Mobile addiction- ನಿಮ್ಮ ಮೊಬೈಲ್ ನಲ್ಲಿ ಈ ಸೆಟ್ಟಿಂಗ್ ಆನ್ ಮಾಡಿ! ನಿಮ್ಮ ಮಕ್ಕಳು ಮೊಬೈಲ್ ಬಳಕೆ ಮಾಡುವುದನ್ನು ತಪ್ಪಿಸಿ!

November 23, 2024 | Siddesh
Mobile addiction- ನಿಮ್ಮ ಮೊಬೈಲ್ ನಲ್ಲಿ ಈ ಸೆಟ್ಟಿಂಗ್ ಆನ್ ಮಾಡಿ! ನಿಮ್ಮ ಮಕ್ಕಳು ಮೊಬೈಲ್ ಬಳಕೆ ಮಾಡುವುದನ್ನು ತಪ್ಪಿಸಿ!
Share Now:

ಹೌದು, ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ನಿಮ್ಮ ಮಗು ಇನ್ಸ್ಟಾಗ್ರಾಮ್, ಯುಟ್ಯೂಬ್, ಫೇಸ್ಬುಕ್, ಗೂಗಲ್ ಅನ್ನು ಹೆಚ್ಚಾಗಿ ಸ್ಕ್ರಾಲ್ ಮಾಡಿ ಅತಿಯಾಗಿ ರಿಲ್ಸ್ ಗಳನ್ನು ನೋಡುವ ಅಭ್ಯಾಸದಿಂದ ಬಳಲುತ್ತಿದ್ದರೆ(How to avoid kids mobile addiction) ಈ ಒಂದು ಸಿಂಪಲ್ ಟಿಪ್ಸ್ ನಿಮಗಾಗಿ!

ಯಾಕೆಂದರೆ ಇಂದಿನ ದಿನಗಳಲ್ಲಿ ಅದರಲ್ಲೂ ಮಕ್ಕಳಾಗಿರಲಿ ಅಥವಾ ವಯಸ್ಕರಾಗಿರಲಿ ಪ್ರತಿಯೊಬ್ಬರೂ ರೀಲ್ಸ್ ಗಳನ್ನು ವೀಕ್ಷಿಸುತ್ತಾರೆ. ಆದರೆ ಮೊಬೈಲ್ ಫೋನ್ ಬಳಸುವ ಅಭ್ಯಾಸ(kids mobile addiction) ವಿಶೇಷವಾಗಿ ಮಕ್ಕಳಿಗೆ ತೊಂದರೆಯಾಗಿ ಕಾಡುತ್ತಿದೆ. ಏಕೆಂದರೆ ದೊಡ್ಡವರಿಗಿಂತಲೂ ಮಕ್ಕಳು ಸೋಶಿಯಲ್ ಮೀಡಿಯಾ ಗಳಿಗೆ (social media )ಹೆಚ್ಚು ಅಂಟಿಕೊಂಡಿರುತ್ತಾರೆ,

ಇದನ್ನೂ ಓದಿ: Yuvanidhi application-2024: ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ!

ಇದು ಅವರ ಆರೋಗ್ಯದ ದೃಷ್ಟಿಯಿಂದ ಹಾಗೂ ಕೆಟ್ಟ ಅಭ್ಯಾಸಗಳಿಗೆ ಗುರಿಯಾಗುವ ಸಾಧ್ಯತೆ(mobile useful tips) ಹೆಚ್ಚಾಗಿರುತ್ತದೆ ಈ ಒಂದು ಅಭ್ಯಾಸದಿಂದ ಆರೋಗ್ಯಕ್ಕೆ ಭಾರಿನಷ್ಟವನ್ನು ನೀಡುವ ದಾರಿಯಾಗಲಿದೆ ಏಕೆಂದರೆ ಇದರಿಂದ ಮಂದಬುದ್ಧಿ, ಬುದ್ಧಿಹೀನ ಅಥವಾ ಮೆದುಳಿಗೆ ಮತ್ತು ಕಣ್ಣುಗಳಿಗೆ ಸಂಭವಿಸುವ ಅನೇಕ ರೋಗಗಳಿಗೆ ಅವರಿಗೆ ಅರಿವೇ ಇಲ್ಲದಂತೆ ತುತ್ತಾಗುತ್ತಿದ್ದಾರೆ.

ಆದ್ದರಿಂದ ನಿಮ್ಮ ಮಕ್ಕಳು ಹಗಲು ರಾತ್ರಿ ಎನ್ನದೆ ಮೊಬೈಲ್ ಫೋನ್ ಗೆ ಅಂಟಿಕೊಂಡಿರುವವರಲ್ಲಿ ಒಬ್ಬರಾಗಿದ್ದರೆ ಈ ಅಭ್ಯಾಸವನ್ನು ಕಡಿಮೆ ಮಾಡಲು ನಿಮ್ಮ ಫೋನ್ ಒಳಗೆ ಈ ಸಣ್ಣ ಸೆಟ್ಟಿಂಗ್ ಅನ್ನು ಅನುಸರಿಸಿ ಅವರ ಹವ್ಯಾಸವನ್ನು ಹಂತ ಹಂತವಾಗಿ ಬದಲಾಯಿಸಬಹುದು.

ಇದನ್ನೂ ಓದಿ: Scholarship application- ವಿದ್ಯಾಧನ ರೂ 55,000 ಸಾವಿರ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Kids addicted with mobile phones- ಈ ಟಿಪ್ಸ್ ಫಾಲೋ ಮಾಡಿ ಮಕ್ಕಳ ಮೊಬೈಲ್ ಬಳಕೆಗೆ ಕಡಿವಾಣ ಹಾಕಿ:

ಈ ಸೆಟ್ಟಿಂಗ್ಸ್ ಪ್ರತಿ ಸ್ಮಾರ್ಟ್ ಫೋನ್ ಗಳಲ್ಲಿ ನೀಡಲಾಗಿದೆ ಇದರಿಂದ ಮಕ್ಕಳು ಹೆಚ್ಚು ಸ್ಕ್ರೋಲಿಂಗ್ ಮಾಡುವ ಅಭ್ಯಾಸವನ್ನು ತಡೆಯಬಹುದು. ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಸ್ಕ್ರೀನ್ ಟೈಮ ಲಿಮಿಟ್( screen time limit )ಸೆಟ್ಟಿಂಗ್ ಅನ್ನು ಒದಗಿಸಲಾಗಿದೆ ಇದರ ಸಹಾಯದಿಂದ ನಿಮ್ಮ ಮಕ್ಕಳು ಅತಿಯಾಗಿ ಫೋನ್ ಬಳಸುವುದನ್ನು ನೀವು ನಿಲ್ಲಿಸಬಹುದು.

ಇದರಲ್ಲಿ ನೀವು ಯಾವುದೇ ಒಂದು ಅಪ್ಲಿಕೇಶನ್ ಗೆ ಸಮಯದ ಮಿತಿಯನ್ನು ಸೆಟ್ ಮಾಡಬಹುದು ನಿಮ್ಮ ಮಗು instagram, youtube, facebook, Google ಅನ್ನು ಹೆಚ್ಚಾಗಿ ಬಳಸಿದರೆ ಟೈಮ್ ಲಿಮಿಟ್( Time limit )ಅನ್ನೋ ಸೆಟ್ ಮಾಡಬೇಕಾಗುತ್ತದೆ. ಇದರಿಂದ ಆ ಟೈಮ್ ತಲುಪಿದ ತಕ್ಷಣ Application Lock ಆಗುತ್ತೆ.

ಮಕ್ಕಳು ಆಗ ಬಳಸಲು ಸಾಧ್ಯವಾಗುವುದಿಲ್ಲ ಈ ಒಂದು ಸೆಟ್ಟಿಂಗ್ ಸಿಕ್ಕಪಟ್ಟೆ ಉತ್ತಮವಾಗಿದ್ದು ಮಕ್ಕಳಿಂದ ನೀವು ನೇರವಾಗಿ ಫೋನ್ ಕಸಿದುಕೊಂಡರೆ ಆಗುವ ರಾಧಾಂತದ ಬಗ್ಗೆ ನೀವು ವಿವರಿಸುವ ಅಗತ್ಯವಿಲ್ಲ.

ಫೋನ್ ಅಪ್ಲಿಕೇಶನ್ ಲಾಕ್ ಆದರೆ ಬೇರೆ ಆಯ್ಕೆ ಇಲ್ಲದೆ ಅದನ್ನು ಬಿಡಲೇಬೇಕಾಗುತ್ತದೆ ಉದಾಹರಣೆಗೆ 5-6 ಗಂಟೆ ಫೋನ್ ಬಳಸುವ ಮಗು 30 ನಿಮಿಷ ಟೈಮ್ ಲಿಮಿಟ್ ಸೆಟ್ ಮಾಡಿಕೊಟ್ಟರೆ ಈ ನಿಮ್ಮ ಪ್ರಯತ್ನ ವಿಫಲವಾಗುವುದಿಲ್ಲ ಆದ್ದರಿಂದ ಅಂತ ಹಂತವಾಗಿ ಕಡಿಮೆ ಸಮಯವನ್ನು ಸೆಟ್ ಮಾಡುವುದು ಉತ್ತಮ .

ಇದನ್ನೂ ಓದಿ: BPL Card guidelines- ರಾಜ್ಯ ಸರಕಾರದಿಂದ ಈ ವರ್ಗಕ್ಕೆ ಸೇರಿದವರ ಬಿಪಿಎಲ್ ಕಾರ್ಡ ರದ್ದುಗೊಳಿಸಲು ಸೂಚನೆ!

How to set screen time limit- ಫೋನ್ನಲ್ಲಿ ಸ್ಕ್ರೀನ್ ಟೈಮ್ ಲಿಮಿಟ್(screen time limit) ಸೆಟ್ ಮಾಡುವುದು ಹೇಗೆ?

Step-1: ಮೊದಲು ನಿಮ್ಮ ಫೋನ್ನಲ್ಲಿ ಟೈಮ್ ಲಿಮಿಟ್ ಸೆಟ್ time limit set ಮಾಡುವುದು ಹೇಗೆ ಎಂದು ತಿಳಿಯುವುದು ಮುಖ್ಯವಾಗಿದೆ. ಅದಕ್ಕಾಗಿ ನೀವು ನೇರವಾಗಿ ನಿಮ್ಮ ಮೊಬೈಲ್ ನಲ್ಲಿ setting ಗೆ ಹೋಗಿ ನಂತರ parental control /parental lock search ಮಾಡಿ ಈ ಒಂದು ಆಪ್ಷನ್ ನಲ್ಲಿ App limit option ಮೇಲೆ ಕ್ಲಿಕ್ ಮಾಡಬೇಕು.

mobile addiction

ಇದನ್ನೂ ಓದಿ: Health Department- ಆರೋಗ್ಯ ಇಲಾಖೆಯಿಂದ ಮತ್ತೊಂದು ಜನಸ್ನೇಹಿ ಯೋಜನೆ ಜಾರಿ!

Step-2: ನಂತರ ನಿಮ್ಮ ಫೋನ್ನಲ್ಲಿ ಲಭ್ಯವಿರುವ ಎಲ್ಲಾ ಅಪ್ಲಿಕೇಶನ್ಗಳ ಪಟ್ಟಿಯನ್ನು ತೋರಿಸುತ್ತದೆ. ಈಗ ನಿಮಗೆ ಯಾವ ಅಪ್ಲಿಕೇಶನ್ ಗೆ ಟೈಮ್ ಲಿಮಿಟ್ ಸೆಟ್ ಮಾಡಬೇಕು ಅದರ ಮೇಲೆ ಕ್ಲಿಕ್ ಮಾಡಿ ಕೆಳಗೆ App timer / set app limit ಕಾಣುತ್ತದೆ. ಇಲ್ಲಿ ನೀವು ಯಾವ application ಅನ್ನು ನಿಮ್ಮ ಮಕ್ಕಳು ಎಷ್ಟು ಸಮಯ ಬಳಸಬೇಕು ಎಂದು ನೀವು ನಿರ್ಧರಿಸಿ ಸೆಟ್ ಮಾಡಬಹುದು.

mobile

ಇದನ್ನೂ ಓದಿ: Bele vime amount- 17.61 ಲಕ್ಷ ರೈತರಿಗೆ 2,021 ಕೋಟಿ ಬೆಳೆ ವಿಮೆ ಕೃಷಿ ಸಚಿವ ಚಲುವರಾಯಸ್ವಾಮಿ!

ಈ ರೀತಿ ಮೇಲಿನ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲಿ ಅಪ್ಲಿಕೇಶನ್ ಗಳಿಗೆ ಟೈಮ್ ಲಿಮಿಟ್ ಸೆಟ್ ಮಾಡುವ ಮೂಲಕ ಮಕ್ಕಳು ಅ ಸಮಯದವರೆಗೆ ಮಾತ್ರ ಮೊಬೈಲ್ ಬಳಸಲು ಸಾಧ್ಯವಾಗುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: