Vidyadhan Scholorship-SSLC ಪಾಸಾದ ವಿದ್ಯಾರ್ಥಿಗಳಿಗೆ ರೂ 75,000/- ರವರೆಗೆ ಶಿಷ್ಯವೇತನ ಪಡೆಯಲು ಅರ್ಜಿ!

May 26, 2025 | Siddesh
Vidyadhan Scholorship-SSLC ಪಾಸಾದ ವಿದ್ಯಾರ್ಥಿಗಳಿಗೆ ರೂ 75,000/- ರವರೆಗೆ ಶಿಷ್ಯವೇತನ ಪಡೆಯಲು ಅರ್ಜಿ!
Share Now:

ಎಸ್ ಎಸ್ ಎಲ್ ಸಿ ಶಿಕ್ಷಣವನ್ನು(SSLC Scholorship Application) ಪೂರ್ಣಗೊಳಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ದಾಖಲಾದ ಹಾಗೂ ಅರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಅರ್ಹ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ನೀಡಲು ಆನ್ಲೈನ್ ಮೂಲಕ ಅರ್ಜಿಯನ್ನು ಅಹ್ವಾನಿಸಲಾಗಿದೆ.

ಸರೋಜಿನಿ ದಾಮೋದರನ್ ಫೌಂಡೇಶನ್ ವತಿಯಿಂದ " ವಿದ್ಯಾಧನ್ ವಿದ್ಯಾರ್ಥಿವೇತನ-2025" ಕಾರ್ಯಕ್ರಮದಡಿ(Vidyadhan Scholorship) ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: PM Kisan-2025: ಪಿ ಎಂ ಕಿಸಾನ್ ಯೋಜನೆಯಡಿ ಮೇ 31 ರವರೆಗೆ ವಿಶೇಷ ಅಭಿಯಾನ!

ಈ ಲೇಖನದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು(Scholorship Application) ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಅಗತ್ಯ ದಾಖಲಾತಿಗಳೇನು? ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ, ಸರೋಜಿನಿ ದಾಮೋದರನ್ ಫೌಂಡೇಶನ್ ವಿವರಣೆ ಮತ್ತು ವಿದ್ಯಾಧನ್ ವಿದ್ಯಾರ್ಥಿವೇತನ ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

Vidyadhan Scholorship-2025: ಸರೋಜಿನಿ ದಾಮೋದರನ್ ಫೌಂಡೇಶನ್ ವತಿಯಿಂದ " ವಿದ್ಯಾಧನ್ ವಿದ್ಯಾರ್ಥಿವೇತನ ಕಾರ್ಯಕ್ರಮ:

ವಿದ್ಯಾಧಾನ್ ಒಂದು ಪಾನ್ ಇಂಡಿಯಾ ವಿದಾರ್ಥಿವೇತನವಾಗಿದ್ದು ಇದನ್ನು ಸರೋಜಿನಿ ದಾಮೋದರನ್ ಫೌಂಡೇಶನ್(sarojini Damodaran Foundation) ವತಿಯಿಂದ ವಿತರಿಸಲಾಗುತ್ತಿದೆ. 1999 ರಲ್ಲಿ ಶ್ರೀ ಎಸ್.ಡಿ.ಶಿಬುಲಾಲ್ (ಸಹ-ಸಂಸ್ಥಾಪಕರು, ಇನ್ಫೋಸಿಸ್) ಮತ್ತು ಶ್ರೀಮತಿ ಕುಮಾರಿ ಶಿಬುಲಾ (ವ್ಯವಸ್ಥಾಪಕ ಟ್ರಸ್ಟಿ) ಸ್ಥಾಪಿಸಿದರು. ವಿದ್ಯಾಧಾನ್ ವಿದಾರ್ಥಿವೇತನವು ಇಲ್ಲಿಯ ತನಕ 51000 ವಿದ್ಯಾರ್ಥಿ ವೇತನವನ್ನು ನೀಡಿದ್ದು, 10000+ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದಿದ್ದಾರೆ.

ವಿದ್ಯಾಧಾನ್ ಪ್ರತಿಷ್ಠಾನವು ಕೇರಳ, ಕರ್ನಾಟಕ, ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಗೋವಾ, ಒಡಿಶಾ, ದೆಹಲಿ, ಲಡಾಖ್, ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ವಂಜಾಬ್, ಪಶ್ಚಿಮ ಬಂಗಾಳ, ಹರಿಯಾಣ ಮತ್ತು ಚಂಡೀಗಢದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಇದನ್ನೂ ಓದಿ: Bele Parihara-38.5 ಲಕ್ಷ ರೈತರ ಖಾತೆಗೆ 3535 ಕೋಟಿ ಬೆಳೆ ಹಾನಿ ಪರಿಹಾರ!

Vidyadhan Scholorship Amount-ವಿದ್ಯಾಧನ್ ವಿದ್ಯಾರ್ಥಿವೇತನ ರೂ 75,000/- ರವರೆಗೆ ಆರ್ಥಿಕ ನೇರವು:

ಈ ಫೌಂಡೇಶನ್ ವತಿಯಿಂದ ಆಯ್ಕೆ ಮಾಡಲಾದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳು ಪಿಯುಸಿ ಶಿಕ್ಷಣವನ್ನು ಪಡೆಯುವ ಸಮಯದಲ್ಲಿ ವರ್ಷಕ್ಕೆ ರೂ 10,000/- ಆರ್ಥಿಕ ನೆರವನ್ನು ನೀಡಲಾಗುತ್ತದೆ.

ಬಳಿಕ ವಿದ್ಯಾರ್ಥಿಗಳು ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆದ ಬಳಿಕ ಪದವಿ ಶಿಕ್ಷಣಕ್ಕೆ ಅನುಗುಣವಾಗಿ ರೂ 15,000/- ದಿಂದ ರೂ 75,000/- ವರೆಗೆ ಆರ್ಥಿಕ ನೆರವನ್ನು ಪಡೆಯಲು ಅವಕಾಶವಿರುತ್ತದೆ.

ಇದನ್ನೂ ಓದಿ: Mini Tractor Subsidy-ಮಿನಿ ಟ್ರ್ಯಾಕ್ಟರ್ ಸೇರಿದಂತೆ ವಿವಿಧ ಘಟಕಗಳಿಗೆ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

Who Can Apply-ಯಾರೆಲ್ಲ ಅರ್ಜಿ ಸಲ್ಲಿಸಬಹುದು:

1) ವಿದ್ಯಾರ್ಥಿ ಕುಟುಂಬದ ವಾರ್ಷಿಕ ಆದಾಯವು ಲಕ್ಷಕ್ಕಿಂತ ಕಡಿಮೆ ಇರಬೇಕು.
2) ವಿದ್ಯಾರ್ಥಿಯು 2025ನೇ ಸಾಲಿನಲ್ಲಿ 10 ನೇ ತರಗತಿಯನ್ನು ತೇರ್ಗಡೆ ಹೊಂದಿರಬೇಕು.
3) ವಿದ್ಯಾರ್ಥಿಯು SSLC ಪರೀಕ್ಷೆಯಲ್ಲಿ ಶೇ 90% ಕ್ಕಿಂತ ಹೆಚ್ಚಿನ ಅಂಕವನ್ನು ಪಡೆದಿರಬೇಕು.
4) ಅಂಗವೈಕಲ್ಯ ಹೊಂದಿರುವ ವಿದ್ಯಾರ್ಥಿಗಳು ಶೇ 75% ಪಡೆದಿರಬೇಕು.

Documents For Application-ಒದಗಿಸಬೇಕಾದ ದಾಖಲೆಗಳು:

  • ವಿದ್ಯಾರ್ಥಿಯ SSLC ಮಾರ್ಕ್ಸ್ ಕಾರ್ಡ್.
  • ವಿದ್ಯಾರ್ಥಿ ಕುಟುಂಬದ ಆದಾಯ ಪ್ರಮಾಣ ಪತ್ರ.
  • ವಿದ್ಯಾರ್ಥಿ ಪೋಟೋ.
  • ಅಂಗವೈಕಲ್ಯ ಪ್ರಮಾಣಪತ್ರ(ಅನ್ವಯಿಸಿದಲ್ಲಿ ಮಾತ್ರ).
  • ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ ಪ್ರತಿ.
  • ಆಧಾರ್ ಕಾರ್ಡ ಪ್ರತಿ.
  • ಮೊಬೈಲ್ ಮತ್ತು ಇ-ಮೇಲ್ ವಿಳಾಸ.

ಇದನ್ನೂ ಓದಿ: BPL Card Benefits-ಬಿಪಿಎಲ್‌ ಕಾರ್ಡ್‌ದಾರರಿಗೆ ಇನ್ನುಂದೆ ಈ ಚಿಕಿತ್ಸೆ ಉಚಿತ!

sslc scholorship

Selection Process-ವಿದ್ಯಾರ್ಥಿಯ ಆಯ್ಕೆ ಹೇಗೆ ಮಾಡಲಾಗುತ್ತದೆ?

ಒಮ್ಮೆ ವಿದ್ಯಾರ್ಥಿಗಳು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಆನ್ಲೈನ್ ಮೂಲಕ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿಯನ್ನು ಸಲ್ಲಿಸಿದ ಬಳಿಕ ಮೊದಲನೇ ಹಂತದಲ್ಲಿ ವಿದ್ಯಾರ್ಥಿಯು SSLC ಪರೀಕ್ಷೆಯಲ್ಲಿ ಪಡೆದ ಅಂಕವನ್ನು ಆಧಾರವಾಗಿ ಇಟ್ಟುಕೊಂಡು ಫೌಂಡೇಶನ್ ವತಿಯಿಂದ ಆನ್ಲೈನ್ ಪರೀಕ್ಷೆ/ಸಂದರ್ಶನವನ್ನು ನಡೆಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

Important Dates-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 08 ಜುಲೈ 2025
ಆನ್ಲೈನ್ ಪರೀಕ್ಷೆ ನಡೆಸುವ ದಿನಾಂಕ- 27 ಜುಲೈ 2025
ಸಂದರ್ಶನ ನಡೆಯುವ ದಿನಾಂಕ-09 ಆಗಸ್ಟ್ 2025 ರಿಂದ 24 ಆಗಸ್ಟ್ 2025 ರವರೆಗೆ

ಇದನ್ನೂ ಓದಿ: Subsidy Seeds Rate list-ಕೃಷಿ ಇಲಾಖೆಯಿಂದ ಬಿತ್ತನೆ ಬೀಜದ ದರ ಪಟ್ಟಿ ಬಿಡುಗಡೆ!

Vidyadhan Scholorship Online Application-ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವಿಧಾನ:

ವಿದ್ಯಾರ್ಥಿಗಳು ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Step-1: ಮೊದಲಿಗೆ Scholorship Online Application ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ತಂತ್ರಾಂಶವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Bele Vime- 81.36 ಕೋಟಿ ಬೆಳೆ ವಿಮೆ ಪರಿಹಾರ ರೈತರ ಖಾತೆಗೆ ಬಿಡುಗಡೆ!

Step-2: ಬಳಿಕ ಇಲ್ಲಿ ಮುಖಪುಟದಲ್ಲಿ ಕಾಣುವ "Apply For Scholarships" ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ಪೇಜ್ ನಲ್ಲಿ ಕೆಳಗೆ ಕಾಣುವ "Karnataka 11th Program - 2025 ( ಕರ್ನಾಟಕದ ವಿದ್ಯಾರ್ಥಿಗಳು ಇಲ್ಲಿ ಕ್ಲಿಕ್ ಮಾಡಿ )" ಆಯ್ಕೆಯ ಮೇಲೆ ಒತ್ತಿ ಬಳಿಕ ಇಲ್ಲಿ ಕೆಳಗೆ ಕಾಣಿಸುವ "Apply Now" ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

Step-3: ನಂತರ ಈ ಪೇಜ್ ನಲ್ಲಿ ಎರಡು ಆಯ್ಕೆಗಳು ಕಾಣಿಸುತ್ತವೆ ಇಲ್ಲಿ "Register" ಮತ್ತು "Already Registered?Login" ಇವುಗಳಲ್ಲಿ ಒಂದರ ಮೇಲೆ ಕ್ಲಿಕ್ ಮಾಡಿ ಅಗತ್ಯ ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಅಗಬೇಕು.

Step-4: ಲಾಗಿನ್ ಅದ ಬಳಿಕ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಎಲ್ಲಾ ವಿವರವನ್ನು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

For More Details-ಹೆಚ್ಚಿನ ಮಾಹಿತಿಗಾಗಿ:

Helpline-ಸಹಾಯವಾಣಿ- +91 8068333500
Mail-ಮೇಲ್ ವಿಳಾಸ-vidyadhan.karnataka@sdfoundationindia.com
Vidyadhan Scholorship Website-ಅಧಿಕೃತ ವೆಬ್ಸೈಟ್-Click Here
ಅಧಿಕೃತ ಪ್ರಕಟಣೆಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ-Download Now

WhatsApp Group Join Now
Telegram Group Join Now
Share Now: