PM Kusum Yojana-ಹಗಲು ವೇಳೆಯಲ್ಲಿಯೇ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಗೆ ನೂತನ ಯೋಜನೆ!

June 14, 2025 | Siddesh
PM Kusum Yojana-ಹಗಲು ವೇಳೆಯಲ್ಲಿಯೇ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಗೆ ನೂತನ ಯೋಜನೆ!
Share Now:

ಇನ್ನೆಲ್ಲಾ ರೈತರು ರಾತ್ರಿಯಿಡೀ ನಿದ್ದೆಗೆಟ್ಟು ಕೃಷಿ ಪಂಪ್‌ಸೆಟ್‌ಗಳಿಗೆ(Krishi Pumpset)ನೀರು ಹರಿಸುವ ತಾಪತ್ರಯ ಅನುಭವಿಸುವ ಅವಶ್ಯಕತೆ ಇರುವುದಿಲ್ಲ ನೂತನ ಯೋಜನೆಯೊಂದರ ಮೂಲಕ ರಾಜ್ಯ ಸರ್ಕಾರ ರೈತರ ಬದುಕಿಗೆ ಹೊಸ ಬೆಳಕನ್ನು ತಂದಿದೆ. ಅದು ಕುಸುಮ್-ಸಿ ಯೋಜನೆ.

ಈ ಯೋಜನೆಯು ರೈತರ ಕೃಷಿ ಪಂಪ್‌ಸೆಟ್‌ಗಳಿಗೆ(Solar energy in karnataka)ಹಗಲು ಹೊತ್ತಿನಲ್ಲಿ ಸ್ಥಿರ ವಿದ್ಯುತ್ ಪೂರೈಕೆ ಮಾಡುವ ಮಹತ್ವದ ಹೆಜ್ಜೆಯಾಗಿದೆ. 2025ರ ಜೂನ್ 11ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರ ತಾಲ್ಲೂಕಿನ ಹನುಮೇನಹಳ್ಳಿ ಮತ್ತು ಚರಕ ಮಟ್ಟೇನಹಳ್ಳಿ ಗ್ರಾಮಗಳಲ್ಲಿ 20 ಮೆಗಾವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕಕ್ಕೆ ಚಾಲನೆ ನೀಡಿ ಯೋಜನೆಗೆ ಅಧಿಕೃತ ರೂಪ ನೀಡಿದ್ದಾರೆ.

ಇದನ್ನೂ ಓದಿ: Gold Loan-ಚಿನ್ನದ ಮೇಲೆ ಸಾಲ ಪಡೆಯಲು RBI ನಿಂದ ಹೊಸ ನಿಯಮ ಜಾರಿ!

ಏನಿದು ಪಿಎಂ ಕುಸುಮ್-ಸಿ(PM Kusum Scheme Details)ಯೋಜನೆ? ಈ ಯೋಜನೆಯ ಅನುಷ್ಠಾನದಿಂದ ರೈತರಿಗೆ ಅಗುವ ಪ್ರಯೋಜನಗಳೇನು? ರೈತರು ಈ ಯೋಜನೆಯ ಲಾಭವನ್ನು ಪಡೆಯುವುದು ಹೇಗೆ? ಪ್ರಸ್ತುತ ಚಾಲನೆ ಮಾಡಿರುವ ಯೋಜನೆಯ ವಿಶೇಷತೆಗಳು ಸೇರಿದಂತೆ ಇನ್ನಿತರೆ ಸಂಪೂರ್ಣ ಅಗತ್ಯ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

What is PM Kusum Scheme-ಏನಿದು ಪಿಎಂ ಕುಸುಮ್-ಸಿ ಯೋಜನೆ?

ಕೇಂದ್ರ ಸರ್ಕಾರದ ಕಿಸಾನ್ ಉರ್ಜಾ ಸುರಕ್ಷಾ ಮತ್ತು ಉತ್ಥಾನ್ ಮಹಾಭಿಯಾನ್ (KUSUM) ಯೋಜನೆಯ ಭಾಗವಾಗಿರುವ ಈ ‘ಸಿ’ ಘಟಕವು ಹಗಲು ವೇಳೆಯಲ್ಲಿ ರೈತರಿಗೆ ಸ್ಥಿರ ವಿದ್ಯುತ್ ಪೂರೈಕೆ ಮಾಡುವುದು.

PM Kusum Details-ಪಿಎಂ ಕುಸುಮ್-ಸಿ ಯೋಜನೆಯ ವಿಶೇಷತೆಗಳು:

  • 60 ಎಕರೆ ಖಾಸಗಿ ಭೂಮಿಯಲ್ಲಿ 20 ಮೆಗಾ ವಾಟ್ ಸಾಮರ್ಥ್ಯದ ಸೌರ ಘಟಕ ಸ್ಥಾಪನೆ
  • ಪ್ರತಿ ಘಟಕಕ್ಕೆ ₹3.5 ರಿಂದ ₹4 ಕೋಟಿ ವೆಚ್ಚ, ಕೇಂದ್ರದಿಂದ ₹1 ಕೋಟಿ ಸಬ್ಸಿಡಿ
  • ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಪ್ರತಿ ಯೂನಿಟ್‌ಗೆ ₹3.17 ದರ ನಿಗದಿ
  • 2025ರ ಡಿಸೆಂಬರ್ ಒಳಗೆ 2,400 ಮೆಗಾ ವಾಟ್ ಸಾಮರ್ಥ್ಯದ ಘಟಕಗಳ ಗುರಿ
  • ಈಗಾಗಲೇ 200 ಮೆಗಾ ವ್ಯಾಟ್ ಕಾರ್ಯನಿರ್ವಹಣೆಯಲ್ಲಿದ್ದು, 545 ಮೆಗಾ ವ್ಯಾಟ್ ಘಟಕಗಳು ನಿರ್ಮಾಣ ಹಂತದಲ್ಲಿವೆ.

ಇದನ್ನೂ ಓದಿ: PMFME Scheme-ಕೃಷಿ ಇಲಾಖೆಯಿಂದ ಸ್ವಂತ ಉದ್ದಿಮೆ ಸ್ಥಾಪನೆಗೆ 15 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ!

Solar Pumpset Subsidy (5)

2,400 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿ: ಕೆ.ಜೆ.ಜಾರ್ಜ್‌

ವಿದ್ಯುತ್‌ ಫೀಡರ್‌ಗಳ ಬಳಿ ಸೌರವಿದ್ಯುತ್‌ ಉತ್ಪಾದಿಸಿ, ಕೃಷಿ ಪಂಪ್‌ಸೆಟ್‌ಗಳಿಗೆ ಪೂರೈಸುವ ʼಕುಸುಮ್‌ ಸಿʼ ಯೋಜನೆಯಡಿ ಮೊದಲ ಹಂತದಲ್ಲಿ ಈ ವರ್ಷದ ಡಿಸೆಂಬರ್‌ ಅಂತ್ಯದೊಳಗೆ 2,400 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಇಂಧನ ಸಚಿವರಾದ ಕೆ.ಜೆ.ಜಾರ್ಜ್‌ ತಿಳಿಸಿದ್ದಾರೆ.

PM Kusum yojana-ಪಿಎಂ ಕುಸುಮ್-ಸಿ ಯೋಜನೆಯ ರೂಪುರೇಷೆಗಳು:

ಈ ಯೋಜನೆಯು ಪೂರ್ಣಗೊಂಡಬಳಿಕ ಡಿಸೆಂಬರ್ ಅಂತ್ಯದಲ್ಲಿ ಒಟ್ಟು 2,400 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತದೆ ಇದರಿಂದ 389 ಉಪಕೇಂದ್ರ, 1,555 ಕೃಷಿ ಪೀಡರ್ ಗಳಿಗೆ ಹಾಗೂ 6,32,794 ಕೃಷಿ ಐ.ಪಿ ಸೆಟ್ ಗಳಿಗೆ ಹಗಲಿನ ಸಮಯದಲ್ಲಿ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ.

ಇದನ್ನೂ ಓದಿ: Airtel Scholarship- ಏರ್‌ಟೆಲ್ ಫೌಂಡೇಶನನಿಂದ ಲ್ಯಾಪ್ ಟಾಪ್ ಮತ್ತು ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

Solar Scheme-ಪಿಎಂ-ಕುಸುಮ್‌ ಯೋಜನೆ ಉದ್ದೇಶ ಮತ್ತು ಗುರಿಗಳು:

1) ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ್(ಪಿಎಂ ಕುಸುಮ್)- ಕಾಂಪೋನೆಂಟ್- ಸಿ: ರೈತರ ಕೃಷಿ ಪಂಪ್ ಸೆಟ್ ಗಳಿಗೆ ಸುಸ್ಥಿರ ವಿದ್ಯುತ್ ಪೂರೈಕೆ.

2) ಈ ಯೋಜನೆಯಡಿಯಲ್ಲಿ ವಿಕೇಂದ್ರಿತ ಸೌರ ಘಟಕಗಳನ್ನು ಸ್ಥಾಪಿಸಿ, ಕೃಷಿ ಫೀಡರ್ ಗಳಿಗೆ ವಿದ್ಯುತ್ ಪೂರೈಸಲಾಗುವುದು ಹಾಗೂ ಈ ಮೂಲಕ ಸಾಂಪ್ರದಾಯಿಕ ಇಂಧನ ಮೂಲಗಳ ಮೇಲಿನ ಅವಲಂಬನೆಯಲ್ಲಿ ಇಳಿಕೆ.

3) ಈ ಯೋಜನೆಯು ಹಗಲಿನ ವೇಳೆಯಲ್ಲಿ ಸುಸ್ಥಿರ ವಿದ್ಯುತ್ತನ್ನು ಕೃಷಿ ಪಂಪ್ ಸೆಟ್ ಗಳಿಗೆ ಪೂರೈಸಲು ಸಹಕಾರಿಯಾಗಿದೆ.

4) ಈ ಯೋಜನೆಯಡಿಯಲ್ಲಿ ಸೋಲಾರ್ ಘಟಕ ಗಳ ಸ್ಥಾಪನೆಯು ಭಾರತದ ಸೋಲಾರ್ ವಿದ್ಯುತ್ ಸಾಮರ್ಥ್ಯವನ್ನು ಹೆಚ್ಚು ಮಾಡುವ ಮತ್ತು ಕಾರ್ಬನ್ ಎಮಿಶನ್ ತಗ್ಗಿಸಲು ಸಹಕಾರಿಯಾಗಿದೆ.

ಇದನ್ನೂ ಓದಿ: Crop Insurance-2025: ಬೆಳೆ ವಿಮೆ ಮಾಡಿಸಲು ರೈತರಿಂದ ಅರ್ಜಿ ಆಹ್ವಾನ!

PM-Kusum(c) Scheme Benefits-ಈ ಯೋಜನೆ ಜಾರಿಯಿಂದ ಆಗುವ ಲಾಭಗಳು:

  • ರೈತರ ಹೊರೆ ಕಡಿಮೆಯಾಗಿದೆ: ಈಗ ರೈತರು ರಾತ್ರಿಯ ನಿದ್ದೆಗೆಟ್ಟ ಭಾರವನ್ನು ಅನುಭವಿಸುವ ಅಗತ್ಯವಿಲ್ಲ.
  • ಸ್ಥಳೀಯ ಉತ್ಪಾದನೆ: ಪಂಪ್ ಸೆಟ್‌ಗಳಿಗೆ ವಿದ್ಯುತ್ ನೇರವಾಗಿ ಸ್ಥಳೀಯ ಘಟಕಗಳಿಂದ ಪೂರೈಕೆಯಾಗುತ್ತದೆ.
  • ಟ್ರಾನ್ಸ್ಮಿಷನ್ ನಷ್ಟ ಕಡಿಮೆ: ದೂರದ ಜಾಲವಿಲ್ಲದ ಕಾರಣ ವ್ಯತ್ಯಾಸಗಳು ಕಡಿಮೆಯಾಗುತ್ತವೆ.
  • ವಿದ್ಯುತ್ ಪೂರೈಕೆ ದಕ್ಷತೆ: ಘಟಕಗಳ ನೇರ ಸಂಪರ್ಕದಿಂದ ವ್ಯವಸ್ಥೆ ಸ್ಥಿರವಾಗುತ್ತದೆ.
  • ಖಾಸಗಿ ಹಂಚಿಕೆದಾರರೊಂದಿಗೆ ಯೋಜನೆ ಜಾರಿಯಾಗುತ್ತಿರುವ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ.
  • ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ದೊರೆಯುವ ಮೂಲಕ, ಬೆಳೆ ನಾಶದ ಅಪಾಯ ಕಡಿಮೆಯಾಗುತ್ತದೆ ಮತ್ತು ಇಳುವರಿಗೂ ಖಾತರಿಯಾಗುತ್ತದೆ.

ಇದನ್ನೂ ಓದಿ: Cashewnut farming subsidy-ಗೇರು ಕೃಷಿ ಮಾಡಲು ₹1.20 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

Solar Pumpset Subsidy-ಪಿಎಂ ಕುಸುಮ್ ವೈಯಕ್ತಿಕ ಘಟಕ ಸ್ಥಾಪನೆಗೂ ಅವಕಾಶ:

ಪಿಎಂ ಕುಸುಮ್ ಯೋಜನೆಯಡಿ ರೈತರು ಸಬ್ಸಿಡಿಯನ್ನು ಪಡೆದು ತಮ್ಮ ಜಮೀನಿನಲ್ಲಿ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಅನ್ನು ಸ್ವಂತ ಉತ್ಪದಾನೆ ಮಾಡಿಕೊಳ್ಳಲು ಹಾಗೂ ಹೆಚ್ಚುವರಿ ವಿದ್ಯುತ್ ಅನ್ನು ಸರ್ಕಾರಕ್ಕೆ ಮಾರಾಟ ಮಾಡಲು ಸೋಲಾರ ಘಟಕವನ್ನು ಸ್ಥಾಪಿಸಿಸಲು ಈ ಯೋಜನೆಯಡಿ ಸಹಾಯಧನವನ್ನು ಪಡೆಯಲು ಅವಕಾಶವಿರುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯಲು ನಿಮ್ಮ ಹತ್ತಿರದ KEB ಕಚೇರಿಯನ್ನು ಭೇಟಿ ಮಾಡಿ.

PM-Kusum Website-ಈ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ ಪಿಎಂ ಕುಸುಮ್ ವೆಬ್ಸೈಟ್ ಲಿಂಕ್-Click Here

WhatsApp Group Join Now
Telegram Group Join Now
Share Now: