Gold Rate-ಗಗನಕ್ಕೇರಿದ ಬಂಗಾರದ ಬೆಲೆ! ಅಮೆರಿಕದಲ್ಲಿ ₹ 3.0 ಲಕ್ಷ ರೂ. ದಾಟಿದ ಒಂದು ಔನ್ಸ್ ಚಿನ್ನದ ಬೆಲೆ!

March 17, 2025 | Siddesh
Gold Rate-ಗಗನಕ್ಕೇರಿದ ಬಂಗಾರದ ಬೆಲೆ! ಅಮೆರಿಕದಲ್ಲಿ ₹ 3.0 ಲಕ್ಷ ರೂ. ದಾಟಿದ ಒಂದು ಔನ್ಸ್ ಚಿನ್ನದ ಬೆಲೆ!
Share Now:

ಬಂಗಾರದ ಬೆಲೆಯು(All Time High Rate of Gold) ಇತಿಹಾಸದಲ್ಲೆ ಹೊಸ ದಾಖಲೆಯನ್ನು ಬರೆಯುತ್ತಿದ್ದು ಅಮೇರಿಕಾದಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 3 ಲಕ್ಷ ರೂ. ಗಡಿಯಲ್ಲಿದೆ. ಒಂದು ಔನ್ಸ್ ಎಂದರೆ 28 ಗ್ರಾಂ ಹಾಗೂ ಇದರ ಮೊತ್ತವನ್ನು ಅಮೇರಿಕನ್ ಡಾಲರ್ ನಲ್ಲಿ ಹೇಳುವುದಾದರೆ ಒಂದು ಔನ್ಸ ಚಿನ್ನದ ಬೆಲೆ 3004.86$.

ಇದೇ ಚಿನ್ನದ ಬೆಲೆಯು ಕಳೆದ ಮೂರು ವರ್ಷಗಳ ಹಿಂದೆ ಭಾರತದಲ್ಲಿ ಒಂದು ತೊಲೆ ಅಂದ್ರೆ 10 ಗ್ರಾಂ ನ ಬೆಲೆಯೂ(Gold price trends) ಕೇವಲ 50 ಸಾವಿರ ರೂ. ಯಿಂದ 55 ಸಾವಿರ ರೂ. ಅಂತರದಲ್ಲಿತ್ತು. ಆದರೆ ಈಗ 80 ರಿಂದ 90 ಸಾವಿರ ರೂ. ಆಸು ಪಾಸಿನಲ್ಲಿದೆ.

ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆ ಇಷ್ಟೊಂದು ಏರಿಕೆಯಾಗಲು ಕಾರಣಗಳೇನು?(Gold market analysis) ಮುಂದಿನ ದಿನಗಳಲ್ಲಿ ಇದರ ಬೆಲೆಯು ಹೇಗಿರಲಿದೆ? ಎಂಬ ಇತ್ಯಾದಿ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ: Mudra loan-2025: ಮುದ್ರಾ ಯೋಜನೆಯಡಿ 10 ಲಕ್ಷದವರೆಗೆ ಸಾಲ! ಅರ್ಜಿ ಸಲ್ಲಿಸುವುದು ಹೇಗೆ?

Gold price

Today Gold Rate-2025 ರಲ್ಲಿ ಇಲ್ಲಿಯವರೆಗೆ 13 ಬಾರಿ ಚಿನ್ನದ ಬೆಳೆ ಏರಿಕೆ!

ಹೌದು, 2025 ರಲ್ಲಿ ಅಂದರೆ ಕೇವಲ 2 ರಿಂದ 2.5 ತಿಂಗಳ ಅವಧಿಯಲ್ಲಿ ಒಟ್ಟು 13 ಬಾರಿ ಚಿನ್ನದ ಬೆಲೆಯು ಏರಿಕೆಯಾಗಿದೆ. 2024ರಲ್ಲಿ ಒಟ್ಟು 27% ಏರಿಕೆ ನಂತರ ಈಗಿರುವ ಬೆಲೆ 2025 ರಲ್ಲಿಯ ದೊಡ್ಡ ದಾಖಲೆ ಎನಿಸಿದೆ.

Reason For Gold rate hike-ಚಿನ್ನದ ಬೆಲೆ ಹೆಚ್ಚುತ್ತಿರುವ ಪ್ರಮುಖ ಕಾರಣವೇನು?

ಹೆಚ್ಚುತ್ತಿರುವ ಚಿನ್ನದ ಮೇಲಿನ ಹೂಡಿಕೆ - ಹಿಂದಿನ ವಾರ ಅಮೇರಿಕಾ ದೇಶದಲ್ಲಿ ಷೇರುಪೇಟೆಯಲ್ಲಿ ಆದಂತಹ ಭಾರಿ ಕುಸಿತದ ಕಾರಣ ಹೂಡಿಕೆಯಲ್ಲಿ ಬದಲಾವಣೆ ಕಂಡಿವೆ. ಆದ್ದರಿಂದ ಷೇರು ಮಾರುಕಟ್ಟೆ ಗಿಂತ ಚಿನ್ನದ ಹೂಡಿಕೆಯಲ್ಲಿ ಭಾರಿ ಆಸಕ್ತಿ ತೋರಿಸುತ್ತಿದ್ದು ಇದರ ಕಾರಣದಿಂದಾಗಿ ಅಮೇರಿಕಾ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದೆ.

ಇದನ್ನೂ ಓದಿ: E-Khatha-ಹಳ್ಳಿಗರಿಗೂ ಸಿಹಿ ಸುದ್ದಿ! ಅನಧಿಕೃತ ಆಸ್ತಿಗಳಿಗೆ ಇ-ಖಾತಾ!

Gold price today

ಅದೇ ರೀತಿ ಸೆಂಟ್ರಲ್ ಬ್ಯಾಂಕ್ ನಿರಂತರವಾಗಿ ಚಿನ್ನದ ಖರೀದಿ ಮಾಡುತ್ತಿದ್ದು ಇದರ ಜೊತೆಗೆ ಭೌಗೋಳಿಕ ರಾಜಕೀಯ ಅನಿಶ್ಚಿತತೆ, ಸುಂಕ ಸಮರ (Tax Issues) ಮತ್ತು ಷೇರು ಮಾರುಕಟ್ಟೆಯಲ್ಲಿ (Share Market) ಆಗುತ್ತಿರುವ ಚಂಚಲ ಪ್ರವೃತ್ತಿಯಿಂದಾಗಿ ಚಿನ್ನದ ಮೇಲಿನ ಹೂಡಿಕೆಯು ಹೆಚ್ಚಾಗುತ್ತಿದೆ ಎಂದು ಹಣಕಾಸು ತಜ್ಞೆಯಾಗಿರುವ ಸುಖಿ ಕೂಪರ್ ಅಂದಾಜಿಸಿದ್ದಾರೆ.

Gold investment tips-ಭವಿಷ್ಯದಲ್ಲಿ ಚಿನ್ನದ ಬೆಲೆಯು ಹೇಗಿರಲಿದೆ?

ಸತ್ಯದ ದಿನಗಳಲ್ಲಿ ಜಾಗತಿಕ ಅನಿಶ್ಚಿತತೆ ಇರುವುದನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು ಮತ್ತಷ್ಟು ಏರಿಕೆಯಾಗಲಿದೆ ಎಂದು ಹೂಡಿಕೆ ತಜ್ಞರು ಅಂದಾಜಿಸಿದ್ದಾರೆ.

ಇದನ್ನೂ ಓದಿ: Anganwadi Worker Salary-ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Gold price fluctuations-ಭಾರತ ದೇಶದಲ್ಲಿ ಚಿನ್ನದ ಬೆಲೆಯ ಸ್ಥಿತಿ ಹೇಗಿದೆ?

ಎರಡು ದಿನಗಳ ಹಿಂದೆ ಶನಿವಾರ ದೇಶದ ರಾಜಧಾನಿ ದಿಲ್ಲಿಯಲ್ಲಿ 24 ಕ್ಯಾರೆಟ್ ಚಿನ್ನವು 10ಗ್ರಾಂ ಗೆ 110ರೂ. ಇಳಿಕೆಯಾಗಿದ್ದು, 89,820ರೂ. ಗೆ ಮಾರಾಟವಾಗುತ್ತಿದೆ. ಅದೇ 22 ಕ್ಯಾರೆಟ್ ಚಿನ್ನದ ಬೆಲೆಯೂ 100ರೂ. ಕಡಿಮೆಯಾಗಿದ್ದು, 82,350ರೂ. ಮಾರಾಟವಾಗುತ್ತಿದೆ.

ಅದೇ ಕರ್ನಾಟಕ ರಾಜ್ಯಧಾನಿ ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನವು 10ಗ್ರಾಂ ಗೆ 100ರೂ. ಇಳಿಕೆಯಾಗಿದ್ದು, 89,670ರೂ. ಗೆ ಮಾರಾಟವಾಗುತ್ತಿದೆ. ಅದೇ 22 ಕ್ಯಾರೆಟ್ ಚಿನ್ನದ ಬೆಲೆಯೂ 100ರೂ. ಕಡಿಮೆಯಾಗಿದ್ದು, 82,200ರೂ. ಮಾರಾಟವಾಗುತ್ತಿದೆ.

Share Now: