ರಾಜ್ಯ ಸರ್ಕಾರದಿಂದ ಗಿಗ್ ಕಾರ್ಮಿಕರಿಗೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ನೆರವು ನೀಡುವ ನಿಟ್ಟಿನಲ್ಲಿ “ಕರ್ನಾಟಕ ಪ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕ ವಿದೇಯಕ-2025″(Karnataka Gig Workers Bill 2025) ಜಾರಿಗೆ ಅಧಿಕೃತವಾಗಿ ಸುಗ್ರೀವಾಜ್ಞೆಯನ್ನು ಹೊರಡಿಸಲಾಗಿದ್ದು ಈ ಮಸೂದೆಯ ಕುರಿತು ಸಂಪೂರ್ಣ ವಿವರವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
ಗಿಗ್ ಕಾರ್ಮಿಕರು ಎಂದರೆ ಯಾರೆಲ್ಲ ಬರುತ್ತಾರೆ? ಗಿಗ್ ಕಾರ್ಮಿಕರಿಗೆ(Gig Workers) ಈ ಮಸೂದೆಯಿಂದ ಯಾವೆಲ್ಲ ಪ್ರಯೋಜನ ದೊರೆಯಲಿವೆ? ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಪ್ರಕಟಿಸಲಾಗಿದ್ದು ಈ ಮಾಹಿತಿ ಉಪಯುಕ್ತವಾಗಿದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಸಹಕರಿಸಿ.
ಇದನ್ನೂ ಓದಿ: Mobile Repair Training-ಉಚಿತ ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!
ರಾಜ್ಯ ಸರ್ಕಾರದಿಂದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಾಗೂ ಕಾರ್ಮಿಕ ಇಲಾಖೆ(Karmika Ilake Yojanegalu) ಸಚಿವ ಸಂತೋಷ್ ಲಾಡ್ ಅವರ ನೇತೃತ್ವದಲ್ಲಿ “ಕರ್ನಾಟಕ ಪ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕ ವಿದೇಯಕ-2025” ವನ್ನು ಜಾರಿಗೆ ತರಲು ಸುಗ್ರೀವಾಜ್ಞೆಯನ್ನು ಹೊರಡಿಸಲು ಅಧಿಕೃತವಾಗಿ ಅನುಮೋದನೆಯನ್ನು ನೀಡಲಾಗಿದೆ.
Karnataka Gig Workers Bill 2025-ಮಸೂದೆ ಜಾರಿಯ ಉದ್ದೇಶ:
ರಾಜ್ಯ ಸರ್ಕಾರದಿಂದ “ಕರ್ನಾಟಕ ಪ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕ ವಿದೇಯಕ-2025” ಜಾರಿಗೆ ಮುಂದಾಗಿದ್ದು ಈ ಮಸೂದೆಯ ಉದ್ದೇಶಗಳ ವಿವರ ಈ ಕೆಳಗಿನಂತಿದೆ.
1) ಗಿಗ್ ಕಾರ್ಮಿಕರಿಗೆ ಗುಣಮಟ್ಟದ ಜೀವನ ಮತ್ತು ಕೆಲಸದ ವಾತಾವರಣ ನಿರ್ಮಾಣ ಮಾಡುವುದು ಮತ್ತು ಉದ್ಯೋಗ, ಸಾಮಾಜಿಕ, ಆರ್ಥಿಕ ಭದ್ರತೆಯನ್ನು ಒದಗಿಸುವುದು.
2) ಕಾರ್ಮಿಕರು ಅಪಘಾತದಿಂದ ಮರಣ್ ಅಥವಾ ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದಲ್ಲಿ ಅವರು ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಒಂದು ಮುಖ್ಯ ಉದ್ದೇಶವಾಗಿ.
ಇದನ್ನೂ ಓದಿ: Gas Dealership-ಗ್ಯಾಸ್ ವಿತರಣಾ ಡೀಲರ್ ಶಿಪ್ ಪಡೆಯಲು ಅರ್ಜಿ ಆಹ್ವಾನ!

ಇದನ್ನೂ ಓದಿ: Survey Abhiyana-2025: ಪ್ರಪ್ರಥಮ ಬಾರಿಗೆ ಗ್ರಾಮಠಾಣ ಪ್ರದೇಶದಲ್ಲಿ ಸರ್ವೆ ಕಾರ್ಯ!
3) ಸಾಮಾಜಿಕ ಭದ್ರತಾ ಸೌಲಭ್ಯಗಳಾದ ಅಪಘಾತ ಪರಿಹಾರ, ನೈಸರ್ಗಿಕ ಮರಣ ಪರಿಹಾರ, ಅಂತ್ಯಸಂಸ್ಕಾರ ವೆಚ್ಚ, ವಿವಾಹ ಭತ್ಯೆ, ಹೆರಿಗೆ ಭತ್ಯೆ, ಮಕ್ಕಳಿಗೆ ಶೈಕ್ಷಣಿಕ ಸಹಾಯಧನ, ಭವಿಷ್ಯ ನಿಧಿ, ವಸತಿ ಸೌಲಭ್ಯ, ಕೌಶಲಾಭಿವೃದ್ಧಿ ಹಾಗೂ ವೃದ್ಧಾಪ್ಯ ನೆರವು ಇತ್ಯಾದಿ ಸೌಲಭ್ಯಯನ್ನು ಒದಗಿಸಲು ಅವಕಾಶ ನೀಡಲಾಗುತ್ತದೆ.
4) ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಅವಶ್ಯವಿರುವ ನಿಧಿ ಸಂಗ್ರಹಣೆಗೆ ಸಂಬಂಧಿಸಿದಂತೆ ಅಗ್ರಿಗೇಟರ್ ಅಥವಾ ಪ್ಲಾಟ್‌ಫಾರ್ಮ್ ಆಧಾರಿತ ಕಾರ್ಮಿಕರಿಗೆ ಪಾವತಿಸುವ ಪ್ರತಿ ವಹಿವಾಟಿನ ಮೇಲೆ ಶೇ.1 ಕಡಿಮೆ ಇಲ್ಲದಂತೆ ಆದರೆ, ಶೇ.2 ಮೀರದಂತೆ ಸುಂಕ ವಿಧಿಸಿ ಸಂಗ್ರಹಿಸುವ ಉದ್ದೇಶವನ್ನು ಈ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.
5) ಗಿಗ್ ಕಾರ್ಮಿಕರ ಸೇವೆ ಬಳಸಿಕೊಂಡು ಲಾಭಮಾಡಿಕೊಳ್ಳುತ್ತಿರುವ ಅಗ್ರಿಗೇಟರ್ಸ್‌ಗಳು ಸಾಮಾಜಿಕ ಜವಾಬ್ದಾರಿ ಹೊರ ಬೇಕಾಗುತ್ತದೆ. ಕಾರ್ಮಿಕರ ಕನಿಷ್ಟ ಸಾಮಾಜಿಕ ಭದ್ರತಾ ಸೌಲಭ್ಯ ನೀಡುವುದು ಅವರ ಕರ್ತವ್ಯವಾಗಿದೆ ಎಂದು ವಿಧೇಯಕದಲ್ಲಿ ಸ್ಪಷ್ಟಪಡಿಸಲಾಗಿದೆ.
6) ಅಗ್ರಿಗೇಟರ್ಸ್‌ಗಳು ವಹಿವಾಟಿನಿಂದ ಬರುವ ಆದಾಯದ ಕನಿಷ್ಟ ಶೇ.1 ಗರಿಷ್ಟ ಶೇ.2 ರವರೆಗೆ ವೆಲ್‌ಫೇರ್ ಫೀ ಅನ್ನು ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿಗೆ ಪಾವತಿಸುವುದು ಕಾಯ್ದೆಯ ಉದ್ದೇಶವಾಗಿದೆ.
ಇದನ್ನೂ ಓದಿ: Male munsuchane-ರಾಜ್ಯ ಮಳೆ ಮುನ್ಸೂಚನೆ! ಇಲ್ಲಿದೆ ಜಿಲ್ಲಾವಾರು ಮಳೆ ಮಾಹಿತಿ!
Gig Workers Bill Benefits-ಈ ಮಸೂದೆಯಿಂದ ಯಾರಿಗೆಲ್ಲ ಅನುಕೂಲವಾಗಲಿದೆ?
ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಸೂದೆಗೆ ಅನುಮೋದನೆಯನ್ನು ನೀಡಲಾಗಿದ್ದು ಇದರಿಂದ ಈ ಕೆಳಗಿನ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಪ್ರಯೋಜನ ಸಿಗಲಿದೆ.
ಸ್ವಗ್ಗಿ, ಜೊಮಾಟೊಗಳಿಗಲ್ಲಿ ಫುಡ್ ಡೆಲಿವರಿ ಕೆಲಸ ಮಾಡುವವರಿಗೆ
ರೈಡ್ ಶೇರಿಂಗ್ ಸೇವೆಗಳಾದ ಓಲಾ, ಉಬರ್ ಮತ್ತು ನಮ್ಮ ಯಾತ್ರಿ ಇತ್ಯಾದಿ ಅಪ್ಲಿಕೇಶನ್ ಆಧಾರಿತ ಚಾಲಕರಿಗೆ ಈ ಮಸೂದೆಯ ಪ್ರಯೋಜನ ಪಡೆಯಬಹುದು.
ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಪ್ ಕಾರ್ಟ್, ಬಿಗ್ ಬಾಸ್ಕೆಟ್ ಮತ್ತಿತರ ಕ್ಷೇತ್ರಗಳಲ್ಲಿ ಪೂರ್ಣಕಾಲಿಕ ಅಥವಾ ಅರೆಕಾಲಿಕ ಡೆಲಿವರಿ ನೌಕರರಿಗೆ ಇದರಿಂದ ಪ್ರಯೋಜನವಾಗಲಿದೆ.
Labour Department Official Website-ಕಾರ್ಮಿಕ ಇಲಾಖೆ ಯೋಜನೆಗಳ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್ ಲಿಂಕ್- CLICK HERE
Helpline-ಕಾರ್ಮಿಕ ಇಲಾಖೆಯ ಸಹಾಯವಾಣಿ – 155214