KSOU Admission-2025: ಮನೆಯಲ್ಲಿಯೇ ಇದ್ದು ಓದಿ ವಿವಿಧ ಪದವಿ ಪಡೆಯಲು ಅವಕಾಶ!

June 29, 2025 | Siddesh
KSOU Admission-2025: ಮನೆಯಲ್ಲಿಯೇ ಇದ್ದು ಓದಿ ವಿವಿಧ ಪದವಿ ಪಡೆಯಲು ಅವಕಾಶ!
Share Now:

ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ, 2025-2026 ನೇ ಸಾಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದಿಂದ(KSOU Admission-2025) ಅರ್ಹ ಪದವಿದರ ವಿದ್ಯಾರ್ಥಿಗಳಿಗೆ ವಿವಿಧ ಕೋರ್ಸ್ ಪ್ರವೇಶಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಉನ್ನತ ಶಿಕ್ಷಣ ಎಲ್ಲರಿಗೂ, ಎಲ್ಲೆಡೆ ಎಂಬ ದ್ಯೇಯ ವ್ಯಾಕ್ಯದಿಂದ ಕರ್ನಾಟಕ(Mysuru Open University) ರಾಜ್ಯದಲ್ಲಿ ಅಧಿಕಾರ ಹೊಂದಿರುವ ಏಕೈಕ ಸಾರ್ವಜನಿಕ ವಿಶ್ವ ವಿದ್ಯಾನಿಲಯವಾಗಿದ್ದು, ಉನ್ನತ ಶಿಕ್ಷಣ ಕಾರ್ಯಕ್ರಮಗಳನ್ನು ದೂರ ಶಿಕ್ಷಣ ಪದ್ದತಿಯಲ್ಲಿ ನೀಡಲಾಗುತ್ತದೆ.

ಇದನ್ನೂ ಓದಿ: Diploma agriculture admission-2025: ರಾಯಚೂರು ಕೃಷಿ ವಿವಿಯಿಂದ ಕೃಷಿ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ!

ಇಂದಿನ ಪ್ರಸ್ತುತ ದಿನಗಳಲ್ಲಿ ವಿದ್ಯಾಭ್ಯಾಸಕ್ಕೆ(KSOU Application) ಬಹುತೇಕ ಎಲ್ಲಾ ವರ್ಗದ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ವಿದ್ಯೆಯನ್ನೆ ಆಸ್ತಿಯನ್ನಾಗಿಸಿಕೊಂಡಿರುವವರಿಗೆ ಈ ನಿಟ್ಟಿನಲ್ಲಿ ಕೆಲವು ವೈಯಕ್ತಿಕ ಕಾರಣಗಳಿಂದ ದಿನನಿತ್ಯ ಶಾಲೆಗೆ ಹೋಗಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗದೇ ಇರುವವರು ಈ ಪ್ರವೇಶಾತಿಯ ಪ್ರಯೋಜನವನ್ನು ಪಡೆದುಕೊಳ್ಳಲು ಅವಕಾಶವಿರುತ್ತದೆ.

ಮನೆಯಲ್ಲಿಯೇ ಕುಳಿತು ಪದವಿ ಪಡೆದುಕೊಳ್ಳುಲು ಸಾಧ್ಯವಿದ್ದು, ಪ್ರಸ್ತುತ ಈ ಲೇಖನದಲ್ಲಿ ಯಾವೆಲ್ಲ ಪದವಿಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ? ವಿಶ್ವ ವಿದ್ಯಾಲಯದಿಂದ ದೊರಕುವ ಸೌಲಭ್ಯಗಳು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ? ಇನ್ನಿತರ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Scholarship Application-2025: ಎಸ್ ಎಸ್ ಟ್ರಸ್ಟ್ ನಿಂದ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Mysuru Open University Application-ಮನೆಯಲ್ಲಿಯೇ ಇದ್ದು ಓದಿ ವಿವಿಧ ಪದವಿ ಪಡೆಯಲು ಅವಕಾಶ:

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದಿಂದ(KSOU) ವಿದ್ಯಾರ್ಥಿಗಳು ಪದವಿಯನ್ನು ಪಡೆಯಲು ದಿನನಿತ್ಯ ಶಾಲೆಗೆ ಹೋಗುವ ಅವಶ್ಯಕತೆಯಿರುವುದಿಲ್ಲ ವಿಶ್ವ ವಿದ್ಯಾನಿಲಯದಿಂದ ನಿಗದಿಪಡಿಸಿದ ದಿನಾಂಕದಂದು ನೇರವಾಗಿ ಪರೀಕ್ಷೆಗೆ ಹಾಜರಾಗಿ ಪರೀಕ್ಷೆಯನ್ನು ಬರೆದು ಪದವಿಯನ್ನು ಪಡೆಯಲು ಅವಕಾಶವಿರುತ್ತದೆ.

Important Dates-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ- 01 ಜುಲೈ 2025.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಪ್ರಕಟಿಸಿರುವುದಿಲ್ಲ.

ಇದನ್ನೂ ಓದಿ: Home Construction-ಕಟ್ಟಡ ನಕ್ಷೆ ಮಂಜೂರಾತಿಯಿಲ್ಲದೆ ಮನೆ ಕಟ್ಟವಂತಿಲ್ಲ: ಸುಪ್ರೀಂ ಕೋರ್ಟ್

Karnataka Open University-60 ಕ್ಕೂ ಹೆಚ್ಚಿನ ಪದವಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ:

ಈ ಕೆಳಗಿನ ಪಟ್ಟಿಯಲ್ಲಿರುವ ಪದವಿಗಳನ್ನು ಸೇರಿ ಒಟ್ಟು 60 ಕ್ಕೂ ಹೆಚ್ಚಿನ ಪದವಿ ಶಿಕ್ಷಣಕ್ಕೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

  • ಬಿ.ಎ(BA)
  • ಬಿ.ಕಾಂ(Bcom)
  • ಬಿ.ಬಿ.ಎ(BBA)
  • ಬಿ.ಇಡಿ
  • ಬಿ.ಎಸ್.ಡಬ್ಲ್ಯೂ(BSW)
  • ಬಿ.ಲಿಬ್.ಐ.ಎಸ್ ಸಿ(BLIS)
  • ಬಿ.ಎಸ್.ಸಿ(BSC)
  • ಎಂ.ಎಸ್.ಡಬ್ಲ್ಯೂ(MSW)
  • ಎಂ.ಬಿ.ಎ(MBA)
  • ಎಂ.ಕಾಂ(Mcom)
  • ಎಂ.ಸಿ.ಎ(MCA)
  • ಎಂ.ಎಲ್.ಸಿ(MLC)
  • ಬಿ.ಸಿ.ಎ(BCA)
  • ಎಂ.ಎ(MA)

ಇದನ್ನೂ ಓದಿ: NLM Scheme-ಜಾನುವಾರು ಮಿಷನ್ ಯೋಜನೆಯಡಿ ಕುರಿ ಮೇಕೆ ಕೋಳಿ ಸಾಕಾಣಿಕೆಗೆ ₹ 25.00 ಲಕ್ಷ ಸಬ್ಸಿಡಿ!

ಇದನ್ನೂ ಓದಿ: Kharif Crop Survey-2025: ಮುಂಗಾರು ಬೆಳೆ ಸಮೀಕ್ಷೆ ರೈತರ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ!

UGC Certified University- ಯು.ಜಿ.ಸಿ ಯಿಂದ ಮಾನ್ಯತೆ:

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(KSOU) ದಿಂದ ಪಡೆಯುವ ಎಲ್ಲಾ ಪದವಿಗಳಿಗೆ ಕೇಂದ್ರ ಸರಕಾರದ ಅಧಿಕೃತ ಯು ಜಿ ಸಿ(UGC) ಮಾನ್ಯತೆಯನ್ನು ಹೊಂದಿರುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

Online Application KSOU Admission-2025: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ:

ಆಸಕ್ತ ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ಮೂಲಕವೇ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Step-1: ವಿದ್ಯಾರ್ಥಿಗಳು ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ KSOU Admission Online Application ಅಧಿಕೃತ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ಇದಾದ ಬಳಿಕ ಈ ಪುಟದಲ್ಲಿ "2025-26 ಜುಲೈ ಆವೃತ್ತಿಯ ಪ್ರವೇಶಾತಿಗಾಗಿ ಕ್ಲಿಕ್ ಮಾಡಿ" ಎಂದು ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿ "Click here for New Registration" ಆಯ್ಕೆಯ ಮೇಲೆ ಮೇಲೆ ಕ್ಲಿಕ್ ಮಾಡಿ ಬಳಕೆದಾರ ಐಡಿ ಮತ್ತು ಪಾಸ್ವರ್ಡ ಅನ್ನು ರಚನೆ ಮಾಡಿಕೊಳ್ಳಬೇಕು.

Step-3: ತದನಂತರ Login ಪೇಜ್ ಭೇಟಿ ಮಾಡಿ User Name ಮತ್ತು Password ಅನ್ನು ನಮೂದಿಸಿ Security Code ಅನ್ನು ನಮೂದಿಸಿ Login ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರ ಮತ್ತು ದಾಖಲಾತಿಗಳನ್ನು ಸಲ್ಲಿಸಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Nigama Yojanegalu-ರಾಜ್ಯದ 11 ನಿಗಮಗಳಲ್ಲಿ ವಿವಿಧ ಯೋಜನೆಯಡಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ!

Required Documents For KSOU Admission-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ/Aadhar Card
2) ಪೋಟೋ/Photo
3) ಅಂಕಪಟ್ಟಿ/Marks Card
4) ಸಹಿ ಮಾಡಿದ ಪ್ರತಿ/Signature Copy
5) ಮೊಬೈಲ್ ನಂಬರ್/Mobile Number

KSOU Admission Fee-ಎಷ್ಟು ಶುಲ್ಕವನ್ನು ಪಾವತಿ ಮಾಡಬೇಕು?

ಈ ಅಂಕಣದ ಕೊನೆಯಲ್ಲಿ ನೀಡಿರುವ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(KSOU)ದ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಪದವಿವಾರು ನಿಗದಿಪಡಿಸಿರುವ ಶುಲ್ಕದ ವಿವರವಾದ ಮಾಹಿತಿಯನ್ನು ಪಡೆಯಬಹುದು.

ಇದನ್ನೂ ಓದಿ: Puc Scholarship-ಪಿಯುಸಿಯಲ್ಲಿ ಉತ್ತಮ ಅಂಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ!

KSOU Admission Fee-ಶುಲ್ಕದ ವಿವರವನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ- Download Now
KSOU Admission Copy-ಅಧಿಕೃತ ಪ್ರಕಟಣೆ ಪ್ರತಿಯನ್ನು ಡೌನ್ಲೋಡ್ ಮಾಡಲು ವೆಬ್ಸೈಟ್ ಲಿಂಕ್- Download Now
ಹೆಚ್ಚಿನ ಮಾಹಿತಿ ಪಡೆಯಲು ಸಹಾಯವಾಣಿ/Helpline- 8690544544

WhatsApp Group Join Now
Telegram Group Join Now
Share Now: