Gruhalakshmi 1st instalment: ಆಗಸ್ಟ್ 27 ರಂದು “ಗೃಹಲಕ್ಷ್ಮೀ” ಯೋಜನೆಯ ಮೊದಲ ಕಂತಿನ ಹಣ ವರ್ಗಾವಣೆ! ಪಟ್ಟಿಯಲ್ಲಿ ನಿಮ್ಮ ಹೆಸರಿದಿಯೇ ಚೆಕ್ ಮಾಡಿ.

August 11, 2023 | Siddesh

ರಾಜ್ಯ ಸರಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಅಧಿಕೃತ ಚಾಲನಾ ದಿನಾಂಕವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಲ್ಕರ್ ರವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಬಹುನಿರೀಕ್ಷಿತ “ಗೃಹಲಕ್ಷ್ಮೀ” ಯೋಜನೆಗೆ ಇದೇ ಆಗಸ್ಟ್ 27 ರಂದು ಚಾಲನೆ ನೀಡಲಿದ್ದೇವೆ. ಈ ಯೋಜನೆಗೆ ರಾಜ್ಯದ 11 ಸಾವಿರ ಕಡೆ ಚಾಲನೆ ಸಿಗಲಿದ್ದು ಎಲ್ಲ ಗ್ರಾಮ ಪಂಚಾಯತ್, ನಗರಸಭೆ, ಪುರಸಭೆ ಸೇರಿದಂತೆ ಆಯಾ ಸ್ಥಳಗಳಲ್ಲಿ ಈ ಯೋಜನೆಯ ಚಾಲನಾ ಸಮಾರಂಭ ನಡೆಯಲಿದೆ.

ಬೆಳಗಾವಿಯಲ್ಲೇ ”ಗೃಹಲಕ್ಷ್ಮೀ” ಯೋಜನೆಗೆ ಚಾಲನೆ ಸಿಗಬೇಕೆಂಬುದು ನನ್ನ ಕನಸು. ಈ ಕುರಿತು ಮಾನ್ಯ ಸಿಎಂ ಮತ್ತು ಡಿಸಿಎಂ ಬಳಿ ಮನವಿ ಸಲ್ಲಿಸಿದ್ದೆ. ನನ್ನ ಮನವಿಗೆ ಸ್ಪಂದಿಸಿದ ನಮ್ಮ ನಾಯಕರು ಬೆಳಗಾವಿಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲು ಸಹಕರಿಸುತ್ತಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ವಿಷಯವನ್ನು ಪ್ರಕಟಿಸಿದ್ದಾರೆ.

“ಗೃಹಲಕ್ಷ್ಮೀ” ಯೋಜನೆಯ ಮೊದಲ ಕಂತಿನ ಹಣ ವರ್ಗಾವಣೆ ಮತ್ತು ಚಾಲನಾ ಸಮಾರಂಭದ ಕುರಿತು ಬೆಂಗಳೂರಿನ ವಿಕಾಸಸೌಧದಲ್ಲಿ ಉಪ ಮುಖ್ಯಮಂತ್ರಿಗಳಾದ ಡಿ. ಕೆ ಶಿವಕುಮಾರರವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಅಂತಿಮ ನಿರ್ದಾರ ತೆಗೆದುಕೊಳ್ಳಲಾಗಿದೆ ಈ ಸಮಯದಲ್ಲಿ ಕೃಷ್ಣ ಭೈರೇಗೌಡ, ರಹೀಂ ಖಾನ್ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ ನೇರವಾಗಿ ₹ 2000/- ಹಣವು ಡಿಬಿಟಿ ಮೂಲಕ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದ್ದು  ಕುಟುಂಬ ನಿರ್ವಹಣೆಯ ಭಾರವನ್ನು ಇಳಿಸಲು ಮತ್ತು ಮಹಿಳಾ ಸಬಲೀಕರಣಕ್ಕೆ ಇದೊಂದು ಮಹತ್ತರ ಹೆಜ್ಜೆಯಾಗಲಿದೆ ಎಂದು ತಿಳಿಸಿದರು.

ಇಲ್ಲಿಯವರೆಗೆ ರಾಜ್ಯದ ಶೇ 80 ರಷ್ಟು ಮಹಿಳೆಯರು ನೋಂದಣಿ ಮಾಡಿಕೊಂಡಿದ್ಡಾರೆ ಇದರಲ್ಲಿ ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ನೋಂದಣಿ ಮಾಡಿಕೊಂಡಿದ್ದು, ಒಟ್ಟು 1.03 ಕೋಟಿಗೂ ಹೆಚ್ಚಿನ ಜನ ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Electric bill Details: ಒಂದು ವರ್ಷದಲ್ಲಿ ನಿಮ್ಮ ಮನೆಯ ವಿದ್ಯುತ್ ಎಷ್ಟು ಯುನಿಟ್ ಬಳಕೆಯಾಗಿದೆ ಎಂದು ಹೇಗೆ ತಿಳಿಯಬವುದು? ಇಲ್ಲಿದೆ ವೆಬ್ಸೈಟ್ ಲಿಂಕ್

Gruhalakshmi list: ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು  ಚೆಕ್ ಮಾಡುವ ವಿಧಾನ: 

Step-1: ಈ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಸಿದವರು ತಮ್ಮ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಮೊಬೈಲ್ ನಲ್ಲ ಮೆಸೇಜ್ ಬಾಕ್ಸ್ ಅನ್ನ್ ಒಪನ್ ಮಾಡಿಕೊಂಡು 8147500500 ಮೊಬೈಲ್ ಸಂಖ್ಯೆಗೆ ಅರ್ಜಿದಾರರ ರೇಷನ್ ಕಾರ್ಡ ಸಂಖ್ಯೆಯನ್ನು ಮೆಸೇಜ್ ಮಾಡಬೇಕು.

Step-2: ನೀವು ಈ ಮೊಬೈಲ್ ಸಂಖ್ಯೆಗೆ ನಿಮ್ಮ ರೇಷನ್ ಕಾರ್ಡ ಸಂಖ್ಯೆಯನ್ನು ಮೆಸೇಜ್ ಮಾಡಿದ ನಂತರ ನಿಮಗೆ ಈ ಕೆಳಗೆ ಚಿತ್ರದಲ್ಲಿರುವ ರೀತಿ ನಿಮ್ಮ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿದೆ ಎನ್ನುವ ಸಂದೇಶದ ಜೊತೆಗೆ ನಿಮ್ಮ ಅರ್ಜಿಯ ರೆಪ್ರೆನ್ಸ್ ನಂಬರ್ ಬರುತ್ತದೆ. ಈ ರೀತಿ ಸಂದೇಶ ಬಂದರೆ ಗೃಹಲಕ್ಷ್ಮೀ ಯೋಜನೆಯ ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂದು. 

ಈ ನಂಬರ್ ಗೆ ನಿಮ್ಮ ರೇಷನ್ ಕಾರ್ಡ ಸಂಖ್ಯೆಯನ್ನು ಮೇಸೆಜ್ ಕಳುಹಿಸಿದ ನಂತರ "ನಿಮ್ಮ ಗೃಹಲಕ್ಷ್ಮಿಯೋಜನೆಯ ಅರ್ಜಿ ಸಲ್ಲಿಕೆ ಬಾಕಿಯಿದೆ, ದಯವಿಟ್ಟು ಹತ್ತಿರದ ಬೆಂಗಳೂರು  ಒನ್/ ಕರ್ನಾಟಕ ಒನ್ /ಗ್ರಾಮ ಒನ್ /ಬಾಪೂಜಿ ಸೇವಾ ಕೇಂದ್ರ ಗೆ ಭೇಟಿ ನೀಡಿ.- ಕರ್ನಾಟಕ ಸರ್ಕಾರ" ಎಂದು ಮರು ಸಂದೇಶ ಬಂದರೆ ನೀವು ಅರ್ಜಿ ಸಲ್ಲಿಸಬೇಕು ಎಂದು.

ಫಲಾನುಭವಿಗಳಿಗೆ ಪಿಂಕ್ ಸ್ಮಾರ್ಟ್ ಕಾರ್ಡ ವಿತರಣೆ:

ಚಾಲನಾ ಸಮಾರಂಭದ ದಿನದಂದು ಈ ಯೋಜನೆಯಡಿ ನೋಂದಣಿ ಮಾಡಿಕೊಂಡ ಅರ್ಹ ಫಲಾನುಭವಿಗಳಿಗೆ ಪಿಂಕ್ ಬಣ್ಣದ ಸ್ಮಾರ್ಟ್ ಕಾರ್ಡ ವಿತರಣೆ ಮಾಡಲಾಗುತ್ತದೆ  ಈ ಸ್ಮಾರ್ಟ್ ಕಾರ್ಡ ನಲ್ಲಿ ಫಲಾನುಭವಿಯ ಸಂಪೂರ್ಣ ವಿವರ ಇರಲ್ಲಿದ್ದು ಜೊತೆಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರ ಭಾವಚಿತ್ರ ಇರಲಿದೆ ಎಂದು ಡಿ .ಕೆ ಶಿವಕುಮಾರ್ ರವರು ಮಾಹಿತಿ ಹಂಚಿಕೊಂಡಿದ್ದಾರೆ.

Gruhalakshmi Helpline Numbers: 8147500500 /8277000555

ರಾಜ್ಯ ಸರ್ಕಾರ ಬಹುನಿರೀಕ್ಷಿತ “ಗೃಹಲಕ್ಷ್ಮೀ” ಯೋಜನೆಗೆ ಇದೇ ಆಗಸ್ಟ್ 27 ರಂದು ಚಾಲನೆ ನೀಡಲಿದ್ದೇವೆ. ಈ ಯೋಜನೆಗೆ ರಾಜ್ಯದ 11 ಸಾವಿರ ಕಡೆ ಚಾಲನೆ ಸಿಗಲಿದ್ದು ಎಲ್ಲ ಗ್ರಾಮ ಪಂಚಾಯತ್, ನಗರಸಭೆ, ಪುರಸಭೆ ಸೇರಿದಂತೆ ಆಯಾ ಸ್ಥಳಗಳಲ್ಲಿ ಈ ಯೋಜನೆಯ ಚಾಲನಾ ಸಮಾರಂಭ ನಡೆಯಲಿದೆ.

ಬೆಳಗಾವಿಯಲ್ಲೇ ”ಗೃಹಲಕ್ಷ್ಮೀ” ಯೋಜನೆಗೆ ಚಾಲನೆ ಸಿಗಬೇಕೆಂಬುದು ನನ್ನ… pic.twitter.com/gKiQnbOo7u — Laxmi Hebbalkar (@laxmi_hebbalkar) August 11, 2023

ಇದನ್ನೂ ಓದಿ: ಉಚಿತ 30 ದಿನದ ಪಂಪ್ ಸೆಟ್ ವೈರಿಂಗ್ ಮತ್ತು ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ | Free Pump Set Wiring and Repair Training

WhatsApp Group Join Now
Telegram Group Join Now
Share Now: