Karmika Card-ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ 2 ಲಕ್ಷ ರೂ. ಸಿಗುವ ಹೊಸ ಯೋಜನೆ!

March 18, 2025 | Siddesh
Karmika Card-ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ 2 ಲಕ್ಷ ರೂ. ಸಿಗುವ ಹೊಸ ಯೋಜನೆ!
Share Now:

Labour Department Scheme-ಕರ್ನಾಟಕ ರಾಜ್ಯ ಕಾರ್ಮಿಕ ಇಲಾಖೆಯು, ಕರ್ನಾಟಕ ರಾಜ್ಯ ದಿನಪತ್ರಿಕೆ ವಿತರಣೆ ಮಾಡುವಂತಹ ಕಾರ್ಮಿಕರಿಗೆ ಕಾರ್ಮಿಕರ ಸಾಮಾಜಿಕ ಭದ್ರತಾ ದೃಷ್ಟಿಯಿಂದ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಯನ್ನು ಜಾರಿಗೆ ತಂದಿದೆ.

ಕಾರ್ಮಿಕ ಇಲಾಖೆಯ(Karmika Card) ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವ ಕಾರ್ಮಿಕರು ಅರ್ಹರು? ಯಾವ ಯಾವ ಸೌಲಭ್ಯಗಳು ಕಾರ್ಮಿಕರಿಗೆ ಸಿಗಲಿವೆ? ಅರ್ಜಿ ಸಲ್ಲಿಸುವ ವಿಧಾನ ಹೇಗೆ ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಓದಿ: PM Awas Yojana-ವಸತಿ ರಹಿತರು ಮನೆ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

Labour Department Scheme Details-ಯೋಜನೆಯ ವಿವರ:

ಅಸಂಘಟಿತ ವಲಯದ ವ್ಯಾಪ್ತಿಯಲ್ಲಿ ಬರುವಂತಹ ಪ್ರತಿನಿತ್ಯ ದಿನಪತ್ರಿಕೆ ವಿತರಿಸಿರುವ ಕಾರ್ಮಿಕರಿಗಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ಏಕೆಂದರೆ ಪ್ರತಿನಿತ್ಯವೂ ದಿನಪತ್ರಿಕಾ ವಿತರಕರು ಸಾರ್ವಜನಿಕರ ಮನೆ ಬಾಗಿಲಿಗೆ ದಿನಪತ್ರಿಕೆಯನ್ನು ಹಂಚಲು ದ್ವಿಚಕ್ರ ವಾಹನ ಅಥವಾ ಸೈಕಲ್ ಗಳನ್ನು ಬಳಸುತ್ತಿದ್ದು, ಇದರಿಂದಾಗಿ ಅಪಘಾತಗಳು ಹೆಚ್ಚಾಗುತ್ತಿರುವ ಕಾರಣದಿಂದಾಗಿ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ವಿತರಿಸುವ ಮುಖ್ಯ ಉದ್ದೇಶವು ಈ ಯೋಜನೆಯದ್ದಾಗಿದೆ.

ಇದನ್ನೂ ಓದಿ: Gold Rate-ಗಗನಕ್ಕೇರಿದ ಬಂಗಾರದ ಬೆಲೆ! ಅಮೆರಿಕದಲ್ಲಿ ₹ 3.0 ಲಕ್ಷ ರೂ. ದಾಟಿದ ಒಂದು ಔನ್ಸ್ ಚಿನ್ನದ ಬೆಲೆ!

Labour Department Scheme Benefits-ಈ ಯೋಜನೆಯ ಸೌಲಭ್ಯಗಳು:

ಒಂದು ವೇಳೆ ಕಾರ್ಮಿಕನು ಅಪಘಾತದಲ್ಲಿ ಮರಣ ಹೊಂದಿದರೆ ಅವನ ಕುಟುಂಬದ ಆಶ್ರಿತರಿಗೆ 2 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು.

ಒಂದು ವೇಳೆ ನಡೆದ ಅಪಘಾತದಲ್ಲಿ ಶಾಶ್ವತ ದುರ್ಬಲತೆ ಹೊಂದಿದರೆ, ಶೇಕಡವಾರು ದುರ್ಬಲತೆಯ ಆಧಾರದ ಮೇಲೆ 2 ಲಕ್ಷ ರೂಪಾಯಿಯವರೆಗೆ ಆರ್ಥಿಕ ಸಹಾಯ ಮಾಡಲಾಗುವುದು.

ಮೇಲಿನವುಗಳನ್ನು ಹೊರತುಪಡಿಸಿ, ಅಪಘಾತ ಅಥವಾ ಮಾರಣಾಂತಿಕ ಕಾಯಿಲೆ ಅಥವಾ ಗಂಭೀರ ಅನಾರೋಗ್ಯಕ್ಕೆ ತುತ್ತಾದಲ್ಲಿ ಆಸ್ಪತ್ರೆ ವೆಚ್ಚ 1 ಲಕ್ಷ ರೂ. ವರೆಗೆ ಮರುಪಾವತಿ ಮಾಡಲಾಗುವುದು.

ಇದನ್ನೂ ಓದಿ: Anganwadi Worker Salary-ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

labour card

Who Can Apply For Karmika Card Benefits-ಯಾವ ಕಾರ್ಮಿಕರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು?

ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು 16ರಿಂದ 59 ವರ್ಷದ ಒಳಗಿನವರಾಗಿರಬೇಕು. ಕಡ್ಡಾಯವಾಗಿ ಕೇಂದ್ರ ಸರ್ಕಾರದ ಇ - ಶ್ರಮ್ ಪೋರ್ಟಲ್ ನಲ್ಲಿ "Newspaper Boy" ಎಂಬ ವರ್ಗದ ಅಡಿಯಲ್ಲಿ ನೊಂದಣಿ ಮಾಡಿಸಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು ಹಾಗೂ ESI, EPF ಸೌಲಭ್ಯ ಹೊಂದಿದವರಾಗಿರಬಾರದು.

Documents-ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:

  • ಆಧಾರ್ ಕಾರ್ಡ್
  • ಲೇಬರ್ ಕಾರ್ಡ್
  • ಇ-ಶ್ರಮ್ ಪೋರ್ಟಲ್ ನಲ್ಲಿ ನೋಂದಾಯಿಸಿದ ಪುರಾವೆ ಹಾಗೂ ಇತರೆ ಅಗತ್ಯ ದಾಖಲೆಗಳು

How to Apply-ಅರ್ಜಿ ಸಲ್ಲಿಸುವುದು ಹೇಗೆ?

ಈ ಯೋಜನೆಯ ಲಾಭವನ್ನು ಪಡೆಯಲು ಬಯಸುವ ಎಲ್ಲಾ ಪತ್ರಿಕಾ ವಿತರಕರು ಈಗಲೇ ಇ- ಶ್ರಮ್ ಪೋರ್ಟಲ್ ನಲ್ಲಿ ಸ್ವಯಂ ಅಥವಾ ಹತ್ತಿರದ ಸೇವಾ ಕೇಂದ್ರಗಳಲ್ಲಿ ನೊಂದಾಯಿಸಿಕೊಂಡು ಈ ಯೋಜನೆಯ ಲಾಭವನ್ನು ಪಡೆಯಬಹುದು.

ಇದನ್ನೂ ಓದಿ: Property Rights Act-ತಂದೆ-ತಾಯಿಯನ್ನು ಆರೈಕೆ ಮಾಡದಿದ್ದರೆ ಆಸ್ತಿಯಲ್ಲಿ ಪಾಲಿಲ್ಲ: ಸಚಿವ ಕೃಷ್ಣ ಬೈರೇಗೌಡ

Online Application Link-ಇ- ಶ್ರಮ್ ಪೋರ್ಟಲ್ ಲಿಂಕ್ - Click here

Online Apply Method-ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅಭ್ಯರ್ಥಿಗಳು ಅಧಿಕೃತ ಪೋರ್ಟಲ್ ನಲ್ಲಿ ನೊಂದಣಿಯನ್ನು ಮಾಡಿಕೊಳ್ಳಲು ಮೇಲೆ ತಿಳಿಸಿರುವ ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ತಮ್ಮ ಮೊಬೈಲ್ ನಲ್ಲೇ ಕೆಳಗಿನ ಹಂತಗಳನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ Apply Now ಮಾಡಿ ಅಧಿಕೃತ ಪೋರ್ಟಲ್ ಅನ್ನು ಪ್ರವೇಶ ಮಾಡಬೇಕು.

karmika ilake

Step-2: ನಂತರ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ನೊಂದಣಿಯನ್ನು ಮಾಡಿಕೊಳ್ಳಬೇಕು ಬಳಿಕ ಇಲ್ಲಿ ಮುಖಪುಟದಲ್ಲಿ ತೋರಿಸುವ ಯೋಜನೆಗಳ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ನಿಮ್ಮ ಮೊಬೈಲ್ ನಲ್ಲೇ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

For More Information-ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಕಾರ್ಮಿಕ ಇಲಾಖೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ.

Helpline-ಕಾರ್ಮಿಕ ಇಲಾಖೆಯ ಸಹಾಯವಾಣಿ - 155214
Official Wbesite-ಅಧಿಕೃತ ವೆಬ್ಸೈಟ್ ಲಿಂಕ್- Click here

Share Now: