PM Kisan-ಪಿಎಂ ಕಿಸಾನ್ ಅಪ್ಲಿಕೇಶನ್ ಸ್ಕಾಮ್! ನಿಮ್ಮ ಹಣಕ್ಕೆ ಕನ್ನ!

July 23, 2025 | Siddesh
PM Kisan-ಪಿಎಂ ಕಿಸಾನ್ ಅಪ್ಲಿಕೇಶನ್ ಸ್ಕಾಮ್! ನಿಮ್ಮ ಹಣಕ್ಕೆ ಕನ್ನ!
Share Now:

ಕೇಂದ್ರ ಸರ್ಕಾದ ಜನಪ್ರಿಯ ಯೋಜನೆಯಲ್ಲಿ ಒಂದಾದ ಪಿಎಂ ಕಿಸಾನ್(PM Kisan) ಯೋಜನೆಯ ನಕಲಿ ಮೊಬೈಲ್ ಅಪ್ಲಿಕೇಶನ್ ಪೈಲ್ ಗಳನ್ನು ಮೊಬೈಲ್ ಗೆ ಕಳುಹಿಸಿ ಜನರ ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ಕದಿಯಲಾಗುತ್ತಿದ್ದು ಇದರ ಕುರಿತು ರೈತರನ್ನು ಜಾಗೃತಿಗೊಳಿಸಲು ಇಂದಿನ ಈ ಅಂಕಣದಲ್ಲಿ ಒಂದಿಷ್ಟ ಅಗತ್ಯ ವಿವರವನ್ನು ತಿಳಿಸಲಾಗಿದೆ.

ಪ್ರಸ್ತುತ ಅಂಕಣದಲ್ಲಿ ಪಿಎಂ ಕಿಸಾನ್ ಅಪ್ಲಿಕೇಶನ್(PM Kisan App)ಸ್ಕಾಮ್ ಹೇಗೆ ನಡೆಸಲಾಗುತ್ತದೆ? ಇದರ ಕಾರ್ಯವಿಧಾನ ಹೇಗೆ? ರೈತರು ಈ ಸ್ಕಾಮ್ ನಿಂದ ತಪ್ಪಿಸಿಕೊಳ್ಳುವ ವಿಧಾನ ಹೇಗೆ? ಮುಂಚಿತವಾಗಿ ಯಾವೆಲ್ಲ ಎಚ್ಚರಿಕೆಯ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬೇಕು? ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದ್ದು ತಪ್ಪದೇ ನಿಮ್ಮ ಅಕ್ಕ-ಪಕ್ಕದ ರೈತರಿಗೆ ಹಾಗೂ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಈ ಮಾಹಿತಿಯನ್ನು ಶೇರ್ ಮಾಡಿ ಇತರರಿಗೂ ಈ ಮಾಹಿತಿ ತಿಳಿಸಲು ಸಹಕರಿಸಿ.

ಇದನ್ನೂ ಓದಿ: Nano DAP-ನಾನ್ಯೋ ಡಿ.ಎ.ಪಿ ಬಳಸುವ ಮುನ್ನ ತಪ್ಪದೇ ಈ ಮಾಹಿತಿ ತಿಳಿಯಿರಿ!

ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಉಪಯುಕ್ತ ಕೆಲಸಗಳನ್ನು/ಮಾಹಿತಿಯನ್ನು(PM Kisan Scam Alert) ಪಡೆಯಬಹುದು ಅದರ ಜೊತೆಗೆ ಕೆಟ್ಟ ಕೆಲಸಗಳಿಗೆ ಸಹ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ ಈ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಗೆ ಒಳಗಾದ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಸಾರ್ವಜನಿಕರು ಮೊಬೈಲ್ ಅನ್ನು ಬಳಕೆ ಮಾಡುವಾಗ ಯಾವ ಕೆಲಸಗಳನ್ನು ಮಾಡಬಾರದು ಎನ್ನುವುದರ ಕುರಿತು ಮಾಹಿತಿ ತಪ್ಪದೇ ತಿಳಿದಿರಬೇಕು.

PM Kisan Latest News-ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಸ್ಕಾಮ್ ಎಂದರೇನು?

ಭಾರತ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯನ್ನು 2019 ರಿಂದ ಜಾರಿಗೆ ತರಲಾಗಿದ್ದು ಈ ಯೋಜನೆಯ ಮೂಲಕ ದೇಶದ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಖರೀದಿಗೆ ಆರ್ಥಿಕ ನೆರವನ್ನು ಒದಗಿಸಲಾಗುತ್ತಿದ್ದು,ವಾರ್ಷಿಕವಾಗಿ 6,000/- ರೂ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ, ಈ ಯೋಜನೆಯ ಜನಪ್ರಿಯತೆಯನ್ನು ದುರುಪಯೋಗಪಡಿಸಿಕೊಂಡು ಕೆಲವು ಸೈಬರ್‌ ವಂಚಕರು ರೈತರನ್ನು ಗುರಿಯಾಗಿಸಿ ವಂಚನೆ ಮಾಡುತ್ತಿದ್ದಾರೆ.

ಪಿಎಂ ಕಿಸಾನ್ ಅಪ್ಲಿಕೇಶನ್ ಸ್ಕಾಮ್ ಎಂಬ ಹೆಸರಿನಲ್ಲಿ ಫೇಕ್‌ ಮೊಬೈಲ್ ಅಪ್ಲಿಕೇಸನ್, ಫಿಶಿಂಗ್‌ ಲಿಂಕ್‌ಗಳು ಮತ್ತು ಮೋಸದ ಸಂದೇಶಗಳ ಮೂಲಕ ರೈತರ ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ಕದಿಯಲಾಗುತ್ತಿದೆ.

ಇದನ್ನೂ ಓದಿ: E-swathu Status-ನಿಮ್ಮ ಮನೆ ದಾಖಲೆಯನ್ನು ಮೊಬೈಲ್ ನಲ್ಲೇ ಚೆಕ್ ಮಾಡಿ!

PM Kisan Scam Alert-ಪಿಎಂ ಕಿಸಾನ್ ಸ್ಕಾಮ್‌ ಹೇಗೆ ಕಾರ್ಯನಿರ್ವಹಿಸುತ್ತದೆ?

ಸೈಬರ್‌ ವಂಚಕರು ಸರ್ಕಾರಿ ಅಧಿಕಾರಿಗಳಂತೆ ರೈತರನ್ನು ಸಂಪರ್ಕಿಸಿ, ವಾಟ್ಸಾಪ್‌, ಫೇಸ್‌ಬುಕ್‌ ಮತ್ತು ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ತಪ್ಪು ಸಂದೇಶಗಳನ್ನು ಕಳುಹಿಸುತ್ತಾರೆ. ಈ ಸ್ಕಾಮ್‌ಗಳು ಸಾಮಾನ್ಯವಾಗಿ ಈ ಕೆಳಗಿನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ:

ನಕಲಿ APK ಲಿಂಕ್‌ಗಳು:

ವಂಚಕರು ಅಧಿಕೃತ ಪಿಎಂ ಕಿಸಾನ್ ಆಪ್‌ ಎಂದು ಕಾಣುವ ಫೇಕ್‌ APK ಫೈಲ್‌ಗಳನ್ನು ರೈತರಿಗೆ ಕಳುಹಿಸುತ್ತಾರೆ. ಈ ಲಿಂಕ್‌ಗಳನ್ನು ಕ್ಲಿಕ್‌ ಮಾಡಿದಾಗ, ಮಾಲ್‌ವೇರ್‌ ಡೌನ್‌ಲೋಡ್‌ ಆಗಿ ಫೋನ್‌ ಹ್ಯಾಕ್‌ ಆಗುತ್ತದೆ. ಇದರಿಂದ ಬ್ಯಾಂಕ್‌ ವಿವರಗಳು, ಒಟಿಪಿ ಮತ್ತು ಇತರ ವೈಯಕ್ತಿಕ ಮಾಹಿತಿಗಳು ಕದಿಯಲ್ಪಡುತ್ತವೆ. ಉದಾಹರಣೆಗೆ, ರಾಜಸ್ಥಾನದ ಜೋಧ್‌ಪುರದಲ್ಲಿ ಕೆಲವು ಗ್ರಾಮಸ್ಥರು ತಿಳಿಯದೆ ಫೇಕ್‌ APK ಲಿಂಕ್‌ ಹಂಚಿಕೊಂಡು ತಮ್ಮ ಫೋನ್‌ಗಳನ್ನು ಹ್ಯಾಕ್‌ಗೆ ಒಳಪಡಿಸಿದ ಘಟನೆ ವರದಿಯಾಗಿದೆ.

ಫಿಶಿಂಗ್‌ ಸಂದೇಶಗಳು ಮತ್ತು ವೆಬ್‌ಸೈಟ್‌ಗಳು:

ಹೆಚ್ಚುವರಿ ಲಾಭ, ತ್ವರಿತ ಹಣ ವಿತರಣೆ ಅಥವಾ ಇ-ಕೆವೈಸಿ/ಆಧಾರ್‌ ಪರಿಶೀಲನೆಗಾಗಿ ಎಂದು ಹೇಳುವ ಸಂದೇಶಗಳು ರೈತರಿಗೆ ಬರುತ್ತವೆ. ಈ ಸಂದೇಶಗಳಲ್ಲಿ ಒಡ್ಡಲಾಗುವ ಲಿಂಕ್‌ಗಳು ನಕಲಿ ವೆಬ್‌ಸೈಟ್‌ಗಳಿಗೆ ಕರೆದೊಯ್ಯುತ್ತವೆ, ಇವು https://pmkisan.gov.in ಎಂಬ ಅಧಿಕೃತ ವೆಬ್‌ಸೈಟ್‌ನಂತೆ ಕಾಣುತ್ತವೆ. ರೈತರು ತಮ್ಮ ವೈಯಕ್ತಿಕ ವಿವರಗಳು ಅಥವಾ ಒಟಿಪಿಯನ್ನು ಒಡ್ಡಿದಾಗ, ವಂಚಕರು ಈ ಮಾಹಿತಿಯನ್ನು ಬಳಸಿಕೊಂಡು ಬ್ಯಾಂಕ್‌ ಖಾತೆಯಿಂದ ಹಣ ಕದಿಯುತ್ತಾರೆ. ಹೈದರಾಬಾದ್‌ನ ಒಬ್ಬ ವ್ಯಕ್ತಿ ವಾಟ್ಸಾಪ್‌ ಲಿಂಕ್‌ ಕ್ಲಿಕ್‌ ಮಾಡಿ ಒಟಿಪಿ ಹಂಚಿಕೊಂಡು 1.9 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: Property Registration-ಇ-ಸ್ವತ್ತು ಯೋಜನೆ: ಸರಕಾರದಿಂದ ಸಕ್ರಮ ಆಸ್ತಿಗೆ ಡಿಜಿಟಲ್ ದಾಖಲೆ! ಇಂದೇ ಅರ್ಜಿ ಸಲ್ಲಿಸಿ!

ನಕಲಿ ಕರೆಗಳು ಮತ್ತು ವೀಡಿಯೊ ಕರೆಗಳು:

ಕೆಲವು ವಂಚಕರು ಪಿಎಂ ಕಿಸಾನ್ ಅಧಿಕಾರಿಗಳಂತೆ ರೈತರಿಗೆ ಕರೆ ಮಾಡಿ ಅಥವಾ ವೀಡಿಯೊ ಕರೆಗಳ ಮೂಲಕ “ಗುರುತಿನ ಪರಿಶೀಲನೆ” ಎಂದು ಹೇಳುತ್ತಾರೆ. ಈ ಸಂದರ್ಭದಲ್ಲಿ, ರೈತರಿಂದ ಒಟಿಪಿ, ಆಧಾರ್‌ ವಿವರಗಳು ಅಥವಾ ಸ್ಕ್ರೀನ್‌ ಶೇರಿಂಗ್‌ಗೆ ಅವಕಾಶ ಕೇಳಲಾಗುತ್ತದೆ, ಇದರಿಂದ ಮಾಹಿತಿ ಕದಿಯಲಾಗುತ್ತದೆ.

How To Avoid PM Kisan Scam-ಪಿಎಂ ಕಿಸಾನ್ ಸೈಬರ್ ಸ್ಕಾಮ್ ನಿಂದಿ ತಪ್ಪಿಸಿಕೊಳ್ಳು ರೈತರು ಅನುಸರಿಸಬೇಕಾದ ಕ್ರಮಗಳು:

ರೈತರು ಈ ಮೇಲೆ ವಿವರಿಸಿರುವ ಸೈಬರ್ ವಂಚಕರ ದಾಳಿಯಿಂದ ತಮ್ಮ ಬ್ಯಾಂಕ್ ಖಾತೆ್ಯಲ್ಲಿರುವ ಹಣ ಮತ್ತು ವೈಯಕ್ತಿಯ ವಿವರವನ್ನು ರಕ್ಷಿಸಿಕೊಳ್ಳಲು ಈ ಕೆಳಗೆ ವಿವರಿಸಿರುವ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಅತ್ಯವಶ್ಯಕ.

ಇದನ್ನೂ ಓದಿ: Aadhaar Update-ಮಕ್ಕಳ ಆಧಾರ್ ಅಪ್‌ಡೇಟ್ ಕಡ್ಡಾಯ! ಕೂಡಲೇ ಅರ್ಜಿ ಸಲ್ಲಿಸಿ!

1) ನಕಲಿ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಡಿ:

ಈ ಕೆಳಗಿನ ಪೋಟೋದಲ್ಲಿ ತೋರಿಸುವ ರೀತಿಯಲ್ಲಿ ನಿಮ್ಮ ವಾಟ್ಸಾಪ್ ನಂಬರ್ ಗೆ ಬರುವ "PM KISHAN YOJANA.apk" ಪೈಲ್ ಅನ್ನು ಯಾವುದೇ ಕಾರಣಕ್ಕೂ ಡೌನ್ಲೋಡ್ ಮಾಡಿಕೊಳ್ಳಬೇಡಿ.

PM Kisan Scam Alert

2) ಎಸ್‌ಎಂಎಸ್‌ ಮೂಲಕ ಬರುವ ಅನಧಿಕೃತ ಲಿಂಕ್‌ ಮೇಲೆ ಕ್ಲಿಕ್ ಮಾಡದಿರಿ:

ನಿಮ್ಮ ಮೊಬೈಲ್ ನಂಬರ್ ಗೆ ಬರುವ ಅನಗತ್ಯ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ ಪದೇ ಪದೇ ಅನಧಿಕೃತ/ನಕಲಿ ಸಂಖ್ಯೆಯಿಂದ ಸಂದೇಶ ಬಂದರೆ ಅ ನಂಬರ್ ಅನ್ನು ಬ್ಲಾಕ್ ಮಾಡಿ.

ಇದನ್ನೂ ಓದಿ: New Ration Card-ಹೊಸ ರೇಷನ್ ಕಾರ್ಡ ಪಡೆಯಲು ಅವಕಾಶ– ತಕ್ಷಣ ಅರ್ಜಿ ಸಲ್ಲಿಸಿ!

3) ನಕಲಿ ಕರೆ ಕುರಿತು ಇರಲಿ ಎಚ್ಚರಿಕೆ:

ಸರ್ಕಾರಿ ಅಧಿಕಾರಿಗಳು ಎಂದಿಗೂ ಒಟಿಪಿ, ಪಾಸ್‌ವರ್ಡ್‌ ಅಥವಾ ಸ್ಕ್ರೀನ್‌ ಶೇರಿಂಗ್‌ಗೆ ಕೇಳುವುದಿಲ್ಲ. ಅಂತಹ ಕರೆಗಳನ್ನು ಸ್ವೀಕರಿಸಿದರೆ, ತಕ್ಷಣ ಕಟ್‌ ಮಾಡಿ ಅಥವಾ ಸ್ವೀಕರಿಸದೇ ಇದ್ದರೆ ಇನ್ನು ಉತ್ತಮ.

4) ಅಧಿಕೃತ ಮೂಲಗಳಿಗೆ ಮಾತ್ರ ಒತ್ತು ನೀಡಿ:

ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದ ಯಾವುದೇ ಮಾಹಿತಿಗಾಗಿ ಕೇವಲ https://pmkisan.gov.in ಎಂಬ ಅಧಿಕೃತ ವೆಬ್‌ಸೈಟ್‌ ಅಥವಾ ಪಿಎಂ ಕಿಸಾನ್ ಮೊಬೈಲ್‌ ಅಪಿಕೇಶನ್ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಂಡು ಬಳಕೆ ಮಾಡಿ ಜೊತೆಗೆ ಅಧಿಕೃತ ಪಿಎಂ ಕಿಸಾನ್ ಎಕ್ಸ್/ಟ್ವಿಟರ್ ಖಾತೆಯಿಂದ ಕಾಲ ಕಾಲಕ್ಕೆ ಮಾಹಿತಿಯನ್ನು ಪಡೆಯಿರಿ.

5) ಪಿಎಂ ಕಿಸಾನ್ ಇ-ಕೆವೈಸಿಯನ್ನು ಅಧಿಕೃತ ಕಚೇರಿಯಲ್ಲೇ ಮಾಡಿಸಿ:

ಪ್ರಸ್ತುತ ಪಿಎಂ ಕಿಸಾನ್ ಯೋಜನೆಯ ಇ-ಕೆವೈಸಿಯನ್ನು ಮಾಡಿಕೊಳ್ಳಲು ಫಲಾನುಭವಿಗಳಿಗೆ ಸೂಚನೆ ನೀಡಲಾಗುತ್ತಿದ್ದು ಈ ಸಂಬಂಧ ಕೇವಲ ಸರ್ಕಾರಿ ಕಚೇರಿ ಅಂದರೆ ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಒನ್/ಕರ್ನಾಟಕ ಒನ್ ಮತ್ತು ಕಾಮನ್‌ ಸರ್ವಿಸ್‌ ಸೆಂಟರ್‌ (CSC) ಅಧಿಕೃತ ಕೇಂದ್ರಗಳ ಮೂಲಕ ಮಾತ್ರ ಇ-ಕೆವೈಸಿ ಮಾಡಿಸಿ.

6) ಸೈಬರ್‌ ಕ್ರೈಂ ದೂರು:

ವಂಚನೆಗೆ ಒಳಗಾದರೆ, ತಕ್ಷಣ ಸೈಬರ್‌ ಕ್ರೈಂ ಹೆಲ್ಪ್‌ಲೈನ್‌ 1930ಗೆ ಕರೆ ಮಾಡಿ ಅಥವಾ https://cybercrime.gov.in ಮೂಲಕ ದೂರು ದಾಖಲಿಸಿ.

ಇದನ್ನೂ ಓದಿ: Free Coaching Center-ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ! ಈಗಲೇ ಅರ್ಜಿ ಸಲ್ಲಿಸಿ!

PM Kisan Scam Details-5.5 ಲಕ್ಷ ಅನರ್ಹ ಖಾತೆಗಳಿಗೆ ಪಿಎಂ ಕಿಸಾನ್ ಹಣ:

ಸೈಬರ್ ವಂಚಕರು ಯಾವ ಮಟ್ಟಿಗೆ ಈ ಯೋಜನೆಯ ದುರುಪಯೋಗ ಪಡಿಸಿಕೊಂಡಿದರು ಎಂದರೆ ರೈತರೆ ನೇರವಾಗಿ ಅಧಿಕೃತ ಪಿಎಂ ಕಿಸಾನ್ ಪೋರ್ಟಲ್ ನಲ್ಲಿ ಪ್ರಾರಂಭದಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶದ ದುರುಪಯೋಗ ಪಡಿಸಿಕೊಂಡು ನಕಲಿ ದಾಖಲೆಗಳನ್ನು ಸಲ್ಲಿಸಿ ಅನರ್ಹ ಫಲಾನುಭವಿಗಳನ್ನು ನೋಂದಾಯಿಸುತ್ತಾರೆ. ತಮಿಳುನಾಡಿನಲ್ಲಿ 110 ಕೋಟಿ ರೂಪಾಯಿಗಳನ್ನು 5.5 ಲಕ್ಷ ಅನರ್ಹ ಖಾತೆಗಳಿಗೆ ವಂಚನೆಯಿಂದ ವರ್ಗಾಯಿಸಲಾಗಿತ್ತು ಎಂದು ಕೇಂದ್ರದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

PM Kisan e-KYC-ನಕಲಿ ಖಾತೆ ವರ್ಗಾವಣೆ ತಪ್ಪಿಸಲು ಇ-ಕೆವೈಸಿ:

ಪಿಎಂ ಕಿಸಾನ್ ಯೋಜನೆಯ ಹಣವು ನಕಲಿ ಫಲಾನುಭವಿಗಳಿಗೆ ವರ್ಗಾವಣೆ ಅಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯಡಿ ಅರ್ಹ ಫಲಾನುಭವಿ ರೈತರು ಇ-ಕೆವೈಸಿಯನ್ನು ಮಾಡಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ.

WhatsApp Group Join Now
Telegram Group Join Now
Share Now: