- Advertisment -
HomeGovt SchemesGruhalakshmi Status-ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಬಿಡುಗಡೆ! ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌!

Gruhalakshmi Status-ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಬಿಡುಗಡೆ! ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌!

Last updated on October 11th, 2024 at 06:59 pm

ರಾಜ್ಯ ಸರಕಾರದಿಂದ ದಸರಾ ಹಬ್ಬಕ್ಕೆ ಮಹಿಳೆಯರಿಗೆ ಬಂಪರ್ ಗಿಪ್ಟ್ ನೀಡಿದ್ದು, ಅರ್ಹ ಫಲಾನುಭವಿ ಮಹಿಳೆಯರಿಗೆ ಎರಡು ತಿಂಗಳ ಗೃಹಲಕ್ಷ್ಮಿ ಹಣವನ್ನು(Gruhalakshmi hana) ಜಮಾ ಮಾಡಲಾಗಿದೆ.

ಕಳೆದ 2-3 ತಿಂಗಳಿನಿಂದ ಸರಿಯಾದ ಸಮಯಕ್ಕೆ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮಾ ಅಗಿರುವುದಿಲ್ಲ ಈ ಕುರಿತು ಸಾರ್ವಜನಿಕ ವಲಯದಲ್ಲಿ ತೀರ್ವ ಅಸಮಾದನವಿದ್ದು, ಈಗ ದಸರಾ ಹಬ್ಬದ ಸಮಯದಲ್ಲಿ ಹಣ ಬಿಡುಗಡೆ ಮಾಡಿರುವುದರಿಂದ ಹಬ್ಬ ಅಚರಣೆಯಲ್ಲಿರುವವರಿಗೆ ಮತ್ತಷ್ಟು ಸಿಹಿ ನೀಡಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್‌ ರವರು ಈ ಕುರಿತು ಹಂಚಿಕೊಂಡಿರುವ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: Krishi honda subsidy-ಶೇ 80% ಸಬ್ಸಿಡಿಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು ಅರ್ಜಿ!

Gruhalakshmi hana-ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಬಿಡುಗಡೆ! ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌!

ಗೃಹಲಕ್ಷ್ಮಿ ಯೋಜನೆಯ ಜುಲೈ ಮತ್ತು ಆಗಸ್ಟ್ ತಿಂಗಳ ಹಣವನ್ನು ಬಿಡುಗಡೆ ಮಾಡಲಾಗಿದೆ. ಎರಡು ಕಂತಿನಲ್ಲಿ ಹಣ ಬಿಡುಗಡೆ ಮಾಡಲಾಗಿದ್ದು, ಅಕ್ಟೋಬರ್ 7 ಮತ್ತು 9 ರಂದು ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

Gruhalakshmi

ಇದನ್ನೂ ಓದಿ: Horticulture Diploma- ಡಿಪ್ಲೋಮಾ ತೋಟಗಾರಿಕೆ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ!

Gruhalakshmi amount-ಎರಡು ತಿಂಗಳ ಹಣ ಜಮಾ!

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣವನ್ನು ಅಂದರೆ ಜುಲೈ ಮತ್ತು ಆಗಸ್ಟ್ ಹಣವನ್ನು ಎರಡು ತಿಂಗಳ ಹಣವನ್ನು ಅರ್ಹ ಅರ್ಜಿದಾರರಿಗೆ ಜಮಾ ಮಾಡಲಾಗಿದೆ.

How to check gruhalakshmi status-ನಿಮ್ಮ ಖಾತೆಗೆ ಹಣ ಜಮಾ ಅಗಿರುವುದನ್ನು ಚೆಕ್ ಮಾಡಿಕೊಳ್ಳುವುದು ಹೇಗೆ?

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳು ತಮ್ಮ ಖಾತೆಗೆ ಹಣ ಜಮಾ ಅಗಿರುವ ಮಾಹಿತಿಯನ್ನು ಈ ಕೆಳಗೆ ತಿಳಿಸಿರುವ ವಿಧಾನಗಳನ್ನು ಅನುಸರಿಸಿ ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: PM Internship Yojana-2024: ಕೇಂದ್ರದಿಂದ ಪಿ ಎಂ ಇಂಟರ್ನಶಿಪ್ ಯೋಜನೆ ಜಾರಿಗೆ ಅಸ್ತು! ತಿಂಗಳಿಗೆ ರೂ 5,000 ಭತ್ಯೆ!

ವಿಧಾನ-1: ಬ್ಯಾಂಕ್ ಸಹಾಯವಾಣಿಗೆ ಮಿಸ್ ಕಾಲ್ ಮಾಡಿ:

ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಯಿರುವ ಆ ಬ್ಯಾಂಕಿನ ಸಹಾಯವಾಣಿಗೆ ನೋಂದಾಯಿತ ಮೊಬೈಲ್ ನಂಬರ್ ನಿಂದ ಮಿಸ್ ಕಾಲ್ ಮಾಡಿ ನಿಮಗೆ ಈ ಯೋಜನೆಯ ಹಣ ಜಮಾ ಅಗಿರುವುದನ್ನು ಚೆಕ್ ಮಾಡಿಕೊಳ್ಳಬಹುದು.

Bank balance check mobile numbers-ಎಲ್ಲಾ ಬ್ಯಾಂಕಿನ ಸಹಾಯವಾಣಿ ಸಂಖ್ಯೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ: Click here

ಇದನ್ನೂ ಓದಿ: Free hostel application-ಉಚಿತ ಹಾಸ್ಟೆಲ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

ವಿಧಾನ-2: DBT Karnataka ಮೊಬೈಲ್ ಅಪ್ಲಿಕೇಶನ್ ಮೂಲಕ:

ಫಲಾನುಭವಿಗಳು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್ ಪ್ರವೇಶ ಮಾಡಿ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅರ್ಜಿದಾರರ ಆಧಾರ್ ಕಾರ್ಡ ನಂಬರ್ ಮತ್ತು ಒಟಿಪಿಯನ್ನು ನಮೂದಿಸಿ ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ತಮ್ಮ ಮೊಬೈಲ್ ನಲ್ಲೇ ಮಾಡಿಕೊಳ್ಳಬಹುದು.

Gruhalakshmi hana

DBT karnataka app link- Donwload Now

ಯೋಜನೆಯ ಅಧಿಕೃತ ವೆಬ್ಸೈಟ್- https://sevasindhugs.karnataka.gov.in/

- Advertisment -
LATEST ARTICLES

Related Articles

- Advertisment -

Most Popular

- Advertisment -