುಪಿ ಮತ್ತು ಉತ್ತರಕನ್ನಡ ಜಿಲ್ಲಾ ಕೈಗಾರಿಕಾ ಕೇಂದ್ರಗಳಿಂದ ಅರ್ಹ ಅಭ್ಯರ್ಥಿಗಳನ್ನು ಗುರುತಿಸಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

District Industries Centre Subsidy Schemes In Karnataka-ಮೂರು ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶ:

ಗ್ರಾಮೀಣ ಕೈಗಾರಿಕೆಗಳಿಗೆ ಉತೇಜನ ನೀಡಲು ಜಿಲ್ಲಾ ಕೈಗಾರಿಕಾ ಕೇಂದ್ರಗಳಿಂದ ಕುಶಲಕರ್ಮಿಗಳಿಗೆ ವಿವಿಧ ಸೌಲಭ್ಯಗಳನ್ನು ಪಡೆಯಲು ಒಟ್ಟು ಮೂರು ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದ್ದು ಇದರ ವಿವರ ಹೀಗಿದೆ.

1) ಜಿಲ್ಲಾ ಉದ್ಯಮ ಬಂಡವಾಳ ಹೂಡಿಕೆ.
2) ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ.
3) ಕುಶಲಕರ್ಮಿಗಳಿಗೆ ಬಡ್ಡಿ ಸಹಾಯಧನ.

ಇದನ್ನೂ ಓದಿ: Muskaan Scholarship-ಮುಸ್ಕಾನ್ ವಿದ್ಯಾರ್ಥಿವೇತನ ಯೋಜನೆಯಡಿ ₹12,000 ಸ್ಕಾಲರ್ಶಿಪ್!

Required Documents For Application-ವಿವಿಧ ಯೋಜನೆಯಡಿ ಸೌಲಭ್ಯ ಪಡೆಯಲು ಅವಶ್ಯಕ ದಾಖಲೆಗಳ ಪಟ್ಟಿ ಹೀಗಿದೆ:

1) ಜಿಲ್ಲಾ ಉದ್ಯಮ ಬಂಡವಾಳ ಹೂಡಿಕೆ/District Enterprise Capital Investment:

  • ಬ್ಯಾಂಕ್ ಪಾಸ್ ಪುಸ್ತಕ
  • ನಿಗದಿತ ನಮೂನೆಯಲ್ಲಿ ಬ್ಯಾಂಕಿನಿಂದ ಸಾಲ ಮಂಜೂರಾತಿ ಹಾಗೂ ಬಿಡುಗಡೆಯಾಗಿರುವ ಪತ್ರ
  • ಈಗಾಗಲೇ ನಡೆಸುತ್ತಿರುವ ಕಸುಬಿಗೆ ಸಂಬಂದಿಸಿದಂತೆ ತರಬೇತಿ ಪಡೆದ ಪ್ರಮಾಣಪತ್ರ

2) ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ/Free Equipments:

  • ಹೊಲಿಗೆ ತರಬೇತಿ(Uchita Holige Yantra)ಪಡೆದ ಪ್ರಮಾಣ ಪತ್ರ (ಟೈಲರಿಂಗ್ಗಾಗಿ)
  • ಮರಗೆಲಸ/ಟೈಲರಿಂಗ್/ಗಾರೆಕೆಲಸ/ಕ್ಷೌರಿಕ/ಧೋಬಿ/ಕಮ್ಮರಿಕ/ಬುಟ್ಟಿ ಎಣೆಯುವುದು/ನಾರು/ಕಸೂತಿ/ಕುಂಬಾರಿಕೆ ಕಸುಬಿನ ಕುಶಲಕರ್ಮಿಯಾಗಿದ್ದಲ್ಲಿ ಆಯಾ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಯವರಿಂದ ಧೃಡೀಕರಣ ಪತ್ರ.

ಇದನ್ನೂ ಓದಿ: New GST Rates-ಕೇಂದ್ರ ಸರಕಾರದಿಂದ ರೈತರಿಗೆ ಸಿಹಿ ಸುದ್ದಿ: ಟ್ರಾಕ್ಟರ್ ಖರೀದಿಯ ಮೇಲೆ GST ದರದಲ್ಲಿ ಭಾರೀ ಇಳಿಕೆ!

Interest Subsidy Scheme

3) ಕುಶಲಕರ್ಮಿಗಳಿಗೆ ಬಡ್ಡಿ ಸಹಾಯಧನ/Interest Subsidy Scheme:

  • ಬ್ಯಾಂಕ್ ಪಾಸ್ ಪುಸ್ತಕ
  • ನಿಗದಿತ ನಮೂನೆಯಲ್ಲಿ ಬ್ಯಾಂಕಿನಿಂದ ಸಾಲ ಮಂಜೂರಾತಿ ಹಾಗೂ ಬಿಡುಗಡೆಯಾಗಿರುವ ಪತ್ರ
  • ಉದ್ಯಮ ನೋಂದಣಿ ಪತ್ರ
  • ಸ್ಥಳೀಯ ಸಂಸ್ಥೆಯಿಂದ ಪಡೆದ ಪರವಾನಿಗಿ ಪತ್ರ
  • ಬ್ಯಾಂಕಿನಿಂದ ಬಡ್ಡಿ ಸಹಾಯಧನದ ನಮೂನೆ ಪತ್ರ

Last Date For Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಗ್ರಾಮೀಣ ಕೈಗಾರಿಕೆಗಳಿಗೆ ಉತೇಜನ ನೀಡಲು ಜಿಲ್ಲಾ ಕೈಗಾರಿಕಾ ಕೇಂದ್ರಗಳಿಂದ ಸೌಲಭ್ಯವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೆಲವೊಂದು ಜಿಲ್ಲೆಯಲ್ಲಿ 13 ಸೆಪ್ಟೆಂಬರ್ 2025 ಕೊನೆಯ ದಿನಾಂಕವಾಗಿದ್ದರೆ ಇನ್ನು ಕೆಲವು ಜಿಲ್ಲೆಗಳಲ್ಲಿ 20 ಸೆಪ್ಟೆಂಬರ್ 2025 ಕೊನೆಯ ದಿನಾಂಕ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: Free CCTV Training-ಉಚಿತ ಸಿಸಿಟಿವಿ ಅಳವಡಿಕೆ ಮತ್ತು ಸರ್ವೀಸಿಂಗ್ ತರಬೇತಿಗಾಗಿ ಅರ್ಜಿ ಆಹ್ವಾನ!

Online Application Link-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು:

ಅರ್ಹ ಅರ್ಜಿದಾರರು ಇಲ್ಲಿ ಕ್ಲಿಕ್ "Online Application" ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ತಮ್ಮ ಮೊಬೈಲ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದ್ದು ಇದರ ಬಗ್ಗೆ ಮಾಹಿತಿಯಿಲ್ಲದವರು ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

Important Notice-ಅರ್ಜಿದಾರರಿಗೆ ವಿಶೇಷ ಸೂಚನೆಗಳು:

1) ಈ ಯೋಜನೆಯಡಿ ಸೌಲಭ್ಯವು ಗ್ರಾಮೀಣ ಪ್ರದೇಶದವರಿಗೆ ಮಾತ್ರ ಅನ್ವಯಿಸಲಾಗುತ್ತದೆ.

2) ಈಗಾಗಲೇ ಇಲಾಖಾ ವತಿಯಿಂದ ಸೌಲಭ್ಯ ಪಡೆದ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: