ಆಹಾರ ಇಲಾಖೆಯಿಂದ ರದ್ದಾದ ರೇಷನ್ ಕಾರ್ಡ ಪಟ್ಟಿ ಬಿಡುಗಡೆ | Release of canceled ration card list by food department

ಆಹಾರ ಇಲಾಖೆಯಿಂದ ರೇಷರ್ ಕಾರ್ಡ ಪರಿಶೀಲನೆ ಮಾಡಿ ಅನರ್ಹ ರೇಷನ್ ಕಾರ್ಡಗಳನ್ನು ರದ್ದುಗೊಳಿಸಿ ಪಟ್ಟಿ(canceled ration card list ) ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಹೆಸರಿರುವವರಿಗೆ ಸರಕಾರದಿಂದ ಪಡಿತರ ಚೀಟಿಗೆ ಸಿಗುವ ಸವಲತ್ತುಗಳನ್ನು ಪಡೆಯಲು ಅನರ್ಹರಾಗಿರುತ್ತಾರೆ.

ಆಹಾರ ಇಲಾಖೆಯಿಂದ ರದ್ದಾದ ರೇಷನ್  ಕಾರ್ಡ ಪಟ್ಟಿ ಬಿಡುಗಡೆ | Release of canceled ration card list by food department
Canceled ration card list by food department

ಆಹಾರ ಇಲಾಖೆಯಿಂದ ರೇಷರ್ ಕಾರ್ಡ ಪರಿಶೀಲನೆ ಮಾಡಿ ಅನರ್ಹ ರೇಷನ್ ಕಾರ್ಡಗಳನ್ನು ರದ್ದುಗೊಳಿಸಿ ಪಟ್ಟಿ(canceled ration card list ) ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಹೆಸರಿರುವವರಿಗೆ ಸರಕಾರದಿಂದ ಪಡಿತರ ಚೀಟಿಗೆ ಸಿಗುವ ಸವಲತ್ತುಗಳನ್ನು ಪಡೆಯಲು ಅನರ್ಹರಾಗಿರುತ್ತಾರೆ.

ಆಹಾರ ಇಲಾಖೆಯಿಂದ ಪ್ರತಿ ತಿಂಗಳು ಪಡಿತರ ಚೀಟಿ ಹೊಂದಿರುವವರ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಮಾರ್ಗಸೂಚಿಯನ್ವಯ ಅನರ್ಹರ ಪಟ್ಟಿಯನ್ನು ಅಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟ ಮಾಡಲಾಗುತ್ತದೆ.

ಈ ಪಟ್ಟಿಯಲ್ಲಿ ಹೆಸರಿರುವವರು ಅನರ್ಹಗೊಳಿಸಿರುವ ಕುರಿತು ಆಕ್ಷೇಪಣೆ ಸಲ್ಲಿಸುವುದಿದ್ದಲ್ಲಿ ನಿಮ್ಮ ತಾಲ್ಲೂಕಿನ ಆಹಾರ ಇಲಾಖೆಯ ಕಚೇರಿ ಭೇಟಿ ಮಾಡಿ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಬವುದು.

Ineligible ration card list: ರದ್ದಾದ ರೇಷನ್  ಕಾರ್ಡ ಪಟ್ಟಿ ನೋಡುವ ವಿಧಾನ: 

ಸಾರ್ವಜನಿಕರು ಅಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕೃತ ಜಾಲತಾಣ ಭೇಟಿ ಮಾಡಿ ತಿಂಗಳುವಾರು ರದ್ದಾದ ರೇಷನ್  ಕಾರ್ಡ ಪಟ್ಟಿಯ ವಿವರವನ್ನು ತಿಳಿದುಕೊಳ್ಳಬವುದು.

Step-1: ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://ahara.kar.nic.in/Home/EServices ನಂತರ ಬಲ ಬದಿಯ ಮೋಲೆಯಲ್ಲಿ ಕಾಣುವ ಮೂರು ಡಾಟ್ ಬಟನ್ ಮೇಲೆ ಕ್ಲಿಕ್ ಮಾಡಿ "Destaop Site" ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಳ್ಳಿ.

Step-2: ನಂತರ ಎಡಬದಿಯಲ್ಲಿ ಗೋಚರಿಸುವ ನ್ಯಾವಿಗೇಶನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು, ತದನಂತರದಲ್ಲಿ "E-Ration card" ಆಯ್ಕೆ ತೆರೆದುಕೊಳ್ಳುತ್ತದೆ ಇದರ ಮೇಲೆ ಕ್ಲಿಕ್ ಮಾಡಿ.

Step-3: "E-Ration card" ಆಯ್ಕೆ ವಿಭಾಗದಲ್ಲಿ "Show cancelled/ Suspended list" ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು, ತಿಂಗಳು, ವರ್ಷ ವನ್ನು ಆಯ್ಕೆ ಮಾಡಿಕೊಂಡು "GO" ಬಟಲ್ ಮೇಲೆ ಕ್ಲಿಕ್ ಮಾಡಿದರೆ ರದ್ದಾದ ರೇಷನ್ ಕಾರ್ಡ ಪಟ್ಟಿ ತೋರಿಸುತ್ತದೆ.

ಈ ಪಟ್ಟಿಯಲ್ಲಿ ಅರ್ಜಿದಾರರ ರೇಷನ್ ಕಾರ್ಡ ನಂಬರ್ , ಹೆಸರು ರೇಷನ್ ಕಾರ್ಡ ರದ್ದಾದ ದಿನಾಂಕದ ಮಾಹಿತಿ ಲಭ್ಯವಿರುತ್ತದೆ.

ಇದನ್ನೂ ಓದಿ: How to check Gruhalakshmi application status: ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿ ಚೆಕ್ ಮಾಡುವುದು ಹೇಗೆ?

Eligible ration card list: ರೇಷನ್ ಕಾರ್ಡ ಅರ್ಹರ ಪಟ್ಟಿಯನ್ನು ನೋಡುವುದು ಹೇಗೆ?

"E-Ration card" ಆಯ್ಕೆ ವಿಭಾಗದಲ್ಲಿ "Show village list" ಬಟನ್ ಮೇಲೆ ಕ್ಲಿಕ್ ಮಾಡಿ ರೇಷನ್ ಕಾರ್ಡ/ಪಡಿತರ ಚೀಟಿಯ ಅರ್ಹರ ಫಲಾನುಭವಿಗಳ ಪಟ್ಟಿಯನ್ನು ಪಡೆಯಬವುದು.

 "Show village list" ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತ ಮತ್ತು ಗ್ರಾಮ ಆಯ್ಕೆ ಮಾಡಿಕೊಂಡು "GO" ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Gruhajoyti Yojana bill: ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಶೂನ್ಯ ಬಿಲ್ ವಿತರಣೆ ಪ್ರಾರಂಭ! ನಿಮಗೆ ಯಾವಾಗ ಬರಲಿದೆ ಶೂನ್ಯ ಬಿಲ್?