Infosys Scholarship 2025: ಇನ್ಫೋಸಿಸ್ ಫೌಂಡೇಶನ್ ಕಡೆಯಿಂದ ವಿದ್ಯಾರ್ಥಿನಿಯರಿಗೆ ₹1 ಲಕ್ಷ ಸ್ಕಾಲರ್ಶಿಪ್ ಸೌಲಭ್ಯ!

October 5, 2025 | Siddesh
Infosys Scholarship 2025: ಇನ್ಫೋಸಿಸ್ ಫೌಂಡೇಶನ್ ಕಡೆಯಿಂದ ವಿದ್ಯಾರ್ಥಿನಿಯರಿಗೆ ₹1 ಲಕ್ಷ ಸ್ಕಾಲರ್ಶಿಪ್ ಸೌಲಭ್ಯ!
Share Now:

ಇನ್ಫೋಸಿಸ್ ಫೌಂಡೇಶನ್ ವತಿಯಿಂದ(Infosys Fundation Scholarship) ಗ್ರಾಮೀಣ ಮತ್ತು ನಗರ ಭಾಗದಲ್ಲಿರುವ ಪ್ರತಿಭಾವಂತ ಮಹಿಳಾ ವಿದ್ಯಾರ್ಥಿನಿಯರಿಗೆ ಉನ್ನತ ವ್ಯಾಸಂಗಕ್ಕೆ ಆರ್ಥಿಕವಾಗಿ ನೆರವನ್ನು ಒದಗಿಸಲು ವಿದ್ಯಾರ್ಥಿವೇತನವನ್ನು ನೀಡಲು ಅರ್ಹ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿಕೊಳ್ಳಲು ಅನೌನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿನಿಯರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡು ಉನ್ನತ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಬಹುದು ಈ ಕಾರಣ ಇಂದಿನ ಅಂಕಣದಲ್ಲಿ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಸ್ಕಾಲರ್ಶಿಪ್(Scholarship Application) ಅನ್ನು ಪಡೆಯಲು ವಿದ್ಯಾರ್ಥಿಗಳು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಎನ್ನುವ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Crop Loss Amount-ಬೆಳೆಹಾನಿ ಸಮೀಕ್ಷೆ ಬಳಿಕ ಪರಿಹಾರ ವಿತರಣೆ ಎಕರೆಗೆ ರೂ 17,000/- ಪರಿಹಾರ: ಮುಖ್ಯಮಂತ್ರಿ ಸಿದ್ದರಾಮಯ್ಯ!

ಇನ್ಫೋಸಿಸ್ ಫೌಂಡೇಶನ್(Infosys Scholarship) ಸ್ಕಾಲರ್ಶಿಷ್ ಗೆ ಅರ್ಜಿ ಸಲ್ಲಿಸಲು ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ಓದಿ ಇದರಲ್ಲಿ ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, ಹಾಗೂ ವಯೋಮಿತಿಯನ್ನು ವಿವರಿಸಲಾಗಿದೆ.

Infosys Scholarship 2025 - ಇನ್ಫೋಸಿಸ್ ಫೌಂಡೇಶನ್ STEM ಸ್ಟಾರ್ ಸ್ಕಾಲರ್ಶಿಪ್ 2025:

ಭಾರತದ ಮಹಿಳಾ ವಿದ್ಯಾರ್ಥಿನಿಯರ ತಮ್ಮ ಶೈಕ್ಷಣಿಕ ಕನಸನ್ನು ಉತ್ತಮವಾಗಿ ನನಸು ಮಾಡಲು ಇನ್ಫೋಸಿಸ್ ಫೌಂಡೇಶನ್ ಮತ್ತೊಮ್ಮೆ ಒಂದು ಅದ್ಭುತ ಅವಕಾಶವನ್ನು ನೀಡುತ್ತಿದ್ದಾರೆ ಈ ಸ್ಕೀಮ್ ನಲ್ಲಿ 2025ರ ಅಡಿಯಲ್ಲಿ ವಿದ್ಯಾರ್ಥಿನಿಯರಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿವರೆಗೆ ಆರ್ಥಿಕ ಸಹಾಯವನ್ನು ಒದಗಿಸಲು ಮುಂದಾಗಿದ್ದಾರೆ.

Infosys Scholarship Eligibility - ಯಾರು ಅರ್ಜಿ ಸಲ್ಲಿಸಬಹುದು?

  • ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಭಾರತದ ಮಹಿಳಾ ವಿದ್ಯಾರ್ಥಿನಿಯರಾಗಿರಬೇಕು.
  • ವಿದ್ಯಾರ್ಥಿನಿಯರು ಪಿಯುಸಿ ಉತ್ತೀರ್ಣರಾಗಿರಬೇಕು
  • ಹಾಗೂ ಬಹು ಮುಖ್ಯವಾಗಿ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 8 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಗಮನಿಸಿ ಸರ್ಕಾರಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಕೋರ್ಸ್ ಗಳನ್ನು ಮಾಡುತ್ತಿರುವ ವಿದ್ಯಾರ್ಥಿನಿಯರು ಸಹ ಈ ಸ್ಕಾಲರ್ಶಿಪ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.

ಇದನ್ನೂ ಓದಿ: Bajaj Scholarship-ಬಜಾಜ್ ಸ್ಕಾಲರ್‌ಶಿಪ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹8.0 ಲಕ್ಷದವರೆಗೆ ವಿದ್ಯಾರ್ಥಿವೇತನ!

Infosys Scholarship Amount-ವಿದ್ಯಾರ್ಥಿ ವೇತನದ ಮೊತ್ತ ಎಷ್ಟು?

ಈ ಯೋಜನೆ ಅಡಿಯಲ್ಲಿ ಆಯ್ಕೆಯಾದ ಪ್ರತಿ ವಿದ್ಯಾರ್ಥಿನಿಯರಿಗೂ ವರ್ಷಕ್ಕೆ 1,00,000 ರೂಪಾಯಿ ವಿದ್ಯಾರ್ಥಿವೇತನ ನೀಡಲಾಗುತ್ತದೆ.

Documents For Infosys Scholarship - ಅರ್ಜಿ ಸಲ್ಲಿಸಲು ಬೇಕಾಗುವಂತ ಅಗತ್ಯ ದಾಖಲೆಗಳು?

ಇನ್ಫೋಸಿಸ್ ಫೌಂಡೇಶನ್ ಸ್ಕಾಲರ್ಶಿಷ್ ಗೆ ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಎಲ್ಲಾ ದಾಖಲೆಗಳು ಅಗತ್ಯವಾಗಿ ಕೇಳಲಾಗುತ್ತದೆ. ನಿಮ್ಮ ದಾಖಲೆಗಳನ್ನು ಸಾಫ್ಟ್ ಕಾಪಿ ಮುಖಾಂತರ ಅಪ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ ಉದಾಹರಣೆ , ಪಿಡಿಎಫ್ ಹಾಗೂ ಜೆಪಿಜಿ.

  • ಅಭ್ಯರ್ಥಿಯ ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ ವಿವರ
  • ಪಾಸ್ಪೋರ್ಟ್ ಸೈಜ್ ಫೋಟೋ
  • ನಿಮ್ಮ ಎಲ್ಲಾ ಶೈಕ್ಷಣಿಕ ಪ್ರಮಾಣ ಪತ್ರ
  • ಪ್ರವೇಶ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಕುಟುಂಬದ ಆದಾಯ ಪ್ರಮಾಣ ಪತ್ರ.
  • ನಿಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ

ಇದನ್ನೂ ಓದಿ: Udyam Certificate-ಉದ್ಯಮ್ ಸರ್ಟಿಫಿಕೇಟ್ ಪಡೆಯುವುದು ಹೇಗೆ? ಬ್ಯಾಂಕ್ ಸಾಲ ಪಡೆಯಲು ಈ ದಾಖೆಲೆ ಕಡ್ಡಾಯ!

Infosys Scholarship Application

ಇದನ್ನೂ ಓದಿ: SBI RD Scheme-ಎಸ್ ಬಿ ಐ ನಲ್ಲಿ ಪ್ರತಿ ತಿಂಗಳು ಕೇವಲ 610/- ರೂ ಉಳಿತಾಯ ಮಾಡಿ ₹1.0 ಲಕ್ಷ ಹಣ ಗಳಿಸಿ!

Infosys Scholarship Application Process- ಅರ್ಜಿ ಸಲ್ಲಿಸುವ ವಿಧಾನ ?

ಇನ್ಫೋಸಿಸ್ ಫೌಂಡೇಶನ್ ನಿಂದ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಗಿಯುವುದರ ಒಳಗಾಗಿ ವಿದ್ಯಾರ್ಥಿನಿಯರು ಕೆಳಗಿನ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ.

Step-1: ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿನಿಯರು ಮೊದಲು ಇಲ್ಲಿ "Infosys Scholarship Online Application" ನೀಡಿರುವ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ. ನಂತರ ನೀವು ನಿಮ್ಮ ಹೆಸರು ಹಾಗೂ ಮೊಬೈಲ್ ನಂಬರ್ ಅಥವಾ ಇ-ಮೇಲ್ ಐಡಿ ಮುಖಾಂತರ ರಿಜಿಸ್ಟರ್ ಮಾಡಿಕೊಳ್ಳಿ. ರಿಜಿಸ್ಟರ್ ಆದ ನಂತರ ಪುನಃ ವೆಬ್ಸೈಟ್ ಪೋರ್ಟಲ್ ಗೆ ಹೋಗಿ ಲಾಗಿನ್ ಮಾಡಿ.

Step-2: ಲಾಗಿನ್ ಆದ ನಂತರ ಇನ್ಫೋಸಿಸ್ ಫೌಂಡೇಶನ್ ಸ್ಕಾಲರ್ಶಿಪ್ 2025 ಈ ಆಪ್ಷನ್ ಗೆ ಹೋಗಿ ಕ್ಲಿಕ್ ಮಾಡಿಕೊಳ್ಳಿ. ನಂತರ ನಿಮಗೆ ಒಂದು ಅರ್ಜಿ ಫಾರಂ ಬರುವುದು ಅದನ್ನು ಸರಿಯಾಗಿ ಭರ್ತಿ ಮಾಡಿಕೊಳ್ಳಿ

Step-3: ಅಲ್ಲಿ ಕೇಳಲಾಗುವ ಎಲ್ಲಾ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಹಾಗೂ ಅಪ್ಲೋಡ್ ಮಾಡಿಕೊಳ್ಳಿ. ಅಪ್ಲೋಡ್ ಮಾಡಿಕೊಂಡಿದ ನಂತರ ನಿಮ್ಮ ಅರ್ಜಿಯನ್ನು ಪುನಃ ಪರಿಶೀಲಿಸಿ ನಂತರ "Submit" ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.

ಇದನ್ನೂ ಓದಿ: PMEGP ಯೋಜನೆ ಅಡಿಯಲ್ಲಿ ಶೇ 35% ಸಬ್ಸಿಡಿಯಲ್ಲಿ ಸ್ವಂತ ಉದ್ದಿಮೆ ಆರಂಭಿಸಲು ಅರ್ಜಿ ಆಹ್ವಾನ!

Last Date For Application - ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ?

ಇನ್ಫೋಸಿಸ್ ಫೌಂಡೇಶನ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 30 ಅಕ್ಟೋಬರ್ 2025 ವರೆಗೆ ಮಾತ್ರ ಅವಕಾಶವನ್ನು ನೀಡುತ್ತಿದ್ದಾರೆ. ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿನಿಯರು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ.

Infosys Scholarship Website-ಹೆಚ್ಚಿನ ಮಾಹಿತಿಯನ್ನು ಪಡೆಯಲು ವಿದ್ಯಾರ್ಥಿವೇತನದ ವೆಬ್ಸೈಟ್ ಲಿಂಕ್-Click Here
Infosys Scholarship Helpline-ಸಹಾಯವಾಣಿ ಸಂಖ್ಯೆ- 011-430-92248 (Ext- 351) (Monday to Friday - 10:00AM to 06:00 PM (IST)) Mail- [email protected]

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: