MSP Purchase-ರೈತರಿಗೆ ಸಿಹಿ ಸುದ್ದಿ! ಇಂದಿನಿಂದ ಬೆಂಬಲ ಬೆಲೆಯಲ್ಲಿ ಸೋಯಾಬಿನ್,ಸೂರ್ಯಕಾಂತಿ,ಹೆಸರು ಕಾಳು ಖರೀದಿ ಆರಂಭ!

October 28, 2025 | Siddesh
MSP Purchase-ರೈತರಿಗೆ ಸಿಹಿ ಸುದ್ದಿ! ಇಂದಿನಿಂದ ಬೆಂಬಲ ಬೆಲೆಯಲ್ಲಿ ಸೋಯಾಬಿನ್,ಸೂರ್ಯಕಾಂತಿ,ಹೆಸರು ಕಾಳು ಖರೀದಿ ಆರಂಭ!
Share Now:

ರಾಜ್ಯಾದಾದ್ಯಂತ ಆಯ್ದ ಜಿಲ್ಲೆಯಲ್ಲಿ ಇಂದಿನಿಂದ ಸೋಯಾಬಿನ್, ಸೋಯಾಕಾಂತಿ ಮತ್ತು ಹೆಸರು ಕಾಳು ಬೆಳೆಯ ಉತ್ಪನ್ನಗಳನ್ನು(MSP price) ರೈತರಿಂದ ನೇರವಾಗಿ ಖರೀದಿ ಪ್ರಕ್ರಿಯೆಯು ಆರಂಭವಾಗಿದ್ದು, ರೈತರ ಬೆಳೆಗಳಿಗೆ ಸರಿಯಾದ ಬೆಲೆ ಒದಗುವಂತೆ ಮಾಡಲು ಸರ್ಕಾರ ನಿರ್ಧಾರವನ್ನು ತೆಗೆದುಕೊಂಡಿದೆ.

ಈ ಖರೀದಿ ಕೇಂದ್ರಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (APMC) ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದ್ದು, (Farmers Support Price Karnataka)ರೈತರಿಗೆ ಸುಲಭವಾಗಿ ಬೆಳೆ ಮಾರಾಟ ಮಾಡಲು ಅನುಕೂಲ ಮಾಡಿಕೊಡಲಿದೆ.“ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ, ಖರೀದಿ ಕಾರ್ಯ ಪಾರದರ್ಶಕ ಮತ್ತು ಸರಳ ವಿಧಾನದಲ್ಲಿ ನಡೆಯುವಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ,” ಎಂದು ಕೃಷಿ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.

ಇದನ್ನೂ ಓದಿ: RTO Online Servises-ವಾಹನ ಮಾಲೀಕರಿಗೆ ಸಿಹಿ ಸುದ್ದಿ! ಇನ್ಮುಂದೆ RTO ಕಚೇರಿ ಅಲೆದಾಟಕ್ಕೆ ಬೀಳಲಿದೆ ಬ್ರೇಕ್!

ಪ್ರತಿ ವರ್ಷದಂತೆ ಈ ವರ್ಷವೂ ಸಹ ರೈತರಿಂದ ಬೆಂಬಲ ಬೆಲೆಯಲ್ಲಿ ಸೋಯಾಬಿನ್,ಸೂರ್ಯಕಾಂತಿ,ಹೆಸರು ಬೆಳೆ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ನೋಂದಣಿ ಮಾಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳಾವುವು? ಈ ಉತ್ಪನ್ನಗಳಿಗೆ ಸರ್ಕಾರದಿಂದ ನಿಗದಿಪಡಿಸಿರುವ ಬೆಲೆ ಎಷ್ಟು? ನೋಂದಣಿ ಮಾಡಲು ಅವಶ್ಯಕ ದಾಖಲಾತಿಗಳಾವುವು? ಇನ್ನೂ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಖರೀದಿ ಪ್ರಕ್ರಿಯೆ ಎಲ್ಲೆಲ್ಲಿ ಆರಂಭವಾಗಿದೆ?

ಸೋಯಾಬಿನ್,ಸೂರ್ಯಕಾಂತಿ,ಹೆಸರು ಬೆಳೆ ಖರೀದಿ ಪ್ರಕ್ರಿಯೆಯು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿಯೂ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಕೃಷಿ ಇಲಾಖೆ, ಎಪಿಎಂಸಿ (APMC), ಹಾಗೂ ಸ್ಥಳೀಯ ರೈತ ಸಹಕಾರ ಸಂಘಗಳ ಮೂಲಕ ಈ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.

ಇದನ್ನೂ ಓದಿ: Kotak Scholarships-ಮಹೀಂದ್ರಾ ಗ್ರೂಪ್ ಕಂಪನಿ ವತಿಯಿಂದ 1.5 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

Soybean-ಸೋಯಾಬಿನ್ ಖರೀದಿ ವಿವರಗಳು:

ರಾಜ್ಯದಲ್ಲಿ 206 ಕೇಂದ್ರಗಳಲ್ಲಿ ಸೋಯಾಬಿನ್ ಖರೀದಿ ಪ್ರಕ್ರಿಯೆಯು ಆರಂಭವಾಗಿದ್ದು, 19325 ರೈತರು ಈಗಾಗಲೆ ನೋಂದಣಿ ಮಾಡಿಕೊಂಡಿದ್ದಾರೆ.

ಬೀದರ್ ಜಿಲ್ಲೆಯಲ್ಲಿ 116 ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, 13,033 ರೈತರು ನೋಂದಣಿ ಮಾಡಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ 3047 ರೈತರು ಹಾಗೂ ಧಾರವಾಡ ಜಿಲ್ಲೆಯಲ್ಲಿ 2164 ರೈತರು ನೋಂದಾವಣಿ ಮಾಡಿದ್ದಾರೆ ಎಂದು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ್ ತಿಳಿಸಿದ್ದಾರ‍ೆ.

Green Gram -ಹೆಸರುಕಾಳು ಖರೀದಿ ವಿವರಗಳು:

ರಾಜ್ಯದಲ್ಲಿ ಹೆಸರುಕಾಳು ಖರೀದಿಗೆ ಒಟ್ಟು 211 ಖರೀದಿ ಕೇಂದ್ರಗಳನ್ನು ಆರಂಭಿಸಿದ್ದು, ಇಲ್ಲಿಯವರೆಗೆ 16,578 ರೈತರು ನೋಂದಣಿ ಮಾಡಿಕೊಂಡಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ 6,362 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಇದಲ್ಲದೆ ಉದ್ದಿನಕಾಳು ಖರೀದಿ ಮಾಡಲು 134 ಕೇಂದ್ರಗಳನ್ನು ಆರಂಬಿಸಿದ್ದು, 5,274 ರೈತರು ನೋಂದಣಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Bank Loan Interest Subsidy-ಬ್ಯಾಂಕ್ ಸಾಲದ ಮೇಲೆ ಶೇ 3% ಬಡ್ಡಿ ಸಬ್ಸಿಡಿ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ!

Sunflower-ಸೂರ್ಯಕಾಂತಿ ಖರೀದಿ ವಿವರಗಳು:

ಒಟ್ಟು 120 ಖರೀದಿ ಕೇಂದ್ರಗಳು ಆರಂಭ ಮಾಡಿದ್ದು, ಇಲ್ಲಿಯವರೆಗೆ 5,341 ರೈತರು ನೋಂದಣಿಯನ್ನು ಮಾಡಿದ್ದಾರೆ.

MSP Amount-ಸರ್ಕಾರವು ನಿಗದಿಪಡಿಸಿರುವ ಬೆಲೆ ಎಷ್ಟು?

ಬೆಳೆಪ್ರತಿ ಕ್ವಿಂಟಾಲ್ ಬೆಂಬಲ ಬೆಲೆಖರೀದಿ ನಡೆಯುವ ಜಿಲ್ಲೆಗಳು
ಸೂರ್ಯಕಾಂತಿ (Sunflower)₹7,280ಬಾಗಲಕೋಟೆ, ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ಗದಗ, ಕಲಬುರಗಿ, ವಿಜಯನಗರ, ರಾಯಚೂರು, ಬೆಳಗಾವಿ, ಕೊಪ್ಪಳ, ಮೈಸೂರು
ಹೆಸರುಕಾಳು (Green Gram)₹8,682ಗದಗ, ಧಾರವಾಡ, ಹಾವೇರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಕಲಬುರಗಿ, ಯಾದಗಿರಿ, ಬೀದರ್, ತುಮಕೂರು, ಹಾಸನ, ಮೈಸೂರು, ಚಿತ್ರದುರ್ಗ
ಸೋಯಾಬಿನ್ (Soybean)₹5,328ಬೀದರ್, ಬೆಳಗಾವಿ, ಧಾರವಾಡ, ಹಾವೇರಿ, ಯಾದಗಿರಿ, ಕಲಬುರಗಿ, ಬಾಗಲಕೋಟೆ

ಇದನ್ನೂ ಓದಿ: Driving Licence Application-ಹೊಸ ಡ್ರೈವಿಂಗ್ ಲೈಸೆನ್ಸ್ ಮತ್ತು ತಿದ್ದುಪಡಿ ಮಾಡಿಸುವುದು ಇನ್ನು ಭಾರೀ ಸುಲಭ!

How To Register For MSP-ರೈತರು ಬೆಳೆಗಳನ್ನು ಮಾರಟ ಮಾಡಲು ನೋಂದಣಿಯನ್ನು ಮಾಡಿಕೊಳ್ಳುವುದು ಹೇಗೆ?

ಸೋಯಾಬಿನ್, ಸೋಯಾಕಾಂತಿ ಮತ್ತು ಹೆಸರು ಕಾಳು ಬೆಳೆಯ ಉತ್ಪನ್ನಗಳನ್ನು ಮಾರಟ ಮಾಡಲು ಅವಶ್ಯಕ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದಲ್ಲಿರುವ ಖರೀದಿ ಕೇಂದ್ರ ಅಥವಾ ನಿಮ್ಮ ತಾಲೂಕಿನಲ್ಲಿರುವ ಎ ಪಿ ಎಂ ಸಿ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ನೋಂದಣಿಯನ್ನು ಮಾಡಿಕೊಳ್ಳಬಹುದು.

ಇದನ್ನೂ ಓದಿ: Loreal India Scholarship-ಲೋರಿಯಲ್ ಇಂಡಿಯಾ ವತಿಯಿಂದ ವಿದ್ಯಾರ್ಥಿಗಳಿಗೆ ರೂ 62,500/- ಸ್ಕಾಲರ್‌ಶಿಪ್!

Documenta Required-ನೋಂದಣಿಯನ್ನು ಮಾಡಿಕೊಳ್ಳಲು ಅಗತ್ಯ ದಾಖಲಾತಿಗಳಾವುವು?

ಬೆಳೆಗಳನ್ನು ಮಾರಟ ಮಾಡಲು ರೈತರು ಕೆಳಗೆ ತಿಳಿಸಿರುವ ದಾಖಲಾತಿಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು:

ರೈತರ ಆಧಾರ್ ಕಾರ್ಡ/Aadhar Card

ಜಮೀನಿನ ಪಹಣಿ/RTC

ಮೊಬೈಲ್ ನಂಬರ್/Mobile Number

ಬ್ಯಾಂಕ್ ಪಾಸ್ ಬುಕ್/Bank Passbook

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: