PM Kisan-2025: ಪಿ ಎಂ ಕಿಸಾನ್ ಯೋಜನೆಯಡಿ ಮೇ 31 ರವರೆಗೆ ವಿಶೇಷ ಅಭಿಯಾನ!

May 26, 2025 | Siddesh
PM Kisan-2025: ಪಿ ಎಂ ಕಿಸಾನ್ ಯೋಜನೆಯಡಿ ಮೇ 31 ರವರೆಗೆ ವಿಶೇಷ ಅಭಿಯಾನ!
Share Now:

ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋನೆಯಡಿ "ಸಾಟರೇಶನ್ ಡ್ರೈವ್‌"(PM Kisan Saturation Drive)ನ್ನುವ ಹೆಸರಿಸಲ್ಲಿ ವಿಶೇಷ ಅಭಿಯಾನವನ್ನು ಆರಂಭಿಸಿದ್ದು ಇದರ ಪ್ರಯೋಜನವನ್ನು ರೈತರು ಪಡೆಯಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್)(PM Kisan Scheme) ಅರ್ಹ ರೈತರಿಗೆ ಆರ್ಥಿಕ ಸಹಾಯವನ್ನು ಒದಗಿಸಲು ಕೇಂದ್ರ ಸರ್ಕಾರವು ಮೇ 31, 2025ರವರೆಗೆ ವಿಶೇಷ ಸಾಟರೇಶನ್ ಡ್ರೈವ್ (Saturation Drive) ಆರಂಭಿಸಿದೆ. ಈ ಅಭಿಯಾನದ ಉದ್ದೇಶವು ಯೋಜನೆಯಿಂದ ಒಬ್ಬೊಬ್ಬ ಅರ್ಹ ರೈತರೂ ಸಹ ಲಾಭ ಪಡೆಯುವಂತೆ ಮಾಡುವುದಾಗಿದೆ. ಈ ಕುರಿತು ಒಂದಿಷ್ಟು ವಿವರಗಳನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Vidyadhan Scholorship-SSLC ಪಾಸಾದ ವಿದ್ಯಾರ್ಥಿಗಳಿಗೆ ರೂ 75,000/- ರವರೆಗೆ ಶಿಷ್ಯವೇತನ ಪಡೆಯಲು ಅರ್ಜಿ!

ಈ ಅಂಕಣದಲ್ಲಿ ಪಿಎಂ ಕಿಸಾನ್ ಯೋಜನೆಯ(PM Kisan New Application)ಸಾಟರೇಶನ್ ಡ್ರೈವ್‌ನ ಉದ್ದೇಶ, ರೈತರು ಈ ಅಭಿಯಾನದ ಮೂಲಕ ಯಾವೆಲ್ಲ ಕ್ರಮಗಳನ್ನು ಅನುಸರಿಬೇಕು? ಹೊಸದಾಗಿ ಅರ್ಜಿ ಸಲ್ಲಿಕೆಗೆ ಅಗತ್ಯ ದಾಖಲೆಗಳು ಮತ್ತು ಪಿಎಂ ಕಿಸಾನ್ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ನೋಂದಣಿ ಪ್ರಕ್ರಿಯೆ್ ಹೇಗೆ? ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.

PM Kisan-2025: ಯೋಜನೆಯ ವಿವರ:

ಪಿಎಂ ಕಿಸಾನ್ ಯೋಜನೆಯಡಿ ಅರ್ಹ ರೈತರಿಗೆ ವಾರ್ಷಿಕವಾಗಿ ರೂ. 6,000 ಆರ್ಥಿಕ ಸಹಾಯವನ್ನು ಮೂರು ಕಂತುಗಳಲ್ಲಿ (ತಲಾ ರೂ. 2,000) ನೀಡಲಾಗುತ್ತದೆ. ಈ ಯೋಜನೆಯ ಗುರಿಯು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ಬೆಂಬಲವನ್ನು ಒದಗಿಸಿ, ಅವರ ಕೃಷಿ ಕಾರ್ಯಗಳಿಗೆ ಸಹಾಯ ಮಾಡುವುದಾಗಿದೆ.

ಇದನ್ನೂ ಓದಿ: Bele Parihara-38.5 ಲಕ್ಷ ರೈತರ ಖಾತೆಗೆ 3535 ಕೋಟಿ ಬೆಳೆ ಹಾನಿ ಪರಿಹಾರ!

PM Kisan Saturation Drive Details- ಸಾಟರೇಶನ್ ಡ್ರೈವ್‌ನ ಉದ್ದೇಶ:

ಕೇಂದ್ರ ಸರ್ಕಾರದಿಂದ ಪಿಎಂ ಕಿಸಾನ್ ಯೋಜನೆಯಡಿ ವಿಶೇಷ ಅಭಿಯಾನವನ್ನು ಆಯೋಜನೆ ಮಾಡಲಾಗಿದ್ದು ಈ ಮೂಲಕ ಯೋಜನೆಯಿಂದ ಯಾವುದೇ ಅರ್ಹ ರೈತರು ವಂಚಿತರಾಗದಂತೆ ಖಾತರಿಪಡಿಸಲು ಈ ಸಾಟರೇಶನ್ ಡ್ರೈವ್‌ ಮೂಲಕ ಈ ಕೆಳಗಿನ ಕಾರ್ಯಗಳಿಗೆ ಒತ್ತು ನೀಡಲು ಮುಂದಾಗಿದೆ.

ಅರ್ಹ ರೈತರ ಗುರುತಿಸುವಿಕೆ: ಇದುವರೆಗೆ ಯೋಜನೆಗೆ ನೋಂದಾಯಿಸದ ರೈತರನ್ನು ಗುರುತಿಸಿ, ಅವರನ್ನು ಸೇರಿಸುವುದು.

ದಾಖಲೆಗಳ ಸರಿಪಡಿಕೆ: ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಮತ್ತು ಜಮೀನಿನ ದಾಖಲೆಗಳ ಸಮಸ್ಯೆಗಳನ್ನು ಸರಿಪಡಿಸಲು ಸಹಾಯ.

ಜಾಗೃತಿ ಮೂಡಿಸುವಿಕೆ: ಗ್ರಾಮೀಣ ಪ್ರದೇಶಗಳಲ್ಲಿ ರೈತರಿಗೆ ಯೋಜನೆಯ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುವುದು.

ಇದನ್ನೂ ಓದಿ: CET Result 2025-ಸಿಇಟಿ ಫಲಿತಾಂಶ ಪ್ರಕಟ!ಇಲ್ಲಿದೆ ಅಧಿಕೃತ ವೆಬ್ಸೈಟ್ ಲಿಂಕ್!

pmkisan

PM Kisan Scheme Benefits-ತರು ಈ ಅಭಿಯಾನದ ಮೂಲಕ ಯಾವೆಲ್ಲ ಕ್ರಮಗಳನ್ನು ಅನುಸರಿಬೇಕು?

  • ಪಿಎಂ ಕಿಸಾನ್ ಯೋಜನೆಯಡಿ ಈಗಾಗಲೇ ರೂ 2,000/- ಆರ್ಥಿಕ ನೆರವನ್ನು ಪಡೆಯುತ್ತಿರುವವರು ತಮ್ಮ ಇ-ಕೆವೈಸಿ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.
  • ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಅಗಿರುವುದನ್ನು ದೃಢಪಡಿಸಿಕೊಳ್ಳಿ.
  • ತಮ್ಮ ಅಕ್ಕ-ಪಕ್ಕದಲ್ಲಿರುವ ರೈತರು ಯಾರಾದರು ಈ ಯೋಜನೆಯಡಿ ಆರ್ಥಿಕ ನೆರವು ಪಡೆಯದೇ ಇದ್ದಲ್ಲಿ ಕೂಡಲೇ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಅಗತ್ಯ ದಾಖಲಾತಿ ಸಮೇತ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಲು ತಿಳಿಸಿ.

ಇದನ್ನೂ ಓದಿ: Mini Tractor Subsidy-ಮಿನಿ ಟ್ರ್ಯಾಕ್ಟರ್ ಸೇರಿದಂತೆ ವಿವಿಧ ಘಟಕಗಳಿಗೆ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

Documents For PM Kisan New Application-ಅರ್ಜಿ ಸಲ್ಲಿಕೆಗೆ ಅಗತ್ಯ ದಾಖಲೆಗಳು:

ಪಿಎಂ ಕಿಸಾನ್ ಯೋಜನೆಯಡಿ ಇಲ್ಲಿಯವರೆಗೆ ಅರ್ಜಿಯನ್ನು ಸಲ್ಲಿಸದ ರೈತರು ಈ ಕೆಳಗೆ ತಿಳಿಸಿರುವ ದಾಖಲೆಗಳನ್ನು ಸಲ್ಲಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ನೋಂದಣಿಯನ್ನು ಮಾಡಿಕೊಳ್ಳಬಹುದು.

  • ರೈತರ ಆಧಾರ್ ಕಾರ್ಡ್
  • ರೈತರ ಜಮೀನಿನ ದಾಖಲೆಗಳಾದ ಪಹಣಿ/ಊತಾರ್/RTC
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಇತ್ತೀಚಿನ ಭಾವಚಿತ್ರ
  • ಮೊಬೈಲ್ ನಂಬರ್

ಇದನ್ನೂ ಓದಿ: Subsidy Seeds Rate list-ಕೃಷಿ ಇಲಾಖೆಯಿಂದ ಬಿತ್ತನೆ ಬೀಜದ ದರ ಪಟ್ಟಿ ಬಿಡುಗಡೆ!

PM Kisan Registration process-ಪಿಎಂ ಕಿಸಾನ್ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ನೋಂದಣಿ ಪ್ರಕ್ರಿಯೆ:

ಆನ್‌ಲೈನ್ ನೋಂದಣಿ: ರೈತರು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ (https://pmkisan.gov.in/) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಆಫ್‌ಲೈನ್ ನೋಂದಣಿ: ಸ್ಥಳೀಯ ರೈತ ಸಂಪರ್ಕ ಕೇಂದ್ರಗಳು, ಕೃಷಿ ಇಲಾಖೆ ಕಚೇರಿಗಳು, ಅಥವಾ ಕಾಮನ್ ಸರ್ವಿಸ್ ಸೆಂಟರ್‌ಗಳಲ್ಲಿ (CSC) ದಾಖಲೆಗಳೊಂದಿಗೆ ಭೇಟಿಯಾಗಿ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: BPL Card Benefits-ಬಿಪಿಎಲ್‌ ಕಾರ್ಡ್‌ದಾರರಿಗೆ ಇನ್ನುಂದೆ ಈ ಚಿಕಿತ್ಸೆ ಉಚಿತ!

ರೈತರಿಗೆ ವಿಶೇಷ ಸೂಚನೆ:

ಗಡುವು: ಈ ಸಾಟರೇಶನ್ ಡ್ರೈವ್ ಮೇ 31, 2025ರವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಆದ್ದರಿಂದ, ರೈತರು ಈ ಗಡುವಿನೊಳಗೆ ತಮ್ಮ ನೋಂದಣಿಯನ್ನು ಪೂರ್ಣಗೊಳಿಸಬೇಕು.

ಆಧಾರ್ ಲಿಂಕ್‌ನ ಮಹತ್ವ: ಆಧಾರ್ ಕಾರ್ಡ್‌ನೊಂದಿಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿರುವುದು ಕಡ್ಡಾಯವಾಗಿದೆ. ಇದರಿಂದ ಸಹಾಯಧನದ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.

ತಾಂತ್ರಿಕ ಸಮಸ್ಯೆಗಳಿಗೆ ಸಹಾಯ: ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆಯ ವಿವರಗಳು, ಅಥವಾ ಇತರ ದಾಖಲೆಗಳಿಗೆ ಸಂಬಂಧಿಸಿದ ಯಾವುದೇ ತೊಂದರೆಗಳಿದ್ದರೆ, ರೈತರು ಸ್ಥಳೀಯ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಇದನ್ನೂ ಓದಿ: Bele Vime- 81.36 ಕೋಟಿ ಬೆಳೆ ವಿಮೆ ಪರಿಹಾರ ರೈತರ ಖಾತೆಗೆ ಬಿಡುಗಡೆ!

PM Kisan Scheme Benefits-ಪಿಎಂ ಕಿಸಾನ್ ಯೋಜನೆಯ ಪ್ರಯೋಜನಗಳು:

ಪಿಎಂ ಕಿಸಾನ್ ಯೋಜನೆಯಿಂದ ರೈತರಿಗೆ ಕೃಷಿ ಚಟುವಟಿಕೆಗಳಿಗೆ, ಬಿತ್ತನೆ ಬೀಜ, ಗೊಬ್ಬರ, ಮತ್ತು ಇತರ ಅಗತ್ಯ ವಸ್ತುಗಳ ಖರೀದಿಗೆ ಆರ್ಥಿಕ ನೆರವು ದೊರೆಯುತ್ತದೆ. ಈ ಯೋಜನೆಯಿಂದ ದೇಶಾದ್ಯಂತ ಲಕ್ಷಾಂತರ ರೈತರು ಈಗಾಗಲೇ ಲಾಭ ಪಡೆದಿದ್ದಾರೆ.

PM Kisan Helpline-ಇನ್ನು ಹೆಚ್ಚಿನ ಮಾಹಿತಿಗಾಗಿ:

ರೈತರು ಹೆಚ್ಚಿನ ವಿವರಗಳಿಗಾಗಿ ಅಧಿಕೃತ ವೆಬ್‌ಸೈಟ್ https://pmkisan.gov.in/ ಗೆ ಭೇಟಿ ನೀಡಬಹುದು ಅಥವಾ ಸ್ಥಳೀಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು. ತಾಂತ್ರಿಕ ಸಹಾಯಕ್ಕಾಗಿ ಟೋಲ್-ಫ್ರೀ ಸಂಖ್ಯೆ 155261 ಅಥವಾ 1800-115-526 ಗೆ ಕರೆ ಮಾಡಬಹುದು.

WhatsApp Group Join Now
Telegram Group Join Now
Share Now: