Breaking News:
LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ! Disabled pension scheme-2024: ವಿಕಲಚೇತನರ ಆರೈಕೆದಾರರಿಗೆ ಪ್ರತಿ ತಿಂಗಳಿಗೆ ರೂ 1,000! Raagi kharidi kendra-ರೈತರಿಗೆ ಭರ್ಜರಿ ಸಿಹಿ ಸುದ್ದಿ: ರೂ. 4290 ರಂತೆ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ!
HomeGovt SchemesKashi yatra-ಕಾಶಿ ಯಾತ್ರೆ ಸೇರಿದಂತೆ ಇತರೆ ದಾರ್ಮಿಕ ಸ್ಥಳಗಳನ್ನು ಭೇಟಿ ಮಾಡಲು ರೂ 30,000/- ದವರೆಗೆ...

Kashi yatra-ಕಾಶಿ ಯಾತ್ರೆ ಸೇರಿದಂತೆ ಇತರೆ ದಾರ್ಮಿಕ ಸ್ಥಳಗಳನ್ನು ಭೇಟಿ ಮಾಡಲು ರೂ 30,000/- ದವರೆಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ಕಾಶಿ ಯಾತ್ರೆಗೆ ಸೇರಿದಂತೆ ಇತರೆ ಎರಡು ದಾರ್ಮಿಕ ಸ್ಥಳಗಳನ್ನು ಭೇಟಿ ಮಾಡಲು(Kashi yatre subsidy scheme-2024) ರಾಜ್ಯ ಸರಕಾರದಿಂದ ಸಹಾಯಧನ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು, ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು? ಯಾತ್ರಾವಾರು ಸಹಾಯಧನ ಎಷ್ಟು? ನೀಡಲಾಗುತ್ತದೆ, ಅರ್ಜಿ ಸಲ್ಲಿಸುವ ವಿಧಾನ ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಯ ದತ್ತಿಗಳ ಇಲಾಖೆಯಿಂದ ಪ್ರತಿ ವರ್ಷದಂತೆ ಈ ವರ್ಷವು ಯಾತ್ರೆಗಳನ್ನು ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಅರ್ಥಿಕವಾಗಿ ನೆರವು ನೀಡಲು ಧನ ಸಹಾಯವನ್ನು ಮಾಡಲಾಗುತ್ತದೆ ಈ ಯೋಜನೆಯಡಿ ಪ್ರಸ್ತುತ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: Krishi honda subsidy-ಶೇ 80% ಸಬ್ಸಿಡಿಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು ಅರ್ಜಿ!

Kashi yatre subsidy scheme-ಯಾತ್ರೆವಾರು ಸಹಾಯಧನ ಮಾಹಿತಿ:

1) ಕಾಶಿ ಯಾತ್ರೆ- ರೂ 5,000/-

2) ಚಾರ್ ಧಾರ್ ಯಾತ್ರೆ(ಬದರೀನಾಥ್, ಕೇದಾರ್ ನಾಥ್, ಯಮುನೋತ್ರಿ, ಗಂಗೋತ್ರಿ)- ರೂ 20,000/-

3) ಕೈಲಾಸ ಮಾನಸ ಸರೋವರ ಯಾತ್ರೆ- ರೂ 30,000/-

ಇದನ್ನೂ ಓದಿ: Horticulture Diploma- ಡಿಪ್ಲೋಮಾ ತೋಟಗಾರಿಕೆ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ!

kedarnath

ಇದನ್ನೂ ಓದಿ: PM Internship Yojana-2024: ಕೇಂದ್ರದಿಂದ ಪಿ ಎಂ ಇಂಟರ್ನಶಿಪ್ ಯೋಜನೆ ಜಾರಿಗೆ ಅಸ್ತು! ತಿಂಗಳಿಗೆ ರೂ 5,000 ಭತ್ಯೆ!

ಅರ್ಜಿ ಸಲ್ಲಿಸಲು ದಾಖಲೆಗಳು:

1) ಗುರುತಿನ ಚೀಟಿ,
2) ವಿಳಾಸದ ಪೂರಾವೆ,
3) ಬ್ಯಾಂಕ್ ಪಾಸ್ ಬುಕ್ ಪ್ರತಿ,
4) ಛಾಪಾ ಕಾಗದ,
5) ಅರ್ಜಿದಾರರ ಪೋಟೋ,
6) ಯಾತ್ರೆಗೆ ನೋಂದಾಯಿಸಿಕೊಂಡ ದಾಖಲೆಗಳು,

ಅರ್ಜಿ ಸಲ್ಲಿಸಲು ಅರ್ಹರು:

1) ಯಾತ್ರಾರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

2) 45 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-01-2025 ಸಂಜೆ 4:00 ಗಂಟೆಯ ಒಳಗೆ.

ಇದನ್ನೂ ಓದಿ: Free hostel application-ಉಚಿತ ಹಾಸ್ಟೆಲ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

kashi

ಇದನ್ನೂ ಓದಿ: Bele Darshak app- ನಿಮ್ಮ ಜಮೀನಿನ ಬೆಳೆ ವಿವರ ಸರಿಯಾಗಿ ದಾಖಲಿಸಲಾಗಿದಿಯೇ? ಎಂದು ಚೆಕ್ ಮಾಡಿಕೊಳ್ಳಲು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ!

ಅರ್ಜಿ ಸಲ್ಲಿಕೆ ವಿಧಾನ:

ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳ ಸಮೇತ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಿ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭ ಪಡೆಯಬಹುದು. ಅಥವಾ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರಗಳನ್ನು ಅಗತ್ಯ ದಾಖಲೆಗಳ ಸಮೇತ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಲಿಂಕ್: Apply Now
ಅರ್ಜಿ ಸಲ್ಲಿಸುವ ವಿಧಾನದ ಮಾಹಿತಿ:
Click here

ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಸೇವಾ ಸಿಂಧು ಪೋರ್ಟಲ್ ಭೇಟಿ ಮಾಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Step-1: ಮೊದಲಿಗೆ ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಇದಾದ ನಂತರ ಇಲ್ಲಿ “ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾ ದಾಯದತ್ತಿಗಳ ಇಲಾಖೆ” ಬಟನ್ ಮೇಲೆ ಕ್ಲಿಕ್ ಮಾಡಿ “ಕಾಶಿ ಯಾತ್ರೆ” ಎಂದು ಆಯ್ಕೆ ಮಾಡಿಕೊಂಡು ಲಾಗಿನ್ ಅಗಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: E-kyc status- ಇ-ಕೆವೈಸಿ ಆದವರಿಗೆ ಮಾತ್ರ ಸಿಗಲಿದೆ ಪಿಎಂ ಕಿಸಾನ್ ಹಣ! ಇ-ಕೆವೈಸಿ ಆಗಿದಿಯಾ? ಚೆಕ್ ಮಾಡಿಕೊಳ್ಳಿ!

ಇನ್ನು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಸಂಬಂಧಪಟ್ಟ ಇಲಾಖೆಯ ಅಧಿಕೃತ ವೆಬ್ಸೈಟ್: Click here
ಕಚೇರಿ ವಿಳಾಸ:
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಯ ದತ್ತಿಗಳ ಇಲಾಖೆ, ಚಾಮರಾಜಪೇಟೆ, ಬೆಂಗಳೂರು.

Most Popular

Latest Articles

- Advertisment -

Related Articles