Land surveyors notification-750 ಭೂಮಾಪಕರ ಹುದ್ದೆಗೆ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸಲು ಇನ್ನು 7 ದಿನ ಮಾತ್ರ ಅವಕಾಶ!

December 2, 2024 | Siddesh
Land surveyors notification-750 ಭೂಮಾಪಕರ ಹುದ್ದೆಗೆ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸಲು ಇನ್ನು 7 ದಿನ ಮಾತ್ರ ಅವಕಾಶ!
Share Now:

ಕರ್ನಾಟಕ ಲೋಕ ಸೇವಾ ಆಯೋಗದಿಂದ 750 ಭೂಮಾಪಕರ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ(Land surveyors notification) ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಭೂಮಾಪಕರ ಹುದ್ದೆಗೆ ಆನ್ಲೈನ್ ಮೂಲಕ ಯಾರೆಲ್ಲ ಅರ್ಜಿ(Land surveyors job application) ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಅಗತ್ಯ ದಾಖಲಾತಿಗಳೇನು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ವಿಧಾನ ಹೇಗೆ? ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಲು ವೆಬ್ಸೈಟ್ ಲಿಂಕ್ ಅನ್ನು ಸಹ ನೀಡಲಾಗಿದೆ.

ಇದನ್ನೂ ಓದಿ: Bele hani parihara-ಹಿಂಗಾರು ಹಂಗಾಮಿನ ₹120 ಕೋಟಿ ಬೆಳೆ ಹಾನಿ ಪರಿಹಾರ ರೈತರ ಖಾತೆಗೆ!

Monthly salary-ಮಾಸಿಕ ವೇತನ:

ಆಯ್ಕೆಯಾದ ಅಭ್ಯರ್ಥಿಗಳಿಗೆ 23,500 ರಿಂದ 47,650 ರೂ ವೇತನ ನಿಗದಿಪಡಿಸಲಾಗಿದೆ.

Notification details-ಹುದ್ದೆಗಳ ವಿವರ:

ಭೂ ಮಾಪಕ (HK)ಗೆ- 190 ಹುದ್ದೆಗಳು.
ಭೂ ಮಾಪಕ (RPC) ಗೆ- 560 ಹುದ್ದೆಗಳು.

Education qualification- ಅರ್ಜಿ ಸಲ್ಲಿಸಲು ವಿದ್ಯಾರ್ಹತೆ:

ಕರ್ನಾಟಕ ಲೋಕ ಸೇವಾ ಅಯೋಗದ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಐಟಿಐ, ದ್ವೀತಿಯ ಪಿಯುಸಿ ಅನ್ನು ಉತೀರ್ಣ ಅಗಿರಬೇಕು ಅಥವಾ ಡಿಪ್ಲೊಮಾ , ಬಿಇ ಅಥವಾ ಬಿಟೆಕ್‌ ಸಿವಿಲ್ ಎಂಜಿನಿಯರಿಂಗ್‌ ತೇರ್ಗಡೆಯಾಗಿರಬೇಕು.

ಇದನ್ನೂ ಓದಿ: Bele vime-71,117 ಸಾವಿರ ರೈತ ಖಾತೆಗೆ ಬೆಳೆ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ವೆಬ್ಸೈಟ್ ಲಿಂಕ್!

Land surveyor job

Age limit- ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ವಯೋಮಿತಿ:

ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 09-ಡಿಸೆಂಬರ್-2024 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 38 ವರ್ಷಗಳನ್ನು ಹೊಂದಿರಬೇಕಿದೆ. ಅದಾಗ್ಯೂ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ. ವರ್ಗ-2ಎ/2ಬಿ/3ಎ/3ಬಿ ಅಭ್ಯರ್ಥಿಗಳೀಗೆ 03 ವರ್ಷಗಳು, ಎಸ್‌ಸಿ /ಎಸ್‌ಟಿ/ ವರ್ಗ -1 ಅಭ್ಯರ್ಥಿಗಳಿಗೆ 05 ವರ್ಷಗಳು, ಪಿಡಬ್ಲ್ಯೂಡಿ /ವಿಧವೆ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

ಇದನ್ನೂ ಓದಿ: Solar Pumpset subsidy- ಶೇ 80 ರಷ್ಟು ಸಹಾಯಧನದಲ್ಲಿ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

Application fee- ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ:

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ- 600 ರೂ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಒಬಿಸಿ ವರ್ಗದ(2A/2B/3A/3B) ಫಲಾನುಭವಿಗಳಿಗೆ- 300 ರೂ
ಮಾಜಿ ಸೈನಿಕ ಅಭ್ಯರ್ಥಿಗಳು- 50 ರೂ
ಎಸ್‌ಸಿ /ಎಸ್‌ಟಿ/ ವರ್ಗ -1 / ಪಿಡಬ್ಲ್ಯೂಡಿ ಅಭ್ಯರ್ಥಿಗಳು ಯಾವುದೇ ಶುಲ್ಕ ಇರುವುದಿಲ್ಲ.

Important Dates-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09 ಡಿಸೆಂಬರ್ 2024

Documents-ಅಗತ್ಯ ದಾಖಲೆಗಳು:

1) ಅರ್ಜಿದಾರರ ಅಧಾರ್ ಕಾರ್ಡ
2) ಪೋಟೋ
3) ಅಂಕಪಟ್ಟಿ
4) ಗ್ರಾಮೀಣ/ಕನ್ನಡ ವ್ಯಾಸಂಗ ಪ್ರಮಾಣ ಪತ್ರ
5) ಜಾತಿ ಮತ್ತು ಆದಾಯ ಪ್ರಮಾಣ ಪತ್ರ

ಇದನ್ನೂ ಓದಿ: DBT Status- ಎಲ್ಲಾ ಯೋಜನೆಯ ಹಣ ಜಮಾ ಅಗಿರುವುದನ್ನು ಚೆಕ್ ಮಾಡಲು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ!

Online Application link-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅಭ್ಯರ್ಥಿಗಳು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅಗತ್ಯ ದಾಖಲಾತಿಗಳ ಸಮೇತ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

Step-1: Apply Now ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ಜಾಲತಾಣವನ್ನು ಪ್ರವೇಶ ಮಾಡಿದ ಬಳಿಕ ಇಲ್ಲಿ ಮೊದಲ ಬಾರಿಗೆ ಈ ವೆಬ್ಸೈಟ್ ಅನ್ನು ಪ್ರವೇಶ ಮಾಡಿರುವವರು ಲಾಗಿನ್ ವಿಭಾಗದಲ್ಲಿ ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್ ಇ-ಮೇಲ್ ವಿಳಾಸವನ್ನು ಇತರೆ ಮಾಹಿತಿಯನ್ನು ಹಾಕಿ ಖಾತೆಯನ್ನು ರಚನೆ ಮಾಡಿಕೊಳ್ಳಬೇಕು.

Land surveyors

Step-3: ಖಾತೆಯನ್ನು ರಚನೆ ಮಾಡಿಕೊಂಡ ಬಳಿಕ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: Login/ಲಾಗಿನ್ ಅದ ಬಳಿಕ ಇಲ್ಲಿ ಕೇಳುವ ಅಗತ್ಯ ವಿವರವನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು.

Helpline numbers- ಇನ್ನು ಅಧಿಕ ಮಾಹಿತಿಯನ್ನು ಪಡೆಯಲು ಸಹಾಯವಾಣಿ ಸಂಖ್ಯೆಗಳು:

080-30574957/30574901
ಪ್ರಾಂತೀಯ ಕಛೇರಿ ಮೈಸೂರು: 821-2545956
ಪ್ರಾಂತೀಯ ಕಛೇರಿ ಬೆಳಗಾವಿ: 0831-2475345
ಪ್ರಾಂತೀಯ ಕಛೇರಿ ಕಲಬುರಗಿ: 08472-227944
ಪ್ರಾಂತೀಯ ಕಛೇರಿ ಶಿವಮೊಗ್ಗ: 08182-228099

WhatsApp Group Join Now
Telegram Group Join Now
Share Now: