Millet Processing Training-ಬೆಂಗಳೂರು ಕೃಷಿ ವಿವಿಯಿಂದ ಸಿರಿಧಾನ್ಯಗಳ ಸಂಸ್ಕರಣೆ ತರಬೇತಿಗೆ ಅರ್ಜಿ ಆಹ್ವಾನ!

December 28, 2025 | Siddesh
Millet Processing Training-ಬೆಂಗಳೂರು ಕೃಷಿ ವಿವಿಯಿಂದ ಸಿರಿಧಾನ್ಯಗಳ ಸಂಸ್ಕರಣೆ ತರಬೇತಿಗೆ ಅರ್ಜಿ ಆಹ್ವಾನ!
Share Now:

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರೈತ ತರಬೇತಿ ಸಂಸ್ಥೆ, ವಿಸ್ತರಣಾ ನಿರ್ದೇಶನಾಲಯ ಮತ್ತು ಸಿರಿಧಾನ್ಯಗಳ(Millet Processing Training Application) ಉತ್ಕೃಷ್ಟತಾ ಕೇಂದ್ರ, ಸಂಸ್ಕರಣೆ ಮತ್ತು ಆಹಾರ ಇಂಜಿನಿಯರಿಂಗ್ ವಿಭಾಗ, ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗ, ಅಖಿಲ ಭಾರತ ಸುಸಂಘಟಿತ ಸಂಶೋಧನಾ ಯೋಜನೆ- ಕೃಷಿ ನಿರತ ಮಹಿಳೆ, ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆ, ಜಿಕೆವಿಕೆ, ಬೆಂಗಳೂರು ಇವರುಗಳ ಸಹಯೋಗದೊಂದಿಗೆ ಮೂರು ದಿನಗಳ ಕೌಶಲ್ಯ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರಸ್ತುತ ದಿನಮಾನದಲ್ಲಿ ಸಾರ್ವಜನಿಕ ವಲಯದಲ್ಲಿ ಸಿರಿಧಾನ್ಯಗಳ ಮೌಲ್ಯವರ್ಧಿತ(Millet Processing) ಉತ್ಪನ್ನಗಳ ಬಳಕೆಯು ದಿನೇ ದಿನೇ ಹೆಚ್ಚುತ್ತಿದ್ದು ಈ ಕ್ಷೇತ್ರದಲ್ಲಿ ಉದ್ದಿಮೆಯನ್ನು ಕಟ್ಟುವವರಿಗೆ ಉತ್ತಮ ಅವಕಾಶಗಳಿದ್ದು ಸಿರಿಧಾನ್ಯ ಸಂಸ್ಕರಣೆ ಮಾಡಲು ಅವಶ್ಯವಿರುವ ಕೌಶಲ್ಯವನ್ನು ಹೊಂದಲು ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: Free Mushroom Training-ಉಚಿತ ಅಣಬೆ ಕೃಷಿ ತರಬೇತಿಗೆ ಅರ್ಜಿ ಆಹ್ವಾನ!

"ಸಿರಿಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ತರಬೇತಿ(GKVK Millet Processing Training) ಹಾಗೂ ಆಧುನಿಕ ಕೌಶಲ್ಯ ಅಭಿವೃದ್ಧಿ” ತರಬೇತಿಯಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಸಿರಿಧಾನ್ಯ ಸಂಸ್ಕರಣೆ ಘಟಕಕ್ಕೆ ಸಹಾಯಧನವನ್ನು ಪಡೆಯುವುದು ಹೇಗೆ? ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Siridhanya Samskarane-ಸಿರಿಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ತರಬೇತಿ ವಿವರ:

ತರಬೇತಿ ಅವಧಿ: ಈ ತರಬೇತಿಯು ದಿನಾಂಕ: 05 ಜನವರಿ 2026 ರಿಂದ ಪ್ರಾರಂಭವಾಗಿ ದಿನಾಂಕ: 07 ಜನವರಿ 2026 ರವರೆಗೆ ಒಟ್ಟು 3 ದಿನ ನಡೆಯುತ್ತದೆ.

  • ಸ್ಥಳ: ರೈತ ತರಬೇತಿ ಸಂಸ್ಥೆ, ಜಿಕೆವಿಕೆ, ಬೆಂಗಳೂರು
  • ಸಮಯ: ಬೆಳಿಗ್ಗೆ 9.00 ರಿಂದ 4.30 ರವರೆಗೆ
  • ತರಬೇತಿ ಶುಲ್ಕ: ರೂ. 2,714-00
  • ನೊಂದಣಿಗೆ ಕೊನೆಯ ದಿನಾಂಕ: 31 ಡಿಸೆಂಬರ್ 2025

ಇದನ್ನೂ ಓದಿ: Land Conversion-ಕೃಷಿ ಭೂಮಿ ಪರಿವರ್ತನೆ ಇನ್ನು ತುಂಬಾ ಸರಳ! ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ!

Millet Processing Training

ಇದನ್ನೂ ಓದಿ: Sewing Machine Training-ಮಹಿಳೆಯರಿಗೆ ಗುಡ್ ನ್ಯೂಸ್! 31 ದಿನಗಳ ಉಚಿತ ಹೊಲಿಗೆ ಯಂತ್ರ ತರಬೇತಿ!

Millet Processing Training In Karnataka-ಈ ತರಬೇತಿಯಲ್ಲಿ ಯಾವೆಲ್ಲ ವಿಷಯಗಳ ಬಗ್ಗೆ ತಿಳಿಸಲಾಗುತ್ತದೆ?

ಸಿರಿಧಾನ್ಯಗಳ ಪರಿಚಯ, ಮಹತ್ವ ಮತ್ತು ಪೌಷ್ಟಿಕತೆ, ಸಿರಿಧಾನ್ಯ ಆಧಾರಿತ ಉದ್ಯಮಶೀಲತೆಗೆ ಅವಕಾಶಗಳು, ಸಿರಿಧಾನ್ಯ ಆಧಾರಿತ ಡೈರಿ ಉತ್ಪನ್ನಗಳ ತಯಾರಿಕೆ ಬಗ್ಗೆ ತರಬೇತಿಯಲ್ಲಿ ತಿಳಿಸಲಾಗುತ್ತದೆ.

ಸಿರಿಧಾನ್ಯಗಳ ಸಂಸ್ಕರಣೆ, ಪಾಸ್ತಾ ಮತ್ತು ಪಫ್ಡ್ ಎಕ್ಸಟ್ರುಡೆಟ್ಸ್ ಪದಾರ್ಥಗಳ ತಯಾರಿಕೆ, ಸಿರಿಧಾನ್ಯ ಆಧಾರಿತ ಆರೋಗ್ಯಕರ ಬೇಕರಿ ಉತ್ಪನ್ನಗಳ ತಯಾರಿಕೆ.

ಸಿರಿಧಾನ್ಯಗಳಿಂದ ಅರಳು, ಕೊಲ್ಡ್ ಎಕ್ಸಟ್ರುಡೆಡ್ ಮತ್ತು ಅನುಕೂಲಕರ ಸಿದ್ದ ಆಹಾರಗಳ ತಯಾರಿಕೆ ಮಾಹಿತಿ ನೀಡಲಾಗುತ್ತದೆ.

ಸಿರಿಧಾನ್ಯ ಆಧಾರಿತ ಉದ್ಯಮಿಯಿಂದ ಅನುಭವ ಹಂಚಿಕೆ, ಬ್ರಾಂಡಿಂಗ್, ಲೈಸೆನ್ಸ್ (FSSAI)ಮತ್ತು ಮಾರುಕಟ್ಟೆ ಜೋಡಣೆ.

ಸಿರಿಧಾನ್ಯ ಆಧಾರಿತ ಮೌಲ್ಯವರ್ಧಿತ ಉತ್ಪನ್ನಗಳಿಗೆ ರಫ್ತು ಅವಕಾಶಗಳು ಹಾಗೂ ಸಿರಿಧಾನ್ಯ ಉದ್ಯಮಶೀಲತೆಗೆ ಮಾಹಿತಿ ತಿಳಿಸಲಾಗುತ್ತದೆ.

ಇದನ್ನೂ ಓದಿ: Postal Life Insurance-ಪೋಸ್ಟ್ ಆಫೀಸ್ ಲೈಫ್ ಇನ್ಶೂರೆನ್ಸ್ ಕಡಿಮೆ ಕಂತು ಪಾವತಿಸಿ ಹೆಚ್ಚಿನ ಲಾಭ ಪಡೆಯಿರಿ

Millet Processing-ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು:

ಮೊದಲ 20 ಅಭ್ಯರ್ಥಿಗಳನ್ನು ಆದ್ಯತೆಯ ಮೇಲೆ ತರಬೇತಿಗೆ ಪರಿಗಣಿಸಲಾಗುತ್ತದೆ.

ಮೊತ್ತವನ್ನು ಪಾವತಿಸಿದ ನಂತರ ಸ್ಕಿನ್‌ಶಾಟ್ನನ್ನು ಮತ್ತು ಆಧಾ‌ರ್ ಪ್ರತಿಯನ್ನು ಈ ಕೆಳಕಂಡ ಮೊಬೈಲ್ ನಂಬರ್‌ಗೆ ಕಳುಹಿಸಬೇಕು.

ಒಮ್ಮೆ ಬಂದ ಮೊತ್ತವನ್ನು ಯಾವುದೇ ಕಾರಣಕ್ಕೂ ಮರುಪಾವತಿ ಮಾಡಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ತರಬೇತಿಯಲ್ಲಿ ಭಾಗವಯಿಸುವ ಅಭ್ಯರ್ಥಿಗಳು ವಸತಿ ಶುಲ್ಕವನ್ನು ಹೆಚ್ಚುವರಿಯಾಗಿ ಪಾವತಿ ಮಾಡಬೇಕಾಗುತ್ತದೆ.

ಇದನ್ನೂ ಓದಿ: Krishi Honda-ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ಶೇ 90% ಸಹಾಯಧನ!

For Information-ಇತರೆ ಮಾಹಿತಿಗಾಗಿ ಸಂಪರ್ಕಿಸಿ:

ಕಛೇರಿ: 080-23626455, ಡಾ. ಲತಾ ಕುಲಕರ್ಣಿ: 9845674419, ಡಾ. ಮಧುಶ್ರೀ.ಎ: 8105679226

Training Center Location-ತರಬೇತಿ ಕೇಂದ್ರದ ಲೋಕೇಶನ್- Location

PMFME Subsidy Yojana-15 ಲಕ್ಷ ಸಬ್ಸಿಡಿಯಲ್ಲಿ ಸಿರಿಧಾನ್ಯ ಸಂಸ್ಕರಣೆ ಘಟಕ ಆರಂಭಿಸಲು ಅವಕಾಶ:

ತರಬೇತಿಯಲ್ಲಿ ಭಾಗವಹಿಸಿದ ಬಳಿಕ ತಮ್ಮದೇ ಅದ ಸ್ವಂತ ಸಿರಿಧಾನ್ಯ ಸಂಸ್ಕರಣೆ ಘಟಕವನ್ನು ಪ್ರಾರಂಭಿಸುವ ಇಚ್ಚೆಯನ್ನು ಹೊಂದಿರುವವರು ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದಲ್ಲಿ ಅನುಷ್ಥಾನ ಮಾಡುತ್ತಿರುವ PMFME ಯೋಜನೆ ಅಡಿಯಲ್ಲಿ ಶೇ 50% ಗರಿಷ್ಠ 15 ಲಕ್ಷದ ವರೆಗೆ ಸಬ್ಸಿಡಿಯನ್ನು ಪಡೆದು ಸಂಸ್ಕರಣೆಗೆ ಅವಶ್ಯವಿರುವ ಯಂತ್ರೋಪಕರಣ ಖರೀದಿ ಮತ್ತು ಶೆಡ್ ಅನ್ನು ನಿರ್ಮಾಣ ಮಾಡಿಕೊಳ್ಳಬಹುದು.

ಈ ಯೋಜನೆಗೆ ಅರ್ಜಿ ಸಲ್ಲಿಸುವುದರ ಕುರಿತು ಇನ್ನು ಹೆಚ್ಚಿನ ವಿವರ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ನೋಂದಣಿಯನ್ನು ಮಾಡಿಕೊಳ್ಳಿ.

Tags:
WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: