Breaking News:
Gruhalakshmi 15th Installment- ಗೃಹಲಕ್ಷ್ಮಿ ಯೋಜನೆಯಡಿ ಈ ಜಿಲ್ಲೆಯ ಮಹಿಳೆಯರಿಗೆ 15ನೇ ಕಂತಿನ ಹಣ ಬಿಡುಗಡೆ! Akrama sakrama-ಅಕ್ರಮ-ಸಕ್ರಮ ನಮೂನೆ 57 ತಿರಸ್ಕೃತಗೊಂಡ ಅರ್ಜಿ ಪುನರ್ ಪರಿಶೀಲನೆಗೆ ಅವಕಾಶ! LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
HomeNew postsMini tractor subsidy- ಸಬ್ಸಿಡಿಯಲ್ಲಿ ಮಿನಿ ಟ್ರಾಕ್ಟರ್, ಪವರ್ ಟಿಲ್ಲರ್, ಪವರ್ ವೀಡರ್ ಇತರೆ ಯಂತ್ರಗಳನ್ನು...

Mini tractor subsidy- ಸಬ್ಸಿಡಿಯಲ್ಲಿ ಮಿನಿ ಟ್ರಾಕ್ಟರ್, ಪವರ್ ಟಿಲ್ಲರ್, ಪವರ್ ವೀಡರ್ ಇತರೆ ಯಂತ್ರಗಳನ್ನು ಪಡೆಯಲು ಅರ್ಜಿ ಆಹ್ವಾನ!

2024-25 ನೇ ಸಾಲಿನಲ್ಲಿ ಸಹಾಯಧನದಲ್ಲಿ ಮಿನಿ ಟ್ರಾಕ್ಟರ್(Mini tractor ), ಪವರ್ ಟಿಲ್ಲರ್(power tiller), ಪವರ್ ವೀಡರ್(power weeder) ಸೇರಿದಂತೆ ಇತರೆ ಯಂತ್ರೋಪಕರಣಗಳನ್ನು ಹಾಗೂ ರೈತರಿಗೆ ಕೃಷಿ ಚಟುವಟಿಕೆಗೆ ಸಹಾಯವಾಗುವಂತಹ ಯಂತ್ರೋಪಕರಣಗಳನ್ನು(agriculture mechanization ) ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

2024-25 ನೇ ಸಾಲಿನ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿಯಲ್ಲಿ ಸಬ್ಸಿಡಿಯಲ್ಲಿ ಕೃಷಿ ಉಪಕರಣಗಳನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದ್ದು ಈ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಶೇ.50 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಶೇ.90 ಸಹಾಯಧನದಲ್ಲಿ ಮಿನಿ ಟ್ರಾಕ್ಟರ್, ಪವರ್ ಟಿಲ್ಲರ್, 

ರೋಟೋವೇಟರ್(rotavator), ಕಳೆ ಕೊಚ್ಚುವ ಯಂತ್ರಗಳು(ಪವರ್ ವೀಡರ್), ಪವರ್ ಸ್ಪ್ರೇಯರ್(power sprayer), ಡೀಸೆಲ್ ಪಂಪ್ ಸೆಟ್(diesel pump set), ಮೊಟೋಕರ್ಟಗಳನ್ನು(motocart agriculture) ಹಾಗೂ ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕಗಳಾದ ಪ್ರೋರ್ ಮಿಲ್, ಮಿನಿ ರೈಸ್ ಮಿಲ್, ರಾಗಿ ಕ್ಲೀನಿಂಗ್ ಮಿಶನ್, ಚಿಲ್ಲಿಪೌಡರಿಂಗ್ ಮಿಶನ್, ಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣಗಳು(oil ghana machine) ಮತ್ತು ಇತರೆ ಕೃಷಿ ಉಪಕರಣಗಳನ್ನು ಪಡೆಯಲು ಅವಕಾಶವಿರುತ್ತದೆ.

ಇದನ್ನೂ ಓದಿ: Property tax-2024: ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಪಾವತಿ ಈಗ ಭಾರೀ ಸುಲಭ!

ಆಸಕ್ತ ಅರ್ಹ ರೈತರು ಈ ಯೋಜನೆಯಡಿ ಸಹಾಯಧನದಲ್ಲಿ ಯಂತ್ರಗಳನ್ನು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲೆಗಳೇನು? ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

Agriculture mechanization subsidy- ಯಾವ ಯಾವ ಉಪಕರಣಗಳನ್ನು ಸಬ್ಸಿಡಿಯಲ್ಲಿ ಪಡೆಯಬಹುದು:

1) ಮಿನಿ ಟ್ರಾಕ್ಟರ್(Mini tractor )
2) ಪವರ್ ಟಿಲ್ಲರ್(Power tiller)
3) ಕಳೆ ಕೊಚ್ಚುವ ಯಂತ್ರಗಳು/ಪವರ್ ವೀಡರ್(Power weeder)
4) ರೋಟೋವೇಟರ್(Rotavator), 
5) ಪವರ್ ಸ್ಪ್ರೇಯರ್(Power sprayer) 
6) ಡೀಸೆಲ್ ಪಂಪ್ ಸೆಟ್(Diesel pump set)
7) ಮೊಟೋಕರ್ಟಗಳನ್ನು(Motocart agriculture) 
8) ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕಗಳಾದ ಪ್ರೋರ್ ಮಿಲ್
9) ಮಿನಿ ರೈಸ್ ಮಿಲ್(Mini rice mill)
10) ರಾಗಿ ಕ್ಲೀನಿಂಗ್ ಮಿಶನ್(Ragi flour machine)
11) ಚಿಲ್ಲಿಪೌಡರಿಂಗ್ ಮಿಶನ್
12) ಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣಗಳು(Oil ghana machine) 

ಇದನ್ನೂ ಓದಿ: BPL card suspension- ಈ ನಿಯಮ ಮೀರಿದರೆ ನಿಮ್ಮ ಬಿಪಿಎಲ್ ಕಾರ್ಡ್ ಅಮಾನತು ಆಗುತ್ತದೆ!

Documents for mechanization application- ಒದಗಿಸಬೇಕಾದ ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ.
2) ಬ್ಯಾಂಕ್ ಪಾಸ್ ಬುಕ್ ಪ್ರತಿ.
3) ರೇಶನ್ ಕಾರ್ಡ ಪ್ರತಿ.
4) ಅರ್ಜಿದಾರರ ಪೋಟೋ.
5) ಜಮೀನಿನ ಪಹಣಿ/ಉತಾರ್/RTC
6) ಜಂಟಿ ಮಾಲೀಕರ ಖಾತೆ ಹೊಂದಿದ್ದರೆ ಇತರೆ ಮಾಲೀಕರ ಒಪ್ಪಿಗೆ ಪ್ರಮಾಣ ಪತ್ರ.
7) ರೂ.100 ಬಾಂಡ್ ಪೇಪರ್
8) ಅರ್ಜಿ ನಮೂನೆ(ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಸಿಗುತ್ತದೆ)

How to apply for mechanization subsidy yojana- ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಕಚೇರಿ ಸಮಯದಲ್ಲಿ ನಿಮ್ಮ ಹಳ್ಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Post office bank- ಈ ಬ್ಯಾಂಕ್ ನಲ್ಲಿ ಅಕೌಂಟ್ ತೆರೆದರೆ ಸಾಕು ಎಲ್ಲಾ ಯೋಜನೆಯ ಹಣ ಸುಲಭವಾಗಿ ಜಮಾ ಅಗುತ್ತದೆ!

agriculture equipment subsidy amount details-ಯಂತ್ರಗಳಿಗೆ ಎಷ್ಟು ಸಹಾಯಧನ ನೀಡಲಾಗುತ್ತದೆ?

ಕೃಷಿ ಯಾಂತ್ರೀಕರಣ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿ ಸಬ್ಸಿಡಿಯಲ್ಲಿ ಕೃಷಿ ಉಪಕರಣಗಳನ್ನು ಅರ್ಹ ರೈತರಿಗೆ ನೀಡಲಾಗುತ್ತಿದ್ದು, ಸಾಮಾನ್ಯ ವರ್ಗದ(Gen) ರೈತರಿಗೆ ಶೇ.50ರ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(SC/ST) ವರ್ಗದ ರೈತರಿಗೆ ಶೇ.90 ರ ಸಹಾಯಧನದಲ್ಲಿ ಮೇಲೆ ತಿಳಿಸಿರುವ ಯಂತ್ರಗಳನ್ನು ನೀಡಲಾಗುತ್ತದೆ.

Beneficiary selection process- ಅರ್ಜಿ ವಿಲೇವಾರಿ ಪ್ರಕ್ರಿಯೆ:

ಒಮ್ಮೆ ರೈತರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಅರ್ಜಿಯನ್ನು ಪರೀಶಿಲನೆ ಮಾಡಿ ಅನುದಾನ ಲಭ್ಯತೆ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಅರ್ಹ ಅರ್ಜಿದಾರರಿಗೆ ಕರೆ ಮಾಡಿ ಸಹಾಯಧನದಲ್ಲಿ ಯಂತ್ರ ಪಡೆಯಲು ರೈತ ವಂತಿಕೆಯನ್ನು(Farmer share) ಕಂಪನಿಗೆ ಪಾವತಿ ಮಾಡಲು ಹೇಳುತ್ತಾರೆ.

ರೈತ ವಂತಿಕೆ ಹಣವನ್ನು ಪಾವತಿಸಲು ಬ್ಯಾಂಕ್ ಭೇಟಿ ಮಾಡಿ RTGS/NEFT ಮೂಲಕ ಯಂತ್ರ ಪೂರೈಸುವ ಕಂಪನಿಗೆ ಪಾವತಿ ಮಾಡಿದ ಬಳಿಕ ರೈತರಿಗೆ ಯಂತ್ರವನ್ನು ವಿತರಣೆ ಮಾಡಲಾಗುತ್ತದೆ.

ಇದನ್ನೂ ಓದಿ: Life insurance yojana-2024: ಅಪಘಾತ ವಿಮೆ ಇಲ್ಲದಿದ್ದರೂ ಸಿಗುತ್ತೆ ಈ ಯೋಜನೆಯಡಿ 2 ಲಕ್ಷ!

ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ(karnataka agriculture department website) ಅಧಿಕೃತ ಜಾಲತಾಣ: Click here
agriculture department helpline- ಸಹಾಯವಾಣಿ: 1800 425 3553
karnataka agriculture department yojana list- ಕೃಷಿ ಇಲಾಖೆ ಎಲ್ಲಾ ಯೋಜನೆಗಳ ಪಟ್ಟಿ: Click here

Most Popular

Latest Articles

- Advertisment -

Related Articles