Mobile Repair Training-ಉಚಿತ ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

April 12, 2025 | Siddesh
Mobile Repair Training-ಉಚಿತ ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!
Share Now:

ರುಡ್ ಸೆಟ್ ತರಬೇತಿ ಸಂಸ್ಥೆಯಿಂದ ಉಚಿತವಾಗಿ ವಸತಿ ಮತ್ತು ಊಟ ಸಹಿತ 30 ದಿನಗಳ ತರಬೇತಿಯನ್ನು(Free mobile repair training) ಪಡೆಯಲು ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ರುಡ್ ಸೆಟ್ ತರಬೇತಿ ಸಂಸ್ಥೆಯಿಂದ(mobile repair course) ಗ್ರಾಮೀಣ ಮತ್ತು ನಗರ ಭಾಗದಲ್ಲಿರುವ ಯುವಕರಿಗೆ ಸ್ವಂತ ಉದ್ಯೋಗವನ್ನು ಆರಂಭಿಸಲು ವಿವಿಧ ಬಗ್ಗೆಯ ಸ್ವ-ಉದ್ಯೋಗ ಆಧಾರಿತ ಕೌಶಲ್ಯ ತರಬೇತಿಯನ್ನು ಕಾಲ ಕಾಲಕ್ಕೆ ನೀಡಲಾಗುತ್ತದೆ.

ಇದನ್ನೂ ಓದಿ: Gas Dealership-ಗ್ಯಾಸ್ ವಿತರಣಾ ಡೀಲರ್ ಶಿಪ್ ಪಡೆಯಲು ಅರ್ಜಿ ಆಹ್ವಾನ!

ಇದೇ ಮಾದರಿಯಲ್ಲಿ ಮೊಬೈಲ್ ರಿಪೇರಿ ತರಬೇತಿಯನ್ನು ನೀಡಿ ಈ ಕ್ಷೇತ್ರದಲ್ಲಿ ಸ್ವಂತ ಉದ್ದಿಮೆಯನ್ನು(mobile repair Business) ಆರಂಭಿಸಲು ಈ ಕೇಂದ್ರದಿಂದ ತರಬೇತಿ ಮತ್ತು ಮಾರ್ಗದರ್ಶನವನ್ನು ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಜಿಯನ್ನು ಸಲ್ಲಿಸಿ ಯಾರೆಲ್ಲ ತರಬೇತಿಯನ್ನು ಪಡೆಯಬಹುದು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.

RUDSETI mobile repair course-ತರಬೇತಿಯಲ್ಲಿ ಭಾಗವಹಿಸಲು ಅರ್ಹತೆಗಳು:

ಉಚಿತ ಮೊಬೈಲ್ ರಿಪೇರಿ ತರಬೇತಿಯಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಈ ಕೆಳಗೆ ತಿಳಿಸಿರುವ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ.

ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ತರಬೇತಿ ಪಡೆದ ಬಳಿಕ ಈ ಕ್ಷೇತ್ರದಲ್ಲಿ ಸ್ವಂತ ಉದ್ಯೋಗವನ್ನು ಆರಂಭಿಸಲು ಆಸಕ್ತಿಯನ್ನು ಹೊಂದಿರಬೇಕು.

ಅಭ್ಯರ್ಥಿಯ ವಯಸ್ಸು 18 ರಿಂದ 45 ವರ್ಷದ ಒಳಗಿರಬೇಕು.

ಅಭ್ಯರ್ಥಿಗೆ ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ಬರುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: Male munsuchane-ರಾಜ್ಯ ಮಳೆ ಮುನ್ಸೂಚನೆ! ಇಲ್ಲಿದೆ ಜಿಲ್ಲಾವಾರು ಮಳೆ ಮಾಹಿತಿ!

Free Mobile Repair

ಇದನ್ನೂ ಓದಿ: Survey Abhiyana-2025: ಪ್ರಪ್ರಥಮ ಬಾರಿಗೆ ಗ್ರಾಮಠಾಣ ಪ್ರದೇಶದಲ್ಲಿ ಸರ್ವೆ ಕಾರ್ಯ!

Apply mobile repair training-ತರಬೇತಿಯಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸುವ ವಿಧಾನ:

ಉಚಿತ ಮೊಬೈಲ್ ರಿಪೇರಿ ತರಬೇತಿಯಲ್ಲಿ ಭಾಗವಹಿಸಲು ಆಸಕ್ತಯಿರುವ ಅಭ್ಯರ್ಥಿಗಳು ತರಬೇತಿಯನ್ನು ಪಡೆಯಲು ಮುಂಚಿತವಾಗಿ ಈ ಮೊಬೈಲ್ 97409 82585/91138 80324 ಸಂಖ್ಯೆಗಳಿಗೆ ಕರೆ ಮಾಡಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು.

RUDSETI Training Center-ತರಬೇತಿ ನಡೆಯುವ ಸ್ಥಳ:

ಉಚಿತ ದಿನದ ಮೊಬೈಲ್ ರಿಪೇರಿ ತರಬೇತಿಯು ರುಡ್ ಸೆಡ್ ಸಂಸ್ಥೆ, ಅರಿಶಿಣಕುಂಟೆ, ನೆಲಮಂಗಲ ತಾಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೇಂದ್ರದಲ್ಲಿ ನಡೆಯಲಿದೆ.

ಇದನ್ನೂ ಓದಿ: Property Registration-ರಾಜ್ಯ ಸರ್ಕಾರದಿಂದ ಆಸ್ತಿ ನೋಂದಣಿ ನಿಯಮದಲ್ಲಿ ಬದಲಾವಣೆ!

Documents For repair training-ಅರ್ಜಿ ಸಲ್ಲಿಸಲು ದಾಖಲೆಗಳು:

  • ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
  • ಅಭ್ಯರ್ಥಿಯ ಪೋಟೋ
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಕುಟುಂಬದ ರೇಶನ್ ಕಾರ್ಡ ಪ್ರತಿ

Mobile Repair Training Date-ತರಬೇತಿ ಆರಂಭ ದಿನಾಂಕ:

ಉಚಿತ ಮೊಬೈಲ್ ರಿಪೇರಿ ತರಬೇತಿಯು ಒಟ್ಟು 30 ದಿನ ನಡೆಯಲಿದ್ದು ಈ ತರಬೇತಿಯು 17 ಏಪ್ರಿಲ್ 2025 ರಿಂದ ಆರಂಭವಾಗಿ 17 ಮೇ 2025ಕ್ಕೆ ಮುಕ್ತಾಯವಾಗಲಿದೆ.

ಇದನ್ನೂ ಓದಿ: NREGA Yojane-ನಿಮ್ಮ ಬಳಿ ಈ ಕಾರ್ಡ ಇದ್ದರೆ ನಿಮ್ಮ ಹಳ್ಳಿಯಲ್ಲೇ ಉದ್ಯೋಗ ಪಡೆಯಬಹುದು!

ವಸತಿ ಮತ್ತು ಊಟ ಸಂಪೂರ್ಣ ಉಚಿತ:

ಮೊಬೈಲ್ ರಿಪೇರಿಯಲ್ಲಿ ಭಾಗವಹಿಸುವ ಎಲ್ಲ ಅಭ್ಯರ್ಥಿಗಳಿಗೆ ತರಬೇತಿ ಕೇಂದ್ರದಲ್ಲೇ ವಸತಿ ಮತ್ತು ಊಟ ವ್ಯವಸ್ಥೆಯು 30 ದಿನವು ಸಹ ಸಂಪೂರ್ಣ ಉಚಿತವಾಗಿ ಇಲ್ಲಿ ನೀಡಲಾಗುತ್ತದೆ.

Bank Loan For Mobile Repair-ಬ್ಯಾಂಕ್ ಮೂಲಕ ಸಾಲ ಪಡೆಯಲು ಮಾರ್ಗದರ್ಶನ:

ರುಡ್ ಸೆಟ್ ತರಬೇತಿ ಸಂಸ್ಥೆಯಲ್ಲಿ ಮೊಬೈಲ್ ರಿಪೇರಿ ತರಬೇತಿಯನ್ನು ನೀಡುವುದರ ಜೊತೆಗೆ ಈ ಉದ್ದಿಮೆಯನ್ನು ಆರಂಭಿಸಲು ಅಭ್ಯರ್ಥಿಗಳಿಗೆ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಅರ್ಜಿಯನ್ನು ಹೇಗೆ ಸಿದ್ದಪಡಿಸಬೇಕು? ಸಾಲ ಪಡೆಯಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಇನ್ನಿತರೆ ಸಂಪೂರ್ಣ ಅಗತ್ಯ ಮಾಹಿತಿ ಮತ್ತು ಬ್ಯಾಂಕ್ ಮೂಲಕ ಸಾಲ ಪಡೆಯಲು ಮಾರ್ಗದರ್ಶನವನ್ನು ಸಹ ನೀಡಲಾಗುತ್ತದೆ.

WhatsApp Group Join Now
Telegram Group Join Now
Share Now: