E-Swathu-ಗ್ರಾಮೀಣ ಜನರಿಗೆ ಭರ್ಜರಿ ಸಿಹಿ ಸುದ್ದಿ: ಇನ್ಮುಂದೆ ಕೇವಲ 15 ದಿನದಲ್ಲಿ ಸಿಗಲಿದೆ ಇ-ಸ್ವತ್ತು!

October 24, 2025 | Siddesh
E-Swathu-ಗ್ರಾಮೀಣ ಜನರಿಗೆ ಭರ್ಜರಿ ಸಿಹಿ ಸುದ್ದಿ: ಇನ್ಮುಂದೆ ಕೇವಲ 15 ದಿನದಲ್ಲಿ ಸಿಗಲಿದೆ ಇ-ಸ್ವತ್ತು!
Share Now:

ಗ್ರಾಮೀಣಾಬಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ಮೂಲಕ ಗ್ರಾಮೀಣ ಭಾಗದ ಆಸ್ತಿಗಳಿಗೆ ಇ-ಸ್ವತ್ತನ್ನು(E-Swathu Documents)ವಿತರಣೆ ಮಾಡಲು ಈ ಹಿಂದೆ ಇದ್ದ ನಿಯಮಕ್ಕೆ ಜನ ಸ್ನೇಹಿ ನಿಯಮಗಳನ್ನು ರೂಪಿಸಿ ತಿದ್ದುಪಡಿ ಮಾಡಿ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.

ಗ್ರಾಮೀಣ ಭಾಗಗಳಲ್ಲಿ ಆಸ್ತಿ ಪ್ರಮಾಣ ಪತ್ರ ಪಡೆಯಲು ಸುಲಭವಾಗುವಂತೆ ನಮ್ಮ ಗ್ಯಾರಂಟಿ ಸರ್ಕಾರವು ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು)(RDPR) ನಿಯಮಗಳು, 2025 ನ್ನು ಜಾರಿಗೊಳಿಸಿದೆ.

ಇದನ್ನೂ ಓದಿ: Taxi Subsidy Scheme-ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದಿಂದ ಶೇ 50% ಸಹಾಯಧನದಲ್ಲಿ ಟ್ಯಾಕ್ಸಿ ಖರೀದಿಸಲು ಅರ್ಜಿ ಆಹ್ವಾನ!

ಈ ನಿಯಮಗಳ ಜಾರಿಯಿಂದ ಇ-ಸ್ವತ್ತು ಅಭಿಯಾನಕ್ಕೆ ರೆಕ್ಕೆ ಬಂದಿದ್ದು, ಒಂದು ಕೋಟಿ ಗ್ರಾಮೀಣ ಆಸ್ತಿಗಳಿಗೆ ಡಿಜಿಟಲ್ ಆಸ್ತಿ ಪ್ರಮಾಣ ಪತ್ರ(E-Swathu) ವಿತರಿಸುವ ನಮ್ಮ ಗುರಿ ಸಾಧ್ಯವಾಗಲಿದೆ. ಗ್ರಾಮೀಣ ಭಾಗದ ಜನರಿಗೆ ವ್ಯವಸ್ಥಿತವಾಗಿ ಎಲ್ಲಾ ಸೇವೆಗಳನ್ನು ನೀಡುವ ನಮ್ಮ ಸಂಕಲ್ಪ ನೆರವೇರಲಿದ್ದು, ನಮ್ಮ ಇ-ಸ್ವತ್ತು ಅಭಿಯಾನ ಯಶಸ್ವಿಯಾಗಲಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಅವರು ತಮ್ಮ ಟ್ವಿಟರ್/ಎಕ್ಸ್ ಖಾತೆಯನ್ನು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

E-Swathu Online Application-15 ದಿನದಲ್ಲಿ ಸಿಗಲಿದೆ ಇ-ಸ್ವತ್ತು:

ಗ್ರಾಮೀಣ ಭಾಗದಲ್ಲಿ ಹೊಸ ಕಾರ್ಯಕ್ರಮವನ್ನು ಜಾರಿಗೆ ತರಲು ಇಲಾಖೆಯು ಮುಂದಾಗಿದ್ದು "ಇ-ಸ್ವತ್ತು ಅಭಿಯಾನ" ಆಯೋಜನೆಯ ಮೂಲಕ ಅಧಿಕೃತ ಗ್ರಾಮೀಣ ಭಾಗದ ಆಸ್ತಿಯ ಮಾಲೀಕರಿಗೆ ಡಿಜಿಟಲ್ ಆಸ್ತಿ ಪ್ರಮಾಣ ಪತ್ರವನ್ನು ವಿತರಣೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

  • ಇ-ಸ್ವತ್ತು' ಯೋಜನೆಯಡಿ ಗ್ರಾಮೀಣ ಆಸ್ತಿಗಳಿಗೆ ಇ-ಖಾತಾ ವಿತರಣೆ.
  • ತಂತ್ರಾಂಶದ ಮೂಲಕ ಆಸ್ತಿ ಮಾಹಿತಿ ಸರಿಪಡಿಸಿಕೊಳ್ಳುವ ಅವಕಾಶ.
  • 95,75,935 ಡಿಜಿಟಲ್ ಆಸ್ತಿ ಪ್ರಮಾಣ ಪತ್ರ ನೀಡುವ ಗುರಿ.
  • ಅಧಿಕಾರಿಗಳು ಅರ್ಜಿ ಅನುಮೋದಿಸದಿದ್ದರೆ ಸ್ವಯಂ ಅನುಮೋದನೆ ಕ್ರಮ.
  • ನಿರಾಕ್ಷೇಪಣಾ ಪತ್ರ, ತೆರಿಗೆ, ಶುಲ್ಕ ಹಾಗೂ ದರಗಳ ವೈಜ್ಞಾನಿಕ ನಿಗದಿ.
  • 'ಇ-ಖಾತಾ' ವಿತರಣೆಯ ಸಮಯ 45 ರಿಂದ 15 ದಿನಕ್ಕೆ ಇಳಿಕೆ.

ಇದನ್ನೂ ಓದಿ: Free Photography Training-ಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಗೆ ಅರ್ಜಿ ಆಹ್ವಾನ!

E-Swathu-ಯಾವಾಗಿನಿಂದ ಜಾರಿ?

ಪ್ರಸ್ತುತ ಎಲ್ಲಾ ಗ್ರಾಮೀಣ ಮಟ್ಟದ ಅಧಿಕಾರಿಗಳಿಗೆ ಆದೇಶವನ್ನು ಹೊರಡಿಸಲು ಸಚಿವರು ರಾಜ್ಯ ಮಟ್ಟದ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಲಾಗಿದ್ದು ಇನ್ನೊಂದೆರಡು ವಾರದ ಒಳಗಾಗಿ ಈ ನೂತನ ನಿಯಮವು ಜಾರಿಗೆ ಬರಲಿದೆ.

What Is E-Swathu-ಏನಿದು ಇ-ಸ್ವತ್ತು ದಾಖಲೆ?

ಗ್ರಾಮೀಣ ಭಾಗದಲ್ಲಿರುವ ಎಲ್ಲಾ ಆಸ್ತಿಗಳಿಗೆ ಆಸ್ತಿಯ ಮಾಲೀಕರು ತಮ್ಮ ಮಾಲೀಕತ್ವವನ್ನು ಸಾಬೀತುಪಡಿಸಲು ಗ್ರಾಮ ಪಂಚಾಯತಿಯಿಂದ ವಿತರಣೆ ಮಾಡುವ ಡಿಜಿಟಲ್ ಪ್ರಮಾಣ ಪತ್ರಕ್ಕೆ ಇ-ಸ್ವತ್ತು ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: PF Amount Withdrawal-ಪಿಎಫ್ ನಿಯಮದಲ್ಲಿ ಭಾರೀ ಬದಲಾವಣೆ! ಇನ್ಮುಂದೆ ಶೇ 75% ಹಣ ವಿತ್ ಡ್ರಾ ಮಾಡಬಹುದು!

E-Swathu Documents

ಇದನ್ನೂ ಓದಿ: B-Khata To A-Khata-ಇನ್ಮುಂದೆ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಪಡೆಯಿರಿ!

E-Swathu Benefits-ಇ-ಸ್ವತ್ತು ಪಡೆಯುವುದರಿಂದ ಆಗುವ ಪ್ರಯೋಜನಗಳೇನು?

ಗ್ರಾಮೀಣ ಭಾಗದ ಆಸ್ತಿಯ ಮಾಲೀಕರು ತಮ್ಮ ಆಸ್ತಿಗಳಿಗೆ ಇ-ಸ್ವತ್ತು ಪ್ರಮಾಣ ಪತ್ರವನ್ನು ಪಡೆಯುವುದರ ಮೂಲಕ ಈ ಕೆಳಗಿನ ಪಟ್ಟಿಯಲ್ಲಿರುವ ಪ್ರಯೋಜನಗಳನ್ನು ಪಡಯಬಹುದು:

ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಇ-ಸ್ವತ್ತು ದಾಖಲೆ ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಈ ದಾಖಲೆ ನಿಮ್ಮ ಬಳಿ ಇದ್ದರೆ ಸುಲಭವಾಗಿ ಆಸ್ತಿಯ ಮೇಲೆ ಸಾಲವನ್ನು ಪಡೆಯಬಹುದು.

ಆಸ್ತಿಯನ್ನು ಮಾರಾಟ ಮಾಡುವ ಸಮಯದಲ್ಲಿ ಇ-ಸ್ವತ್ತು ದಾಖಲೆ ಖರೀದಿದಾರರಿಗೆ ತೋರಿಸುವ ಮೂಲಕ ಆಸ್ತಿಯ ಮಾಲೀಕತ್ವವನ್ನು ಅಧಿಕೃತವಾಗಿ ಸಾಬೀತುಪಡಿಸಬಹುದು.

E-Swathu New Rules-ನೂತನ ನಿಯಮದಲ್ಲಿ ಯಾವೆಲ್ಲ ಬದಲಾವಣೆ ಮಾಡಲಾಗಿದೆ?

ರಾಜ್ಯ ಸರಕಾರವು "ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್" ನಿಯಮಕ್ಕೆ ತಿದ್ದುಪಡಿಯನ್ನು ತರಲಾಗಿದ್ದು ಈ ಹಿಂದೆ ಇದ್ದ ನಿಯಮದಲ್ಲಿ ಒಂದಿಷ್ಟು ಅಗತ್ಯ ಬದಲಾವಣೆಗಳನ್ನು ತರಲಾಗಿದೆ.

ಇದನ್ನೂ ಓದಿ: Mahindra Scholarship-ಮಹೀಂದ್ರಾ ಎಂಪವರ್‌ಹರ್ ಸ್ಕಾಲರ್‌ಶಿಪ್ ರೂ 5,500/- ಪಡೆಯಲು ಅರ್ಜಿ ಅಹ್ವಾನ!

1) 'ಇ-ಖಾತಾ' ವಿತರಣೆಯ ಸಮಯ 45 ರಿಂದ 15 ದಿನಕ್ಕೆ ಇಳಿಕೆ:

ಹಿಂದಿನ ನಿಯಮದ ಪ್ರಕಾರ ಒಮ್ಮೆ ಅರ್ಜಿದಾರರು ಇ-ಸ್ವತ್ತು ಪ್ರಮಾಣ ಪತ್ರವನ್ನು ಪಡೆಯಲು ಗ್ರಾಮ ಪಂಚಾಯತಿಯನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ 45 ದಿನದಲ್ಲಿ ಪ್ರಮಾಣ ಪತ್ರವನ್ನು ಅಧಿಕಾರಿಗಳು ವಿತರಣೆ ಮಾಡಬೇಕು. ಈ ಕ್ರಮಕ್ಕೆ ತಿದ್ದುಪಡಿಯನ್ನು ಮಾಡಿ ಇನ್ನು ಮುಂದೆ 15 ದಿನಗಳ ಕಾಲ ಮಿತಿಗೆ ಇಳಿಕೆ ಮಾಡಲಾಗಿದ್ದು ಇದರಿಂದ ಸಾರ್ವಜನಿಕರಿಗೆ ತ್ವರಿತವಾಗಿ ಇ-ಸ್ವತ್ತು ದಾಖಲೆ ಸಿಗಲಿದೆ.

2) ಅಧಿಕಾರಿಗಳು ಅರ್ಜಿ ಅನುಮೋದಿಸದಿದ್ದರೆ ಸ್ವಯಂ ಅನುಮೋದನೆ ಕ್ರಮ:

ಗ್ರಾಮ ಪಂಚಾಯತ ಅಧಿಕಾರಿಗಳು ಆನ್ಲೈನ್ ನಲ್ಲಿ ದಾಖಲಾಗಿರುವ ಇ-ಸ್ವತ್ತು ಅರ್ಜಿಯನ್ನು 15 ದಿನದಲ್ಲಿ ಪರಿಶೀಲನೆ ಮಾಡಿ ಅನುಮೋದನೆ ಮಾಡದೇ ಇದ್ದರೆ ಇಂತಹ ಅರ್ಜಿಗಳು ಸ್ವಯಂ ಅನುಮೋದನೆ ಗೊಳ್ಳುವಂತೆ ನೂತನ ನಿಯಮದಲ್ಲಿ ತಿದ್ದುಪಡಿ ಮಾಡಲಾಗಿದೆ.

3) ನಿರಾಕ್ಷೇಪಣಾ ಪತ್ರ, ತೆರಿಗೆ, ಶುಲ್ಕ ಹಾಗೂ ದರಗಳ ವೈಜ್ಞಾನಿಕ ನಿಗದಿ:

ನೂತನ ನಿಯಮದ ಪ್ರಕಾರ ಗ್ರಾಮೀಣ ಭಾಗದ ಆಸ್ತಿಗಳಿಗೆ ನಿರಾಕ್ಷೇಪಣಾ ಪತ್ರ, ತೆರಿಗೆ, ಶುಲ್ಕ ಹಾಗೂ ದರಗಳ ವೈಜ್ಞಾನಿಕವಾಗಿ ನಿಗದಿಪಡಿಸಲಾಗಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: