Breaking News:
LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ! Disabled pension scheme-2024: ವಿಕಲಚೇತನರ ಆರೈಕೆದಾರರಿಗೆ ಪ್ರತಿ ತಿಂಗಳಿಗೆ ರೂ 1,000! Raagi kharidi kendra-ರೈತರಿಗೆ ಭರ್ಜರಿ ಸಿಹಿ ಸುದ್ದಿ: ರೂ. 4290 ರಂತೆ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ!
HomeGovt SchemesParihara amount-2024: ಒಂದು ಕಂತು ಬರ ಪರಿಹಾರ ಪಡೆಯದಿದ್ದರೆ ಈ ಕ್ರಮ ಅನುಸರಿಸಿ ಹಣ ಪಡೆಯಿರಿ!

Parihara amount-2024: ಒಂದು ಕಂತು ಬರ ಪರಿಹಾರ ಪಡೆಯದಿದ್ದರೆ ಈ ಕ್ರಮ ಅನುಸರಿಸಿ ಹಣ ಪಡೆಯಿರಿ!

ಇಲ್ಲಿಯವರೆಗೆ ಒಂದು ಕಂತು ಸಹ ಬರ ಪರಿಹಾರದ ಹಣವನ್ನು(Parihara amount-2024) ಪಡೆಯದಿರುವ ರೈತರು ಯಾವ ಕ್ರಮ ಅನುಸರಿಸಿ ಪರಿಹಾರದ ಹಣವನ್ನು ಪಡೆಯಬಹುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

2023ರ ಮುಂಗಾರು ಹಂಗಾಮಿನಲ್ಲಿ ಉಂಟಾದ ಬೀಕರ ಬರಗಾಲದಿಂದ ರೈತರಿಗೆ ಅಗಿರುವ ನಷ್ಟಕ್ಕೆ ಅರ್ಥಿಕವಾಗಿ ನೆರವು ನೀಡಲು NDRF ಮಾರ್ಗಸೂಚಿಯ ಪ್ರಕಾರ ರಾಜ್ಯ ಮತ್ತು ಕೇಂದ್ರದಿಂದ ಇಲ್ಲಿಯವರೆಗೆ ಎರಡು ಕಂತು ಬರ ಪರಿಹಾರ(Bara parihara hana) ಜಮಾ ಮಾಡಲಾಗಿದೆ.

ಇನ್ನು ಅನೇಕ ಜಿಲ್ಲೆಗಳಲ್ಲಿ ತಾಂತ್ರಿಕ ಕಾರಣಗಳಿಂದ ಹಲವು ರೈತರಿಗೆ ಬರ ಪರಿಹಾರದ ಹಣ ಜಮಾ ಅಗಿರುವುದಿಲ್ಲ ಇದಕ್ಕೆ ಸೂಕ್ತ ಕಾರಣಗಳೇನು? ಮತ್ತು ಇದನ್ನು ಸರಿಪಡಿಸಿಕೊಳ್ಳುವುದು ಹೇಗೆ ಇತ್ಯಾದಿ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: RTC adhar link-2024: ರೈತರು ಸರಕಾರದ ಯಾವುದೇ ಸೌಲಭ್ಯ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!

ಒಂದು ಕಂತು ಬರ ಪರಿಹಾರ ಪಡೆಯದಿದ್ದರೆ ಈ ಕ್ರಮ ಅನುಸರಿಸಿ ಹಣ ಪಡೆಯಿರಿ:

ಮೊದಲಿಗೆ ಇಲ್ಲಿಯವರೆಗೆ ಒಂದು ಕಂತು ಸಹ ಪರಿಹಾರದ ಹಣ ಪಡೆಯದ ರೈತರು ಒಮ್ಮೆ ನಿಮ್ಮ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿಗಳನ್ನು ನೇರವಾಗಿ ನಿಮ್ಮ ಆಧಾರ್ ಕಾರ್ಡ ಮತ್ತು ಬ್ಯಾಂಕ್ ಪಾಸ್ ಬುಕ್ ಪ್ರತಿ ಹಾಗೂ ಸರ್ವೆ ನಂಬರ್ ವಿವರ ಸಹಿತ ಭೇಟಿ ಮಾಡಿ ಯಾವ ಕಾರಣಕ್ಕೆ ನಿಮಗೆ ಪರಿಹಾರದ ಹಣ ಜಮಾ ಅಗಿಲ್ಲ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಬೇಕು.

ನಂತರ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇಲ್ಲದೆ ಇದ್ದಲ್ಲಿ ಆಧಾರ್ ಲಿಂಕ್ ಮಾಡಿಕೊಳ್ಳುವುದು, ಮತ್ತು FID ಅಲ್ಲಿ ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಗಳು ಸೇರ್ಪಡೆ ಅಗಿವೆಯೇ ಎಂದು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಚೆಕ್ ಮಾಡಿಕೊಳ್ಳಬೇಕು.

ಇದಲ್ಲದೇ ಬ್ಯಾಂಕ್ ಖಾತೆಯ ಹೆಸರು ಮತ್ತು ಆಧಾರ್ ಕಾರ್ಡ ನಲ್ಲಿರುವ ಹೆಸರು ತಾಳೆ ಅಗದೇ ಅನೇಕ ರೈತರಿಗೆ ಪರಿಹಾರದ ಹಣ ಜಮಾ ಅಗಿರುವುದಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದು ಅದ ಕಾರಣ ರೈತರು ತಮ್ಮ ಬ್ಯಾಂಕ್ ಪಾಸ್ ಬುಕ್ ನಲ್ಲಿ ಆಧಾರ್ ಕಾರ್ಡನಲ್ಲಿರುವಂತೆಯೇ ಹೆಸರು ಇದಿಯಾ ಎಂದು ಚೆಕ್ ಮಾಡಿ ಒಂದೊಮ್ಮೆ ತಪ್ಪಿದರೆ ಆಧಾರ್ ಕಾರ್ಡ ನಲ್ಲಿರುವಂತೆ ಬ್ಯಾಂಕ್ ಖಾತೆಯ ಹೆಸರನ್ನು ತಿದ್ದುಪಡಿ ಮಾಡಿಸಬೇಕು ಬ್ಯಾಂಕ್ ಶಾಖೆ ಭೇಟಿ ಮಾಡಿ.

ಇದನ್ನೂ ಓದಿ: How to link pan card aadhar card: ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡದವರಿಗೆ ಶಾಕಿಂಗ್ ನ್ಯೂಸ್!

Parihara village wise farmers list-ಮೊಬೈಲ್ ನಲ್ಲಿ ಇಲ್ಲಿಯವರೆಗೆ ಪರಿಹಾರದ ಹಣ ಜಮಾ ಅಗದ ರೈತರ ಪಟ್ಟಿ ಮತ್ತು ಕಾರಣವನ್ನು ತಿಳಿಯುವ ವಿಧಾನದ ಮಾಹಿತಿ:

ಮೊಬೈಲ್ ಬಳಕೆಯ ಬಗ್ಗೆ ಮಾಹಿತಿಯಿರುವ ಕಂದಾಯ ಇಲಾಖೆಯ ಅಧಿಕೃತ ಪರಿಹಾರ ವೆಬ್ಸೈಟ್ ಅನ್ನು ಭೇಟಿ ಮಾಡಿ ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ನಿಮ್ಮ ಹಳ್ಳಿಯ ಬರ ಪರಿಹಾರ ಜಮಾ ಅಗದ ರೈತರ ಪಟ್ಟಿಯನ್ನು ನೋಡಬಹುದು.

Step-1: ಮೊದಲಿಗೆ ಈ Parihara farmer list ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಇದಾದ ನಂತರ ಇಲ್ಲಿ ಮುಖಪುಟದಲ್ಲಿ ಕಾಣುವ “Village Wise List” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Crop insurance-2024:ಈ ವರ್ಷ ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಕಟ್ಟಬೇಕು?ಸಂಪೂರ್ಣ ವಿವರ ಬಿಡುಗಡೆ!

Step-3: ಈ ಪೇಜ್ ನಲ್ಲಿ ವರ್ಷ: 2023-24 , Select season/ಋತು: ಮುಂಗಾರು, Calamity Type/ವಿಪತ್ತಿನ ವಿಧ: ಬರ/Drought ಎಂದು ಆಯ್ಕೆ ಮಾಡಿಕೊಂಡು ನಿಮ್ಮ ಜಿಲ್ಲೆ, ತಾಲ್ಲೂಕು,ಹೋಬಳಿ,ಹಳ್ಳಿಯನ್ನು ಸೆಲೆಕ್ಟ್ ಮಾಡಿ ಕೆಳಗೆ ಕಾಣುವ “Payment Failed Cases/ಪಾವತಿ ವಿಫಲ ಪ್ರಕರಣಗಳು” ಈ ಬಟನ್ ಮೇಲೆ ಕ್ಲಿಕ್ ಮಾಡಿ “Get Report” ಬಟನ್ ಮೇಲೆ ಕ್ಲಿಕ್ ಮಾಡಿದರೆ ಬರ ಪರಿಹಾರ ಜಮಾ ಅಗದ ನಿಮ್ಮ ಹಳ್ಳಿಯ ರೈತರ ಪಟ್ಟಿ ಮತ್ತು ಪರಿಹಾರ ಜಮಾ ಅಗದಿರಲು ಕಾರಣದ ವಿವರ ತೋರಿಸುತ್ತದೆ.

Most Popular

Latest Articles

- Advertisment -

Related Articles