- Advertisment -
HomeGovt SchemesProperty Registration-ರಾಜ್ಯ ಸರ್ಕಾರದಿಂದ ಆಸ್ತಿ ನೋಂದಣಿ ನಿಯಮದಲ್ಲಿ ಬದಲಾವಣೆ!

Property Registration-ರಾಜ್ಯ ಸರ್ಕಾರದಿಂದ ಆಸ್ತಿ ನೋಂದಣಿ ನಿಯಮದಲ್ಲಿ ಬದಲಾವಣೆ!

ಕರ್ನಾಟಕ ರಾಜ್ಯ ಸರ್ಕಾರದಿಂದ ಇತ್ತೀಚೆಗೆ “ಆಸ್ತಿ ನೋಂದಣಿ ವಿಧೇಯಕ-2025” ವನ್ನು(Karnataka property registration rules 2025) ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆಯನ್ನು ಮಾಡಲಾಗಿದ್ದು ಈ ತಿದ್ದುಪಡಿ ವಿಧೇಯಕದ ಅನ್ವಯ ಇನ್ನು ಮುಂದೆ ಸಾರ್ವಜನಿಕರು ತಮ್ಮ ಆಸ್ತಿಯನ್ನು ನೋಂದಣಿಯನ್ನು ಮಾಡುವಾಗ ಯಾವೆಲ್ಲ ಸೂಕ್ತ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ರಾಜ್ಯದಲ್ಲಿ ಸಾರ್ವಜನಿಕರ ಆಸ್ತಿ ನೋಂದಣಿಗೆ ಸಂಬಂಧಪಟ್ಟ ಅರ್ಜಿ ವಿಲೇವಾರಿ(GPA registration rules) ಚಟುವಟಿಕೆಗಳನ್ನು ನೋಂದಣಿ ಇಲಾಖೆಯಿಂದ ನಿರ್ವಹಣೆ ಮಾಡಲಾಗುತ್ತದೆ ಈ ಇಲಾಖೆಯಡಿ ಬರುವ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಆಸ್ತಿಯ ಮಾಲೀಕರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಅಗತ್ಯ ದಾಖಲಾತಿಗಳನ್ನು ಒದಗಿಸಿ ತಮ್ಮ ಆಸ್ತಿಯನ್ನು ನೋಂದಣಿಯನ್ನು ಮಾಡಿಕೊಳ್ಳಬೇಕು.

ಇದನ್ನೂ ಓದಿ: Survey Abhiyana-2025: ಪ್ರಪ್ರಥಮ ಬಾರಿಗೆ ಗ್ರಾಮಠಾಣ ಪ್ರದೇಶದಲ್ಲಿ ಸರ್ವೆ ಕಾರ್ಯ!

ಆಸ್ತಿಯನ್ನು ನೋಂದಣಿಯನ್ನು ಮಾಡಿಕೊಳ್ಳುವಾಗ ಇನ್ನು ಮುಂದೆ ಆಸ್ತಿಯ ಮಾಲೀಕರು ಯಾವೆಲ್ಲ ಕ್ರಮಗಳನ್ನು ತಪ್ಪದೇ ಅನುಸರಿಸಬೇಕು? ಆಸ್ತಿಯ ನೋಂದಣಿಗೆ ಅರ್ಜಿ ಸಲ್ಲಿಸುವ ನೂತನ ವಿಧಾನ ಹೇಗೆ? ತಿದ್ದುಪಡಿ ವಿಧೇಯಕದಲ್ಲಿ ಯಾವೆಲ್ಲ ಅಂಶಗಳಿಗೆ ತಿದ್ದುಪಡಿಯನ್ನು ತರಲಾಗಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

Property Registration-ನಿಮ್ಮ ಆಸ್ತಿಯನ್ನು ರಿಜಿಸ್ಟ್ರೇಷನ್ ಮಾಡುವಾಗ ಈ ತಪ್ಪು ಮಾಡದಿರಿ:

“ಆಸ್ತಿ ನೋಂದಣಿ ತಿದ್ದುಪಡಿ ವಿಧೇಯಕ-2025” ರ ಅನ್ವಯ ಇನ್ನು ಮುಂದೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ತಮ್ಮ ಆಸ್ತಿಯನ್ನು ನೋಂದಣಿ ಮಾಡಿಕೊಳ್ಳುವ ಸಮಯದಲ್ಲಿ ಸ್ಥಿರಾಸ್ತಿಗಳ ಕ್ರಯಪತ್ರವನ್ನು ನೋಂದಣಿ ಮಾಡುವಾಗ ಅನ್ ರಿಜಿಸ್ಟರ್ಡ್ ಜಿಪಿಎ-ಜನರಲ್ ಪವರ್ ಆಫ್ ಅಟಾರ್ನಿ ಅನ್ನು ಪರಿಗಣಿಸದಂತೆ ನಿಯಮವನ್ನು ರೂಪಿಸಲಾಗಿದೆ.

ಅಂದರೆ ಸಾರ್ವಜನಿಕರು ಒಂದು ಆಸ್ತಿಯನ್ನು ಅಂದರೆ ಮನೆ/ಸೈಟು/ಕಟ್ಟಡ/ವಿಲ್ಲಾ ಸೇರಿದಂತೆ ಸ್ಥಿರಾಸ್ತಿಯನ್ನು ಖರೀದಿ ಮಾಡಿದ ಬಳಿಕ ಜಿಪಿಎ ಅನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಿಗದಿತ ಶುಲ್ಕವನ್ನು ಪಾವತಿಸಿ ನೋಂದಣಿಯನ್ನು ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಕ್ರಯಪತ್ರ ಮಾಡುವಾಗ ಅನ್ ರಿಜಿಸ್ಟೇಷನ್ ಅನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: NREGA Yojane-ನಿಮ್ಮ ಬಳಿ ಈ ಕಾರ್ಡ ಇದ್ದರೆ ನಿಮ್ಮ ಹಳ್ಳಿಯಲ್ಲೇ ಉದ್ಯೋಗ ಪಡೆಯಬಹುದು!

property registration rules

Karnataka unregistered GPA Ban-ಈ ಪ್ರಕರಣಗಳಲ್ಲಿ ಇದು ಅನ್ವಯವಾಗುವುದಿಲ್ಲ:

ಬೇರೆಯವರಿಂದ ಆಸ್ತಿಯನ್ನು ಖರೀದಿ ಮಾಡುವವರಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ ಎಂದು ತಿಳಿಸಲಾಗಿದ್ದು, ರಕ್ತ ಸಂಬಂಧಿಕರಲ್ಲಿ ವಿಲ್ ಮತ್ತು ದಾನ ಪತ್ರವನ್ನು ಮಾಡಿಸುವವರಿಗೆ ಈ ನಿಯಮ ಅನ್ವಯವಾಗುವುದಿಲ್ಲ.

GPA registration rules in Karnataka-ರಿಜಿಸ್ಟೇಷನ್ ಜಿಪಿಎ ಎಂದರೇನು? ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಆಸ್ತಿಯ ಖರೀದಿ ಮತ್ತು ಮಾರಾಟಗಾರರು ತಮ್ಮ ವ್ಯಾಪ್ತಿಯ ಸಬ್ ರಿಜಿಸ್ಟಾರ್ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆನ್ಲೈನ್ ಮೂಲಕ ಅಗತ್ಯ ದಾಖಲಾತಿಗಳನ್ನು ಒದಗಿಸಿ ಅರ್ಜಿಯನ್ನು ಸಲ್ಲಿಸಿ ನಂತರ ನಿಗದಿತ ಶುಲ್ಕವನ್ನು ಪಾವತಿಸಿ ಆಸ್ತಿಯ ಎಲ್ಲ ವಾರಸುದಾರರು ಮತ್ತು ಖರೀದಿದಾರರು ಬೆರಳಚ್ಚು ಮತ್ತು ಪೋಟೋ ವನ್ನು ಖುದ್ದು ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಭೇಟಿ ಮಾಡಿ ಕೊಟ್ಟು ಆಸ್ತಿಯ ನೋಂದಣಿಯನ್ನು ಮಾಡಿಕೊಳ್ಳುವುದಕ್ಕೆ ರಿಜಿಸ್ಟೇಷನ್ ಜಿಪಿಎ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: Aadhar QR Code-ಶೀಘ್ರದಲ್ಲೇ ಆಧಾರ್ ಕಾರ್ಡಗೆ ಕ್ಯೂಆರ್ ಕೋಡ್ ಅಳವಡಿಕೆ!

Property registration new rules-ಆನ್ ರಿಜಿಸ್ಟೇಷನ್ ಜಿಪಿಎ ಎಂದರೇನು? ಇದು ಹೇಗಿರುತ್ತದೆ?

ಆನ್ ರಿಜಿಸ್ಟೇಷನ್ ಜಿಪಿಎ ಎಂದರೆ ಇಲ್ಲಿ ಕೇವಲ ಪತ್ರದ ಮೇಲೆ ವಾರಸುದಾರರು ಮತ್ತು ಖರೀದಿದಾರರ ಸಹಿಯನ್ನು ಮಾತ್ರ ಹಾಕಿಸಲಾಗುತ್ತದೆ ಇದನ್ನು ಹೊರತುಪಡಿಸಿ ಯಾವುದೇ ಬಗ್ಗೆಯ ಪೋಟೋ ಮತ್ತು ಬೆರಳಚ್ಚು ತೆಗೆದುಕೊಳ್ಳುವುದಿಲ್ಲ ಇಲ್ಲಿ ಹಾಕಿರುವ ಸಹಿಗಳು ಆಸ್ತಿಯ ಮಾಲೀಕರದೇ ಎಂದು ಖಚಿತಪಡಿಸಿಕೊಳ್ಳವುದು ಕಷ್ಟಕರವಾಗಿದೆ.

Property registration Method-ಏಕೆ ಈ ಕ್ರಮ ಜಾರಿಗೆ ತರಲಾಗಿದೆ?

ಈ ನೂತನ ಕ್ರಮದಿಂದ ಆನ್ ರಿಜಿಸ್ಟೇಷನ್ ಜಿಪಿಎ ಇಂದ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಆಸ್ತಿಯನ್ನು ಕಬಳಿಸುವವರಿಗೆ ಬ್ರೇಕ್ ಬಿಳಲಿದೆ, ಆನ್ ರಿಜಿಸ್ಟೇಷನ್ ಜಿಪಿಎ ಮೇಲೆ ಕ್ರಯಪತ್ರ ಮಾಡುವುದಕ್ಕೆ ಸಂಪೂರ್ಣ ಸ್ಥಗಿತವಾಗುದರಿಂದ ನಕಲಿ ನೋಂದಣಿಯನ್ನು ತಪ್ಪಿಸಬಹುದು.

ಇದನ್ನೂ ಓದಿ: Mudra Loan-52 ಕೋಟಿ ಫಲಾನುಭವಿಗಳಿಗೆ ಮುದ್ರಾ ಲೋನ್ ಮಂಜೂರು! ಇಲ್ಲಿದೆ ಸಂಪೂರ್ಣ ವಿವರ!

Karnataka property registration rules 2025-ಯಾವೆಲ್ಲ ಬದಲಾವಣೆ ಮಾಡಲಾಗಿದೆ?

ಆಸ್ತಿಯ ನೋಂದಣಿ ಸಮಯದಲ್ಲಿ ನೋಂದಣಿಯಾಗದ ಜಿಪಿಎ ಮೇಲೆ ಕ್ರಯಪತ್ರವನ್ನು ಮಾಡುವುದನ್ನು ಸ್ಥಗಿತ ಮಾಡಲಾಗಿದೆ.

ನೋಂದಣಿ, ಇ-ಸ್ಟಾಂಪ್ ಶುಲ್ಕ ಪಾವತಿಗೆ ಸಂಪೂರ್ಣ ಡಿಜಿಟಲ್ ಪಾವತಿಯನ್ನು ಜಾರಿಗೆ ತರಲಾಗಿದೆ.

Registration Benefits-ಸಾರ್ವಜನಿಕರಿಗೆ ಏನೆಲ್ಲ ಪ್ರಯೋಜನವಾಗಲಿದೆ?

  • ಆಸ್ತಿಯ ನೋಂದಣಿ ಕಾರ್ಯವು ಎಲ್ಲ ವಿಧಾನದಲ್ಲಿ ಡಿಜಿಟಲ್ ಮಾದರಿಯಲ್ಲಿ ಆಗುವುದರಿಂದ ಎಷ್ಟು ವರ್ಷ ಕಳೆದರು ಎಲ್ಲ ದಾಖಲಾತಿಗಳು ಸುರಕ್ಷಿತವಾಗಿ ಒಂದು ಕಡೆ ಆಸ್ತಿಯ ಮಾಲೀಕರಿಗೆ ಲಭ್ಯವಾಗಿರುತ್ತವೆ.
  • ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಸ್ತಿಯನ್ನು ಮಾರಾಟ ಮಾಡುವವರಿಗೆ ಬ್ರೇಕ್ ಹಾಕಲು ಈ ನಿಯಮ ಸಹಕಾರಿಯಾಗಿದೆ.
  • ಆಸ್ತಿ ನೋಂದಣಿಯ ನಂತರ ಉಂಟಾಗುವ ವ್ಯಾಜ್ಯಗಳಿಗೆ ಸುಧಾರಣೆ ತರಲು ಸಹ ಈ ವ್ಯವಸ್ಥೆಯು ಸಹಕಾರಿಯಾಗಿದೆ.
  • ನಕಲಿ ದಾಖಲೆಗಳ ಮೂಲಕ ಮನೆ, ಜಮೀನು ಮಾರಾಟ ತಡೆಯಲು ಸಹಾಯ.
  • ಬರುವ ದಿನಗಳಲ್ಲಿ ಯಾವುದೇ ರೀತಿಯ ಆಸ್ತಿ ಸಂಬಂಧಿತ ವ್ಯಾಜ್ಯಗಳಿಗೆ ನಿಖರ ದಾಖಲೆಗಳ ಮೂಲಕ ಪರಿಹಾರ, ಪೂರ್ತಿ ಡಿಜಿಟಲ್ ಸೇವೆಯಿಂದ ಸುಲಭ, ತ್ವರಿತ ಹಾಗೂ ಸುರಕ್ಷಿತ ನೋಂದಣಿ ಇದಾಗಿರುತ್ತದೆ.

ಇದನ್ನೂ ಓದಿ: PUC Result-2025: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ!ಇಲ್ಲಿದೆ ವೆಬ್ಸೈಟ್ ಲಿಂಕ್!

Site Registration-ಸಲಹೆ:

ನೀವು ಆಸ್ತಿ ಖರೀದಿ ಮಾಡುತ್ತಿದ್ದರೆ ಅಥವಾ ಮಾರಾಟಕ್ಕೆ ಯೋಜಿಸುತ್ತಿದ್ದರೆ, ಹೊಸ ನಿಯಮಗಳ ಅನ್ವಯ GPA ನೋಂದಣಿಯನ್ನು ತಪ್ಪದೆ ಮಾಡಿಸಿ. ಸರಕಾರದ ನೂತನ ನಿಯಮಗಳನ್ನು ಪಾಲಿಸಿ, ನಿಮ್ಮ ಆಸ್ತಿಯ ಹಕ್ಕನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳಿ.

ಇದರ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ತಾಲೂಕಿನ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಭೇಟಿ ಮಾಡಬಹುದು.

- Advertisment -
LATEST ARTICLES

Related Articles

- Advertisment -

Most Popular

- Advertisment -