Gold Loan-ಚಿನ್ನದ ಮೇಲೆ ಸಾಲ ಪಡೆಯಲು RBI ನಿಂದ ಹೊಸ ನಿಯಮ ಜಾರಿ!

June 13, 2025 | Siddesh
Gold Loan-ಚಿನ್ನದ ಮೇಲೆ ಸಾಲ ಪಡೆಯಲು RBI ನಿಂದ ಹೊಸ ನಿಯಮ ಜಾರಿ!
Share Now:

ಗ್ರಾಹಕರಿಗೆ ಬ್ಯಾಂಕಿಂಗ್ ಮತ್ತು ಹಣಕಾಸು ವಲಯದಲ್ಲಿ ಜನಸ್ನೇಹಿ ವ್ಯವಸ್ಥೆಯನ್ನು ಒದಗಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್(Reserve Bank of India) ಚಿನ್ನದ ಮೇಲೆ(Gold loan) ಸಾರ್ವಜನಿಕರಿಗೆ ಸಾಲವನ್ನು ಒದಗಿಸಲು ನೂತನ ನಿಯಮವನ್ನು ಜಾರಿಗೆ ತಂದಿದ್ದು ಇದರ ಕುರಿತು ಸಂಪೂರ್ಣ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ದೈನಂದಿನ ಜೀವನದಲ್ಲಿ ಖರ್ಚು-ವೆಚ್ಚಗಳನ್ನು ನಿಭಾಹಿಸುವ ಸಮಯದಲ್ಲಿ ಆರ್ಥಿಕ ಸಂಕಷ್ಟದ ಸನ್ನಿವೇಶ ನಿರ್ಮಾಣವಾದ ಸಮಯದಲ್ಲಿ ತ್ವರಿತವಾಗಿ ಬ್ಯಾಂಕ್ ಮೂಲಕ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಲು ಬಹುತೇಕ ಜನರು ಚಿನ್ನದ ಮೇಲೆ ಸಾಲವನ್ನು ತೆಗೆಯಲು ಬ್ಯಾಂಕ್ ಶಾಖೆಯನ್ನು ಭೇಟಿ ಮಾಡುತ್ತಾರೆ ಈ ನಿಟ್ಟಿನಲ್ಲಿ ಗೋಲ್ಡ್ ಲೋನ್(Gold loan new rules) ವಿತರಣೆಯನ್ನು ಇನ್ನು ಹೆಚ್ಚು ಸರಳೀಕರಣಗೊಳಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ಬ್ಯಾಂಕ್ ಮೂಲಕ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್(RBI)ನೂತನ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ.

ಇದನ್ನೂ ಓದಿ: PMFME Scheme-ಕೃಷಿ ಇಲಾಖೆಯಿಂದ ಸ್ವಂತ ಉದ್ದಿಮೆ ಸ್ಥಾಪನೆಗೆ 15 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ!

ಪ್ರಸ್ತುತ ಈ ಲೇಖನದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಚಿನ್ನದ(gold loan news) ಮೇಲೆ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಯಾವೆಲ್ಲ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ? ಇದರಿಂದ ಗ್ರಾಹಕರಿಗೆ ಅಗುವ ಪ್ರಯೋಜನಗಳೇನು? ಈ ನಿಯಮ ಯಾವಾಗಿನಿಂದ ಜಾರಿಗೆ ಬರಲಿದೆ? ಇನ್ನಿತರೆ ಸಂಪೂರ್ಣ ಅಗತ್ಯ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Gold loan rules-ಚಿನ್ನದ ಮೇಲೆ ಸಾಲವನ್ನು ಪಡೆಯಲು ಬದಲಾವಣೆ ಮಾಡಲು ಹೊರಟಿರುವ ಪ್ರಮುಖ ಅಂಶಗಳು ಹೀಗಿವೆ:

1) 10 ಗ್ರಾಂ ಚಿನ್ನದ ಮೇಲೆನ ಸಾಲದ ಮಿತಿ ಏರಿಕೆ:

ಪ್ರಸ್ತುತ 10 ಗ್ರಾಂ ಚಿನ್ನದ ಮೌಲ್ಯಕ್ಕೆ ಶೇ 75% ರಷ್ಟು ಮಾತ್ರ ಸಾಲವನ್ನು ಬ್ಯಾಂಕ್ ಮೂಲಕ ಸಾರ್ವಜನಿಕರು ಪಡೆಯಲು ಅವಕಾಶವಿತ್ತು ಅದರೆ ಈ ನಿಯಮದಲ್ಲಿ ಸಡಿಲಿಕೆಯನ್ನು ಮಾಡಿ ಇನ್ನು ಮುಂದೆ ಶೇ 85% ರಷ್ಟು ಚಿನ್ನದ ಮೇಲೆ ಸಾಲವನ್ನು ನೀಡಲು RBI ನಿಯಮದಲ್ಲಿ ಸಡಿಲಿಕೆ ಮಾಡಲಾಗಿದೆ.

ಉದಾಹರಣೆಗೆ ಹೇಳುವುದಾದರೆ 1 ಲಕ್ಷ ಬೆಲೆ ಬಾಳುವ ಚಿನ್ನವನ್ನು ಬ್ಯಾಂಕ್ ನಲ್ಲಿ ಅಡಮಾನ ಇಟ್ಟು 85,000/- ಸಾಲವನ್ನು ಪಡೆಯಬಹುದು.

ಇದನ್ನೂ ಓದಿ: Airtel Scholarship- ಏರ್‌ಟೆಲ್ ಫೌಂಡೇಶನನಿಂದ ಲ್ಯಾಪ್ ಟಾಪ್ ಮತ್ತು ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

Gold loan

2) ₹2.50 ಲಕ್ಷ ಕ್ಕಿಂತ ಕಡಿಮೆ ಸಾಲವನ್ನು ಪಡೆಯಲು ಕ್ರೆಡಿಟ್ ಮೌಲ್ಯಮಾಪನ ಅಗತ್ಯವಿಲ್ಲ:

₹2.50 ಲಕ್ಷ ರೂಪಾಯಿಗಿಂತ ಕಡಿಮೆ ಮೊತ್ತದ ಚಿನ್ನದ ಸಾಲಗಳಿಗೆ ಆದಾಯದ ಮೌಲ್ಯಮಾಪನ ಅಥವಾ ಕ್ರೆಡಿಟ್ ಚೆಕ್‌ನ ಅಗತ್ಯವಿರುವುದಿಲ್ಲ. ಇದರಿಂದ ಸಣ್ಣ ಸಾಲಗಾರರು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಜನರು, ಸುಲಭವಾಗಿ ಚಿನ್ನದ ಮೇಲೆ ಸಾಲವನ್ನು ಪಡೆಯಲು ಸಹಕಾರಿಯಾಗಿದೆ.

3) ಸಾಲ ಮುಕ್ತಾಯದ ನಂತರ ಚಿನ್ನ/ಬೆಳ್ಳಿಯ ತ್ವರಿತ ವಾಪಸಾತಿ:

ಸಾಲದ ಮರುಪಾವತಿಯಾದ ದಿನದಂದೇ ಅಥವಾ ಗರಿಷ್ಠ 7 ಕೆಲಸದ ದಿನಗಳೊಳಗೆ ಗ್ರಾಹಕರು ಬ್ಯಾಂಕ್ ನಲ್ಲಿ ಅಡಮಾನವಿಟ್ಟಿರುವ ಚಿನ್ನ ಅಥವಾ ಬೆಳ್ಳಿಯನ್ನು ಗ್ರಾಹಕರಿಗೆ ವಾಪಸ್ ನೀಡಬೇಕು. ಮರು ನೀಡಿಕೆಯಲ್ಲಿ ವಿಳಂಬವಾದರೆ, ಸಾಲದಾತ ಬ್ಯಾಂಕ್ ಗಳು ಪ್ರತಿ ದಿನಕ್ಕೆ 5,000 ರೂಪಾಯಿಗಳ ಪರಿಹಾರವನ್ನು ಸಾಲಗಾರರಿಗೆ ನೀಡಬೇಕು ಎಂದು ನೂತನ ನಿಯಮದಲ್ಲಿ ಉಲ್ಲೇಖ ಮಾಡಲಾಗಿದೆ.

4) ಚಿನ್ನ ಮತ್ತು ಬೆಳ್ಳಿಯ ಮೇಲೆ ಬ್ಯಾಂಕ್ ಮೂಲಕ ಸಾಲ ಪಡೆಯುವ ಮಿತಿಗಳು:

ಗ್ರಾಹಕರು ಬ್ಯಾಂಕ್ ನಲ್ಲಿ ಚಿನ್ನ ಮತ್ತು ಬೆಳ್ಳೆಯ ಮೇಲೆ ಸಾಲವನ್ನು ಪಡೆಯಲು ಈ ಕೆಳಗಿನ ಮಿತಿಯನ್ನು ಅನುಸರಿಸಬೇಕಾಗುತ್ತದೆ.

A) ಚಿನ್ನದ ಆಭರಣದ ಮೇಲೆ ಸಾಲ ಗರಿಷ್ಟ 1 ಕೆಜಿ
B) ಚಿನ್ನದ ನಾಣ್ಯಗಳ ಮೇಲೆ ಸಾಲ ಪಡೆಯಲು ಗರಿಷ್ಠ 50 ಗ್ರಾಂ ವರೆಗೆ ಅವಕಾಶವಿರುತ್ತದೆ.
C) ಇದೆ ಮಾದರಿಯಲ್ಲಿ ಬೆಳ್ಳಿ ಆಭರಣಗಳು ಗರಿಷ್ಠ 10 ಕೆಜಿ
D) ಬೆಳ್ಳಿ ನಾಣ್ಯಗಳು ಗರಿಷ್ಠ 500 ಗ್ರಾಂ

ಇದನ್ನೂ ಓದಿ: Crop Insurance-2025: ಬೆಳೆ ವಿಮೆ ಮಾಡಿಸಲು ರೈತರಿಂದ ಅರ್ಜಿ ಆಹ್ವಾನ!

5) ಬ್ಯಾಂಕ್ ನಿಂದ ಪೂರ್ಣ ಪರಿಹಾರ:

ಅಡವಿಟ್ಟ ಚಿನ್ನ ಡ್ಯಾಮೇಜ್ ಅಥವಾ ಕಳೆದು ಹೋದರೆ ಬ್ಯಾಂಕುಗಳೇ ಆ ಗ್ರಾಹಕನಿಗೆ ಪೂರ್ಣ ಪರಿಹಾರ ನೀಡಬೇಕು.

6) ಪಾರದರ್ಶಕ ಹರಾಜು ಪ್ರಕ್ರಿಯೆ:

ಸಾಲದ ಡೀಫಾಲ್ಟ್ ಆದರೆ, ಚಿನ್ನವನ್ನು ಹರಾಜು ಮಾಡುವ ಮೊದಲು ಸಾಲದಾತರು ಸಾಲಗಾರರಿಗೆ ಸರಿಯಾದ ಸೂಚನೆಯನ್ನು ನೀಡಬೇಕು. ಹರಾಜಿನ ಕನಿಷ್ಠ ಬೆಲೆ (ರಿಸರ್ವ್ ಪ್ರೈಸ್) ಮಾರುಕಟ್ಟೆ ಮೌಲ್ಯದ ಕನಿಷ್ಠ 90% ಆಗಿರಬೇಕು (ಎರಡು ವಿಫಲ ಹರಾಜುಗಳ ನಂತರ 85%). ಹರಾಜಿನಿಂದ ಉಳಿದ ಯಾವುದೇ ಹೆಚ್ಚುವರಿ ಮೊತ್ತವನ್ನು 7 ಕೆಲಸದ ದಿನಗಳೊಳಗೆ ಸಾಲಗಾರರಿಗೆ ವಾಪಸ್ ನೀಡಬೇಕು.

ಇದನ್ನೂ ಓದಿ: Cashewnut farming subsidy-ಗೇರು ಕೃಷಿ ಮಾಡಲು ₹1.20 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

ನೂತನ ನಿಯಮ ಯಾವಾಗಿನಿಂದ ಜಾರಿಗೆ ಬರಲಿದೆ?

ಗ್ರಾಹಕರು ಚಿನ್ನ ಮತ್ತು ಬೆಳ್ಳಿಯ ಮೇಲೆ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು RBI ನಿಂದ ರೂಪಿಸಿರುವ ನೂತನ ನಿಯಮವು ಏಪ್ರಿಲ್ 1, 2026 ಜಾರಿಗೆ ಬರಲಿದೆ.

ಇದರ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು RBI ನ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಲು ಇಲ್ಲಿ ಕ್ಲಿಕ್ ಮಾಡಿ-Click Here

WhatsApp Group Join Now
Telegram Group Join Now
Share Now: