ಪ್ರಸ್ತುತ ದಿನಮಾನದಲ್ಲಿ ಮದುವೆ ನೋಂದಣಿಯು ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ ವಿವಾಹವಾದ ಅನೇಕ ಜನರಿಗೆ ಮದುವೆ ನೋಂದಣಿಯನ್ನು(Marriage Registration) ಅಗತ್ಯತೆ ಕುರಿತು ಮಾಹಿತಿಯೇ ತಿಳಿದಿರುವುದಿಲ್ಲ ಇದರ ಬಗೆ ಈ ಅಂಕಣದಲ್ಲಿ ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ಮದುವೆ ನೋಂದಣಿ ಮಾಡಿಕೊಳ್ಳಲು ಅಗತ್ಯ ದಾಖಲಾತಿಗಳೇನು? ನೋಂದಣಿಗೆ ಅರ್ಜಿ(Marriage Registration Application) ಸಲ್ಲಿಸುವ ವಿಧಾನ ಹೇಗೆ? ಮದುವೆ ನೋಂದಣಿಯನ್ನು ಏಕೆ ಮಾಡಿಕೊಳ್ಳಬೇಕು? ಇತ್ಯಾದಿ ಸಂಪೂರ್ಣ ವಿವರವನ್ನು ಈ ಕೆಳಗಿ ತಿಳಿಸಲಾಗಿದೆ.
ಇದನ್ನೂ ಓದಿ: Ration Correction-ಆಹಾರ ಇಲಾಖೆಯಿಂದ ರೇಷನ್ ಕಾರ್ಡ ತಿದ್ದುಪಡಿ ಕುರಿತು ನೂತನ ಪ್ರಕಟಣೆ!
Documents For Marriage Registration-ಮದುವೆ ನೋಂದಣಿ ಮಾಡಿಕೊಳ್ಳಲು ಈ ದಾಖಲೆ ಕಡ್ಡಾಯ:
1) ಅರ್ಜಿದಾರ ವಧು ಮತ್ತು ವರರ ಆಧಾರ್ ಕಾರ್ಡ ಪ್ರತಿ
2) ವಧು ಮತ್ತು ವರರ SSLC ಅಂಕಪಟ್ಟಿ/ವಿದ್ಯಾರ್ಹತೆ ಪ್ರಮಾಣ ಪತ್ರ
3) ಮದುವೆ ಆಮಂತ್ರಣ ಪತ್ರಿಕೆ
4) ಮದುವೆ ಪೋಟೋ
5) ಅರ್ಜಿದಾರರ ಪೋಟೋ
6) 3 ಜನ ಸಾಕ್ಷಿಗಳ ಆಧಾರ್ ಕಾರ್ಡ ಪ್ರತಿ
How To Apply For Marriage Registration- ಅರ್ಜಿ ಸಲ್ಲಿಸುವ ವಿಧಾನ:
ಮದುವೆ ನೋಂದಣಿಗೆ ಅರ್ಜಿದಾರರು ಎರಡು ವಿಧಾನವನ್ನು ಅನುಸರಿಸಿ ಅರ್ಜಿ ಸಲ್ಲಿಸಲು ಅವಕಾಶವಿದ್ದು 2 ವಿಧಾನದ ಮಾಹಿತಿಯನ್ನು ಈ ಕೆಳಗೆ ಸಂಕ್ಷೀಪ್ತವಾಗಿ ತಿಳಿಸಲಾಗಿದೆ.
ಇದನ್ನೂ ಓದಿ: Gruhalakshmi Amount-ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ!

ವಿಧಾನ-1: ಗ್ರಾಮ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದು:
ಮದುವೆ ನೋಂದಣಿಯನ್ನು ಮಾಡಿಕೊಳ್ಳಲು ಅರ್ಜಿದಾರರು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್ ಅಥವಾ ಬೆಂಗಳೂರು ಒನ್ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
ವಿಧಾನ-2: ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು:
ಅರ್ಜಿದಾರರ ತಮ್ಮ ಮೊಬೈಲ್ ನಲ್ಲೇ ಅಗತ್ಯ ದಾಖಲೆಗಳ ಸಮೇತ ಕಾವೇರಿ 2.0 ತಂತ್ರಾಂಶವನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
Step-1: ಮೊದಲಿಗೆ Online Application ಇಲ್ಲಿ ಕ್ಲಿಕ್ ಮಾಡಿ ಅಧಿಕೃತ kaveri 2.0 ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.
ಇದನ್ನೂ ಓದಿ: Mobile Canteen Subsidy-ಮೊಬೈಲ್ ಕ್ಯಾಂಟಿನ್ ಗೆ ₹5 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

Step-2: ಇದಾದ ಬಳಿಕ ಪ್ರಥಮದಲ್ಲಿ “Register” ಬಟನ್ ಮೇಲೆ ಕ್ಲಿಕ್ ಮಾಡಿ ಈ ತಂತ್ರಾಂಶಕ್ಕೆ ಲಾಗಿನ್ ಅಗಲು ಬಳಕೆದಾರರ ಐಡಿಯನ್ನು ರಚನೆ ಮಾಡಿಕೊಳ್ಳಬೇಕು.
Step-3: ಬಳಕೆದಾರ ಐಡಿ ಮತ್ತು ಪಾಸ್ವರ್ಡ ಅನ್ನು ರಚನೆ ಮಾಡಿಕೊಂಡ ಬಳಿಕ “Login” ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರವನ್ನು ಹಾಕಿ ಅಲ್ಲೇ ಕೆಳಗೆ ಕಾಣುವ ಕ್ಯಾಪ್ಚ ಕೋಡ್ ಅನ್ನು ನಮೂದಿಸಿ ಲಾಗಿನ್ ಅಗಬೇಕು.
Step-4: ಈ ಪೇಜ್ ನಲ್ಲಿ “ವಿವಾಹ ನೋಂದಣಿ ಸೇವೆ” ಆಯ್ಕೆಯ ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ಕೇಳುವ ಅಗತ್ಯ ವಿವರವನ್ನು ಭರ್ತಿ ಮಾಡಿ ಜೊತೆಗೆ ಗಂಡು ಮತ್ತು ಹೆಣ್ಣಿನ ಮತ್ತು ಮೂರು ಸಾಕ್ಷಿದಾರರ ಆಧಾರ್ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಿ ಬಳಿಕ ನೋಂದಣಾಧಿಕಾರಿಯಿಂದ ಅರ್ಜಿ ಪರಿಶೀಲನೆಯಾಗಿ, ಆನ್ಲೈನ್ ಮೂಲಕ ಶುಲ್ಕ ಸಂದಾಯಕ್ಕೆ ಮಾಡಿದರೆ ಕೊನೆಯಲ್ಲಿ ಅಧಿಕೃತ ಮದುವೆ ನೋಂದಣಿ ಪ್ರಮಾಣಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: Bele Vime Amount-2 ಲಕ್ಷ ರೈತರ ಖಾತೆಗೆ ₹76 ಕೋಟಿ ಬೆಳೆ ವಿಮೆ ಪರಿಹಾರ ಜಮಾ!
Why Marriage Registration-ಮದುವೆ ನೋಂದಣಿ ಮಾಡಿಕೊಳ್ಳುವುದರ ಪ್ರಯೋಜನಗಳು:
ಅನೇಕ ಜನರಿಗೆ ಮದುವೆ ನೋಂದಣಿಯನ್ನು ಏಕೆ ಮಾಡಿಕೊಳ್ಳಬೇಕು? ಇದರ ಪ್ರಮುಖ್ಯತೆ ಏನು? ಎನ್ನುವುದರ ಕುರಿತು ಮಾಹಿತಿ ತಿಳಿದಿರುವುದಿಲ್ಲ ಈ ಕುರಿತು ಒಂದಿಷ್ಟು ಮಾಹಿತಿ ಹೀಗಿದೆ.
1) ಮದುವೆ ಪ್ರಮಾಣ ಪತ್ರವು ಮಹಿಳೆಯರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ.
2) ಪತಿ/ಪತ್ನಿ ಇವರ ಪೈಕಿ ಯಾರಾದರೊಬ್ಬರು ಬ್ಯಾಂಕ್ ಡಿಪಾಸಿಟ್ ಅಥವಾ ವಿಮಾ ಪಾಲಿಸಿಯಲ್ಲಿ ನಾಮ ನಿರ್ದೇಶನ ಮಾಡಿರದೆ ಮರಣ ಹೊಂದಿದರೆ ಅವರ ಹೆಸರಿನಲ್ಲಿದ್ದ ಬ್ಯಾಂಕ್ ಡಿಪಾಸಿಟ್ ಅಥವಾ ವಿಮಾ ಪಾಲಿಸಿಯ ಹಣವನ್ನು ಕ್ಲೈಮ್ ಮಾಡಲು ಈ ಪ್ರಮಾಣ ಪತ್ರ ಅವಶ್ಯಕ.
3) ವಿದೇಶಗಳಿಗೆ ಪತಿ ಅಥವಾ ಪತ್ನಿಯನ್ನು ಕರೆದೊಯ್ಯವಾಗ ವಿಸಾ ಪಡೆಯುವ ಮದುವೆ ನೋಂದಣಿ ಪ್ರಮಾಣ ಪತ್ರ ಅವಶ್ಯಕ.
For More Information-ಇನ್ನು ಅಗತ್ಯ ಹೆಚ್ಚಿನ ಮಾಹಿತಿಯನ್ನು ಪಡೆಯಲು ವೆಬ್ಸೈಟ್ ಲಿಂಕ್ ಗಳು:
Online Application Link-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು- Apply Now
Marriage Registration Guidelines-ವಿವಾಹ ನೋಂದಣಿ ಪ್ರಯೋಜನಗಳೇನು? ಇತ್ಯಾದಿ ಸಮಗ್ರ ಮಾಹಿತಿಯನ್ನು ಪಡೆಯಲು ಲಿಂಕ್- Click here